For Quick Alerts
  ALLOW NOTIFICATIONS  
  For Daily Alerts

  ವಿಮರ್ಶಕರು ಮೆಚ್ಚಿದ ನೀನಾಸಂ ಸತೀಶ್ ಅಭಿನಯದ 'ಚಂಬಲ್' ಸಿನಿಮಾ

  |

  ನೀನಾಸಂ ಸತೀಶ್, ಸೋನು ಗೌಡ ಮುಖ್ಯ ಭೂಮಿಕೆಯಲ್ಲಿ ಅಭಿನಯದ 'ಚಂಬಲ್' ಸಿನಿಮಾ ರಾಜ್ಯಾದ್ಯಂತ ತೆರೆಗೆ ಬಂದಿದೆ. ದಿವಂಗತ ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ರವರ ಜೀವನಚರಿತ್ರೆ ಹೊಂದಿದೆ ಎಂಬ ಕಾರಣಕ್ಕೆ 'ಚಂಬಲ್' ಸಿನಿಮಾ ಸಾಕಷ್ಟು ಸುದ್ದಿ-ವಿವಾದಗಳಿಗೆ ಗ್ರಾಸವಾಗಿತ್ತು.

  'ಚಂಬಲ್' ಬಿಡುಗಡೆಗೆ ತಡೆ ಕೋರಿ ಡಿ.ಕೆ.ರವಿ ತಾಯಿ ಕೋರ್ಟ್ ಮೆಟ್ಟಿಲೇರಿದ್ದರು. ಆದ್ರೆ, ಕೊನೆಗೂ 'ಚಂಬಲ್' ತೆರೆಕಂಡಿದೆ. ನಿರೀಕ್ಷೆಯಂತೆ 'ಚಂಬಲ್' ಓರ್ವ ದಕ್ಷ ಐಎಎಸ್ ಅಧಿಕಾರಿ ಸುತ್ತ ಹೆಣೆದಿರುವ ಸಿನಿಮಾ. ಚಿತ್ರದಲ್ಲಿ ಡಿ.ಕೆ.ರವಿ ಕಥೆ ಹೇಳಲಾಗಿದ್ಯಾ.? ಈ ಪ್ರಶ್ನೆಗೆ ನೀವು ಸಿನಿಮಾ ನೋಡಲೇಬೇಕು.

  'ಚಂಬಲ್' ನೋಡಿದ ವಿಮರ್ಶಕರಂತೂ ಚಿತ್ರದ ಬಗ್ಗೆ ಹಾಡಿ ಹೊಗಳಿದಿದ್ದಾರೆ. ನಿರ್ದೇಶಕ ಜೇಕಬ್ ವರ್ಗೀಸ್ ಕಥೆ ನಿರೂಪಣೆ ಮಾಡಿರುವ ಶೈಲಿಯನ್ನು ವಿಮರ್ಶಕರು ಮೆಚ್ಚಿದ್ದಾರೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ 'ಚಂಬಲ್' ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ, ಓದಿರಿ...

  ಭ್ರಷ್ಟ ವ್ಯವಸ್ಥೆ ಬಿಂಬಿಸುವ 'ಚಂಬಲ್ ರಾಜ್' : ಪ್ರಜಾವಾಣಿ

  ಭ್ರಷ್ಟ ವ್ಯವಸ್ಥೆ ಬಿಂಬಿಸುವ 'ಚಂಬಲ್ ರಾಜ್' : ಪ್ರಜಾವಾಣಿ

  'ಚಂಬಲ್' ಹೆಸರು ಕೇಳಿದರೆ ಪಕ್ಕನೆ ನಮ್ಮ ಕಣ್ಣ ಮುಂದೆ ಬರುವುದು ಕಣಿವೆ ನಾಡಿನ ಡಕಾಯಿತರ ಚಿತ್ರಣ. ಜನರನ್ನು ಕೊಳ್ಳೆ ಹೊಡೆಯುವ ಡಕಾಯಿತರು ಕೇವಲ ಚಂಬಲ್ ನಲ್ಲಿ ಮಾತ್ರವಲ್ಲ, ನಮ್ಮ ನಿಮ್ಮ ನಡುವೆಯೂ ಇದ್ದಾರೆ ಎನ್ನುವುದನ್ನು ಇದೇ ಹೆಸರನ್ನಿಟ್ಟುಕೊಂಡಿರುವ ಈ ಸಿನಿಮಾ ಸಾರುತ್ತದೆ. ಸಭ್ಯರ ಮುಖವಾಡ ಧರಿಸಿ ರಾಜ್ಯವನ್ನು ಕೊಳ್ಳೆ ಹೊಡೆಯುವ ಪುಢಾರಿಗಳು ಹೇಗೆ ಪ್ರಾಮಾಣಿಕ ಅಧಿಕಾರಿಗಳ ಬಲಿ ಪಡೆದುಕೊಳ್ಳುತ್ತಾರೆ ಎಂಬುದನ್ನು ಈ ಚಿತ್ರದ ಮೂಲಕ ಜೇಕಬ್ ವರ್ಗೀಸ್ ಕಟ್ಟಿಕೊಟ್ಟಿದ್ದಾರೆ - ನವೀನ್ ಕುಮಾರ್.ಜಿ

  'ಚಂಬಲ್' ತಡೆಗೆ ಹೈಕೋರ್ಟ್ ನಿರಾಕರಣೆ : ನಾಳೆ ಸಿನಿಮಾ ಬಿಡುಗಡೆ 'ಚಂಬಲ್' ತಡೆಗೆ ಹೈಕೋರ್ಟ್ ನಿರಾಕರಣೆ : ನಾಳೆ ಸಿನಿಮಾ ಬಿಡುಗಡೆ

  ನೈಜ ಘಟನೆಗೆ ರೋಚಕತೆಯ ಸ್ಪರ್ಶ : ವಿಜಯ ಕರ್ನಾಟಕ

  ನೈಜ ಘಟನೆಗೆ ರೋಚಕತೆಯ ಸ್ಪರ್ಶ : ವಿಜಯ ಕರ್ನಾಟಕ

  ಎಲ್ಲಾ ಭಾಷೆಗಳಲ್ಲಿ ಐಎಎಸ್‌ ಅಧಿಕಾರಿ, ರಾಜಕಾರಣಿ ಮತ್ತು ಭೂ ಮಾಫಿಯಾಗಳ ನಡುವಿನ ಸಂಘರ್ಷದ ಸಿನಿಮಾಗಳು ಸಾಕಷ್ಟು ಬಂದಿವೆ. ಇಂಥ ಪ್ರಕರಣಗಳು ನಮ್ಮ ಸುತ್ತ ನಡೆಯುವುದನ್ನೂ ನೋಡುತ್ತಿರುತ್ತೇವೆ. ಆದರೆ, ಇವೆಲ್ಲಕ್ಕಿಂತ ಭಿನ್ನವಾಗಿ ಚಂಬಲ್‌ ಚಿತ್ರ ಮೂಡಿ ಬಂದಿದೆ. ಇದಕ್ಕೆ ಕಾರಣ ನಿರ್ದೇಶಕ ಜೇಕಬ್ ವರ್ಗೀಸ್. ಒಂದು ಕಥೆಯನ್ನು ಕಟ್ಟಿಕೊಡುವುದರಲ್ಲಿ ಚಿತ್ರದ ಯಶಸ್ಸು ಅಡಗಿದೆ ಎನ್ನುವುದನ್ನು ಚಂಬಲ್‌ ನಿರೂಪಿಸಿದೆ. ಅತ್ಯಂತ ಸಹಜವೆನ್ನುವಂತೆ, ಪ್ರೇಕ್ಷಕ ಕುರ್ಚಿಯ ತುದಿಯಲ್ಲಿ ಕೂತು ನೋಡುವಂತೆ ಮಾಡುತ್ತದೆ ಚಂಬಲ್‌ - ಪದ್ಮಾ ಶಿವಮೊಗ್ಗ

  ಕಥೆ ಕೇಳದೆ 'ಚಂಬಲ್' ಸಿನಿಮಾ ಒಪ್ಪಿಕೊಂಡಿದ್ದು ಯಾಕೆ ಸೋನು.?ಕಥೆ ಕೇಳದೆ 'ಚಂಬಲ್' ಸಿನಿಮಾ ಒಪ್ಪಿಕೊಂಡಿದ್ದು ಯಾಕೆ ಸೋನು.?

  A satisfying thriller : Deccan Herald

  A satisfying thriller : Deccan Herald

  The films works well as a thriller. Looking at a run-time less than two hours, I wondered whether the host of characters revealed in the promos can sync well with the story. They do, thanks to the smart writing. Every scene feels real and keeps you invested. The dialogues, thankfully, aren't over the top - Vivek.M.V

  Chambal Review : ಡಿ ಕೆ ರವಿ ಸಾವಿನ ರಹಸ್ಯ ಹೇಳಿದ 'ಚಂಬಲ್'! Chambal Review : ಡಿ ಕೆ ರವಿ ಸಾವಿನ ರಹಸ್ಯ ಹೇಳಿದ 'ಚಂಬಲ್'!

  Chambal Review : Bangalore Mirror

  Chambal Review : Bangalore Mirror

  Notwithstanding the disclaimers, Chambal is a fictionalised conspiracy-theory version of the death of IAS officer DK Ravi. Director Jacob Verghese had proved his hand in portraying the political-bureaucracy strife in Prithvi. He takes it a notch higher in Chambal, which is a taut and engaging thriller - Shyam Prasad S

  Chambal Review : Times of India

  Chambal Review : Times of India

  The story is told without much frills and sans any melodrama. This proves to be engaging and elevates the tale. There are a couple of songs in the film and one wonders if those could have been done away with, as they seem to be bumps in an otherwise well-scripted narrative. The first half has multiple tales being unraveled, which are connected well together in the second half of the film - Sunayana Suresh

  English summary
  Kannada Actor Sathish Neenasam, Kannada Actress Sonu Gowda starrer Kannada Movie 'Chambal' has received good response from the critics.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X