twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ: ರವಿವರ್ಮನಾ ಕುಂಚಕ್ಕೆ ಬೆಲೆ ಕಟ್ಟಲು ಸಾಧ್ಯವೇ?

    By ಜೇಮ್ಸ್ ಮಾರ್ಟಿನ್
    |

    ರಾಜ ರವಿವರ್ಮ ಭಾರತ ತಂಡ ಅತ್ಯಂತ ಪ್ರತಿಭಾವಂತ ಕಲಾವಿದ. ಮಂತ್ರರೂಪಿಯಾಗಿದ್ದ ದೇವರು ಹಾಗೂ ಪೌರಾಣಿಕ ಪಾತ್ರಗಳನ್ನು ತನ್ನ ಕುಂಚ ಕಲೆಯ ಮೂಲಕ ಸಾಮಾನ್ಯ ಜನರ ಹತ್ತಿರಕ್ಕೆ ತಂದ ಸಾಧಕ., ಅದರೆ, ಕ್ಯಾಲೆಂಡರ್ ಗಳಲ್ಲಿ ಗಣೇಶ, ಸರಸ್ವತಿ, ಸೀತಾಪಹರಣ ಚಿತ್ರಗಳನ್ನು ಕಂಡ ಆಸ್ತಿಕರೇ ರವಿವರ್ಮನ ನಗ್ನ ಚಿತ್ರಗಳನ್ನು ಕಂಡು ಮೂಗು ಮೂರಿದಿದ್ದರು.

    ಪ್ರೀತಿ ಪ್ರೇಮ ಪ್ರಣಯ ಕಾಮೋತ್ಕಟತೆ, ನಿರ್ಬಂಧ, ಸ್ವಾತಂತ್ರ್ಯ, ಧರ್ಮ, ಅಧರ್ಮ ಸೇರಿದಂತೆ ಹತ್ತು ಹಲವು ವಿಷಯಗಳನ್ನು ಒಳಗೊಂಡಿರುವ 19ನೇ ಶತಮಾನದ ಕೇರಳ ಮೂಲದ ಕಲಾವಿದನ ಬದುಕು ಬವಣೆಯನ್ನು ಕೇತನ್ ಮೆಹ್ತಾ ಸೊಗಸಾಗಿ ಬೆಳ್ಳಿ ತೆರೆಯಲ್ಲಿ ಮೂಡಿಸಿದ್ದಾರೆ.

    ಮರಾಠಿ ಲೇಖಕ ರಂಜಿತ್ ದೇಸಾಯಿ ನೀಡಿದ ಅಕ್ಷರದ ರಂಗನ್ನು ಬಿಳಿಪರದೆಯ ಮೇಲೆ ವರ್ಣರಂಜಿತ ದೃಶ್ಯಕಾವ್ಯವನ್ನಾಗಿಸುವಲ್ಲಿ ಕೇತನ್ ಮೆಹ್ತಾ ಯಶಸ್ವಿಯಾಗಿದ್ದಾರೆ. ಚಿತ್ರ ಬಿಡುಗಡೆಗೂ ಮುನ್ನ ರಿಲೀಸ್ ಆದ ಹಸಿ ಬಿಸಿ ಸನ್ನಿವೇಶಗಳ ವಿಡಿಯೋಗಳು, ನಾಯಕಿ ಸುಗಂಧಾ(ನಂದನಾ ಸೇನ್) ಚಿತ್ರಗಳು, ಚಿತ್ರದ ಬಗ್ಗೆ ಜನರ ಮಾತುಗಳು ಎಲ್ಲವೂ ಚಿತ್ರದ ಓಟಕ್ಕೆ ಪೂರಕವಾಗಬೇಕಿತ್ತು.

    ಅದರೆ, ಭಾರಿ ಹೊಡೆತ ಬಿದ್ದು ಮೂಲೆ ಸೇರಿದ ಅಪೂರ್ವ ಕಲಾಕೃತಿಯಂತೆ ಮಸುಕಾಗಿ ಚಿತ್ರಮಂದಿರದಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿದೆ. ಕಳೆದ ಮೂರು ದಿನಗಳ ಗಳಿಕೆ 2.5 ಕೋಟಿ ರು ದಾಟಿಲ್ಲ. ಹೇಳಿ ಕೇಳಿ 'ಆರ್ಟ್' ಫಿಲಂ ಎಂದು ಸುಮ್ಮನೆ ನೋಡದೆ ಇರಬೇಡಿ, ಒಮ್ಮೆ ನೋಡಿ ಆನಂದಿಸಿ, ವಿವಿಧ ಪತ್ರಿಕೆಗಳ ವಿಮರ್ಶಕರು ನೀಡಿರುವ ವಿಮರ್ಶೆ ಸಂಗ್ರಹ ಇಲ್ಲಿದೆ ಓದಿ...

    ಐಬಿಎನ್ ವಿಮರ್ಶೆ: ಪ್ರಜಕ್ತಾ ಹೆಬ್ಬಾರ್

    ಐಬಿಎನ್ ವಿಮರ್ಶೆ: ಪ್ರಜಕ್ತಾ ಹೆಬ್ಬಾರ್

    19ನೇ ಶತಮಾನದ ಕಾಲಘಟ್ಟಕ್ಕೆ ಹೊಂದಿಕೆಯಾಗದ ಚಿತ್ರದ ಸಂಭಾಷಣೆ, ಉಡುಗೆ ತೊಡುಗೆಗಳಲ್ಲಿ ಯಾವ ನೈಜತೆ ಇಲ್ಲದಿರುವುದು, ಪೇಲವ ಹಿನ್ನೆಲೆ ಸಂಗೀತ, ರಾಜೇಶ್ವರಿ ಪಾಠಕ್ ಅವರ ಸನ್ ಬಾಲಂ ಹೊರತು ಪಡಿಸಿ ಚಿತ್ರಕ್ಕೆ ಪೂರಕವಾಗದ ಹಾಡು, ಸಂಗೀತ.

    ರಜತ್ ಕಪೂರ್, ಅಶೀಶ್ ವಿದ್ಯಾರ್ಥಿ, ಪ್ರಶಾಂತ್ ನಾರಾಯಣನ್, ಸಮೀರ್ ಅಧಿಕಾರಿ, ವಿಕ್ರಮ್ ಘೋಖಲೆ ಅವರ ಪ್ರತಿಭೆ ಬಳಸಿಕೊಳ್ಳಲು ಮೆಹ್ತಾ ವಿಫಲ. ಉತ್ತಮ ಆತ್ಮಚರಿತ್ರೆಯಾಗಬೇಕಿದ್ದ ಚಿತ್ರ ಎಡಿಟಿಂಗ್ ನಲ್ಲಿ ಸೋತಿರುವುದು ಚಿತ್ರವನ್ನು ಒಮ್ಮೆ ನೋಡಿದರೆ ಮತ್ತೆ ನೋಡಬೇಕು ಎನಿಸುವುದಿಲ್ಲ ಎಂಬಂತೆ ಮಾಡಿದೆ.

    ಜೀ ನ್ಯೂಸ್, ಅಪರ್ಣಾ ಮುಡಿ 2.5/5

    ಜೀ ನ್ಯೂಸ್, ಅಪರ್ಣಾ ಮುಡಿ 2.5/5

    ನಿಹಾರಿಕಾ ಖಾನ್ ವಸ್ತ್ರ ವಿನ್ಯಾಸ ಉತ್ತಮವಾಗಿದೆ, ಸುಗಂಧಾ ಉಟ್ಟ ಸೀರೆಗಳು ರಾಜರ ಪೋಷಾಕುಗಳು ಗಮನ ಸೆಳೆಯುತ್ತವೆ. ಹಿನ್ನೆಲೆ ಸಂಗೀತ ಸಾಧಾರಣ ಮಟ್ಟದಲ್ಲಿದೆ. ಎಡಿಟಿಂಗ್ ಸಂಪೂರ್ಣ ಕೈ ಕೊಟ್ಟಿದೆ. ಸಂಭಾಷಣೆ ಬಿ ಗ್ರೇಡ್ ಚಿತ್ರದ ಸಂಭಾಷಣೆಯನ್ನು ನೆನಪಿಸುತ್ತದೆ.

    ಆದರೆ, ಇಷ್ಟೆಲ್ಲ ನೂನ್ಯತೆಗಳಿದ್ದರೂ ಚಿತ್ರ ಸಮಕಾಲೀನ ಪರಿಸ್ಥಿತಿಯಲ್ಲಿ ಚಿಂತನೆಗೆ ಹಚ್ಚುವ ವಸ್ತುವನ್ನು ಹೊಂದಿದೆ. ಸ್ವಾತಂತ್ರ್ಯ ಹಾಗೂ ಬಂಧನದ ಪರಿಮಿತಿಗಳನ್ನು ಮೀರುವ ಯತ್ನ ತೋರಿಸುತ್ತದೆ. ಅದರೆ, ಎಲ್ಲವೂ ನಾಯಕ ನಾಯಕಿ ರೋಮ್ಯಾನ್ಸ್ ಲ್ಲಿ ಕರಗಿ ಹೋಗುತ್ತದೆ.

    ಹಿಂದೂಸ್ತಾನ್ ಟೈಮ್ಸ್, ರೋಹಿತ್ 3.5/5

    ಹಿಂದೂಸ್ತಾನ್ ಟೈಮ್ಸ್, ರೋಹಿತ್ 3.5/5

    ಜೀವನದ ಉದ್ದೇಶವೇ ಕಲೆಯಿಂದ ಸುಂದರತೆ ಪಡೆಯುವುದು ಎನ್ನುವ ರವಿವರ್ಮಾನ ಮಾತುಗಳು ನಿಮ್ಮನ್ನು ಕಾಡದೇ ಬಿಡದು. ಇಂದಿನ ಹಿಂದಿ ಚಿತ್ರಗಳ ಐಟಂ ಸಾಂಗ್, ಪಂಚಿಂಗ್ ಡೈಲಾಗ್, ಲಾಜಿಕ್ ಇಲ್ಲದ ಫೈಟಿಂಗ್ ನಡುವೆ ಕಲಾವಿದನೊಬ್ಬನ ಆತ್ಮಕಥೆಯನ್ನು ಹೇಳುವ ಕೇತನ್ ಮೆಹ್ತಾ ಅವರ ಪ್ರಯತ್ನವನ್ನು ಮೆಚ್ಚಲೇ ಬೇಕು.

    ಸರಳ ಚಿತ್ರಕಥೆ, ಸರಳ ಸಂಭಾಷಣೆ ಇರುವುದು ಚಿತ್ರಕ್ಕೆ ಪೂರಕವಾಗಿದೆ. ಇದನ್ನೇ ಅನೇಕರು ನೂನ್ಯತೆ ಎಂದು ತಿಳಿದರೆ ಚಿತ್ರವೇ ರುಚಿಸುವುದಿಲ್ಲ. ಕಲೆಯನ್ನು ಆರಾಧಿಸುವ ಗುಣ ನಿಮ್ಮಲ್ಲಿದ್ದರೆ ಚಿತ್ರವನ್ನು ನೋಡಲಡ್ಡಿಯಿಲ್ಲ.

    ಬಾಲಿವುಡ್ ಹಂಗಾಮ 2.5/5

    ಬಾಲಿವುಡ್ ಹಂಗಾಮ 2.5/5

    ರಣದೀಪ್ ಹೂಡಾ ಚಿತ್ರದ ಅರಂಭದಲ್ಲಿ ನಟನೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಅದರೆ, ದ್ವಿತೀಯಾರ್ಧದಲ್ಲಿ ಅದ್ಭುತ ನಟನೆ ಮೂಲಕ ಗಮನ ಸೆಳೆಯುತ್ತಾರೆ. ಚಿತ್ರದ ಪ್ರತಿ ಪಾತ್ರವೂ ಚಿತ್ರಕಥೆಗೆ ಪೂರಕವಾಗಿದೆ. ಭಾರತದ ಕಲೆ, ಸಂಸ್ಕೃತಿಯನ್ನು ಸ್ವಲ್ಪ ಹೆಚ್ಚು ರಂಗು ರಂಗಾಗಿ ಕೇತನ್ ಅವರು ನಿಮ್ಮ ಮುಂದಿಟ್ಟಿದ್ದಾರೆ. 120 ನಿಮಿಷಗಳ ಕಾಲ ವರ್ಣಮಯ ಕಥೆಯಲ್ಲಿ ರವಿವರ್ಮನ ಬದುಕಷ್ಟೇ ಅಲ್ಲದೆ ಅಂದಿನ ಸಮಾಜದ ಕಟ್ಟುಪಾಡನ್ನು ಹಿಂದೂ ಸಮಾಜದ ಉದ್ಧಾರಕರನ್ನು ಪ್ರಶ್ನಿಸುವ ಕ್ರಿಯೆ ಅಚ್ಚುಕಟ್ಟಾಗಿ ಮೂಡಿದೆ. ಅದರೆ, ಚಿತ್ರದ ಮೂಲ ಆಶಯವೇ ಬಣ್ಣಗಳಲ್ಲಿ ಮುಚ್ಚಿ ಹೋದಂತೆ ಭಾಸವಾಗಿದೆ.

    ಕಲೆಯ ಸೆನ್ಸಾರ್ ಶಿಪ್ ಗೆ ಸವಾಲು : ರಿಡೀಫ್

    ಕಲೆಯ ಸೆನ್ಸಾರ್ ಶಿಪ್ ಗೆ ಸವಾಲು : ರಿಡೀಫ್

    ಕಲೆ, ಕಲಾವಿದನ ಸೆನ್ಸಾರ್ ಶಿಪ್ ಗೆ ಸವಾಲು ಎಸೆಯಬಲ್ಲ ಚಿತ್ರವಾಗಬೇಕಿದ್ದ ರಂಗ್ ರಸಿಯಾ ಎಲ್ಲೋ ಒಂದು ಕಡೆ ತನ್ನ ಹಾದಿ ಬಿಟ್ಟು ಬೇರೆ ಕಡೆ ಸಾಗಿ ಇಡೀ ಚಿತ್ರಕ್ಕೆ ಹೊಡೆತ ನೀಡಿದೆ.

    ಕಲಾವಿದರು ನಗ್ನ ಚಿತ್ರ ಬಿಡಿಸಿದಾಗ ಹಾರಾಡುವ ಜನರ ಮನಸ್ಥಿತಿ, ದೇಶದ ಕಾನೂನು, ಅಸ್ಪೃಶ್ಯತೆ, ಸ್ವಾತಂತ್ರ್ಯ ಮುಂತಾದ ವಿಷಯಗಳ ಬಗ್ಗೆ ಭಾಷಣಗಳನ್ನು ಕೇಳಿದ್ದೇವು ಅದರೆ, ನೈಜ ಘಟನೆಗಳನ್ನು ಆಧಾರಿಸಿದ ಇಂಥದ್ದೊಂದು ಚಿತ್ರ ಈಗಿನ ಕಾಲಘಟ್ಟದಲ್ಲಿ ಅವಶ್ಯವಾಗಿ ಬೇಕಿತ್ತು. ಕೇತನ್ ಮೆಹ್ತಾ ಈ ನಿರ್ವಾತವನ್ನು ತುಂಬಿದ್ದಾರೆ, ಅದರೆ, ಸಂಪೂರ್ಣವಾಗಿ ಇದರಲ್ಲಿ ಗೆಲುವು ಸಾಧಿಸುವಲ್ಲಿ ಸೋತಿದ್ದಾರೆ. ಅವರ ಪ್ರಯತ್ನ, ರಣದೀಪ್ ಹೂಡಾ ಹಾಗೂ ನಂದನಾ ನಟನೆ ಚಿತ್ರವನ್ನು ಜೀವಂತವಾಗಿಸಿದೆ.

    English summary
    Rang Rasiya Movie Critics Review : Rang Rasiya starring Randeep Hooda and Nandana Sen have impressed the critics and the viewers but unfortunately it did not have the same effect with its collection at the Indian Box Office. If you love art and cinema, and cinema as art, then don't miss this one.
    Tuesday, November 11, 2014, 13:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X