For Quick Alerts
ALLOW NOTIFICATIONS  
For Daily Alerts

  'ಎಂ.ಎಲ್.ಎ' ಪ್ರಥಮ್ ರಾಜಕಾರಣ ಕಂಡು ವಿಮರ್ಶಕರು ಹೇಳಿದ್ದೇನು.?

  |

  'ಬಿಗ್ ಬಾಸ್' ವಿಜೇತ ಒಳ್ಳೆ ಹುಡುಗ ಪ್ರಥಮ್ ಅಭಿನಯದ ಎರಡನೇ ಚಿತ್ರ 'ಎಂ.ಎಲ್.ಎ' ರಾಜ್ಯಾದ್ಯಂತ ಬಿಡುಗಡೆ ಆಗಿದೆ. 'ಎಂ.ಎಲ್.ಎ' ಎಂಬ ಶೀರ್ಷಿಕೆ ಕೇಳಿದ ಕೂಡಲೆ ಇದು ಔಟ್ ಅಂಡ್ ಔಟ್ ಪೊಲಿಟಿಕಲ್ ಚಿತ್ರ ಇರಬೇಕು ಅಂದುಕೊಳ್ಳಬೇಡಿ. ಯಾಕಂದ್ರೆ, ಚಿತ್ರದಲ್ಲಿ ರಾಜಕಾರಣದ ಜೊತೆಗೆ ಲವ್ ಸ್ಟೋರಿ ಹಾಗೂ ಫ್ಯಾಮಿಲಿ ಕಥೆ ಕೂಡ ಇದೆ.

  ಅಕಸ್ಮಾತ್ತಾಗಿ 'ಎಂ.ಎಲ್.ಎ' ಆಗುವ ಪ್ರಥಮ್ ಸಮಾಜೋದ್ಧಾರಕ್ಕಾಗಿ ಏನೆಲ್ಲ ಮಾಡುತ್ತಾನೆ ಎಂಬ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ 'ಸ್ಪರ್ಶ' ರೇಖಾ, ಕುರಿ ಪ್ರತಾಪ್, ನವೀನ್, ಚಂದ್ರಕಲಾ ಮೋಹನ್, ಸೋನಲ್ ಮಂಥೆರೋ ಅಭಿನಯಿಸಿದ್ದಾರೆ.

  'ಎಂ.ಎಲ್.ಎ' ಪ್ರಥಮ್ ಗೆ ವಿಮರ್ಶಕರು ಜೈ ಅಂದ್ರಾ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ 'ಎಂ.ಎಲ್.ಎ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ, ಓದಿರಿ...

  ಮಾತಲ್ಲೇ ಮರ ಹತ್ತಿಸಿ, ಮನದಿಂದ ಮರೆಯಾಗುವ ಸಿನಿಮಾ: ವಿಜಯ ಕರ್ನಾಟಕ

  ವರ್ಣರಂಜಿತ ವ್ಯಕ್ತಿತ್ವಕ್ಕೆ ಹೆಸರಾದವರು ರಾಜಕಾರಣಿಗಳು. ಗಂಭೀರ ರಾಜಕಾರಣಿಗಳ ಜತೆಗೆ ಹಾಸ್ಯಪ್ರಜ್ಞೆಯುಳ್ಳ ವ್ಯಕ್ತಿಗಳನ್ನೂ ಈ ನಾಡು ಕಂಡಿದೆ. ಈ ಕಂಡುಂಡ ಅನುಭವಗಳನ್ನು 'ಎಂಎಲ್ಎ' ಸಿನಿಮಾದ ಮೂಲಕ ಹೇಳಿದ್ದಾರೆ ನಿರ್ದೇಶಕ ಮೌರ್ಯ. ರಾಜಕೀಯ ಕ್ಷೇತ್ರದಲ್ಲಿ ನಡೆದ ಒಂದಷ್ಟು ಘಟನೆಗಳನ್ನು ಒಟ್ಟಾಗಿಸಿ, ಅದನ್ನು ಕಾಮಿಡಿ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಹಾಗಾಗಿ ಈ ಸಿನಿಮಾ ನಮ್ಮ ನಡುವಿನ ರಾಜಕಾರಣವನ್ನು ನೆನಪಿಸುತ್ತಲೇ, ಪ್ರಸ್ತುತ ಸಮಾಜಕ್ಕೆ ಎಚ್ಚರಿಕೆಯ ಸಂದೇಶ ನೀಡುತ್ತದೆ. ಅಷ್ಟರ ಮಟ್ಟಿಗೆ ನೋಡುಗರಿಗೆ ಆಪ್ತವೆನಿಸುತ್ತದೆ. ಹಾಗಂತ ಎಲ್ಲರಿಗೂ ಇದು ಇಷ್ಟವಾಗುತ್ತದೆ ಎಂದು ಹೇಳುವುದು ಕಷ್ಟ. ಪ್ರಥಮ್ ಆಡುವ ಅತಿಯಾದ ಮಾತು, ಅಸಂಬದ್ಧ ಸನ್ನಿವೇಶ, ಸುಮ್ಮನೆ ಬಂದು ಹೋಗುವ ಹಾಡುಗಳನ್ನು ಸಹಿಸಿಕೊಳ್ಳಲೇಬೇಕು. ಅದರಲ್ಲೂ ಪ್ರಥಮ್ ನಟನೆಯನ್ನು ಅವರಿದ್ದಂತೆಯೇ ಒಪ್ಪಿಕೊಂಡರೆ ಬಚಾವ್ - ನಂದಿನಿ.ಕೆ.ಎಲ್

  'ಎಂ ಎಲ್ ಎ' ಅವತಾರದಲ್ಲಿ ಪ್ರಥಮ್ ಎಂಟ್ರಿಗೆ ವೇದಿಕೆ ಸಜ್ಜು

  Film loses with Pratham's antics: The New Indian Express

  Seeming more like an extended version of the ‘Olle Hudga Pratham' of Bigg Boss Kannada, Season 4, and his leap onto the big screen, MLA had no dearth of publicity. But what lets down the entire film is director Manju Maurya's overambitious portrayal of Pratham and his ‘patented' trademarks like Naan Kandisthini , ‘I love you, you must love me', Naanu nimma huduga, Ole Huduga, Melagi Kanandiga, etc., thus focusing more on a singular outing for the hero's image; the film just be damned - A Sharadhaa

  ಕುರಿ ಪ್ರತಾಪ್ 'ಇನ್ನೊಂದು ಮುಖ'ವನ್ನ ಪರಿಚಯಿಸಿದ ಪ್ರಥಮ್.!

  MLA Review - Times of India

  This time, in his latest onscreen outing, reality television star Pratham plays a character that has all the antics that he has in real life. There is a definite improvement compared to his to his previous release. But, the film follows a hackneyed plot and is rather jagged in its narrative which makes it seem almost amateur at various moments - Sunayana Suresh

  ಈ ವಾರ 'ಜಗತ್ ಕಿಲಾಡಿ' ಜೊತೆ 'ಎಂ.ಎಲ್.ಎ' ಆಗಮನ

  From the heights of silliness - Bangalore Mirror

  A few days ago, Pratham announced his decision to quit the film industry. After watching this film, it seems like a very good decision. Childish monkeying around substitutes for acting in an utter waste of film making effort. Except for a few scenes in which Rekha and Sonal Monterio make the screen bearable, MLA is something to avoid like the plague - Shyam Prasad S

  English summary
  Kannada Movie MLA has received mixed response from the critics. Here is the collection of MLA reviews from Top news papers.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more