twitter
    For Quick Alerts
    ALLOW NOTIFICATIONS  
    For Daily Alerts

    ಜಗ್ಗೇಶ್ ಅಭಿನಯದ '8ಎಂಎಂ' ಚಿತ್ರಕ್ಕೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು.?

    |

    ಹಾಸ್ಯ ಪ್ರಧಾನ ಪಾತ್ರಗಳನ್ನೇ ಹೆಚ್ಚು ಪೋಷಿಸಿದ್ದ ನವರಸ ನಾಯಕ ಜಗ್ಗೇಶ್ '8ಎಂಎಂ' ಚಿತ್ರದಲ್ಲಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಮಾಜದ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ವಯಸ್ಸಾದ ವ್ಯಕ್ತಿಯ ಪಾತ್ರಕ್ಕೆ ನಟ ಜಗ್ಗೇಶ್ ಜೀವ ತುಂಬಿದ್ದಾರೆ.

    ಅಧಿಕಾರಶಾಹಿ ವ್ಯವಸ್ಥೆ, ವಯಸ್ಸಾದವರ ಅಸಹಾಯಕತೆ ಕುರಿತ ಚಿತ್ರಣ ಹೊಂದಿರುವ '8ಎಂಎಂ' ಚಿತ್ರ ಪ್ರೇಕ್ಷಕರಿಗೆ ಆಪ್ತವೆನಿಸಿದೆ. ಸರಣಿ ಕೊಲೆಗಳ ಸುತ್ತ ಸಾಗುವ '8ಎಂಎಂ' ಸಿನಿಮಾಗೆ ಪ್ರೇಕ್ಷಕರು ಜೈಕಾರ ಹಾಕಿದ್ದಾರೆ.

    ಕೆಲಸ ಕಳೆದುಕೊಳ್ಳುವ ಹೆಡ್ ಕಾನ್ ಸ್ಟೇಬಲ್ ಸುತ್ತ ಹೆಣೆದಿರುವ '8ಎಂಎಂ' ಚಿತ್ರ ವಿಮರ್ಶಕರಿಗೆ ಇಷ್ಟ ಆಯ್ತಾ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ '8ಎಂಎಂ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ, ನೋಡಿರಿ...

    'ತಬರ ಬಂಡೆದ್ದಾಗ..' : ಪ್ರಜಾವಾಣಿ

    'ತಬರ ಬಂಡೆದ್ದಾಗ..' : ಪ್ರಜಾವಾಣಿ

    ಜಪಾನಿ ಭಾಷೆಯ 'ಸ್ಟ್ರೇ ಡಾಗ್' ಚಿತ್ರ ತೆರೆಕಂಡಿದ್ದು ಐವತ್ತರ ದಶಕದಲ್ಲಿ. ಇದು ವಿಶ್ವದ ಹಲವು ಭಾಷೆಗಳ ಸಿನಿಮಾಗಳಿಗೆ ಸ್ಫೂರ್ತಿಯಾಗಿದೆ. ವಯಸ್ಸಾದ ವ್ಯಕ್ತಿಯೊಬ್ಬ ವ್ಯವಸ್ಥೆಯ ವಿರುದ್ಧ ಬಂಡೇಳುವುದೇ ಈ ಚಿತ್ರದ ಹೂರಣ. ನವರಸ ನಾಯಕ ಜಗ್ಗೇಶ್ ಮೊದಲ ಬಾರಿಗೆ ಖಳನಟನ ಛಾಯೆಯಲ್ಲಿ ನಟಿಸಿರುವ '8ಎಂಎಂ' ಚಿತ್ರಕ್ಕೂ ಇದೇ ಪ್ರೇರಣೆ - ಕೆ.ಎಚ್.ಓಬಳೇಶ್

    '8 ಎಂಎಂ' ವಿಮರ್ಶೆ : ಗನ್ ಜೊತೆ ಆಟ, ಜೂಟಾಟ, ಹೊಡೆದಾಟ '8 ಎಂಎಂ' ವಿಮರ್ಶೆ : ಗನ್ ಜೊತೆ ಆಟ, ಜೂಟಾಟ, ಹೊಡೆದಾಟ

    ಎಂಟು ಎಂಟರಲ್ಲೇ ಇವನ ಜೀವನ : ಕನ್ನಡ ಪ್ರಭ

    ಎಂಟು ಎಂಟರಲ್ಲೇ ಇವನ ಜೀವನ : ಕನ್ನಡ ಪ್ರಭ

    ಕೊಲೆ ಮತ್ತು ಸಮಸ್ಯೆಗಳು ಒಂದಕ್ಕೊಂದು ಮುಖಾಮುಖಿಯಾಗಿಸುವ ಈ ಚಿತ್ರದ ಹೆಸರು '8ಎಂಎಂ'. ನಿರ್ದೇಶಕ ಹರಿಕೃಷ್ಣ ಸಮಸ್ಯೆಗಳ ಸರಣಿಯನ್ನೇ ನಂಬಿಕೊಂಡು ಆ ಸಮಸ್ಯೆಗಳಿಗೆ ಹಣವೇ ಪರಿಹಾರ ಎನ್ನುವ ಉತ್ತರ ಕಂಡುಕೊಳ್ಳುವುದಕ್ಕೆ ಜಗ್ಗೇಶ್ ಕೈಯಲ್ಲಿ ಗನ್ನಿಡುತ್ತಾರೆ. ಎಂಟು ಜನರ ಸಂಹಾರ ಮಾಡಿಸುತ್ತಾರೆ. ಗನ್ನು ಕದ್ದವನು, ಸರಣಿ ಕೊಲೆಗಾರ, ಪೊಲೀಸ್ ಅಧಿಕಾರಿ, ಒಬ್ಬ ಪತ್ರಕರ್ತೆ ಇವರ ಸುತ್ತ ಕತೆ ಸಾಗುತ್ತದೆ - ಆರ್.ಕೇಶವಮೂರ್ತಿ

    8MM Review : Bangalore Mirror

    8MM Review : Bangalore Mirror

    An incorruptible police sub inspector loses his gun in a bus. He is given 24 hours by his superior officer to find it. The gun however changes many hand and lands up with a gang that commits a bank heist. The gun is used in murders one after the other and the cop finds himself in an ever-growing whirlpool of trouble. Another senior officer teams up with him to investigate. The story takes a surprising turn when Jaggesh is introduced nearly an hour into the film. - Shyam Prasad S

    8MM Review : Times of India

    8MM Review : Times of India

    While the film remains realistic in its treatment throughout, the two romantic duets and a commercialised fight sequence seem a little unnecessary. But, these seem minor faults in a tale that is novel and has a unique factor compared to the other crime thrillers being doled out in the industry. Vasishta N Simha is restrained in his performance and does a commendable job. Jaggesh as the conniving Murthy is a treat in his new avatar - Sunayana Suresh

    English summary
    Kannada Movie 8MM has received good response from the critics. Here is the collection of 8MM reviews from Top news papers.
    Saturday, November 17, 2018, 13:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X