'ಕಾಂತಾರ'ಕ್ಕೆ ಮೋಹಕ ತಾರೆ ಫಿದಾ: ಸುದೀರ್ಘ ವಿಮರ್ಶೆ ಬರೆದು ರಮ್ಯಾ ಹೇಳಿದ್ದೇನು..?

Ramya Reviews Rishabh Shetty Starrer Kantara Movie

ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ 'ಕಾಂತಾರ' ಇಂದು (ಸಪ್ಟೆಂಬರ್‌ 30) ತೆರೆ ಕಂಡಿದೆ. ಸ್ಯಾಂಡಲ್‌ವುಡ್‌ನ ಭರವಸೆಯ ನಿರ್ದೇಶಕ ರಿಷಬ್‌ ಶೆಟ್ಟಿ ತಾವೇ ರಚಿಸಿ, ನಟಿಸಿ, ನಿರ್ದೇಶಿಸಿರುವ 'ಕಾಂತಾರ' ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ನಿನ್ನೆ (ಸಪ್ಟೆಂಬರ್‌ 29) ಚಿತ್ರದ ಪ್ರೀಮಿಯರ್ ಶೋ ನಡೆದಿದ್ದು, ಬಹುತೇಕರು ನಿನ್ನೆಯೇ ಚಿತ್ರವನ್ನು ವೀಕ್ಷಿಸಿದ್ದಾರೆ. ಪೇಯ್ಡ್‌ ಪ್ರೀಮಿಯರ್ ಮೂಲಕ ಚಿತ್ರತಂಡ ಪ್ರೇಕ್ಷಕರಿಗೂ ಪ್ರೀಮಿಯರ್‌ ಶೋ ನೋಡಲು ಅವಕಾಶ ನೀಡಿತ್ತು.

ಬೆಂಗಳೂರು, ಮೈಸೂರು ಭಾಗ ಸೇರಿದಂತೆ ಕರ್ನಾಟಕದ ಮೂಲೆ ಮೂಲೆಯಲ್ಲೂ 'ಕಾಂತಾರ' ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕರಾವಳಿಯ ಭಾಗಗಳಿಗೆ ಮೀಸಲಾಗಿದ್ದ ಕಂಬಳ ಮತ್ತು ಭೂತ ಕೋಲದ ಸಾಂಪ್ರದಾಯಿಕ ಸಂಸ್ಕೃತಿಯನ್ನು ರಿಷಬ್‌ ಶೆಟ್ಟಿ 'ಕಾಂತಾರ' ಚಿತ್ರದ ಮೂಲಕ ವಿಶ್ವದಾದ್ಯಂತ ಪಸರಿಸುತ್ತಿದ್ದು, ನಿನ್ನೆ ಪ್ರೀಮಿಯರ್‌ ಶೋ ನೋಡಿದ ಅನೇಕರು ಅದರ ವಿಶೇಷ ಅನುಭವವನ್ನು ಕಂಡಿದ್ದಾರೆ.

ರಾಕಿಂಗ್‌ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್‌', 'ಕೆಜಿಎಫ್‌ ಚಾಪ್ಟರ್‌ 2' ನಿರ್ಮಿಸಿ ಕನ್ನಡ ಚಿತ್ರರಂಗವನ್ನು ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ್ದ ಹೊಂಬಾಳೆ ಫಿಲ್ಮ್ಸ್ ಮೊದಲ ಬಾರಿಗೆ ರಿಷಬ್‌ ಶೆಟ್ಟಿ ಚಿತ್ರಕ್ಕೆ ಬಂಡವಾಳ ಹಾಕಿದ್ದು, 'ಕಾಂತಾರ'ವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಸದ್ಯ 'ಕಾಂತಾರ'ದ ವೈಭವವನ್ನು ಪ್ರೇಕ್ಷಕರು ಕಣ್ಣುತುಂಬಿ ಕೊಳ್ಳುತ್ತಿದ್ದಾರೆ.

ಸುಧೀರ್ಘ ವಿಮರ್ಶೆ ಬರೆದ ರಮ್ಯಾ

ಸುಧೀರ್ಘ ವಿಮರ್ಶೆ ಬರೆದ ರಮ್ಯಾ

ಈಗಾಗಲೇ ಪ್ರೀಮಿಯರ್‌ ಶೋ ನೋಡಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸ್ಯಾಂಡಲ್‌ವುಡ್‌ ಮೋಹಕ ತಾರೆ ರಮ್ಯಾ 'ಕಾಂತಾರ' ಚಿತ್ರಕ್ಕೆ ಫಿದಾ ಆಗಿದ್ದಾರೆ. ನಿನ್ನೆ ಬೆಂಗಳೂರಿನ ಓರಿಯನ್‌ ಮಾಲ್‌ನಲ್ಲಿ 'ಕಾಂತಾರ' ವೀಕ್ಷಿಸಿರುವ ನಟಿ ರಮ್ಯಾ, ಚಿತ್ರದ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಿಷಬ್‌ ಶೆಟ್ಟಿ ನಟನೆ ಹಾಗೂ ನಿರ್ದೇಶನಕ್ಕೆ ಮನಸೋತಿರುವ ರಮ್ಯಾ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ವಿಶೇಷ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ರಮ್ಯಾ ಇದೇ ಮೊದಲ ಬಾರಿಗೆ ಒಂದು ಚಿತ್ರದ ಬಗ್ಗೆ ಇಷ್ಟು ಸುಧೀರ್ಘವಾಗಿ ವಿಮರ್ಶೆ ನೀಡಿದ್ದಾರೆ.

'ಕಾಂತಾರ' ವರ್ಣಿಸಲಾಗದ ಅನುಭವ

'ಕಾಂತಾರ' ವರ್ಣಿಸಲಾಗದ ಅನುಭವ

ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಕಾಂತಾರ ಚಿತ್ರತಂಡದೊಂದಗಿನ ಫೋಟೋ ಹಂಚಿಕೊಂಡಿರುವ ರಮ್ಯಾ, ನಿಮಗೆ ಗೊತ್ತಾ, ಕೆಲವೊಮ್ಮೆ ನೀವು ಒಂದು ಸಿನಿಮಾ ನೋಡಿದಾಗ ಮಾತುಗಳೇ ಬರುವುದಿಲ್ಲ. ಯಾಕೆಂದರೆ, ಆ ಚಿತ್ರ ನಿಮಗೆ ವರ್ಣಿಸಲಾಗದ, ಅನುಭವವನ್ನು ನೀಡುತ್ತದೆ. ರಿಷಬ್‌ ಶೆಟ್ಟಿ ನಿರ್ದೇಶನದ 'ಕಾಂತಾರ' ಚಿತ್ರವೂ ಅಂತಹ ಸಿನಿಮಾಗಳಲ್ಲಿ ಒಂದು ಎಂದು ನಟಿ ರಮ್ಯಾ 'ಕಾಂತಾರ'ವನ್ನು ಮಾತಿನಿಂದ, ಪದಗಳಿಂದದ ವರ್ಣಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಕೊನೆಯ ಹತ್ತು ನಿಮಿಷದ ಬಗ್ಗೆ ರಮ್ಯಾ ಮಾತು

ಕೊನೆಯ ಹತ್ತು ನಿಮಿಷದ ಬಗ್ಗೆ ರಮ್ಯಾ ಮಾತು

'ಕಾಂತಾರ' ನೀವು ಖಂಡಿತವಾಗಿಯೂ ಅನುಭವಿಸಿ ನೋಡಬೇಕಾದ ಸಿನಿಮಾ ಇದು. ಈ ಚಿತ್ರದಿಂದ ನಾನು ಭೂತ ಕೋಲದ ಬಗ್ಗೆ ಸಾಕಷ್ಟು ತಿಳಿದುಕೊಂಡೆ. ಚಿತ್ರದ ಕೊನೆಯ ಹತ್ತು ನಿಮಿಷದ ದೃಶ್ಯದಲ್ಲಿ ರಿಷಬ್ ಶೆಟ್ಟಿ​ ಅವರ ನಟನೆಯೊಳಗೆ ದೈವವೇ ಪ್ರವೇಶಿಸಿದೆ ಎಂದು ನಾನು ನಿಜವಾಗಿಯೂ ನಂಬಿದ್ದೇನೆ. ನೀವೇ ಸಿನಿಮಾವನ್ನು ನೋಡಿದ ಬಳಿಕ ನನ್ನ ಮಾತನ್ನು ೧೦೦% ಒಪ್ಪಿಕೊಳ್ಳುವಿರಿ ಎಂದು ಕಾಂತಾರದ ಬಗ್ಗೆ ಮೋಹಕ ತಾರೆ ಮನಬಿಚ್ಚಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ಕಾಂತಾರ' ಚಿತ್ರತಂಡಕ್ಕೆ ರಮ್ಯಾ ಅಭಿನಂದನೆ

ರಿಷಬ್‌ ಶೆಟ್ಟಿ ಅವರೇ, ನಿಮಗೆ ಸಂಪೂರ್ಣವಾಗಿ ಅಭಿನಂದಿಸಲು ಮಾತುಗಳೇ ಬರುತ್ತಿಲ್ಲ. ಆದರೆ ಧನ್ಯವಾದಗಳು ನೀವು ಈ ಚಿತ್ರದ ಮೂಲಕ ನಾವೆಲ್ಲರು ಹೆಮ್ಮೆ ಪಡುವಂತೆ ಮಾಡಿದ್ದೀರಿ. ಇನ್ನು ಈವರೆಗೂ ಎರಡೇ ಚಿತ್ರಗಳಲ್ಲಿ ಇಷ್ಟೊಂದು ಅದ್ಭುತವಾಗಿ ನಟಿಸಿರುವ ಸಪ್ತಮಿ ಗೌಡ ಅವರ ಪ್ರತಿಭೆ ನೋಡಿ ನನಗೆ ಅಚ್ಚರಿಯಾಗಿದೆ. ನೀವು ಈ 'ಕಾಂತಾರ'ದಲ್ಲಿ ಅತ್ಯುತ್ತಮವಾಗಿ ನಟಿಸಿದ್ದೀರಿ ಎಂದು ಕಾಂತಾರ ಚಿತ್ರದ ನಾಯಕಿಗೆ ನಟಿ ರಮ್ಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಚಿತ್ರ ಅದ್ಭುತವಾಗಿ ಮೂಡಿ ಬರಲು ಕಾರಣೀಕರ್ತರಾದ ಹೊಂಬಾಳೆ ಫಿಲ್ಮ್ಸ್, ಛಾಯಗ್ರಾಹಕ ಅರವಿಂದ್ ಕಶ್ಯಪ್‌ ಸೇರಿದಂತೆ ಸಂಪೂರ್ಣ 'ಕಾಂತಾರ' ಚಿತ್ರತಂಡವನ್ನು ರಮ್ಯಾ ಅಭಿನಂದಿಸಿದ್ದಾರೆ.

More from Filmibeat

English summary
Sandalwood actor Ramya Reviews Rishabh Shetty starrer Kantara movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X