For Quick Alerts
  ALLOW NOTIFICATIONS  
  For Daily Alerts

  Brahmastra Movie Review : 'ಬ್ರಹ್ಮಾಸ್ತ್ರ' ಹಿಟ್ ಅಥವಾ ಫ್ಲಾಪ್?

  By ಮಾಧುರಿ ವಿ
  |

  ಅಯಾನ್ ಮುಖರ್ಜಿ ನಿರ್ದೇಶಿಸಿರುವ 'ಬ್ರಹ್ಮಾಸ್ತ್ರ' ಸಿನಿಮಾದ ಆರಂಭದಲ್ಲಿಯೇ ಪಾತ್ರವೊಂದು ಹೇಳುತ್ತದೆ, ''ಅಬ್ಬರ ಇಲ್ಲದ ಭೇಟೆ ಅದೆಂಥಹಾ ಭೇಟೆ' ಎಂದು. ಅಂತೆಯೇ ರಣ್ಬೀರ್-ಆಲಿಯಾ ನಟನೆಯ 'ಬ್ರಹ್ಮಾಸ್ತ್ರ' ಸಿನಿಮಾ ಆಕ್ಷನ್ ಹಾಗೂ ವಿಎಫ್‌ಎಕ್ಸ್ ವಿಭಾಗದಲ್ಲಿ ಅಬ್ಬರಿಸುತ್ತದೆ. ಹಿಂದಿ ಸಿನಿಮಾಗಳ ಮಟ್ಟಿಗೆ ಹಿಂದೆ ನೋಡಿರದಂಥಹಾ ಅದ್ಧೂರಿ ವಿಎಫ್‌ಎಕ್ಸ್ ಅನ್ನು ಸಿನಿಮಾದಲ್ಲಿ ಬಳಸಲಾಗಿದೆ.

  ಸಿನಿಮಾದಲ್ಲಿನ ವಿಎಫ್‌ಎಕ್ಸ್, ಗ್ರಾಫಿಕ್ಸ್ ಹಾಗೂ ಶಾರುಖ್ ಖಾನ್ ಗೆಸ್ಟ್ ಅಪಿಯರೆನ್ಸ್ ಅಧ್ಭುತವಾಗಿದೆ. ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್‌ರ ಪ್ರೇಮಕತೆ ತುಸು ಡಲ್ ಆಗಿದೆ. ಜೊತೆಗೆ ಸಿನಿಮಾದಲ್ಲಿ ಬರುವ ಕೆಲವು ಸಂಭಾಷಣೆಗಳು ಬಹಳ ಕ್ಲೀಷೆಯಾಗಿವೆ.

  Rating:
  3.0/5

  'ಬ್ರಹ್ಮಸ್ತ್ರ' ಸಿನಿಮಾದ ಕತೆ ಏನು? ಸಿನಿಮಾದ ನಿರ್ದೇಶನ ಹೇಗಿದೆ? ಪಾತ್ರಧಾರಿಗಳ ನಟನೆ ಹೇಗಿದೆ? ತಾಂತ್ರಿಕ ಅಂಶಗಳು ಹೇಗಿವೆ? ಒಟ್ಟಾರೆ ಸಿನಿಮಾ ಹೇಗಿದೆ? ಸಿನಿಮಾ ಹಿಟ್ ಆಗುತ್ತಾ? ಅಥವಾ ಫ್ಲಾಪ್ ಆಗುತ್ತಾ ನೋಡುವ ಬನ್ನಿ...

  ಕತೆ ಏನು?

  ಕತೆ ಏನು?

  ಸಿನಿಮಾ ಪ್ರಾರಂಭವಾಗುವುದು ಅಮಿತಾಬ್ ಬಚ್ಚನ್ ಹಿನ್ನೆಲೆ ಧ್ವನಿಯಿಂದ. ಗುರೂಜಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಮಿತಾಬ್ ಬಚ್ಚನ್, ಅಸ್ತ್ರಗಳ ಕತೆಯನ್ನು ಹೇಳುತ್ತಾರೆ. ಬ್ರಹ್ಮಾಂಶ್ ಹೆಸರಿನ ಗುಂಪು ಹೇಗೆ ಆ ಅಸ್ತ್ರಗಳನ್ನು ಪ್ರಯೋಗಿಸಿತು ಹಾಗೂ ಅವರು ಆ ಅಸ್ತ್ರಗಳಿಂದ ಹೇಗೆ ಶಕ್ತಿಯನ್ನು ಪಡೆದುಕೊಂಡರು ಎಂದು ವಿವರಿಸುತ್ತಾರೆ. ದುಷ್ಟ ಶಕ್ತಿಗಳಿಂದ ಈ 'ಅಸ್ತ್ರ'ಗಳನ್ನು ರಕ್ಷಿಸಲು, ಈ ಪ್ರಾಚೀನ ಬ್ರಹ್ಮಾಂಶ್‌ರ ಗುಂಪು ಶತಮಾನಗಳ ನಂತರ ಶತಮಾನಗಳಿಂದ ಕಾರ್ಯನಿರ್ವಹಿಸುತ್ತಿದೆ. ಈಗಿನ ತಲೆಮಾರುಗಳು ತಮ್ಮ ಅಸ್ತಿತ್ವವನ್ನು ಮರೆತಿರುವುದರಿಂದ, ಬ್ರಹ್ಮಾಂಶರು ಸಮಾಜದಲ್ಲಿ ಪ್ರಭಾವಶಾಲಿ ಸ್ಥಾನಗಳನ್ನು ಹೊಂದಿ ರಹಸ್ಯಮಯ ಗುರುತುಗಳ ಅಡಿಯಲ್ಲಿ 'ಅಸ್ತ್ರ'ಗಳನ್ನು ಕಾಪಾಡುತ್ತಿದ್ದಾರೆ.

  ಬ್ರಹ್ಮಾಸ್ತ್ರದ ರಹಸ್ಯ

  ಬ್ರಹ್ಮಾಸ್ತ್ರದ ರಹಸ್ಯ

  ಈ ಎಲ್ಲಾ ಆಯುಧಗಳ ಅಧಿಪತಿ ಎಂದು ಪರಿಗಣಿಸಲಾದ ಬ್ರಹ್ಮಾಸ್ತ್ರವನ್ನು ಮೂರು ತುಂಡುಗಳಾಗಿ ಮಾಡಿ ಅವುಗಳನ್ನು ದುಶ್ಟ ಶಕ್ತಿಗಳಿಂದ ದೂರವಿಡಲು ದೇಶಾದ ಮೂರು ಭಾಗಗಳಲ್ಲಿ ರಹಸ್ಯವಾಗಿ ಇಡಲಾಗಿದೆ. ಇದನ್ನು ಕೆಲವು ಶಕ್ತಿಶಾಲಿ ವ್ಯಕ್ತಿಗಳು ಕಾಪಾಡುತ್ತಿದ್ದಾರೆ. ಇದು ಹೀಗಿರುವಾಗ ವೃತ್ತಿಯಲ್ಲಿ ಡಿಜೆ ಆಗಿರುವ ಹ್ಯಾಪಿ ಗಯ್ ಶಿವ (ರಣಬೀರ್ ಕಪೂರ್), ಲಂಡನ್ ಮೂಲದ ಇಶಾ (ಆಲಿಯಾ ಭಟ್) ಅನ್ನು ದುರ್ಗಾಪೂಜೆಯೊಂದರಲ್ಲಿ ನೋಡುತ್ತಾನೆ ಮತ್ತು ಅದು ಅವನಿಗೆ ಮೊದಲ ನೋಟದಲ್ಲೇ ಪ್ರೀತಿ ಹುಟ್ಟುತ್ತದೆ.

  ದುಷ್ಟಶಕ್ತಿ ಜುನೂನ್

  ದುಷ್ಟಶಕ್ತಿ ಜುನೂನ್

  ಇದೇ ಸಮಯದಲ್ಲಿ ಜುನೂನ್ (ಮೌನಿ ರಾಯ್) ಎಂಬ ದುಷ್ಟ ಶಕ್ತಿಯು ಕೆಟ್ಟ ಕಾರ್ಯವೊಂದಕ್ಕಾಗಿ ಬ್ರಹ್ಮಾಸ್ತ್ರದ ಮೂರು ತುಣುಕುಗಳನ್ನು ಹುಡುಕುತ್ತಿದೆ. ಆ ತುಣುಕುಗಳನ್ನು ಪಡೆಯಲು ಶಿವನ ಮೇಲೆ ಪ್ರಭಾವ ಬೀರಲು ಆರಂಭಿಸುತ್ತದೆ ಜುನೂನ್. ಕತೆ ಮುಂದುವರೆದಂತೆ ಶಿವ ತನ್ನ ಶಕ್ತಿಯ ಪರಿಚಯ ಮಾಡಿಕೊಳ್ಳುತ್ತಾನೆ, ತನಗೆ ಹಾಗೂ ಬೆಂಕಿಗೆ ಇರುವ ಸಂಬಂಧದ ಅರಿವು ಅವನಿಗೆ ಆಗುತ್ತದೆ. ಜುನೂನ್ ಅನ್ನು ಸೋಲಿಸಿ ಅಸ್ತ್ರವನ್ನು ಹೇಗೆ ಆತ ಕಾಪಾಡುತ್ತಾನೆ ಎಂಬುದು ಸಿನಿಮಾದ ಕತೆ.

  ನಿರ್ದೇಶನ ಹೇಗಿದೆ?

  ನಿರ್ದೇಶನ ಹೇಗಿದೆ?

  ಇಷ್ಟು ದೊಡ್ಡ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಂಡು ಚಿತ್ರಮಂದಿರದವರೆಗೆ ಕರೆತಂದಿದ್ದಕ್ಕೆ ಅಯಾನ್ ಮುಖರ್ಜಿಗೆ ಶಹಭಾಷ್ ಹೇಳಲೇ ಬೇಕು. ಮಾರ್ವೆಲ್ ಸಿನಿಮ್ಯಾಟಿಕ್ ಯೂನಿವರ್ಸ್‌ಗೆ ಅಂಟಿ ಕೂತ ಪ್ರೇಕ್ಷಕರಿಗೆ 'ಬ್ರಹ್ಮಾಸ್ತ್ರ' ಮೂಲಕ ಕೆಲವು ಅದ್ಭುತ ವಿಶ್ಯುಲ್ ಎಫೆಕ್ಟ್‌ಗಳನ್ನು, ಅದ್ಭುತ ದೃಶ್ಯಗಳನ್ನು ಅಯಾನ್ ನೀಡಿದ್ದಾರೆ. 'ಅಸ್ತ್ರಾವರ್ಸ್' ಮೂಲಕ ಬಾಲಿವುಡ್‌ನಲ್ಲಿ ಈವರೆಗೆ ಬಳಸಲಾಗಿದ್ದ ಸೂತ್ರಗಳನ್ನು ಬಿಟ್ಟು ಹೊಸಕಡೆಗೆ ಹೊರಳಿದ್ದಾರೆ. ನಾವು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿದ್ದಾರೆ.

  ಕೆಲವು ಕಡೆ ಡಲ್ ಹೊಡೆಯುತ್ತದೆ

  ಕೆಲವು ಕಡೆ ಡಲ್ ಹೊಡೆಯುತ್ತದೆ

  ಸಿನಿಮಾದಲ್ಲಿ ಶಿವ ಮತ್ತು ಇಶಾರ ಪ್ರೇಮಕಥೆ ಇಷ್ಟವಾಗುವಂತಿಲ್ಲ. ಜೊತೆಗೆ ತೀಕ್ಷಣವಲ್ಲದ ಬರವಣಿಗೆಯು ಸಿನಿಮಾವನ್ನು ಅಲ್ಲಲ್ಲಿ ಬೇಸರಗೊಳಿಸುತ್ತದೆ. ಹುಸೇನ್ ದಲಾಲ್ ಮತ್ತು ಅಯಾನ್ ಮುಖರ್ಜಿ ಅವರ ಸಂಭಾಷಣೆಗಳು ಕ್ಲೀಷೆಯಾಗಿವೆ. ಅಲ್ಲದೆ, ಸಿನಿಮಾವು ಭಾವನಾತ್ಮಕವಾಗಿ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳವಲ್ಲಿ ಸೋಲುತ್ತದೆ. ಇದೇ ಕಾರಣಕ್ಕೆ ಪ್ರೇಕ್ಷಕನಿಗೆ ಪಾತ್ರಗಳೊಂದಿಗೆ ಕನೆಕ್ಟ್ ಆಗಲು ಸಾಧ್ಯವಾಗುವುದಿಲ್ಲ.

  ನಟನೆ ಹೇಗಿದೆ?

  ನಟನೆ ಹೇಗಿದೆ?

  ಹ್ಯಾಪಿ ಯಂಗ್ ಗಯ್‌ನಿಂದ ಸೂಪರ್ ಹೀರೋ ಆಗುವ ಪಾತ್ರದಲ್ಲಿ ರಣ್ಬೀರ್ ಕಪೂರ್ ಚೆನ್ನಾಗಿ ನಟಿಸಿದ್ದಾರೆ. ಕೆಲವು ಕಡೆಗಳಲ್ಲಿ ಚಿತ್ರಕತೆ ಕೈಕೊಟ್ಟರೂ ರಣ್ಬೀರ್ ತಮ್ಮ ಫರ್ಮಾರ್ಫೆಮ್ಸ್‌ನಿಂದ ದೃಶ್ಯವನ್ನು ಮೇಲೆತ್ತಿದ್ದಾರೆ. ಆಲಿಯಾ ಭಟ್ ಸಹ ತಮ್ಮ ಚಾರ್ಮ್‌ನಿಂದ ಸಿನಿಮಾಕ್ಕೆ ಮಸಾಲೆ ಬೆರೆಸಿದ್ದಾರೆ. ಆದರೆ ರಣ್ಬೀರ್ ಹಾಗೂ ಆಲಿಯಾರ ಕೆಮಿಸ್ಟ್ರಿ ಇನ್ನಷ್ಟು ಚೆನ್ನಾಗಿರಬಹುದಿತ್ತು ಎನಿಸುತ್ತದೆ. ಅಮಿತಾಬ್ ಬಚ್ಚನ್ ಸಿನಿಮಾಕ್ಕೆ ಒಂದು ಬ್ಯಾಲೆನ್ಸ್ ಅನ್ನು ತಂದುಕೊಟ್ಟಿದ್ದಾರೆ. ಇನ್ನು ಶಾರುಖ್ ಖಾನ್‌ರ ಎಂಟ್ರಿ ಸೂಪರ್‌ ಆಗಿದೆ. ನಾಗಾರ್ಜುನ ಪಾತ್ರವೂ ಸಹ ಚೆನ್ನಾಗಿದೆ.

  ತಾಂತ್ರಿಕ ಅಂಶಗಳು ಹೇಗಿವೆ?

  ತಾಂತ್ರಿಕ ಅಂಶಗಳು ಹೇಗಿವೆ?

  ಸಿನಿಮಾದಲ್ಲಿನ ಅದ್ಭುತ ವಿಎಫ್‌ಎಕ್ಸ್‌ಗಳಿಗೆ ಪ್ರೈಂ ಫೋಕಸ್ ವಿಎಫ್‌ಎಕ್ಸ್ ಸಂಸ್ಥೆಗೆ ಧನ್ಯವಾದ ಹೇಳಲೇಬೇಕು. ಇಡೀ ಸಿನಿಮಾಕ್ಕೆ ಕಳಶವೇ ವಿಎಫ್‌ಎಕ್ಸ್. ಶಾರುಖ್ ಎಂಟ್ರಿ ಸೀನ್ ಆಗಿರಬಹುದು ಅಥವಾ ಕಾರು ಚೇಸ್‌ನ ದೃಶ್ಯ ಇರಬಹುದು ಅದ್ಭುತವಾಗಿ ತೆರೆಯ ಮೇಲೆ ಕಾಣುತ್ತವೆ. ಸುದೀಪ್ ಚಟರ್ಜಿಯ ಸಿನಿಮಾಟೊಗ್ರಫಿ ಸಹ ಚೆನ್ನಾಗಿದೆ. ಸಿನಿಮಾದ ದೃಶ್ಯಗಳು ಬ್ರೈಟ್ ಆಗಿ ಸುಂದರವಾಗಿ ಕಾಣುತ್ತವೆ. ಸಿನಿಮಾದ ಎಡಿಟಿಂಗ್ ಇನ್ನಷ್ಟು ಚೆನ್ನಾಗಿರಬಹುದಿತ್ತು. ಸಿನಿಮಾದ ಹಾಡುಗಳು ಸಹ ಚೆನ್ನಾಗಿವೆ. ಆದರೆ ಇಡೀ ಚಿತ್ರದ ಹಿನ್ನೆಲೆ ಸಂಗೀತಕ್ಕೆ ಇದೇ ಮಾತು ಹೇಳುವಂತಿಲ್ಲ.

  English summary
  Ranbir Kapoor and Alia Bhatt starrer Brahmastra Hindi movie review in Kannada. Movie is visual treat.
  Friday, September 9, 2022, 15:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X