twitter
    For Quick Alerts
    ALLOW NOTIFICATIONS  
    For Daily Alerts

    'ಆ ಕರಾಳ ರಾತ್ರಿ' ನೋಡಿ ಏನ್ ಹೇಳಿದ್ರು ವಿಮರ್ಶಕರು?

    By Naveen
    |

    ಇತ್ತೀಚಿಗಿನ ದಿನಗಳಲ್ಲಿ ನಾಟಕ ಆಧಾರಿತ ಸಿನಿಮಾಗಳು ಕಡಿಮೆ ಆಗುತ್ತಿದೆ. ಆದರೆ ನಿರ್ದೇಶಕ ದಯಾಳ್ ಪದ್ಮನಾಭನ್ ಮೋಹನ್ ಬಾಬು 'ಕರಾಳ ರಾತ್ರಿ' ನಾಟಕ ಆಧಾರಿಸಿ ಸಿನಿಮಾ ಮಾಡಿದ್ದಾರೆ.

    ನಿನ್ನೆ 'ಆ ಕರಾಳ ರಾತ್ರಿ' ಸಿನಿಮಾ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತ್ತು. ನಿರ್ದೇಶಕ ದಯಾಳ್ ಪದ್ಮನಾಭನ್ ವೃತ್ತಿ ಜೀವನದಲ್ಲಿಯೇ 'ಆ ಕರಾಳ ರಾತ್ರಿ' ದಿ ಬೆಸ್ಟ್ ಸಿನಿಮಾ ಎಂದು ಹೇಳಲಾಗುತ್ತಿದೆ. 'ಆಸೆಯೇ ದುಖಃಕ್ಕೆ ಮೂಲ' ಎಂಬ ಬುದ್ಧನ ಮಾತಿನಂತೆ ಈ ಚಿತ್ರದ ಕಥೆ ಇದ್ದು, ವಿಮರ್ಶಕರು ಕೂಡ ಸಿನಿಮಾವನ್ನು ಹೊಗಳಿದ್ದಾರೆ

    'ಆ ಕರಾಳ ರಾತ್ರಿ' ವಿಮರ್ಶೆ: ಚಿಕ್ಕ ಹಾಗೂ ಚೊಕ್ಕ ಚಿತ್ರ'ಆ ಕರಾಳ ರಾತ್ರಿ' ವಿಮರ್ಶೆ: ಚಿಕ್ಕ ಹಾಗೂ ಚೊಕ್ಕ ಚಿತ್ರ

    ಅಂದಹಾಗೆ, ಕನ್ನಡ ದಿನಪತ್ರಿಕೆಗಳಲ್ಲಿ ಬಂದ 'ಆ ಕರಾಳ ರಾತ್ರಿ' ಸಿನಿಮಾ ವಿಮರ್ಶೆ ಮುಂದಿದೆ ಓದಿ...

    ಕರಾಳ ರಾತ್ರಿಯಲ್ಲೊಂದು ಹೊಸ ಬೆಳಕು - ಉದಯವಾಣಿ

    ಕರಾಳ ರಾತ್ರಿಯಲ್ಲೊಂದು ಹೊಸ ಬೆಳಕು - ಉದಯವಾಣಿ

    "ಆ ಕರಾಳ ರಾತ್ರಿ' ಒಂದು ಹಾರರ್ ಚಿತ್ರವಿರಬಹದೇನೋ ಅಂದುಕೊಂಡರೆ, ನಿಮ್ಮ ಊಹೆ ಸುಳ್ಳಾಗುತ್ತದೆ. ಅದೊಂದು ಇಂಟೆನ್ಸ್ ಥ್ರಿಲ್ಲರ್‌ ಚಿತ್ರ. ಮೋಹನ್‌ ಹಬ್ಬು ಅವರ ನಾಟಕವನ್ನಾಧರಿಸಿದ ಈ ಚಿತ್ರವನ್ನು ಎಷ್ಟು ಅಚ್ಚುಕಟ್ಟಾಗಿ ತೋರಿಸುವುದಕ್ಕೆ ಸಾಧ್ಯವೋ, ಅಷ್ಟು ಅಚ್ಚುಕಟ್ಟಾಗಿ ಕಟ್ಟಿಕೊಡುವ ಪ್ರಯತ್ನವನ್ನು ದಯಾಳ್ ಮಾಡಿದ್ದಾರೆ. ಇಲ್ಲಿ ಬೇಡದ ಮಾತುಗಳಿಲ್ಲ, ಬೇಡದ ದೃಶ್ಯಗಳಿಲ್ಲ. ಏನು ತೋರಿಸಬೇಕೋ ಅದನ್ನು ಒಂದೂಮುಕ್ಕಾಲು ತಾಸಿನಲ್ಲಿ ತೋರಿಸಿಬಿಡುತ್ತಾರೆ. ಹಾಗೆ ನೋಡಿದರೆ, ಇದು ಎರಡು ರಾತ್ರಿ ಒಂದು ಹಗಲು ನಡೆಯುವ ಕಥೆ. ಆಸೆಯಿಂದ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬಲ್ಲಿಗೆ ಚಿತ್ರ ಮುಗಿಸುತ್ತಾರೆ. ಆ ಮಟ್ಟಿಗೆ ಈ ಬಾರಿ ದಯಾಳ್ ಬದಲಾಗಿದ್ದಾರೆ. ಅವರ ಹಿಂದಿನ ಚಿತ್ರಗಳನ್ನು ನೋಡಿಕೊಂಡು ಬಂದವರಿಗೆ, ಎಲ್ಲಾ ರೀತಿಯಲ್ಲೂ ಇದು ಅವರ ಬೆಸ್ಟ್‌ ಪ್ರಯತ್ನ ಎಂದನಿಸಿದರೆ ಆಶ್ಚರ್ಯವಿಲ್ಲ.'' - ಚೇತನ್ ನಾಡಿಗೇರ್

    ಪ್ರೇಕ್ಷಕನನ್ನು ಕುರ್ಚಿಗೆ ಕಟ್ಟಿಹಾಕುವ ಚಿತ್ರ - ವಿಜಯ ಕರ್ನಾಟಕ

    ಪ್ರೇಕ್ಷಕನನ್ನು ಕುರ್ಚಿಗೆ ಕಟ್ಟಿಹಾಕುವ ಚಿತ್ರ - ವಿಜಯ ಕರ್ನಾಟಕ

    ''ಕಾದಂಬರಿಗಳು, ನಾಟಕಗಳು ಸಿನಿಮಾಗಳಾಗುತ್ತಿದ್ದ ಕಾಲ ಈಗ ಹೊರಟು ಹೋಗಿದೆ ಎನ್ನುವ ಹೊತ್ತಿನಲ್ಲಿ ದಯಾಳ್ ಪದ್ಮನಾಭನ್ ಒಂದು ಸಾಮಾಜಿಕ ನಾಟಕವನ್ನು ರೋಚಕ ಸಸ್ಪೆನ್ಸ್ ಥ್ರಿಲ್ಲರ್‌ ಫಾರ್ಮುಲಾ ಮೂಲಕ ತೆರೆಗೆ ತಂದಿದ್ದಾರೆ. 1980ರ ದಶಕದಲ್ಲಿ ನಡೆಯುವ ಕಥೆ ಇದಾಗಿದೆ. ಮನೆಗಳು ವಿರಳವಾಗಿರುವ ಹಳ್ಳಿಯೊಂದರಲ್ಲಿ ಮಗಳು (ಅನುಪಮಾ), ತಾಯಿ (ವೀಣಾ ಸುಂದರ್‌), ತಂದೆ (ರಂಗಾಯಣ ರಘು) ವಾಸವಾಗಿರುತ್ತಾರೆ. ಈ ಮನೆಗೆ ಒಂದು ದಿನದ ಮಟ್ಟಿಗೆ ಆಶ್ರಯ ಕೇಳಿಕೊಂಡು ಚೆನ್ನಕೇಶವ (ಜಯರಾಮ್‌ ಕಾರ್ತಿಕ್‌) ಬರುತ್ತಾನೆ. ಇಲ್ಲಿಗೆ ಬಂದು ಉಳಿದುಕೊಂಡ ಮೇಲೆ ಆ ಒಂದು ರಾತ್ರಿಯಲ್ಲಿ ಈ ಕುಟುಂಬದೊಳಗೆ ಏನೆಲ್ಲ ಆಗುತ್ತದೆ ಎಂಬುದೇ ಸಿನಿಮಾದ ತಿರುಳು. ಆದರೆ ಸಾಕಷ್ಟು ರೋಚಕತೆ, ಅಲ್ಲಲ್ಲೇ ಎದುರಾಗುವ ಅಚ್ಚರಿಗಳೆಲ್ಲ ಪ್ರೇಕ್ಷಕನನ್ನು ಸೀಟಿನ ಮೇಲೆ ಕಟ್ಟಿ ಹಾಕಿಬಿಡುತ್ತದೆ. ದಯಾಳ್ ಚಿತ್ರಕಥೆ-ನಿರ್ದೇಶನ ಒಂದು ತೂಕವಾದರೆ, ನವೀನ್ ಕೃಷ್ಣ ಅವರ ಸಂಭಾಷಣೆ ಸಿನಿಮಾಗೆ ಬೇರೆಯದ್ದೇ ತೂಕ ನೀಡುತ್ತದೆ.'' - ಹರೀಶ್ ಬಸವರಾಜ್

    ಚಿತ್ರಕತೆಯ ವೇಗ, ಸಂಭಾಷಣೆಯ ಸೊಗಸು - ಕನ್ನಡ ಪ್ರಭ

    ಚಿತ್ರಕತೆಯ ವೇಗ, ಸಂಭಾಷಣೆಯ ಸೊಗಸು - ಕನ್ನಡ ಪ್ರಭ

    ''ಮನುಷ್ಯನೊಳಗೆ ಸದಾ ಜಾಗೃತವಾಗಿರುವ ಆಸೆಯ ಬೆನ್ನೇರಿದರೆ ಎಂಥ ಅನಾಹುತ ಸಂಭವಿಸುತ್ತದೆ ಎಂಬುದನ್ನು ಆ ಕಳ್ಳ ರಾತ್ರಿಯಲ್ಲಿ ಹೇಳಲಾಗಿದೆ. ಹಾಗೆ ನೋಡಿದರೆ ಆಸೆಯೇ ದುಃಖಕ್ಕೆ ಮೂಲ ಎಂದು ಬುದ್ಧ ಹೇಳಿದ್ದ ಮೇಲೂ ನಮಗೆ ಬುದ್ಧಿ ಬಂದಿಲ್ಲ. ಹಾಗಾಗಿ ಎಲ್ಲರೂ ಆಸೆಯ ಕುದುರೆಯನ್ನೇರಿದ್ದೇವೆ. ಇದರ ಮೇಲೆ ಸವಾರಿ ಮಾಡಿದವರು ದುಃಖವೂ ಬಂದೆರಗುತ್ತದೆ ಸಾವು ಒಪ್ಪಿಕೊಳ್ಳುತ್ತದೆ. ಒಂದು ನಾಟಕವನ್ನು ನಾಟಕವಾಗಿಯೂ ಆಪ್ತವಾಗಿ ತೆರೆಯ ಮೇಲೂ ಕೂಡ ರೂಪಿಸುವ ಮೂಲಕ ನಿರ್ದೇಶಕ ದಯಾಳ್ ಪದ್ಮನಾಭ್ ಮೋಹನ್ ಹಬ್ಬು ಅವರ ಕಲಾರತ್ನ ಆಟ 'ಕರಾಳ ರಾತ್ರಿ' ನಾಟಕಕ್ಕೆ ಗೌರವ ತಂದುಕೊಟ್ಟಿದ್ದಾರೆ. ತೀರಾ ಸಮೀಪ ಪಾತ್ರಗಳು ಸಮೀಪ ಲೊಕೇಶನ್ ಗಳು ಒಂದಷ್ಟು ನೆನಪಿನ ಮತ್ತು ಯೋಚಿಸುವಂತಹ ಸಂಭಾಷಣೆ ಮೂಲಕವೇ ಇಡೀ ಕತೆಯನ್ನು ತೆಗೆದುಕೊಂಡು ಹೋಗುತ್ತಾರೆ. ನಿರ್ದೇಶಕರು ಇವರ ಶ್ರಮಕ್ಕೆ ಸಾಥ್ ನೀಡುವುದು ಕ್ಯಾಮೆರಾ ಕಣ್ಣು ಹಾಗೂ ನವೀನ್ ಕೃಷ್ಣ ಅವರ ಚುರುಕಾದ ಸಂಭಾಷಣೆ'' - ಆರ್.ಕೇಶವಮೂರ್ತಿ

    ಕರಾಳ ರಾತ್ರಿಯ ಭಾವುಕ ಕಥನ - ವಿಜಯವಾಣಿ

    ಕರಾಳ ರಾತ್ರಿಯ ಭಾವುಕ ಕಥನ - ವಿಜಯವಾಣಿ

    ''ಕರಾಳ ರಾತ್ರಿಯಲ್ಲಿ ಒಂದೊಂದು ಪಾತ್ರಗಳು ನೈಜತೆಯ ಪ್ರತಿರೂಪದಂತೆ ಭಾಸವಾಗುತ್ತದೆ. ಅವೆಲ್ಲಾ ನಮ್ಮ ಸುತ್ತಮುತ್ತ ಕತ್ತಿ ಹಿಡಿದು ಕೊಲ್ಲಲು ಸಂಚು ರೂಪಿಸುತ್ತಿವೆ ಏನೋ ಎಂಬ ಭಯವೂ ಆವರಿಸುತ್ತದೆ. ರಂಗಾಯಣ ರಘು, ವೀಣಾ ಸುಂದರ್, ಅನುಪಮಾ, ಜೆಕೆ ಚಿತ್ರದ ನಾಲ್ಕು ಪ್ರಧಾನ ಕಂಬಗಳು. ಗಂಡುಬೀರಿ ಗಯ್ಯಾಳಿ ವ್ಯಕ್ತಿತ್ವದ ಮಲ್ಲಿಕಾ ಆಗಿ ಸಿಟ್ಟು ಸೆಡವು ಕಾಮವನ್ನು ಕಣ್ಣಿನಲ್ಲಿಯೇ ಭಾಷೆಯ ಮೂಲಕ ವ್ಯಕ್ತಪಡಿಸುವ ಅನುಪಮ ನಿಜಕ್ಕೂ ಅದ್ಭುತವಾಗಿ ನಟಿಸಿದ್ದಾರೆ. ಜೆಕೆ, ರಂಗಾಯಣ ರಘು, ವೀಣಾ ಸುಂದರ್ ಪ್ರಧಾನ ಪಾತ್ರದಲ್ಲಿ ಲೀನವಾಗಿದ್ದಾರೆ. ಪಾತ್ರಧಾರಿಗಳನ್ನು ಒಂದು ತೂಕವಾದರೆ ಹಿನ್ನೆಲೆ ಸಂಗೀತದ್ದೇ ಮತ್ತೊಂದು ತೂಕ ಆದ್ದರಿಂದ ಚಿತ್ರದ ಓಟಕ್ಕೆ ಮತ್ತಷ್ಟು ವೇಗ ಸಿಗುತ್ತದೆ. ನವೀನ್ ಕೃಷ್ಣ ಬರೆದ ಸಂಭಾಷಣೆ ಮೊಣಚಾಗಿದೆ. ಪಿಕೆಎಚ್ ದಾಸ್ ಕ್ಯಾಮೆರಾದಲ್ಲಿ ಕರಾಳ ರಾತ್ರಿಯನ್ನು ಸೊಗಸಾಗಿ ಸೆರೆಹಿಡಿದಿದ್ದಾರೆ. ದಯಾಲ್ ಪದ್ಮನಾಭನ್ ಅವರ ಕೆಲಸವನ್ನು ಮೆಚ್ಚುವಂಥದ್ದು.'' - ಮಂಜು ಕೊಟಗುಣಸಿ

    Aa karaala ratri review - Times Of India

    Aa karaala ratri review - Times Of India

    ''Director Dayal Padmanabhan's minimalist approach is well crafted in the film. The rawness in the language connects you to the nativity of a village, while the music is like an earworm, because of its influence by DVG's famous Mankuthimmana Kagga. If you want to know about the secret that lies inside the suitcase and why the home turned to ashes, then you must sit through the film to watch the climax, which will leave you dumbstruck. The emotions of greed, lust and desire burn a house down. These emotions overpower the value of love and belonging''. - Nithya Mandyam

    English summary
    Actor Karthik Jayaram and Anupama Gowda starrer Dayal Padmanabhan directorial Kannada Movie Aa Karaala Ratri critics review.
    Saturday, July 14, 2018, 14:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X