twitter
    For Quick Alerts
    ALLOW NOTIFICATIONS  
    For Daily Alerts

    'ಆ ಕರಾಳ ರಾತ್ರಿ' ವಿಮರ್ಶೆ: ಚಿಕ್ಕ ಹಾಗೂ ಚೊಕ್ಕ ಚಿತ್ರ

    |

    Recommended Video

    ದಯಾಳ್ ನಿರ್ದೇಶನದ ಬೆಸ್ಟ್ ಸಿನಿಮಾ ' ಆ ಕರಾಳ ರಾತ್ರಿ' | Filmibeat Kannada

    ಆಸೆಯೇ ದುಃಖಕ್ಕೆ ಮೂಲ ಎಂಬ ಮಾತಿನಂತೆ ರಾತ್ರೋ ರಾತ್ರಿ ಕುಬೇರನಾಗುವ ಕನಸು ಕಂಡು ಕೊಲೆ ಮಾಡಲು ಮುಂದಾಗುವ ಕುಟುಂಬದ ಕಥೆಯೇ 'ಆ ಕರಾಳ ರಾತ್ರಿ'. ನಿರ್ದೇಶಕ ದಯಾಳ್ ಪದ್ಮನಾಭನ್ ವೃತ್ತಿ ಜೀವನದಲ್ಲಿಯೇ 'ಆ ಕರಾಳ ರಾತ್ರಿ' ದಿ ಬೆಸ್ಟ್ ಸಿನಿಮಾ.

    Rating:
    4.0/5
    Star Cast: ಕಾರ್ತಿಕ್ ಜಯರಾಂ, ಅನುಪಮಾ ಗೌಡ, ರಂಗಾಯಣ ರಘು, ವೀಣಾ ಸುಂದರ್, ನವೀನ್ ಕೃಷ್ಣ
    Director: ದಯಾಳ್ ಪದ್ಮನಾಭನ್

    'ಆ ಕರಾಳ ರಾತ್ರಿ'ಯಂದು ನಡೆಯುವುದೇನು.?

    'ಆ ಕರಾಳ ರಾತ್ರಿ'ಯಂದು ನಡೆಯುವುದೇನು.?

    ಮಹಾಲಕ್ಷ್ಮಿ ಮನೆಗೆ ಬರ್ತಾಳೆ ಎಂದು ಬುಡಬುಡಕೆಯವನು (ನವೀನ್ ಕೃಷ್ಣ) ಶುಭಶಕುನ ನುಡಿದ ಮೇಲೆ ಅಪರಿಚಿತ ವ್ಯಕ್ತಿ ಚನ್ನಕೇಶವ (ಕಾರ್ತಿಕ್ ಜಯರಾಂ) ಒಂಟಿ ಮನೆ ಮಲ್ಲಣ್ಣನ (ರಂಗಾಯಣ ರಘು) ಮನೆಗೆ ಬರ್ತಾನೆ. ಒಂದು ರಾತ್ರಿ ಅಲ್ಲೇ ಉಳಿದುಕೊಳ್ಳಲು ಚನ್ನಕೇಶವ ಮನಸ್ಸು ಮಾಡಿದ್ಮೇಲೆ, ಆ ರಾತ್ರಿ ಅಲ್ಲಿ ಏನೇನೆಲ್ಲಾ ಆಗುತ್ತದೆ ಅನ್ನೋದೇ ಚಿತ್ರದ ಹೂರಣ.

    ಇಷ್ಟ ಆಗುವ ಕಾರ್ತಿಕ್ ಜಯರಾಂ

    ಇಷ್ಟ ಆಗುವ ಕಾರ್ತಿಕ್ ಜಯರಾಂ

    ಚನ್ನಕೇಶವ/ಸುಬ್ಬು ಆಗಿ ಕಾರ್ತಿಕ್ ಜಯರಾಂ ಇಷ್ಟ ಆಗುತ್ತಾರೆ. ಕಂಪ್ಲೀಟ್ ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಂಡಿರುವ ಕಾರ್ತಿಕ್ ಜಯರಾಂ ಉತ್ತಮ ಅಭಿನಯ ನೀಡಿದ್ದಾರೆ.

    'ಹೆಮ್ಮಾರಿ' ಅನುಪಮಾ ಗೌಡ

    'ಹೆಮ್ಮಾರಿ' ಅನುಪಮಾ ಗೌಡ

    ಮಲ್ಲಿಕಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅನುಪಮಾ ಗೌಡ ಸಿಕ್ಕಾಪಟ್ಟೆ 'ಜೋರು'. ಒಂದು ಕಡೆ ಮದುವೆ ಆಗಿಲ್ಲ ಎಂಬ ಕೊರಗು, ಇನ್ನೊಂದು ಕಡೆ ಕುಟುಂಬಕ್ಕೆ ಅಂಟಿರುವ ಬಡತನ. ಈ ಎಲ್ಲದರಿಂದ 'ಮಾರಿ' ಆಗುವ ಮಲ್ಲಿಕಾ ಪಾತ್ರಕ್ಕೆ ಅನುಪಮಾ ಗೌಡ ಜೀವ ತುಂಬಿದ್ದಾರೆ.

    ಉಳಿದವರ ಪರ್ಫಾಮೆನ್ಸ್ ಹೇಗಿದೆ.?

    ಉಳಿದವರ ಪರ್ಫಾಮೆನ್ಸ್ ಹೇಗಿದೆ.?

    ರಂಗಾಯಣ ರಘು ಹಾಗೂ ವೀಣಾ ಸುಂದರ್ ನಟನೆ ಬಗ್ಗೆ ತುಟಿ ಎರಡು ಮಾಡುವ ಹಾಗಿಲ್ಲ. ಒಂದೇ ಸೀನ್ ನಲ್ಲಿ ಕಾಣಿಸಿಕೊಂಡರೂ, ನವೀನ್ ಕೃಷ್ಣ ಮನಸ್ಸಲ್ಲಿ ಉಳಿಯುತ್ತಾರೆ. ಜಯಶ್ರೀನಿವಾಸನ್ ಹಾಗೂ ಸಿಹಿ ಕಹಿ ಚಂದ್ರು ಒಂದು ಸನ್ನಿವೇಶಕಷ್ಟೇ ಸೀಮಿತ.

    ಚಿಕ್ಕದಾದ ಅಷ್ಟೇ ಚೊಕ್ಕವಾದ ಚಿತ್ರ

    ಚಿಕ್ಕದಾದ ಅಷ್ಟೇ ಚೊಕ್ಕವಾದ ಚಿತ್ರ

    ಒಂದು ಪುಟ್ಟ ಹಳ್ಳಿ, ಒಂಟಿ ಮನೆ, ಒಂದು ಸಾರಾಯಿ ಅಂಗಡಿ... ಇಷ್ಟರಲ್ಲಿಯೇ ಇಡೀ ಸಿನಿಮಾ ಮಾಡಿ ಮುಗಿಸಿರುವ ನಿರ್ದೇಶಕ ದಯಾಳ್ ಪದ್ಮನಾಭನ್ ರವರ ಮೇಕಿಂಗ್ ಸ್ಟೈಲ್ ಚೆನ್ನಾಗಿದೆ. ಸಿನಿಮಾದ ಡೈಲಾಗ್ ಗಳು ಹರಿತವಾಗಿದೆ. ಚಿಕ್ಕದಾಗಿ ಅಷ್ಟೇ ಚೊಕ್ಕವಾಗಿ ಸಿನಿಮಾ ಮಾಡಿರುವ ದಯಾಳ್ ಪದ್ಮನಾಭನ್ ಎಲ್ಲೂ ಪ್ರೇಕ್ಷಕರನ್ನ ಬೋರ್ ಹೊಡೆಸಿಲ್ಲ.

    ಕ್ಯಾಮರಾ ವರ್ಕ್ ಹೇಗಿದೆ.?

    ಕ್ಯಾಮರಾ ವರ್ಕ್ ಹೇಗಿದೆ.?

    ಒಂದೇ ಮನೆಯಲ್ಲಿ ಬೇರೆ ಬೇರೆ ಆಂಗಲ್ ಇಟ್ಟು ಇರುಳು-ಬೆಳಕಿನ ಆಟದಲ್ಲಿ ಪಿ.ಕೆ.ಎಚ್.ದಾಸ್ ಕ್ಯಾಮರಾ ಕೈಚಳಕ ಓಕೆ. ಆದ್ರೆ, ಹೆಣವನ್ನ ಮುಂದಿಟ್ಟುಕೊಂಡು ಇಡೀ ಕುಟುಂಬ ರೋಧಿಸುತ್ತಿರುವಾಗ, ಛಾಯಾಗ್ರಾಹಕರು ಸ್ವಲ್ಪ ಎಚ್ಚರಿಕೆ ವಹಿಸಬೇಕಿತ್ತು. ಇನ್ನೂ ಚಿತ್ರಕಥೆಯ ಓಟಕ್ಕೆ ಬ್ಯಾಕ್ ಗ್ರೌಂಡ್ ಸ್ಕೋರ್ ಪೂರಕವಾಗಿದೆ. ಸಂಕಲನ ಚುರುಕಾಗಿದೆ.

    ಫೈನಲ್ ಸ್ಟೇಟ್ ಮೆಂಟ್

    ಫೈನಲ್ ಸ್ಟೇಟ್ ಮೆಂಟ್

    'ಆ ಕರಾಳ ರಾತ್ರಿ'ಯಲ್ಲಿ ನಿರ್ದೇಶಕ ದಯಾಳ್ ಪದ್ಮನಾಭನ್ ಒಂದು ಪುಟ್ಟ ಕಥೆಯನ್ನು ಸಿಂಪಲ್ ಆಗಿ ಮತ್ತು ಪರಿಣಾಮಕಾರಿಯಾಗಿ ತೋರಿಸಿದ್ದಾರೆ. ಹೀಗಾಗಿ ಮಿಸ್ ಮಾಡದೆ 'ಆ ಕರಾಳಿ ರಾತ್ರಿ'ಯನ್ನ ಕಣ್ತುಂಬಿಕೊಳ್ಳಿ.

    English summary
    Read Kannada Actor Karthik Jayaram and Anupama Gowda starrer Dayal Padmanabhan directorial Kannada Movie Aa Karaala Ratri review.
    Saturday, September 29, 2018, 11:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X