twitter
    For Quick Alerts
    ALLOW NOTIFICATIONS  
    For Daily Alerts

    'ಇರುವುದೆಲ್ಲವ ಬಿಟ್ಟು' ಸಿನಿಮಾ ನೋಡಿದ ವಿಮರ್ಶಕರು ಏನಂದರು.?

    |

    ಹಾಡುಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಸಂಚಲನ ಹುಟ್ಟುಹಾಕಿದ ಸಿನಿಮಾ 'ಇರುವುದೆಲ್ಲವ ಬಿಟ್ಟು'. ಮೇಘನಾ ರಾಜ್, ತಿಲಕ್, ಶ್ರೀಮಹಾದೇವ್, ಅಭಿಶೇಕ್ ರಾಯಣ್ಣ ಮುಖ್ಯಭೂಮಿಕೆಯಲ್ಲಿ ಇರುವ 'ಇರುವುದೆಲ್ಲವ ಬಿಟ್ಟು' ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿದೆ.

    ಆಧುನಿಕ ಯುಗದಲ್ಲಿ ಸಂಬಂಧಗಳ ಮಹತ್ವ ಸಾರುವ ಈ ಚಿತ್ರ ಫ್ಯಾಮಿಲಿ ಆಡಿಯನ್ಸ್ ಗೆ ಹೇಳಿ ಮಾಡಿಸಿದ ಸಿನಿಮಾ. ಕ್ಲಾಸಿಕಲ್ ಚಿತ್ರದಂತೆ ಕಾಣುವ 'ಇರುವುದೆಲ್ಲವ ಬಿಟ್ಟು' ಪ್ರೇಕ್ಷಕರಿಗೆ ಇಷ್ಟವಾಗಿದೆ.

    ಭಾವನಾತ್ಮಕ ಅಂಶಗಳು ಇರುವ 'ಇರುವುದೆಲ್ಲವ ಬಿಟ್ಟು' ಸಿನಿಮಾ ನೋಡಿದ ವಿಮರ್ಶಕರು ಮಾಡಿದ ಕಾಮೆಂಟ್ಸ್ ಏನು.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ, ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ 'ಇರುವುದೆಲ್ಲವ ಬಿಟ್ಟು' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಫೋಟೋ ಸ್ಲೈಡ್ ಗಳಲ್ಲಿ...

    ಹೊಸ ಬದುಕು, ಹಳೆಯ ಬಿರುಕು: ಪ್ರಜಾವಾಣಿ

    ಹೊಸ ಬದುಕು, ಹಳೆಯ ಬಿರುಕು: ಪ್ರಜಾವಾಣಿ

    ಸಾಫ್ಟ್ ವೇರ್ ಜಗತ್ತಿನ ಹೊಸ ತಲೆಮಾರಿನವರ ಮಹತ್ವಾಕಾಂಕ್ಷೆಗಳು- ಮೌಲ್ಯಗಳು, ಸಂಬಂಧಗಳು ಅದರಿಂದ ಉಂಟಾಗುವ ಸಂಘರ್ಷಗಳನ್ನು ಇಟ್ಟುಕೊಂಡು ಕಥೆ ಹೆಣೆದಿರುವುದೇ ಮೆಚ್ಚುಗೆಗೆ ಅರ್ಹ. ಮನಸ್ಸನ್ನು ಆರ್ದ್ರಗೊಳಿಸುವ ಹಲವು ಭಾವತೀವ್ರ ಸನ್ನಿವೇಶಗಳನ್ನೂ ಅವರು ಕಟ್ಟಿಕೊಟ್ಟಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಶ್ರೀಮಹಾದೇವ್ ಚುರುಕಾಗಿ ನಟಿಸಿದ್ದಾರೆ. ಪುಟಾಣಿ ಮಾ.ಅಭಿಷೇಕ್ ರಾಯಣ್ಣ ಚಿನಕುರುಳಿತನ ಚಿತ್ರದ ದ್ವಿತೀಯಾರ್ಧಕ್ಕೆ ವೇಗವರ್ಧಕವಾಗಿದೆ. ಕಡಿಮೆ ಅವಧಿಯಲ್ಲಿಯೇ ಅಚ್ಯುತ್ ಕುಮಾರ್ ಮನಸ್ಸಲ್ಲಿ ಅಚ್ಚೊತ್ತುತ್ತಾರೆ. ನಗುವನ್ನೂ, ನೋವನ್ನೂ ದುಗುಡವನ್ನೂ ಮೇಘನಾ ರಾಜ್ ಹದವಾಗಿ ವ್ಯಕ್ತಪಡಿಸಿದ್ದಾರೆ - ಪದ್ಮನಾಭ ಭಟ್

    ಅತ್ತಿಗೆ ಸಿನಿಮಾ ನೋಡಿ ಖುಷ್ ಆದ ಧ್ರುವ ಸರ್ಜಾಅತ್ತಿಗೆ ಸಿನಿಮಾ ನೋಡಿ ಖುಷ್ ಆದ ಧ್ರುವ ಸರ್ಜಾ

    ಇಲ್ಲಿ ಇರುವುದೆಲ್ಲ ಬಾಂಧವ್ಯ ಕಥೆ - ವಿಜಯವಾಣಿ

    ಇಲ್ಲಿ ಇರುವುದೆಲ್ಲ ಬಾಂಧವ್ಯ ಕಥೆ - ವಿಜಯವಾಣಿ

    ಪ್ರಸ್ತುತ ಕಾಲಘಟ್ಟಕ್ಕೆ ಕನ್ನಡಿ ಹಿಡಿಯುವಂತಹ ಕಥೆ ಆಯ್ದುಕೊಂಡಿರುವ ನಿರ್ದೇಶಕರು, ಅದಕ್ಕೆ ಇನ್ನಷ್ಟು ಪ್ರಬುದ್ಧತೆಯುಳ್ಳ ಅಂಶಗಳನ್ನು ಸೇರಿಸಬಹುದಾಗಿತ್ತು. ಅಲ್ಲಲ್ಲಿ ನಿಧಾನವಾಗಿ ಸಾಗುವ ಚಿತ್ರಕಥೆಗೆ ವೇಗ ನೀಡುವ ಅವಕಾಶವೂ ಇತ್ತು. ಇದೆಲ್ಲವನ್ನೂ ಬದಿಗಿಟ್ಟು ನೋಡಿದರೆ 'ಇರುವುದೆಲ್ಲವ ಬಿಟ್ಟು' ಮೆಚ್ಚಬಹುದಾದ ಪ್ರಯತ್ನ - ಅವಿನಾಶ್.ಜಿ.ರಾಮ್

    ವಿಮರ್ಶೆ: 'ಇರುವುದೆಲ್ಲವ ಬಿಟ್ಟು' ಸಂಬಂಧಗಳೆಡೆಗೆ ತುಡಿವುದೇ ಜೀವನವಿಮರ್ಶೆ: 'ಇರುವುದೆಲ್ಲವ ಬಿಟ್ಟು' ಸಂಬಂಧಗಳೆಡೆಗೆ ತುಡಿವುದೇ ಜೀವನ

    ಬೋಲ್ಡ್ ಅಂಡ್ ಬ್ಯೂಟಿಫುಲ್ ಸಂಬಂಧ: ವಿಜಯ ಕರ್ನಾಟಕ

    ಬೋಲ್ಡ್ ಅಂಡ್ ಬ್ಯೂಟಿಫುಲ್ ಸಂಬಂಧ: ವಿಜಯ ಕರ್ನಾಟಕ

    ಆಧುನಿಕ ಬದುಕಿನಲ್ಲಿ ಮನುಷ್ಯ ಮಾನವೀಯ ಸಂಬಂಧಗಳಿಂದ ದೂರವಾಗುತ್ತಿದ್ದಾನೆ. ಅದೂ ಸಣ್ಣ ಸಣ್ಣ ಕಾರಣಗಳಿಗಾಗಿ. ಕಾಂತ ಕನ್ನಲಿ ನಿರ್ದೇಶನದ ‘ಇರುವುದೆಲ್ಲವ ಬಿಟ್ಟು' ಸಿನಿಮಾ ಇದೇ ಕಥಾವಸ್ತು ಹೊಂದಿದೆ. ಸಂಬಂಧ ಅನ್ನುವುದು ಸಣ್ಣಪುಟ್ಟ ಕಾರಣಕ್ಕೆ ಬಿಟ್ಟು ಹೋಗುವಂಥದ್ದಲ್ಲ. ಆಯಾ ಸಂಬಂಧಗಳಿಗೆ ಅದರದ್ದೇ ಆದ ಅರ್ಥವಿರುತ್ತದೆ. ಅದನ್ನು ಕಡೆಯವರೆಗೂ ಕಾಪಾಡಿಕೊಂಡು ಹೋಗಬೇಕು ಎನ್ನುವುದನ್ನು ಈ ಸಿನಿಮಾದಲ್ಲಿ ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಈ ನಿಟ್ಟಿನಲ್ಲಿ ‘ಇರುವುದೆಲ್ಲವ ಬಿಟ್ಟು' ಸಿನಿಮಾ ಕ್ಲಾಸಿಕಲ್‌ ಚಿತ್ರಗಳ ಸಾಲಿಗೆ ಸೇರುತ್ತದೆ - ಹರೀಶ್ ಬಸವರಾಜ್

    Iruvudellava Bittu Review: Times of India

    Iruvudellava Bittu Review: Times of India

    Kantha Kannalli and his team have been very vocal in promoting the film as one that has a strong female protagonist. The songs and the fact that it is catering to the much-ignored family audience has created some buzz. The film has some interesting moments and some soppy scenes, but it ends up being a little clichéd in its approach - Sunayana Suresh

    English summary
    Kannada Movie Iruvudellava Bittu has received mixed response from the critics. Here is the collection of Iruvudellava Bittu reviews from Top news papers.
    Saturday, September 22, 2018, 9:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X