twitter
    For Quick Alerts
    ALLOW NOTIFICATIONS  
    For Daily Alerts

    'ಸಂಕಷ್ಟಕರ ಗಣಪತಿ' ದರ್ಶನ ಮಾಡಿ ವಿಮರ್ಶಕರು ಪುಳಕಿತರಾದ್ರಾ.?

    By Harshitha
    |

    ಶಾರ್ಟ್ ಫಿಲ್ಮ್ಸ್ ಮೂಲಕ ಹೆಸರು ಮಾಡಿರುವ ಅರ್ಜುನ್ ಕುಮಾರ್ ಮೊಟ್ಟ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ಸಿನಿಮಾ 'ಸಂಕಷ್ಟಕರ ಗಣಪತಿ'. ಈ ಚಿತ್ರದ ಮೂಲಕ ಒಂದು ಅಪರೂಪದ ಖಾಯಿಲೆ ಬಗ್ಗೆಯೂ ನಿರ್ದೇಶಕರು ವಿವರಣೆ ನೀಡಿದ್ದಾರೆ.

    ನಾಯಕನಿಗೆ ತನ್ನ 'ಕರ' (ಕೈ) ತನಗೆ ಹೇಗೆಲ್ಲಾ ತೊಂದರೆ ಕೊಡುತ್ತದೆ ಅನ್ನೋದನ್ನೇ ಇಟ್ಟುಕೊಂಡು 'ಸಂಕಷ್ಟ'ಕರ'ಗಣಪತಿ' ಚಿತ್ರಕಥೆಯನ್ನ ಹೆಣೆಯಲಾಗಿದೆ. ಕಾನ್ಸೆಪ್ಟ್ ಎಷ್ಟು ಫ್ರೆಶ್ ಆಗಿದ್ಯೋ, ನಿರೂಪಣಾ ಶೈಲಿ ಹಾಗೂ ಚಿತ್ರಕಥೆ ಕೂಡ ಅಷ್ಟೇ ಫ್ರೆಶ್ ಆಗಿದೆ.

    ಹೊಸಬರ ದಂಡೇ ತುಂಬಿರುವ 'ಸಂಕಷ್ಟಕರ ಗಣಪತಿ' ಕ್ಲಾಸ್ ಆಡಿಯನ್ಸ್ ಗೆ ಹೇಳಿ ಮಾಡಿಸಿದ ಸಿನಿಮಾ. ರೊಮ್ಯಾಂಟಿಕ್ ಹಾಗೂ ಕಾಮಿಡಿ ಅಂಶಗಳು ಹೇರಳವಾಗಿ ಇರುವ ಈ ಚಿತ್ರ ನೋಡಿ ಪ್ರೇಕ್ಷಕರು ನಕ್ಕು ನಲಿದಿದ್ದಾರೆ. ಆದ್ರೆ, ವಿಮರ್ಶಕರಿಗೆ ಈ ಸಿನಿಮಾ ಹೇಗನಿಸಿತು.?

    ಈ ಪ್ರಶ್ನೆಗೆ ಉತ್ತರ ಇಲ್ಲಿದೆ. 'ಸಂಕಷ್ಟಕರ ಗಣಪತಿ' ಸಿನಿಮಾ ನೋಡಿ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿರಿ...

    ಎಡವಟ್ಟು ಗಣಪನ ಸಮ್ ಕಷ್ಟ: ಉದಯವಾಣಿ

    ಎಡವಟ್ಟು ಗಣಪನ ಸಮ್ ಕಷ್ಟ: ಉದಯವಾಣಿ

    ಕನ್ನಡ ಚಿತ್ರರಂಗದಲ್ಲಿ ಅನೇಕ ಖಾಯಿಲೆಗಳ ಬಗ್ಗೆ ಚಿತ್ರಗಳಾಗಿವೆ. ಈ ಬಾರಿ ಏಲಿಯನ್ ಹ್ಯಾಂಡ್ ಸಿಂಡ್ರೋಮ್‌ ಎಂಬ ಕನ್ನಡಕ್ಕೆ ಹೊಸದಾದ ಖಾಯಿಲೆಯನ್ನು ತಂದು ಸಿನಿಮಾ ಮಾಡಿದ್ದಾರೆ. ಈ ಖಾಯಿಲೆಯ ಕುರಿತಾದ ಸಿನಿಮಾ ತಮಿಳಿನಲ್ಲಿ ಬಂದಿದ್ದರೂ, ಇದು ಯಾವುದೇ ಚಿತ್ರದ ರೀಮೇಕ್ ಅಲ್ಲ ಎನ್ನುವುದು ವಿಶೇಷ. ಈ ಚಿತ್ರದಲ್ಲಿ ಗಣಪತಿ ಎಂಬ ವ್ಯಂಗ್ಯಚಿತ್ರಕಾರನೊಬ್ಬನ ಕಥೆಯನ್ನು ಹೇಳುವ ಪ್ರಯತ್ನವನ್ನು ಮಾಡಿದ್ದಾರೆ. ಮೊದಲಾರ್ಧ ಮುಗಿಯುವುದೇ ಗೊತ್ತಾಗುವುದಿಲ್ಲ ಎನ್ನುವಷ್ಟು ವೇಗವಾಗಿ ಮುಗಿದು ಹೋಗುತ್ತದೆ. ದ್ವಿತೀಯಾರ್ಧ ಅಲ್ಲಲ್ಲಿ ನಿಧಾನವಾಗಿದೆಯಾದರೂ ಒಟ್ಟಾರೆ ಚಿತ್ರ ನೋಡಿಸಿಕೊಂಡು ಹೋಗುತ್ತದೆ ಎಂಬುದು ಚಿತ್ರದ ಹೆಗ್ಗಳಿಕೆ. ಚಿತ್ರದಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳು ಕಾಣಬಹುದು. ಹೀಗಲ್ಲ, ಹಾಗೆ ಮಾಡಬಹುದಿತ್ತು ಎಂದನಿಸಬಹುದು. ಆದರೆ, ಮೊದಲ ಪ್ರಯತ್ನಕ್ಕೆ ಇದೊಂದು ನೀಟ್ ಆದ ಚಿತ್ರ ಎನ್ನಬಹುದು - ಚೇತನ್ ನಾಡಿಗೇರ್

     ಸಂಕಷ್ಟದಲ್ಲೂ ಸಮೃದ್ಧ ನಗೆ ತರಿಸುವ ಗಣಪ: ವಿಜಯ ಕರ್ನಾಟಕ

    ಸಂಕಷ್ಟದಲ್ಲೂ ಸಮೃದ್ಧ ನಗೆ ತರಿಸುವ ಗಣಪ: ವಿಜಯ ಕರ್ನಾಟಕ

    ಕೆಲ ಕಥೆಗಳು ಮತ್ತು ಕಾಯಿಲೆಗಳು ಸಿನಿಮಾ ಚೌಕಟ್ಟಿಗೆ ಸಿಗಲಾರವು. ಅಂತಹ ಅಪರೂಪದ ಕಾಯಿಲೆಯನ್ನು ಸಿನಿಮಾವಾಗಿಸಿ, ಅದನ್ನು ನವಿರಾದ ಹಾಸ್ಯದ ಮೂಲಕ ಪ್ರೇಕ್ಷಕರಿಗೆ ದಾಟಿಸಿದ್ದಾರೆ 'ಸಂಕಷ್ಟಕರ ಗಣಪತಿ' ಚಿತ್ರದ ನಿರ್ದೇಶಕ ಅರುಣ್‌ ಕುಮಾರ್‌. ಹಾಗಾಗಿ ಪ್ರತಿ ಸನ್ನಿವೇಶದಲ್ಲೂ ಕುತೂಹಲ ಮೂಡಿಸುವಂಥ ಅಂಶಗಳು ಚಿತ್ರದಲ್ಲಿವೆ. ಅರೇ, ಇದೊಂದು ಗಂಭೀರ ದೃಶ್ಯ ಬಂತಲ್ಲ ಅನ್ನುವ ಹೊತ್ತಿಗೆ ಮುದ್ದಾದ ಮಾತಿನ ನಾಯಕಿ ಕಾಣಿಸಿಕೊಳ್ಳುತ್ತಾಳೆ. ಡಾಕ್ಟರ್‌ ಮಾಡುವ ಆಪರೇಷನ್‌ ಆವಾಂತರ, ಮಕ್ಕಳ ಭವಿಷ್ಯಕ್ಕಾಗಿ ಪೋಷಕರ ಸರ್ಕಸ್‌, ತಂದೆ ಮಗನ ಭಾವನಾತ್ಮಕ ಸಂಬಂಧ, ಪ್ರೇಮಿಗಳ ತುಂಟಾಟ, ಕಷ್ಟಗಳಲ್ಲಿ ಕೈ ಹಿಡಿಯುವ ಗೆಳೆತನ.. ಹೀಗೆ ಹಲವು ವಿಷಯಗಳು ನೋಡುಗನ ಮುಂದೆ ನರ್ತಿಸುತ್ತವೆ. ರಂಜಿಸುತ್ತವೆ. ವಿಶೇಷ ಎನ್ನುವಂತೆ ಕಾಣುತ್ತವೆ. ಹಾಗಾಗಿ ಗಣಪತಿ ದೃಶ್ಯದಿಂದ ದೃಶ್ಯಕ್ಕೆ ಇಷ್ಟವಾಗುತ್ತಾ ಸಾಗುತ್ತಾನೆ - ನಂದಿನಿ.ಕೆ.ಎಲ್

    Sankashta Kara Ganapathi Review - Times of India

    Sankashta Kara Ganapathi Review - Times of India

    The film has a very contemporary treatment in its characterisation and has dialogues that are appealing to audiences both young and old. The story of Ganapathi, whose left hand goes beyond his control and has a mind of his own, is peppered with a lot of humour that keeps the audience entertained. The scenes of Ganapathi realising that something is amiss with his hand coordination are howlarious and definitely get the two thumbs up - Sunayana Suresh

    A romcom with a unique premise that gets most things right - The New Indian Express

    A romcom with a unique premise that gets most things right - The New Indian Express

    Debutant director, Arjun Kumar's Sankashta Kara Ganapathi, a romantic comedy, steers itself with ease into the minuscule league of watchable movies. This, while keeping the entertainment quotient high throughout. In its runtime, the film blurs sympathy towards the disorder by bringing in humorous elements - A Sharadhaa

    English summary
    Kannada Movie Sankashta Kara Ganapathi has received positive response from the critics. Here is the collection of Sankashta Kara Ganapathi reviews from Top news papers.
    Saturday, July 28, 2018, 13:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X