Randhawa Review : ಗೂಬೆಯ ಜೊತೆ ಆಟ.. ಭೂತದ ಹುಡುಕಾಟ..
ಯಾವುದೇ ಕಾಲ ಇರಲಿ... ಟ್ರೆಂಡ್ ಹೇಗಿಯೇ ಬದಲಾಗಲಿ.. ಇಂಡಸ್ಟ್ರಿಯಲ್ಲಿ ಹಾರರ್ ಸಿನಿಮಾಗಳು ಬರುತ್ತಲೇ ಇರುತ್ತದೆ. ದೆವ್ವಗಳಿಗೆ ಯಾವ ಹೊತ್ತು ಬಿಡಿ... ಅಂದಹಾಗೆ, ಈ ವಾರ ಮತ್ತೊಂದು ಹಾರರ್ ಥ್ರಿಲ್ಲರ್ ಸಿನಿಮಾ ಚಿತ್ರಮಂದಿರಕ್ಕೆ ಬಂದಿದೆ ಅದೇ 'ರಾಂಧವ'.
ನಾಯಕ ರಾಬರ್ಟ್ (ಭುವನ್ ಪೊನ್ನಣ್ಣ) ವಿಚಿತ್ರವಾದ ಗೂಬೆಗಳ ಮೇಲೆ ಡಾಕ್ಯೂಮೆಂಟರಿ ಮಾಡಲು ಹೊರಡುತ್ತಾನೆ. ಹೀಗೆ ಇರುವ ನಾಯಕನಿಗೆ ವಿಚಿತ್ರ ಕನಸುಗಳು ಬೀಳುತ್ತದೆ. ರಾಬರ್ಟ್ ಜೀವನಕ್ಕೂ ಆ ಕನಸಿಗೂ ಇರುವ ಸಂಬಂಧದ ಮೂಲಕ ಸಿನಿಮಾದ ನಿರೂಪಣೆ ಸಾಗುತ್ತದೆ.
ವಿಚಿತ್ರ ಗೂಬೆಗೂ ನಾಯಕನಿಗೂ ಏನು ಸಂಬಂಧ, ಹಾಗಾದರೆ, ರಾಬರ್ಟ್ ಯಾರು ಎನ್ನುವುದು ಸಿನಿಮಾದ ಕುತೂಹಲಕಾರಿ ಅಂಶವಾಗಿದೆ. ಕ್ರೈಮಾಕ್ಸ್ ಚಿತ್ರದ ಹೈಲೈಟ್ ಆಗಿದೆ. ಆದರೆ, ಆ ದೃಶ್ಯ ಬರುವವರೆಗೆ ಪ್ರೇಕ್ಷಕ ತಾಳ್ಮೆಯಿಂದ ಸೀಟ್ ಮೇಲೆ ಕೂರಬೇಕು.

ಭುವನ್ ನಟನೆಗೆ ಪೂರ್ಣ ಅಂಕ ನೀಡಲು ಸಾಧ್ಯವಿಲ್ಲ. ಫೈಟ್ಸ್ ಗಳು ಅಡ್ಡಿ ಇಲ್ಲ. ನಾಯಕಿಯರಿಗೆ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವುದಿಲ್ಲ. ಜಹಾಂಗೀರ್ ಪಾತ್ರದಲ್ಲಿ ಹಾಸ್ಯ ಇದ್ದರೂ, ಕೆಲವು ಬಾರಿ ಅತಿ ಅನಿಸುತ್ತದೆ. ಮಂಜುನಾಥ್ ಹಾಗೂ ಅರವಿಂದ್ ಅವರ ಪಾತ್ರಗಳು ಚೆನ್ನಾಗಿದೆ.

ಉಳಿದಂತೆ, ಭೂತಾರಾಧನೆಯ ದೃಶ್ಯಗಳು ರೋಚಕವಾಗಿದೆ. ಗಾಯಕ ಶಶಾಂಕ್ ಶೇಷಗಿರಿ ಮೊದಲ ಬಾರಿಗೆ ಮ್ಯೂಸಿಕ್ ನೀಡಿದ್ದು, ಹಿನ್ನಲೆ ಸಂಗೀತದಲ್ಲಿ ಗಮನ ಸೆಳೆಯುತ್ತಾರೆ. ಹಾರರ್ ಸಿನಿಮಾ ತಕ್ಕ ಹಾಗೆ ಮೈ ಜುಮ್ ಎನ್ನಿಸುವ ದೃಶ್ಯಗಳು ಇವೆ.


Click it and Unblock the Notifications











