twitter
    For Quick Alerts
    ALLOW NOTIFICATIONS  
    For Daily Alerts

    ಮೂಕಿ ಚಿತ್ರ 'ಮರ್ಕ್ಯೂರಿ' ನೋಡಿ ಭೇಷ್ ಎನ್ನುತ್ತಿರುವ ಟ್ವೀಟಿಗರು!

    By Harshitha
    |

    ಪ್ರಭುದೇವ ಎಂದ ಕೂಡಲೆ ಡ್ಯಾನ್ಸ್ ನೆನಪಿಸಿಕೊಳ್ಳುವ ಸಿನಿ ಪ್ರಿಯರಿಗೆ, 'ಇಂಡಿಯನ್ ಮೈಕಲ್ ಜಾಕ್ಸನ್' ನಟನೆಯೂ ಇಷ್ಟವೇ. ತೆಲುಗು ಹಾಗೂ ತಮಿಳಿನಲ್ಲಿ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಪ್ರಭುದೇವ ಇದೀಗ ಯಾವುದೇ ಡೈಲಾಗ್ಸ್ ಇಲ್ಲದ 'ಮರ್ಕ್ಯೂರಿ' ಎಂಬ ಸೈಲೆಂಟ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

    ಕನ್ನಡದಲ್ಲಂತೂ ಕಮಲ್ ಹಾಸನ್ ಅಭಿನಯದ 'ಪುಷ್ಪಕ ವಿಮಾನ' ನಂತರ ಸೈಲೆಂಟ್ ಸಿನಿಮಾ ಬಂದೇ ಇಲ್ಲ. ಹೀಗಾಗಿ 'ಮರ್ಕ್ಯೂರಿ' ಈಗಿನ ಮಟ್ಟಕ್ಕೆ ಪ್ರಯೋಗಾತ್ಮಕ ಚಿತ್ರ.

    2001 ರಲ್ಲಿ ತಮಿಳುನಾಡಿನ ಕಾರ್ಖಾನೆಯೊಂದರಲ್ಲಿ 'ಮರ್ಕ್ಯೂರಿ'ಯಿಂದಾಗಿ ನೂರಾರು ಕಾರ್ಮಿಕರು ಮೃತಪಟ್ಟಿದ್ದರು. ಈ ನೈಜಘಟನೆಯನ್ನ ಆಧಾರವಾಗಿರಿಸಿಕೊಂಡು 'ಮರ್ಕ್ಯೂರಿ' ಚಿತ್ರಕಥೆಯನ್ನ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ರಚಿಸಿದ್ದಾರೆ.

    'ಮರ್ಕ್ಯೂರಿ' ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. 'ಮರ್ಕ್ಯೂರಿ' ಚಿತ್ರದ ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರು ಟ್ವಿಟ್ಟರ್ ನಲ್ಲಿ ಮಾಡಿರುವ ಕೆಲ ಕಾಮೆಂಟ್ಸ್ ಇಲ್ಲಿವೆ ನೋಡಿ...

    ಪ್ರತಿಯೊಬ್ಬರೂ ನೋಡಲೇಬೇಕಾದ ಚಿತ್ರ

    ''ಮರ್ಕ್ಯೂರಿ' ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ. ಭಾವನಾತ್ಮಕ ತಿರುವು ಈ ಚಿತ್ರದಲ್ಲಿದೆ. ಕಾರ್ತಿಕ್ ಸುಬ್ಬರಾಜ್ ನಿರ್ದೇಶನ ಅಚ್ಚುಕಟ್ಟಾಗಿದೆ'' - ಕೇಶವಮೂರ್ತಿ

    ಇದು ಮಾಸ್ಟರ್ ಪೀಸ್

    ''ಈಗಷ್ಟೇ 'ಮರ್ಕ್ಯೂರಿ' ಸಿನಿಮಾ ನೋಡಿದೆ. ಇದೊಂದು ಮಾಸ್ಟರ್ ಪೀಸ್'' - ಫರ್ಹಾನ್ ಮೊಹಮ್ಮದ್

    ಒಳ್ಳೆ ಸಿನಿಮಾ

    ''ಕಾರ್ತಿಕ್ ಸುಬ್ಬರಾಜ್ ಮತ್ತೊಂದು ಒಳ್ಳೆಯ ಚಿತ್ರ ಕೊಟ್ಟಿದ್ದಾರೆ. ಈ ಥ್ರಿಲ್ಲರ್ ಸಿನಿಮಾ ನಿಮ್ಮನ್ನ ಸೀಟಿನ ತುದಿಗೆ ತಂದು ಕೂರಿಸುತ್ತೆ. ಚಿತ್ರಕ್ಕೆ ನಮ್ಮ ಕಡೆಯಿಂದ ಒಂದು ಥಮ್ಸ್ ಅಪ್'' ಎಂದಿದ್ದಾರೆ ಪ್ರೇಕ್ಷಕರೊಬ್ಬರು.

    ಸ್ಲೋ ಪಿಕಪ್

    ''ನಲವತ್ತು ನಿಮಿಷಗಳ ನಂತರ ನಿಧಾನವಾಗಿ 'ಮರ್ಕ್ಯೂರಿ' ಪಿಕಪ್ ಆಗುತ್ತೆ. ಚಿತ್ರದಲ್ಲಿ ತೀರಾ ಕಮ್ಮಿ ಥ್ರಿಲ್ಲಿಂಗ್ ಮೊಮೆಂಟ್ಸ್ ಇದೆ. ಪ್ರಭುದೇವ ಹಾಗೂ ಸನತ್ ಪರ್ಫಾಮೆನ್ಸ್ ಚೆನ್ನಾಗಿದೆ. ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಅಷ್ಟೊಂದು ಪ್ರಭಾವ ಬೀರುವುದಿಲ್ಲ. ಛಾಯಾಗ್ರಹಣ ಚೆನ್ನಾಗಿದೆ. ಸಿನಿಮಾ 'ಸೈಲೆಂಟ್' ಅನ್ನೋದು ಬಿಟ್ಟರೆ, ಅದರಲ್ಲಿ ಹೊಸತನ ಏನೂ ಇಲ್ಲ'' - ಕ್ರಿಸ್ಟೊಫರ್ ಕಣಗರಾಜ್

    ಮಾಸ್ಟರ್ ಕ್ಲಾಸ್ ಚಿತ್ರ

    ''ಮರ್ಕ್ಯೂರಿ' ಮಾಸ್ಟರ್ ಕ್ಲಾಸ್ ಸಿನಿಮಾ. ಕಾರ್ತಿಕ್ ಸುಬ್ಬರಾಜ್ ಯಾವತ್ತೂ ನಿರಾಸೆ ಮಾಡಲ್ಲ'' - ಅಶ್ವಿನ್ ಕುಮಾರ್

    ಸೈಲೆಂಟ್ ಸಿನಿಮಾ ಮಾಡುವುದು ಸುಲಭ ಅಲ್ಲ

    ''ಮರ್ಕ್ಯೂರಿ' ಒಂದೊಳ್ಳೆ ಸಿನಿಮಾ. ಸೈಲೆಂಟ್ ಮೂವಿ ಮಾಡುವುದು ಖಂಡಿತ ಸುಲಭದ ಕೆಲಸ ಅಲ್ಲ. ಈ ಚಿತ್ರಕ್ಕೆ ಕತಾರ್ ನಲ್ಲೂ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ'' - ಪ್ರಜೀಶ್.

    ಚಿತ್ರಕ್ಕೆ ಹ್ಯಾಟ್ಸ್ ಆಫ್

    'ಮರ್ಕ್ಯೂರಿ' ಚಿತ್ರವನ್ನ ನೋಡಿ ಅಫ್ಜಲ್ ಎಂಬುವರು 'ಹ್ಯಾಟ್ಸ್ ಆಫ್' ಎಂದಿದ್ದಾರೆ.

    ಬೆಸ್ಟ್ ಥ್ರಿಲ್ಲರ್ ಚಿತ್ರ

    ಈ ವರ್ಷ ತೆರೆಕಂಡ ಚಿತ್ರಗಳ ಪೈಕಿ 'ಮರ್ಕ್ಯೂರಿ' ಅತ್ಯುತ್ತಮ ಥ್ರಿಲ್ಲರ್ ಸಿನಿಮಾ

    English summary
    Read Prabhudeva starrer Karthik Subbaraj directorial Silent Movie 'Mercury' twitter review.
    Friday, April 13, 2018, 19:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X