For Quick Alerts
  ALLOW NOTIFICATIONS  
  For Daily Alerts

  Brahmastra First Review: ಬ್ರಹ್ಮಾಸ್ತ್ರ ಬಾಲಿವುಡ್ ಮಂದಿಗೆ ಅಪರೂಪ, ಆದರೆ... !

  |

  ಬಾಲಿವುಡ್‌ನ ಕ್ಯೂಟ್ ಕಪಲ್ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್. ಈ ಜೋಡಿ ಲವ್ ಸ್ಟೋರಿನೇ ಒಂದು ಸಿನಿಮಾದಂತಿತ್ತು. ಹಲವು ವರ್ಷಗಳ ಪ್ರೀತಿ ಆಗಿದ್ದರೂ, ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಒಟ್ಟಿಗೆ ತೆರೆಮೇಲೆ ಕಾಣಿಸಿಕೊಂಡಿರಲಿಲ್ಲ. ಅಭಿಮಾನಿಗಳ ಆ ಆಸೆಯನ್ನು ತೀರಿಸಲು ಈಗ 'ಬ್ರಹ್ಮಾಸ್ತ್ರ' ತೆರೆಮೇಲೆ ಬರುತ್ತಿದೆ.

  ಇದೇ ಮೊದಲ ಬಾರಿಗೆ ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ತೆರೆಯ ಮೇಲೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್‌ನ ಬಿಗ್ ಬಜೆಟ್ ಸಿನಿಮಾ 'ಬ್ರಹ್ಮಾಸ್ತ್ರ'ವನ್ನು ಅಯನ್ ಮುಖರ್ಜಿ ನಿರ್ದೇಶಿಸಿದ್ದಾರೆ. 'ಬ್ರಹ್ಮಾಸ್ತ್ರ' ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಹಿಂದಿ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲಿದೆ.

  ರಣ್ಬೀರ್-ಆಲಿಯಾರ ಬ್ರಹ್ಮಾಸ್ತ್ರಗೆ ಬಲ ತುಂಬಿದ ದೆಹಲಿ ಹೈಕೋರ್ಟ್ರಣ್ಬೀರ್-ಆಲಿಯಾರ ಬ್ರಹ್ಮಾಸ್ತ್ರಗೆ ಬಲ ತುಂಬಿದ ದೆಹಲಿ ಹೈಕೋರ್ಟ್

  'ಬ್ರಹ್ಮಾಸ್ತ್ರಂ' ಸಿನಿಮಾ ಬೆಂಬಲಕ್ಕೆ ಮೂವೀ ಮಾಂತ್ರಿಕ ರಾಜಮೌಳಿ ನಿಂತಿದ್ದಾರೆ. ಇದೇ ಧೈರ್ಯದ ಮೇಲೆ ಸೆಪ್ಟೆಂಬರ್ 9 ರಂದು ವಿಶ್ವದಾದ್ಯಂತ ಈ ಸಿನಿಮಾ ಬಿಡುಗಡೆಯಾಗಲಿದೆ. ಹೀಗಾಗಿ ಪ್ರಚಾರ ಅದ್ಧೂರಿಯಾಗಿ ನಡೆಯುತ್ತಿದೆ. 'ಬ್ರಹ್ಮಾಸ್ತ್ರ' ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವಾಗಲೇ ಮೊದಲ ವಿಮರ್ಶೆ ಹೊರಬಿದ್ದಿದೆ.

  ದಿಗ್ಗಜರು ಸಾಥ್

  ದಿಗ್ಗಜರು ಸಾಥ್

  ಇತ್ತೀಚೆಗೆ 'ಬ್ರಹ್ಮಾಸ್ತ್ರ' ಸಿನಿಮಾ ತಂಡ ಹೈದರಾಬಾದ್‌ನಲ್ಲಿ ಪ್ರೀ ರಿಲೀಸ್ ಇವೆಂಟ್ ಅನ್ನು ಹಮ್ಮಿಕೊಂಡಿತ್ತು. ಈ ಸಮಾರಂಭಕ್ಕೆ ಯಂಗ್ ಟೈಗರ್ ಜೂ. ಎನ್‌ಟಿಆರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಜೊತೆಗೆ ರಾಜಮೌಳಿ ಕೂಡ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದಾರೆ. ಹೀಗಾಗಿ ಸಹಜವಾಗಿಯೇ ದಕ್ಷಿಣ ಭಾರತದಲ್ಲಿ 'ಬ್ರಹ್ಮಾಸ್ತ್ರ' ಸಿನಿಮಾದ ಬಗ್ಗೆ ಕ್ಯೂರಿಯಾಸಿಟಿ ಬಿಲ್ಡ್ ಆಗುತ್ತಿದೆ.

  'ಬ್ರಹ್ಮಾಸ್ತ್ರ' ಮೊದಲ ವಿಮರ್ಶೆ

  'ಬ್ರಹ್ಮಾಸ್ತ್ರ' ಮೊದಲ ವಿಮರ್ಶೆ

  ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಸೆಪ್ಟೆಂಬರ್ 09ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಹೀಗಾಗಿ ಪ್ಯಾನ್ ಇಂಡಿಯಾ ಸಿನಿಮಾ ಹೇಗಿರುತ್ತೆ ಎಂಬ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲೇ 'ಬ್ರಹ್ಮಾಸ್ತ್ರ' ಸಿನಿಮಾದ ಮೊದಲ ವಿಮರ್ಶೆ ಹೊರಬಿದ್ದಿದೆ. ಓವರ್‌ ಸೀಸ್ ಸೆನ್ಸಾರ್ ಬೋರ್ಡ್‌ನ ಸದಸ್ಯ ಹಾಗೂ ಕ್ರಿಟಿಕ್ ಉಮೈರ್ ಸಂಧು ಸಿನಿಮಾ ರಿವ್ಯೂ ಮಾಡಿದ್ದಾರೆ. ಇತ್ತೀಚೆಗಷ್ಟೇ 'ಬ್ರಹ್ಮಾಸ್ತ್ರ' ಸಿನಿಮಾ ನೋಡಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಶೇರ್ ಮಾಡಿದ್ದಾರೆ.

  ಹೇಗಿದ್ಯಂತೆ 'ಬ್ರಹ್ಮಾಸ್ತ್ರ'?

  ಹೇಗಿದ್ಯಂತೆ 'ಬ್ರಹ್ಮಾಸ್ತ್ರ'?

  "ಬ್ರಹ್ಮಾಸ್ತ್ರ ಎಲ್ಲಾ ರೀತಿಯಿಂದಲೂ ಬಿಗ್ ಸಿನಿಮಾ. ಬಿಗ್ ಸ್ಟಾರ್ ಕಾಸ್ಟ್. ಅತೀ ದೊಡ್ಡ ಕ್ಯಾನ್ವಸ್ ಇದೆ. ಎಸ್‌ಎಫ್‌ಎಕ್ಸ್‌ಗೆ ದುಬಾರಿ ಹಣವನ್ನು ಹೂಡಿಕೆ ಮಾಡಿದ್ದಾರೆ. ಸಿಕ್ಕಾಪಟ್ಟೆ ನಿರೀಕ್ಷೆಗಳಿವೆ. ದುರಂತ ಅಂದರೆ, ಇದು ಅತೀ ಹೆಚ್ಚು ನಿರಾಸೆ ಮೂಡಿಸಿದೆ." ಎಂದು ಉಮೈರ್ ಸಂಧು ಟ್ವೀಟ್ ಮೂಲಕ ಕ್ವಿಕ್ ವಿಮರ್ಶೆ ಮಾಡಿದ್ದಾರೆ.

  'ಬ್ರಹ್ಮಾಸ್ತ್ರ' ಬಲು ಅಪರೂಪ

  'ಬ್ರಹ್ಮಾಸ್ತ್ರ' ಬಲು ಅಪರೂಪ

  ಹಾಗೇ ಬಾಲಿವುಡ್ ಮಂದಿಗೆ ಇದು ಅಪರೂಪದ ಸಿನಿಮಾ ಅಂತ ಹೇಳಿದ್ದಾರೆ. " ಬಾಲಿವುಡ್‌ನಲ್ಲಿ ಫ್ಯಾಂಟಸಿ ಮತ್ತು ಸಾಹಸಮಯ ಸಿನಿಮಾಗಳು ಬಲು ಅಪರೂಪ. ಅದ್ಭುತವಾದ ಕಾಲ್ಪನಿಕ ಜಗತ್ತನ್ನು ಸೃಷ್ಟಿಸಿದ ಅಯಾನ್ ಮುಖರ್ಜಿ ಧೈರ್ಯವನ್ನು ಮೆಚ್ಚಲೇಬೇಕು. ಆದರೆ 'ಬ್ರಹ್ಮಾಸ್ತ್ರ' ಸಿನಿಮಾ ಚಿತ್ರಕಥೆ ಮತ್ತು ಕಥೆ ಸಾದಾರಣವಾಗಿದೆ." ಎಂದಿರೋ ಉಮರ್ ಸಂಧು 5 ರಲ್ಲಿ 2.5 ಸ್ಟಾರ್ ನೀಡಿದ್ದಾರೆ.

  ಅದ್ಧೂರಿ ಸ್ಟಾರ್ ಕಾಸ್ಟ್

  ಅದ್ಧೂರಿ ಸ್ಟಾರ್ ಕಾಸ್ಟ್

  ರಣ್‌ಬೀರ್ ಕಪೂರ್, ಆಲಿಯಾ ಭಟ್, ಅಮಿತಾಬ್ ಬಚ್ಚನ್, ನಾಗಾರ್ಜುನಾ, ಮೌನಿ ರಾಯ್ ಅಂತಹ ಅದ್ಧೂರಿ ತಾರಾಗಣವಿದೆ. ಹೀಗಾಗಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತೆ ಅನ್ನೋ ಮಾತು ಕೇಳಿಬರುತ್ತಿವೆ. ಆದರೆ, ಥಿಯೇಟರ್‌ನಲ್ಲಿ ಈ ಸಿನಿಮಾ ಪ್ರೇಕ್ಷಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಅನ್ನೋದು ಕುತೂಹಲ.

  English summary
  Ranbir Kapoor Alia Bhatt Starrer Brahmastra First Review by Censor Board Member Umair Sandhu, Know More.
  Tuesday, September 6, 2022, 19:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X