twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶಕರ ಮನ ಗೆಲ್ಲುವಲ್ಲಿ 'ಲಂಬೋದರ' ಯಶಸ್ವಿಯಾದ್ನಾ.?

    |

    ಲಾಂಗ್ ಗ್ಯಾಪ್ ಬಳಿಕ ಲೂಸ್ ಮಾದ ಯೋಗಿ ತೆರೆಮೇಲೆ ಕಾಣಿಸಿಕೊಂಡಿರುವ ಸಿನಿಮಾ 'ಲಂಬೋದರ'. 'ಸಿದ್ಲಿಂಗು' ಚಿತ್ರದಲ್ಲಿ ಯೋಗಿ ನಟನೆ ನೋಡಿ ಇಷ್ಟ ಪಟ್ಟಿದ್ದ ಅಭಿಮಾನಿಗಳು ಅದೇ ತರಹದ ಸಿನಿಮಾಗಳನ್ನು ನಿರೀಕ್ಷೆ ಮಾಡುತ್ತಿರುವಾಗಲೇ, 'ಲಂಬೋದರ' ತೆರೆಗೆ ಬಂದಿದೆ.

    ಪಡ್ಡೆ ಹುಡುಗನ ಪಾತ್ರದಲ್ಲಿ ಯೋಗಿ ಕಾಣಿಸಿಕೊಂಡಿರುವ ಈ ಚಿತ್ರ ಹರೆಯದ ಹುಡುಗರಿಗೆ ಇಷ್ಟ ಆಗುತ್ತದೆ. ಕೆ.ಕೃಷ್ಣರಾಜ್ ಆಕ್ಷನ್ ಕಟ್ ಹೇಳಿರುವ 'ಲಂಬೋದರ' ಚಿತ್ರ ಕಾಲೇಜು ಯುವಕರಿಗೆ ಹೇಳಿ ಮಾಡಿಸಿದ ಸಿನಿಮಾ.

    ದ್ವಂದಾರ್ಥ ಜೋಕ್ ಗಳು ಹೇರಳವಾಗಿರುವ 'ಲಂಬೋದರ' ಚಿತ್ರ ವಿಮರ್ಶಕರಿಗೆ ಇಷ್ಟ ಆಯ್ತಾ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ 'ಲಂಬೋದರ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿರಿ...

    ದ್ವಂದ್ವಾರ್ಥದಲ್ಲಿ ಮುಳುಗೇಳುವ 'ಲಂಬೋದರ': ಪ್ರಜಾವಾಣಿ

    ದ್ವಂದ್ವಾರ್ಥದಲ್ಲಿ ಮುಳುಗೇಳುವ 'ಲಂಬೋದರ': ಪ್ರಜಾವಾಣಿ

    ಚಪಲ ಚೆನ್ನಿಗ ಹುಡುಗನ ಮನಸ್ಥಿತಿ ಮತ್ತು ಮಧ್ಯಮ ವರ್ಗದ ಬದುಕಿನ ಕಥೆ ಇಟ್ಟುಕೊಂಡು 'ಲಂಬೋದರ' ಚಿತ್ರದಲ್ಲಿ ಕಾಮಿಡಿ ಕಥೆ ಹೇಳಲು ಹೊರಟಿದ್ದಾರೆ ನಿರ್ದೇಶಕ ಕೆ.ಕೃಷ್ಣರಾಜ್. ಜವಾಬ್ದಾರಿ ಮರೆತ ಯುವಜನಾಂಗ, ಪೋಷಕರ ಅಸಹಾಯಕ ಸ್ಥಿತಿಯ ಎಳೆಯನ್ನೂ ಇದರಲ್ಲಿ ಪೋಣಿಸಿದ್ದಾರೆ. ಆದರೆ, ಗಟ್ಟಿಯಾದ ಚಿತ್ರಕಥೆ, ಬಿಗಿಯಾದ ನಿರೂಪಣೆ ಇದ್ದಾಗಲಷ್ಟೇ ಸಾಧಾರಣವಾದ ಕಾಮಿಡಿ ಕಥೆಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತವೆ. ಇಲ್ಲಿ ದ್ವಂದ್ವಾರ್ಥದ ಸಂಭಾಷಣೆ ನಂಬಿಕೊಂಡೇ ನಿರ್ದೇಶಕರು ಪ್ರೇಕ್ಷಕರಿಗೆ ಕಥೆ ದಾಟಿಸಲು ಪ್ರಯತ್ನ ಪಟ್ಟಿದ್ದಾರೆ. ಲಂಬೋದರ ಪೇಲವವಾಗಿ ಕಾಣುವುದು ಇಲ್ಲಿಯೇ - ಕೆ.ಎಚ್.ಓಬಳೇಶ್

    Lambodara Review : ಬಸವನಗುಡಿ ಲಂಬೋದರ, ನೋಡಿದ್ರೆ ನಗ್ತೀರಾ Lambodara Review : ಬಸವನಗುಡಿ ಲಂಬೋದರ, ನೋಡಿದ್ರೆ ನಗ್ತೀರಾ

    ಬದುಕಿನ ಸಾರದಲ್ಲಿ ಪ್ರೀತಿಯ ಪಾಕ: ಉದಯವಾಣಿ

    ಬದುಕಿನ ಸಾರದಲ್ಲಿ ಪ್ರೀತಿಯ ಪಾಕ: ಉದಯವಾಣಿ

    ಒಂದು ಮನರಂಜನಾತ್ಮಕ ಚಿತ್ರದಲ್ಲಿ ಏನೆಲ್ಲಾ ಇರಬೇಕೋ ಅವೆಲ್ಲವೂ "ಲಂಬೋದರ'ನಲ್ಲಿದೆ. ಒಂದೇ ಮಾತಲ್ಲಿ ಹೇಳುವುದಾದರೆ, ಯುವಕರನ್ನೇ ಕೇಂದ್ರೀಕರಿಸಿ ಮಾಡಿರುವ ಚಿತ್ರವಿದು. ಹಾಗಂತ, ಪೋಲಿತನವೇ ಇಲ್ಲಿಲ್ಲ. ತುಂಟತನದ ಜೊತೆಗೆ ಬದುಕಿನ ಸಾರ, ಪ್ರೀತಿಯ ಪಾಕ ಎಲ್ಲವೂ ತುಂಬಿಕೊಂಡಿದೆ. ಒಂದು ಸರಳ ಕಥೆಗೆ ಇಲ್ಲಿ ಚಿತ್ರಕಥೆಯೇ ಮೂಲಾಧಾರ. ಇಲ್ಲಿ ಚುರುಕಾಗಿರುವ ಚಿತ್ರಕಥೆ ಸುಮ್ಮನೆ ನೋಡಿಸಿಕೊಂಡು ಹೋಗುತ್ತದೆ - ವಿಜಯ್ ಭರಮಸಾಗರ

    ಹದಿಹರೆಯದವರಿಗೆ ಕಚಗುಳಿ ಇಡುವ ಸಿನಿಮಾ: ವಿಜಯ ಕರ್ನಾಟಕ

    ಹದಿಹರೆಯದವರಿಗೆ ಕಚಗುಳಿ ಇಡುವ ಸಿನಿಮಾ: ವಿಜಯ ಕರ್ನಾಟಕ

    ಪಡ್ಡೆ ಹುಡುಗರ ಸಿಲ್ಲಿ ನಡವಳಿಕೆಗಳು, ಆಟಗಳು ಸಿನಿಮಾದಲ್ಲಿವೆ. ಕಾಮಿಡಿ ಸಿನಿಮಾ ಎನ್ನಲಾಗಿದ್ದರೂ ಇನ್ನೂ ನಗಿಸಬಹುದಾಗಿತ್ತು. ಲಂಬೋದರನ ತರಲೆಗಳ ನಡುವೆ ಫ್ಲ್ಯಾಶ್‌ ಬ್ಯಾಕ್‌ ಬಂದು ಬಂದು ಹೋಗುತ್ತಿರುತ್ತದೆ. ಸ್ಕೂಲ್‌ ದಿನಗಳು ಮತ್ತು ಕೊನೆಯ 15 ನಿಮಿಷಗಳ ದೃಶ್ಯಗಳಲ್ಲಿ ಕಾಣುವ ಬಿಗಿ ನಿರೂಪಣೆ ಉಳಿದ ದೃಶ್ಯಗಳಲ್ಲಿ ಕಾಣುವುದಿಲ್ಲ. ಲಂಬೋದರನ ಪಾತ್ರ ಪೋಷಣೆಯೂ ದುರ್ಬಲವಾಗಿದೆ. ಯೋಗಿ, ಸಿದ್ದು, ಧರ್ಮಣ್ಣ ನಟನೆ ಸಿನಿಮಾದ ಮುಖ್ಯ ಹೈಲೈಟ್‌ - ಪದ್ಮ ಶಿವಮೊಗ್ಗ

    Lambodara review: The New Indian Express

    Lambodara review: The New Indian Express

    Actor Loose Maada Yogi aka Yogesh is returning to silverscreen after a brief hiatus and his fans were hopeful that their hero will be able to deliver what was expected from him - a full-fledged entertaining film. The actor's performance in Siddlingu is still fresh in the minds of audience and one can only hope that he comes up with such films. Unfortunately, his latest outing Lambodara will just be added to the long list of films where he fails to impress the audience. Surprisingly, even changing his name to Yogi Pholgun has not brought any luck - A Sharadhaa

    English summary
    Loose Madha Yogi starrer Kannada Movie Lambodara has received mixed response from the critics. Here is the collection of Lambodara reviews from Top news papers.
    Saturday, January 12, 2019, 14:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X