For Quick Alerts
  ALLOW NOTIFICATIONS  
  For Daily Alerts

  ವಿಮರ್ಶೆ: ಕನ್ನಡ ಭಾಷಾಭಿಮಾನ ಹೆಚ್ಚಿಸುವ 'ಸರ್ಕಾರಿ ಹಿ.ಪ್ರಾ. ಶಾಲೆ, ಕಾಸರಗೋಡು'

  By Harshitha
  |

  ಕನ್ನಡ ಭಾಷೆಯಲ್ಲಿ ವಿದ್ಯೆ ಕಲಿಯುವುದು ಕನ್ನಡ ಮಣ್ಣಿನ ಮಕ್ಕಳ ಹಕ್ಕು. ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ಹೊಂದಿದರೆ, ಕನ್ನಡ ಅಸ್ಮಿತೆ ಉಳಿಸಿಕೊಳ್ಳುವುದು ಕಷ್ಟ ಎಂಬ ಸಂದೇಶ ಸಾರುವ ಸಿನಿಮಾ 'ಸರ್ಕಾರಿ ಹಿ.ಪ್ರಾ.ಶಾಲೆ, ಕಾಸರಗೋಡು. ಕೊಡುಗೆ ರಾಮಣ್ಣ ರೈ'.

  ಕರ್ನಾಟಕಕ್ಕೆ ಸಿಗದ ಕಾಸರಗೋಡಿನಲ್ಲಿ ಕನ್ನಡ ಶಾಲೆಯನ್ನ ಉಳಿಸಿಕೊಳ್ಳಲು ಶಾಲೆಯ ಮಕ್ಕಳು ಪಡುವ ಪಾಡೇ ಈ ಚಿತ್ರದ ಹೂರಣ.

  Rating:
  3.5/5
  Star Cast: ಅನಂತ್ ನಾಗ್, ರಂಜನ್, ಸಂಪತ್ , ಪ್ರಮೋದ್ ಶೆಟ್ಟಿ, ರಿ‍ಷಭ್ ಶೆಟ್ಟಿ
  Director: ರಿ‍ಷಭ್ ಶೆಟ್ಟಿ

  ಚಿತ್ರ: 'ಸರ್ಕಾರಿ ಹಿ.ಪ್ರಾ.ಶಾಲೆ, ಕಾಸರಗೋಡು. ಕೊಡುಗೆ ರಾಮಣ್ಣ ರೈ'
  ನಿರ್ಮಾಣ, ನಿರ್ದೇಶನ: ರಿಷಬ್ ಶೆಟ್ಟಿ
  ಸಂಗೀತ: ವಾಸುಕಿ ವೈಭವ್
  ಬ್ಯಾಕ್ ಗ್ರೌಂಡ್ ಮ್ಯೂಸಿಕ್: ಅಜನೀಶ್ ಲೋಕನಾಥ್
  ಛಾಯಾಗ್ರಹಣ: ವೆಂಕಟೇಶ್ ಅಂಗುರಾಜ್
  ಸಂಭಾಷಣೆ: ಅಭಿಜಿತ್ ಮಹೇಶ್, ರಾಜ್.ಬಿ.ಶೆಟ್ಟಿ
  ತಾರಾಗಣ: ಅನಂತ್ ನಾಗ್, ಮಾ.ರಂಜನ್, ಮಾ.ಸಂಪತ್, ಮಾ.ಮಹೇಂದ್ರ, ಪ್ರಮೋದ್ ಶೆಟ್ಟಿ, ಪ್ರಕಾಶ್ ತೂಮಿನಾಡ್ ಮತ್ತು ಇತರರು
  ಬಿಡುಗಡೆ: ಆಗಸ್ಟ್ 23, 2018

  'ಶಾಲೆ'ಯ ಸುತ್ತ

  'ಶಾಲೆ'ಯ ಸುತ್ತ

  ಕಣ್ಮನ ತಣಿಸುವ ಕಾಸರಗೋಡಿನ ನಿಸರ್ಗ ಸಿರಿಯಲ್ಲಿ ಬೇಸಿಗೆ ರಜೆ ಕಳೆದು ಮಕ್ಕಳು ಪುನಃ ಶಾಲೆಗೆ ಹೋಗುವುದರಿಂದ ಸಿನಿಮಾ ಪ್ರಾರಂಭ ಆಗುತ್ತದೆ. ಶಾಲೆಯಲ್ಲಿ ಮಕ್ಕಳ ಆಟ, ಪಾಠ, ತುಂಟಾಟ. ಈ ನಡುವೆ ಮೂರು ವರ್ಷಗಳಿಂದ ಪಾಸ್ ಆಗದೇ ಒಂದೇ ಕ್ಲಾಸ್ ನಲ್ಲಿ ಓದುತ್ತಿರುವ 'ದಡ್ಡ ಪ್ರವೀಣ'ನ 'ಕ್ರಷ್' ಸ್ಟೋರಿ. ಅಲ್ಲಿಗೆ ಮೊದಲಾರ್ಧ ಸಮಾಪ್ತಿ.

  ಚಿತ್ರದ ಬಹುದೊಡ್ಡ ತಿರುವು

  ಚಿತ್ರದ ಬಹುದೊಡ್ಡ ತಿರುವು

  ಚೆನ್ನಾಗಿ ನಡೆಯುತ್ತಿದ್ದರೂ, ರಾಮಣ್ಣ ರೈ ಕೊಡುಗೆಯ 'ಸರ್ಕಾರಿ ಹಿ.ಪ್ರಾ.ಶಾಲೆ, ಕಾಸರಗೋಡು' ಶಾಲೆಗೆ ದಿಢೀರ್ ಅಂತ ಬೀಗ ಹಾಕಬೇಕಾಗುತ್ತದೆ. ಇದಕ್ಕೆ ಕಾರಣ ಏನು.? ಶಾಲೆಯನ್ನ ಮಕ್ಕಳು ಹೇಗೆ ಉಳಿಸಿಕೊಳ್ಳುತ್ತಾರೆ.? ಉಳಿಸಿಕೊಳ್ಳಲು ಏನೇನು ಮಾಡುತ್ತಾರೆ ಅನ್ನೋದನ್ನ ನೀವು ಚಿತ್ರಮಂದಿರದಲ್ಲಿಯೇ ನೋಡಿ...

  ಮಕ್ಕಳ ಪರ್ಫಾಮೆನ್ಸ್ ಸೂಪರ್

  ಮಕ್ಕಳ ಪರ್ಫಾಮೆನ್ಸ್ ಸೂಪರ್

  ಓದಿನ ಕಡೆ ಗಮನ ಕೊಡದೆ, ಪಲ್ಲವಿಯನ್ನ ನೋಡುತ್ತಲೇ ಅರ್ಧ ಕಾಲ ಕಳೆಯುವ 'ದಡ್ಡ' ಪ್ರವೀಣ, ರಾಮಣ್ಣ ರೈ 'ಕೊಡುಗೆ' ಮೇಲೆ ಸದಾ ಕಣ್ಣಿಟ್ಟಿರುವ ಮಮ್ಮುಟಿ, ಟಾಪರ್ ರಾಹುಲ್, ಮಹೇಂದ್ರನ ಕಾಮಿಡಿ ಟೈಮಿಂಗ್... ಸೇರಿದಂತೆ ಎಲ್ಲಾ ಮಕ್ಕಳ ಪರ್ಫಾಮೆನ್ಸ್ ಬೊಂಬಾಟ್ ಆಗಿದೆ.

  'ಪೀಕಾಕ್' ಅನಂತ್ ನಾಗ್

  'ಪೀಕಾಕ್' ಅನಂತ್ ನಾಗ್

  ದ್ವಿತೀಯಾರ್ಧದಲ್ಲಿ ಬರುವ ಅನಂತ್ ನಾಗ್ ತಮ್ಮ ಪಾತ್ರವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕೋರ್ಟ್ ಸನ್ನಿವೇಶದಲ್ಲಿ ಅವರು ವಾದ ಮಾಡಿದ ರೀತಿ ಮನಸ್ಸಿನಲ್ಲಿ ಉಳಿಯುತ್ತದೆ. ಇನ್ನೂ, ಪ್ರಮೋದ್ ಶೆಟ್ಟಿ, ಪ್ರಕಾಶ್ ತೂಮಿನಾಡ್ ಸೇರಿದಂತೆ ಎಲ್ಲರೂ ಚಿತ್ರದ ಕಳೆ ಹೆಚ್ಚಿಸಿದ್ದಾರೆ.

  ಲವಲವಿಕೆಯಿಂದ ಸಾಗುವ ಮೊದಲಾರ್ಧ

  ಲವಲವಿಕೆಯಿಂದ ಸಾಗುವ ಮೊದಲಾರ್ಧ

  ಶಾಲೆಯಲ್ಲಿ ನಡೆಯುವ ಮಕ್ಕಳ ತುಂಟಾಟವನ್ನ ನೋಡುತ್ತ ಮೊದಲಾರ್ಧ ಮುಗಿಯುವುದೇ ಗೊತ್ತಾಗುವುದಿಲ್ಲ. ಲವಲವಿಕೆಯಿಂದ ಫಸ್ಟ್ ಹಾಫ್ ಸಾಗಿದರೆ, ದ್ವಿತೀಯಾರ್ಧ ಕೊಂಚ ನಿಧಾನ. ಕನ್ನಡ ಶಾಲೆಯನ್ನ ಉಳಿಸಲು 'ಉಗ್ರ ಹೋರಾಟ' ನಡೆಯುತ್ತದೆ ಅಂತ ಪ್ರೇಕ್ಷಕರು ಭಾವಿಸಿದರೆ, ಅಲ್ಲಾಗುವುದೇ ಬೇರೆ.

  ಮಕ್ಕಳ ದೃಷ್ಟಿಕೋನ

  ಮಕ್ಕಳ ದೃಷ್ಟಿಕೋನ

  ಶಾಲೆಯನ್ನ ಉಳಿಸಿಕೊಳ್ಳಲು ಮಕ್ಕಳೇ ಮುಂದಾಗುವುದರಿಂದ ಸಿನಿಮಾದಲ್ಲಿ 'ಹಾಸ್ಯ' ಕೊಂಚ ಹೇರಳವಾಗಿದೆ. ಕೆಲ ಸನ್ನಿವೇಶಗಳು ಸೀರಿಯಸ್ ಆಗಿದ್ದಿದ್ದರೆ, ಚಿತ್ರದ ತೂಕ ಹೆಚ್ಚಾಗುತ್ತಿತ್ತು.

  ಕರಾವಳಿಗೆ ಹೋಗಿ ಬಂದ ಅನುಭವ

  ಕರಾವಳಿಗೆ ಹೋಗಿ ಬಂದ ಅನುಭವ

  ಚಿತ್ರದ ಪ್ರತಿ ಫ್ರೇಮ್ ನಲ್ಲಿಯೂ ಕರಾವಳಿಯ ಸೌಂದರ್ಯ ತುಂಬಿ ತುಳುಕುತ್ತದೆ. ವೆಂಕಟೇಶ್ ಅಂಗುರಾಜ್ ರವರ ಕ್ಯಾಮರಾ ಕೈಚಳಕ ಪ್ರೇಕ್ಷಕರಿಗೆ ಕರಾವಳಿಗೆ ಹೋಗಿ ಬಂದ ಅನುಭವ ನೀಡುತ್ತದೆ. ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ ಹಾಡುಗಳು ಫ್ರೆಶ್ ಆಗಿವೆ. ಅಜನೀಶ್ ಲೋಕನಾಥ್ ಬ್ಯಾಕ್ ಗ್ರೌಂಡ್ ಸ್ಕೋರ್ ಕಥೆಯ ಓಟಕ್ಕೆ ಪೂರಕವಾಗಿದೆ.

  ರಿಷಬ್ ಶೆಟ್ಟಿ ಆಶಯ ಚೆನ್ನಾಗಿದೆ

  ರಿಷಬ್ ಶೆಟ್ಟಿ ಆಶಯ ಚೆನ್ನಾಗಿದೆ

  ಚಿತ್ರದ ಆಶಯ, ನಿರ್ದೇಶಕ ರಿಷಬ್ ಶೆಟ್ಟಿಯ ಉದ್ದೇಶ ಮೆಚ್ಚುವಂಥದ್ದು. ಆದ್ರೆ, ಚಿತ್ರಕಥೆ ಬಗ್ಗೆ ಹೆಚ್ಚು ಗಮನ ಹರಿಸಿದ್ದರೆ, 'ಸರ್ಕಾರಿ ಹಿ.ಪ್ರಾ.ಶಾಲೆ, ಕಾಸರಗೋಡು. ಕೊಡುಗೆ ರಾಮಣ್ಣ ರೈ' ಚಿತ್ರ ಇನ್ನೂ ಚೆನ್ನಾಗಿ ಮೂಡಿಬರುತ್ತಿತ್ತು.

  ಫೈನಲ್ ಸ್ಟೇಟ್ಮೆಂಟ್

  ಫೈನಲ್ ಸ್ಟೇಟ್ಮೆಂಟ್

  'ಸರ್ಕಾರಿ ಹಿ.ಪ್ರಾ.ಶಾಲೆ, ಕಾಸರಗೋಡು' ಚಿತ್ರ ಖಂಡಿತ ನಿಮ್ಮ ಬಾಲ್ಯ ನೆನಪಿಸುತ್ತದೆ. ಮಕ್ಕಳ ಸಂಭಾಷಣೆ ನಿಮಗೆ ಖುಷಿ ಕೊಡುತ್ತದೆ. ಕನ್ನಡ ಭಾಷೆ ಮೇಲೆ ಅಭಿಮಾನ ಇರುವವರು ಒಮ್ಮೆ 'ಶಾಲೆ'ಗೆ ಭೇಟಿ ಕೊಟ್ಟುಬಿಡಿ.

  English summary
  Read Kannada Movie 'Sarkari Hi. Pra. Shaale, Kasaragodu, Koduge: Ramanna Rai' review.
  Friday, August 24, 2018, 13:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X