For Quick Alerts
  ALLOW NOTIFICATIONS  
  For Daily Alerts

  ವಿಮರ್ಶೆ: ಪ್ರಯಾಸ ಆಗದ '6ನೇ ಮೈಲಿ' ಪ್ರಯಾಣ

  |
  6ne Maili : 6ne Maili review..! | ಮಿಸ್ ಮಾಡ್ದೆ ನೋಡಿ 6ನೇ ಮೈಲಿ ಸಿನಿಮಾ..! | Filmibeat Kannada

  ಸಸ್ಪೆನ್ಸ್, ಥ್ರಿಲ್ಲರ್, ಕ್ರೈಂ... ಈ ಎಲ್ಲಾ ಅಂಶಗಳು ಹದವಾಗಿ ಬೆರೆತಿರುವ ಸಿನಿಮಾ '6ನೇ ಮೈಲಿ'. ಕಡೆಯವರೆಗೂ ಪ್ರೇಕ್ಷಕರನ್ನ ಅತ್ತಿತ್ತ ಅಲುಗಾಡದಂತೆ '6ನೇ ಮೈಲಿ'ಯಲ್ಲೇ ಕಟ್ಟಿ ಹಾಕಿ ಕೂರಿಸುವಲ್ಲಿ ನವ ನಿರ್ದೇಶಕ ಸೀನಿ ಯಶಸ್ವಿ ಆಗಿದ್ದಾರೆ.

  Rating:
  4.0/5
  Star Cast: ಸಂಚಾರಿ ವಿಜಯ್, ಆರ್.ಜೆ ನೇತ್ರ, ಆರ್.ಜೆ ಸುಧೇಶ್ ಭಟ್, ಕೃಷ್ಣ ಹೆಬ್ಬಾಲೆ
  Director: ಸೀನಿ

  '6ನೇ ಮೈಲಿ' ಸುತ್ತ....

  '6ನೇ ಮೈಲಿ' ಸುತ್ತ....

  ದಕ್ಷಿಣ ಕನ್ನಡ ಜಿಲ್ಲೆಯ 'ಉಜಿರೆ'ಯಿಂದ 'ಉಪ್ಪಿನಂಗಡಿ'ಗೆ ಹೋಗುವ ದಾರಿ ಮಧ್ಯೆ ಸಿಗುವ '6ನೇ ಮೈಲಿ'ಯ ದಟ್ಟಾರಣ್ಯದಲ್ಲಿ ರಾತ್ರಿ ಹೊತ್ತು ಬೆಂಗಳೂರಿನಿಂದ ಬರುವ ಚಾರಣಿಗರು ನಿಗೂಢವಾಗಿ ಕಾಣೆಯಾಗುತ್ತಿರುತ್ತಾರೆ. ಇದೇ ಪ್ರದೇಶ ಸರಣಿ ಕೊಲೆಗಳಿಗೂ ಸಾಕ್ಷಿ ಆಗಿರುತ್ತೆ.

  ಎಲ್ಲಿಗೆ ಚಾರಣ.?

  ಎಲ್ಲಿಗೆ ಚಾರಣ.?

  ಉಪ್ಪಿನಂಗಡಿ ಬಳಿ ಇರುವ ಧವಳಗಿರಿ ಬೆಟ್ಟಕ್ಕೆ ಟ್ರೆಕ್ಕಿಂಗ್ ಹೋಗುವುದು ಆರ್.ಜೆ ರಾಘವ್ (ಸುಧೇಶ್ ಭಟ್) ಪ್ಲಾನ್. ಜೊತೆಯಲ್ಲಿ ಇಬ್ಬರು ಹುಡುಗಿಯರು ಬೇರೆ. ಉಪ್ಪಿನಂಗಡಿಗೆ ಹೋಗುವಾಗ '6ನೇ ಮೈಲಿ'ಯಲ್ಲಿ ಇವರೆಲ್ಲ ಹತ್ಯೆ ಆಗುತ್ತಾರೆ. ಇದಕ್ಕೆ ಕಾರಣ ಏನು ಎಂಬುದೇ ಚಿತ್ರದ ಸಸ್ಪೆನ್ಸ್. ಅದನ್ನ ನೀವು ಥಿಯೇಟರ್ ನಲ್ಲಿಯೇ ನೋಡಿರಿ...

  ಸಂಚಾರಿ ವಿಜಯ್ ನಟನೆ ಬಗ್ಗೆ ಕೆಮ್ಮಂಗಿಲ್ಲ.!

  ಸಂಚಾರಿ ವಿಜಯ್ ನಟನೆ ಬಗ್ಗೆ ಕೆಮ್ಮಂಗಿಲ್ಲ.!

  '6ನೇ ಮೈಲಿ' ಚಿತ್ರದಲ್ಲಿ ಸಂಚಾರಿ ವಿಜಯ್ ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಫಸ್ಟ್ ಹಾಫ್ ನಲ್ಲಿ ಒಂಥರಾ ಎಂಟ್ರಿಕೊಟ್ಟರೆ, ಸೆಕೆಂಡ್ ಹಾಫ್ ನಲ್ಲಿ ಅವರ ಖದರ್ರೇ ಬೇರೆ.! ಎರಡೂ ಶೇಡ್ ಗಳನ್ನ ನೀಟಾಗಿ ಬ್ಯಾಲೆನ್ಸ್ ಮಾಡಿದ್ದಾರೆ ಸಂಚಾರಿ ವಿಜಯ್.

  ಉಳಿದವರ ಪರ್ಫಾಮೆನ್ಸ್ ಹೇಗಿದೆ.?

  ಉಳಿದವರ ಪರ್ಫಾಮೆನ್ಸ್ ಹೇಗಿದೆ.?

  ಮಾತಿನಲ್ಲಿ ಮಾತ್ರ ಅಲ್ಲ, ನಟನೆಯಲ್ಲಿಯೂ ಸೈ ಅಂತ ಈ ಸಿನಿಮಾ ಮೂಲಕ ಆರ್.ಜೆ.ನೇತ್ರ ಸಾಬೀತು ಮಾಡಿದ್ದಾರೆ. ಆರ್.ಜೆ ಸುಧೇಶ್ ಭಟ್, ಜಾನ್ವಿ ಜ್ಯೋತಿ, ಆದಿತ್ಯ ಭಾರದ್ವಾಜ್, ಕೃಷ್ಣ ಹೆಬ್ಬಾಲೆ, ನಿಶ್ಚಲ್ ಆತ್ರೇಯ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ.

  ಮ್ಯೂಸಿಕ್ ಪ್ಲಸ್ ಪಾಯಿಂಟ್

  ಮ್ಯೂಸಿಕ್ ಪ್ಲಸ್ ಪಾಯಿಂಟ್

  '6ನೇ ಮೈಲಿ' ಚಿತ್ರ ಕಥೆಯ ಮೂಡಿಗೆ ತಕ್ಕ ಹಾಗೆ ಬ್ಯಾಕ್ ಗ್ರೌಂಡ್ ಸ್ಕೋರ್ ನೀಡಿದ್ದಾರೆ ಸಂಗೀತ ಸಂಯೋಜಕ ಸಾಯಿ ಕಿರಣ್. ಇಡೀ ಸಿನಿಮಾದಲ್ಲಿ ಇರುವುದು ಒಂದೇ ಹಾಡು. ಡೆತ್ ಮೆಟಲ್ ಪ್ಯಾಟ್ರನ್ ನಲ್ಲಿ ಮೂಡಿಬಂದಿರುವ '6ನೇ ಮೈಲಿ' ಟೈಟಲ್ ಟ್ರ್ಯಾಕ್ ಮತ್ತೆ ಮತ್ತೆ ಕೇಳುವಂತಿದೆ.

  ಟೆಕ್ನಿಕಲಿ ಸಿನಿಮಾ ಹೇಗಿದೆ.?

  ಟೆಕ್ನಿಕಲಿ ಸಿನಿಮಾ ಹೇಗಿದೆ.?

  ಬಹುತೇಕ ಕತ್ತಲಿನಲ್ಲೇ ಚಿತ್ರೀಕರಣಗೊಂಡಿರುವ '6ನೇ ಮೈಲಿ' ಚಿತ್ರದ ಕ್ಯಾಮರಾ ವರ್ಕ್ ಚೆನ್ನಾಗಿದೆ. ಇರುಳು ಬೆಳಕಿನ ಆಟದಲ್ಲಿ ಛಾಯಾಗ್ರಾಹಕ ಪರಮೇಶ್.ಸಿ.ಎಂ ಗೆದ್ದಿದ್ದಾರೆ. ಸಂಕಲನ ಇನ್ನೂ ಚುರುಕಾಗಿದ್ದಿದ್ರೆ, '6ನೇ ಮೈಲಿ' ಸಂಚಾರ ಇನ್ನೂ ವೇಗವಾಗಿ ಇರ್ತಿತ್ತು.

  ಸೀನಿ ಪ್ರಯತ್ನ ಓಕೆನಾ.?

  ಸೀನಿ ಪ್ರಯತ್ನ ಓಕೆನಾ.?

  ಸೀನಿ ನಿರ್ದೇಶನದಲ್ಲಿ ತೆರೆಗೆ ಬಂದಿರುವ ಚೊಚ್ಚಲ ಸಿನಿಮಾ '6ನೇ ಮೈಲಿ'. ಮೊದಲ ಪ್ರಯತ್ನದಲ್ಲೇ ಸೀನಿ ಭರವಸೆ ಮೂಡಿಸಿದ್ದಾರೆ.

  ಫೈನಲ್ ಸ್ಟೇಟ್ ಮೆಂಟ್

  ಫೈನಲ್ ಸ್ಟೇಟ್ ಮೆಂಟ್

  ಕ್ವಾಲಿಟಿಗೆ ಎಲ್ಲೂ ಕಾಂಪ್ರೊಮೈಸ್ ಆಗದ ಹಾಗೆ ಡಾ.ಶೈಲೇಶ್ ಕುಮಾರ್ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. 6ನೇ ಮೈಲಿ ಪ್ರಯಾಣದಲ್ಲಿ ಹಳ್ಳ-ಗುಂಡಿಗಳಿಲ್ಲ. ಮೊದಲಾರ್ಧ ಕೊಂಚ ನಿಧಾನವಾಗಿ ಸಾಗಿದರೂ, ದ್ವಿತೀಯಾರ್ಧದಲ್ಲಿ ರೋಚಕತೆ ಇದೆ. ಕೊಟ್ಟ ಕಾಸಿಗೆ ಈ ಚಿತ್ರ ಮೋಸ ಮಾಡಲ್ಲ. ಚಿತ್ರವನ್ನ ಒಮ್ಮೆ ನೋಡಬಹುದು.

  English summary
  Read Kannada Actor Sanchari Vijay and RJ Netra starrer Kannada Movie '6ne Maili' review.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X