For Quick Alerts
  ALLOW NOTIFICATIONS  
  For Daily Alerts

  ವಿಮರ್ಶಕರ ಮನ ಗೆಲ್ಲುವಲ್ಲಿ 'ತಾಯಿಗೆ ತಕ್ಕ ಮಗ' ಯಶಸ್ವಿಯಾದ್ನಾ.?

  |

  ಸ್ಯಾಂಡಲ್ ವುಡ್ 'ಕೃಷ್ಣ' ಅಜೇಯ್ ರಾವ್ ಅಭಿನಯದ 25ನೇ ಸಿನಿಮಾ 'ತಾಯಿಗೆ ತಕ್ಕ ಮಗ' ಬಿಡುಗಡೆ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಜೇಯ್ ರಾವ್ ಗೆ 'ಕೃಷ್ಣನ್ ಲವ್ ಸ್ಟೋರಿ' ಮತ್ತು 'ಕೃಷ್ಣ ಲೀಲಾ' ಅಂತಹ ಸಿನಿಮಾ ಮಾಡಿದ್ದ ಶಶಾಂಕ್ 'ತಾಯಿಗೆ ತಕ್ಕ ಮಗ' ನಿರ್ದೇಶಕ.

  ಔಟ್ ಅಂಡ್ ಔಟ್ ಆಕ್ಷನ್ ಎಂಟರ್ ಟೈನರ್ ಆಗಿರುವ 'ತಾಯಿಗೆ ತಕ್ಕ ಮಗ' ಚಿತ್ರದಲ್ಲಿ ಅಜೇಯ್ ರಾವ್, ಸುಮಲತಾ, ಆಶಿಕಾ ರಂಗನಾಥ್ ಸೇರಿದಂತೆ ದೊಡ್ಡ ತಾರಾಬಳಗ ಇದೆ.

  ರಾಜಕಾರಣಿಗಳ ದಬ್ಬಾಳಿಕೆ ವಿರುದ್ಧ ಹೋರಾಡುವ ತಾಯಿ-ಮಗನ ಕಥೆಯೇ ಈ ಚಿತ್ರ. ದುಷ್ಟರನ್ನು ಸದೆ ಬಡಿಯುವಲ್ಲಿ ಯಶಸ್ವಿ ಆಗುವ 'ತಾಯಿಗೆ ತಕ್ಕ ಮಗ' ವಿಮರ್ಶಕರ ಮನ ಗೆಲ್ಲುವಲ್ಲಿ ಯಶಸ್ವಿಯಾದ್ನಾ.?

  ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ 'ತಾಯಿಗೆ ತಕ್ಕ ಮಗ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ, ನೋಡಿರಿ...

  ನಿನ್ನೆಯ ಸಾರಿಗೆ ಇಂದಿನ ಕೊತ್ತುಂಬ್ರಿ ಸೊಪ್ಪು : ಪ್ರಜಾವಾಣಿ

  ನಿನ್ನೆಯ ಸಾರಿಗೆ ಇಂದಿನ ಕೊತ್ತುಂಬ್ರಿ ಸೊಪ್ಪು : ಪ್ರಜಾವಾಣಿ

  ಭಗ್ನಪ್ರೇಮಿ, ಮುಗ್ಧ ಯುವಕನಾಗಿಯೇ ಹೆಚ್ಚು ಗಮನ ಸೆಳೆದಿದ್ದ ಕೃಷ್ಣ ಅಜೇಯ್ ರಾವ್, ಇಲ್ಲಿ ತಾಯಿಗೆ ತಕ್ಕ ಮಗನಾಗಲು ಮೀಸೆ ಹುರಿಗಟ್ಟಿಸಿರುವುದಷ್ಟೇ ಅಲ್ಲ, ಕಣ್ಣ ನೋಟವನ್ನೂ ಹರಿತಗೊಳಿಸಿಕೊಂಡಿದ್ದಾರೆ. ಸದಾ ಸೆಟೆದುಕೊಂಡೇ ಇರುವ ಅವರ ದೇಹಕ್ಕೆ ವೀಣೆ ಹಿಡಿದು ಬರುವ ಸರಸ್ವತಿಯ (ಆಶಿಕಾ) ಲಾವಣ್ಯಕ್ಕೆ ಹೊಂದುವ ಹಾಗೆ ಬಾಗುವುದು ಕೊಂಚ ಕಷ್ಟವಾಗಿರುವುದೂ ತೆರೆಯಲ್ಲಿ ಕಾಣಿಸುತ್ತದೆ - ಪದ್ಮನಾಭ ಭಟ್

  ವಿಮರ್ಶೆ: ರೆಬೆಲ್ ತಾಯಿಗೆ ರೆಬೆಲ್ ಮಗ

  ಕಾಣದ ಕಡಲಿಗೆ ಹಂಬಲಿಸುವ ತಾಯಿಗೆ ತಕ್ಕ ಮಗ : ವಿಜಯ ಕರ್ನಾಟಕ

  ಕಾಣದ ಕಡಲಿಗೆ ಹಂಬಲಿಸುವ ತಾಯಿಗೆ ತಕ್ಕ ಮಗ : ವಿಜಯ ಕರ್ನಾಟಕ

  ತಾಯಿಗೆ ತಕ್ಕ ಮಗ ಎಂಬ ಶೀರ್ಷಿಕೆ ಕೇಳಿದಾಕ್ಷಣ ಇದೊಂದು ತಾಯಿ ಮತ್ತು ಮಗನ ಕರುಳ ಬಳ್ಳಿಯ ಕಥೆ ಇರಬಹುದು ಅಂತ ಅನಿಸಬಹುದು. ಮಗನಿಗಾಗಿ ತಾಯಿಯೋ, ತಾಯಿಗಾಗಿ ಮಗನೋ ಹಂಬಲಿಸುವ ಕಣ್ಣೀರಿನ ಕಥೆಯೂ ಆಗಿರಬಹುದು ಎಂಬ ಅಂದಾಜೂ ಸಿಗಬಹುದು. ಇವೆರಡರ ಆಚೆಯೂ ನಿಂತು "ತಾಯಿಗೆ ತಕ್ಕ ಮಗ, ಸಿನಿಮಾ ಮಾಡಿದ್ದಾರೆ ನಿರ್ದೇಶಕ ಶಶಾಂಕ್. ಇವನು ಅಂತಿಂಥ ಮಗನಲ್ಲ, ಕಾನೂನು ಪಾಲನೆಯ ತಾಯಿ, ತಾಯಿಯನ್ನಷ್ಟೇ ಫಾಲೋ ಮಾಡುವ ಮಗ. ಹಾಗಾಗಿ ಅವನು ನಡೆದದ್ದೇ ಹಾದಿ, ಓಡಿದ್ದೇ ಓಟವಾಗುತ್ತದೆ - ಶರಣು ಹುಲ್ಲೂರು

  ವ್ಯವಸ್ಥೆಯ ವಿರುದ್ಧ ಅಮ್ಮ ಮಗನ ಧರ್ಮ ಯುದ್ಧ : ಕನ್ನಡ ಪ್ರಭ

  ವ್ಯವಸ್ಥೆಯ ವಿರುದ್ಧ ಅಮ್ಮ ಮಗನ ಧರ್ಮ ಯುದ್ಧ : ಕನ್ನಡ ಪ್ರಭ

  ಶೀರ್ಷಿಕೆಯೇ ಹೇಳುವಂತೆ ಇದೊಂದು ತಾಯಿ-ಮಗನ ಸೆಂಟಿಮೆಂಟ್ ಕತೆ. ಹಾಗಂತ ಮಗನಿಗಾಗಿ ಅಮ್ಮ, ಅಮ್ಮನಿಗಾಗಿ ಮಗ ಹಂಬಲಿಸುವ ನೋವಿನ ಕತೆಯಷ್ಟೇ ಇಲ್ಲಿಲ್ಲ. ಬಾಂಧವ್ಯಕ್ಕಿಂತ ಮಾನವೀಯತೆಗಾಗಿ ಅವರ ಹೋರಾಟ. ಕೆಟ್ಟ ರಾಜಕಾರಣಿಗಳ ದೌರ್ಜನ್ಯ-ದಬ್ಬಾಳಿಕೆಯ ವಿರುದ್ಧ ಅವರ ಯುದ್ಧ. ಕಾನೂನು ಪಾಲಿಸುವ ಅಮ್ಮ, ಅಮ್ಮನನ್ನು ಪಾಲಿಸುವ ಮಗ. ಹಾಗೊಂದು ಬದ್ಧತೆಯಲ್ಲಿ ಅವರು ದುಷ್ಟರ ವಿರುದ್ಧ ಹೇಗೆ ಯುದ್ಧ ಸಾರಿ, ಗೆಲ್ಲುತ್ತಾರೆನ್ನುವುದೇ ಈ ಚಿತ್ರದ ಒಂದು ಎಳೆ - ದೇಶಾದ್ರಿ ಹೊಸ್ಮನೆ

  Thayige Takka Maga Review - Times of India

  Thayige Takka Maga Review - Times of India

  Shashank and Ajai Rao have previously given the romantic hits Krishnan Love Story and Krishna Leela. This time around, the duo move out of that space to give a commercial action drama. Does this newer attempt click? It does to an extent. But one wonders if the film ends up being a little too louder than it should have been. Thayige Thakka Maga is about a mother and son and the title suggests - Sunayana Suresh

  Thayige Takka Maga Review - The New Indian Express

  Thayige Takka Maga Review - The New Indian Express

  Overall, the film has no signature of a trademark Shashank film. Although he has written the script and directed, his experiment of treading a new path seems to have fallen flat. Fight sequences (mostly karate style), dialogues and romantic scenes are repetitive. And with no hint of twists and turns, the end is too predictable. Even though the episodes are about today's system and politics, Shashank fails to handle the subject with maturity, and connect with the audience - A Sharadhaa

  Thayige Takka Maga Review - Bangalore Mirror

  Thayige Takka Maga Review - Bangalore Mirror

  The young man's anger is matched by his mother's. The fiery advocate is responsible for her son being brought up on a heavy dose of revengeful attitude. On the why, there is a mini flashback late in the film. The anger is good when you are up against the minor irritants. But the mother-son duo get pitted against a powerful politician and his dangerous son. They too are an angry lot - Shyam Prasad S

  English summary
  Kannada Movie Thayige Takka Maga has received good response from the critics. Here is the collection of Thayige Takka Maga reviews from Top news papers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X