'ನಟ ಸಾರ್ವಭೌಮ'ನ ಆತ್ಮದ ಆಟಕ್ಕೆ ಮನಸೋತ್ರಾ ವಿಮರ್ಶಕರು.?

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಟ ಸಾರ್ವಭೌಮ' ಚಿತ್ರ ರಾಜ್ಯಾದ್ಯಂತ ತೆರೆಗೆ ಬಂದಿದೆ. ಇದೇ ಮೊದಲ ಬಾರಿಗೆ ಹಾರರ್-ಸಸ್ಪೆನ್ಸ್ ಅಂಶಗಳಿರುವ ಚಿತ್ರದಲ್ಲಿ ಪುನೀತ್ ಕಾಣಿಸಿಕೊಂಡಿರುವುದರಿಂದ, 'ನಟ ಸಾರ್ವಭೌಮ' ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇತ್ತು.

ಇನ್ನೂ ಪವನ್ ಒಡೆಯರ್ ಮತ್ತು ಪುನೀತ್ ರಾಜ್ ಕುಮಾರ್ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರ ಇದಾಗಿರುವುದರಿಂದ ಕುತೂಹಲ ಕೊಂಚ ಜಾಸ್ತಿಯೇ ಇತ್ತು. ಆ ಎಲ್ಲಾ ಕುತೂಹಲ, ನಿರೀಕ್ಷೆಗೆ ಇದೀಗ ಬ್ರೇಕ್ ಬಿದ್ದಿದೆ. 'ನಟ ಸಾರ್ವಭೌಮ' ರಿಲೀಸ್ ಆಗಿ, ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ಅಪ್ಪು ಆಕ್ಟಿಂಗ್, ಡ್ಯಾನ್ಸಿಂಗ್ ಗೆ ಅಭಿಮಾನಿಗಳು ಕ್ಲೀನ್ ಬೌಲ್ಡ್ ಆಗಿದ್ದಾರೆ. ಅದರಂತೆ ವಿಮರ್ಶಕರು ಕೂಡ 'ನಟ ಸಾರ್ವಭೌಮ'ನಿಗೆ ಮನಸೋತ್ರಾ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ, ಓದಿರಿ...

'ಕನ್ನಡಕ'ದೊಳಗಿನ ಸೇಡು - ಪ್ರಜಾವಾಣಿ

'ಕನ್ನಡಕ'ದೊಳಗಿನ ಸೇಡು - ಪ್ರಜಾವಾಣಿ

ಭೂತ, ಆತ್ಮಗಳ ಕಥೆಗಳುಳ್ಳ ಸಿನಿಮಾಗಳನ್ನು ಮಾಡುವುದು ಈಗಿನ ಸಂದರ್ಭದಲ್ಲಿ ಮೂಢನಂಬಿಕೆಯನ್ನು ಪೋಷಿಸಿದಂತೆಯೇ. ಆದರೆ ಬುದ್ಧಿವಂತ ನಿರ್ದೇಶಕನೊಬ್ಬ ಇಂತಹ ಕಥೆಯನ್ನು ಇಟ್ಟುಕೊಂಡು ತರ್ಕವನ್ನು ಮೀರದೆ ಒಂದು ಸಹಜ ಕಥೆಯನ್ನು ಹೇಳಬಹುದು ಎನ್ನುವುದಕ್ಕೆ ಪವನ್ ಒಡೆಯರ್ ನಿರ್ದೇಶನದ 'ನಟ ಸಾರ್ವಭೌಮ' ಸಾಕ್ಷಿ. ನೇರವಾಗಿ ಹೇಳಿದ್ದರೆ ಈ ಕಥೆ ಇನ್ನಷ್ಟು ಪರಿಣಾಮಕಾರಿ ಆಗುತ್ತಿತ್ತು. ಆದರೆ ಪುನೀತ್ ರಾಜ್ ಕುಮಾರ್ ನಂತಹ ಜನಪ್ರಿಯ ನಟನನ್ನು ಇಟ್ಟುಕೊಂಡು ಕಥೆಗೆ ಅಡ್ಡಾದಿಡ್ಡಿ ಮಸಾಲೆ ತುಂಬಿಸಿ ಹದಮಿಶ್ರಣದ ಚೌಚೌ ಬಾತ್ ಉಣಬಡಿಸಿದ್ದಾರೆ ಒಡೆಯರ್ - ಬಿ.ಎಂ.ಹನೀಫ್

ಇದು ಅಪ್ಪು ಸ್ಟೈಲ್ ಹಾರರ್ - ವಿಜಯ್ ಕರ್ನಾಟಕ

ಇದು ಅಪ್ಪು ಸ್ಟೈಲ್ ಹಾರರ್ - ವಿಜಯ್ ಕರ್ನಾಟಕ

ಪುನೀತ್‌ರಾಜ್‌ಕುಮಾರ್‌ ಸಿನಿಮಾಗಳೆಂದರೆ ಸಾಮಾನ್ಯವಾಗಿ ಒಂದು ನಿರೀಕ್ಷೆ ಬಿಲ್ಡ್ ಆಗಿರುತ್ತದೆ. ಅದೇ ನಿರೀಕ್ಷೆ ನಟಸಾರ್ವಭೌಮ ಸಿನಿಮಾದ ಮೇಲೆಯೂ ಇತ್ತು. ಅದರಲ್ಲೂ ಪುನೀತ್‌ ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದಾಗ ನಿರೀಕ್ಷೆಯ ಜತೆಗೆ ಕುತೂಹಲ ಅವರ ಅಭಿಮಾನಿಗಳು ಮತ್ತು ಸಿನಿ ಪ್ರೇಕ್ಷಕರಲ್ಲಿ ಹುಟ್ಟಿಕೊಂಡಿತ್ತು. ನಟಸಾರ್ವಭೌಮ ಸಿನಿಮಾ ಕಥೆ ಒಂದು ಸಾಮಾನ್ಯ ಸೇಡಿನ ಕಥೆ. ಆ ಸೇಡನ್ನು ಯಾರು ಯಾರ ಮೇಲೆ ತೀರಿಸಿಕೊಳ್ಳುತ್ತಾರೆ ಎಂಬುದೇ ಸ್ಕ್ರೀನ್ ಪ್ಲೇ. ಇದೊಂದು ಸೇಡಿನ ಕಥೆಯಾದರೂ ಅದನ್ನು ತೀರಿಸಿಕೊಳ್ಳುವ ಬಗೆಯನ್ನು ಸ್ವಲ್ಪ ವಿಭಿನ್ನವಾಗಿ, ಪ್ರೇಕ್ಷಕನಿಗೆ ಥ್ರಿಲ್ ಆಗುವಂತೆ ಹೇಳುವ ಮೂಲಕ ನಿರ್ದೇಶಕ ಪವನ್‌ ಒಡೆಯರ್‌ ಚಾಕಚಕ್ಯತೆ ತೋರಿಸಿದ್ದಾರೆ. ಆ ಚಾಕಚಕ್ಯತೆಯೇನು ಎಂಬುದನ್ನು ದೊಡ್ಡ ಪರದೆಯ ಮೇಲೆ ನೋಡಿಯೇ ಥ್ರಿಲ್ ಆಗಬೇಕು - ಹರೀಶ್ ಬಸವರಾಜ್

ಆತ್ಮದ 'ಆಟ' ಪರಮಾತ್ಮನ ಹುಡುಕಾಟ - ಉದಯವಾಣಿ

ಆತ್ಮದ 'ಆಟ' ಪರಮಾತ್ಮನ ಹುಡುಕಾಟ - ಉದಯವಾಣಿ

ಒಂದಷ್ಟು ಮಂದಿ ಆತನ ಮೈಯೊಳಗೆ ಆತ್ಮ ಹೊಕ್ಕಿದೆ ಎನ್ನುತ್ತಾರೆ. ಇನ್ನೊಂದಷ್ಟು ಮಂದಿ ಆತ ಮಾನಸಿಕ ರೋಗಿ ಎಂಬ ಪಟ್ಟ ಕಟ್ಟುತ್ತಾರೆ. ಅದಕ್ಕೆ ಕಾರಣ ಪತ್ರಕರ್ತನಾಗಿದ್ದವ ಏಕಾಏಕಿ ವಿಚಿತ್ರವಾಗಿ ವರ್ತಿಸಲು ಶುರು ಮಾಡುತ್ತಾನೆ. ಇಬ್ಬರು ದೊಡ್ಡ ವ್ಯಕ್ತಿಗಳನ್ನು ಹಿಗ್ಗಾಮುಗ್ಗಾ ಹೊಡೆಯುತ್ತಾನೆ. ಅಷ್ಟಕ್ಕೂ ಆತನ ಉದ್ದೇಶವೇನು? ಆತ್ಮದ ಕಾಟನಾ, ಮಾನಸಿಕ ರೋಗಿನಾ? ಕುತೂಹಲವಿದ್ದರೆ ನೀವು "ನಟಸಾರ್ವಭೌಮ' ಚಿತ್ರ ನೋಡಬಹುದು - ರವಿಪ್ರಕಾಶ್ ರೈ

Nata Sarvabhowma Review - The Indian Express

Nata Sarvabhowma Review - The Indian Express

Natasaarvabhowma is a meta-movie that keeps reminding us of the track record of its hero, Puneeth Rajkumar. It begins from the title, Natasarvabhouma (Emperor of Actors), an honorary title bestowed upon late legendary actor and Puneeth's father Dr Rajkumar. In a scene, the star proclaims that he has a lot of family audience when his editor requests him to appease the minister, so the newspaper won't run out of government revenues - Manoj Kumar R

Nata Sarvabhowma Review - Bangalore Mirror

Nata Sarvabhowma Review - Bangalore Mirror

For the first time, actor Puneeth Rajkumar encounters a ghost in a film. This is no ordinary ghost; it possesses the hero himself. Ghosts in films starring big stars usually trouble only the supporting cast, so the gumption of Natasaarvabhowma's ghost is commendable - S Shyam Prasad

Nata Sarvabhowma Review - Times of India

Nata Sarvabhowma Review - Times of India

The film promised to showcase Puneeth in a genre he hasn't been seen in before. While the promise holds true, the script itself seems a little loosely put together at times, which cause the occasional bump and detour just when the narrative gets interesting. The film has a lot of action, which is a treat for the die hard fans - Sunayana Suresh

More from Filmibeat

English summary
Read Kannada Movie Nata Sarvabhauma critics review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X