'ಸಂಜು' ವಿಮರ್ಶೆ: ರಣ್ಬೀರ್-ರಾಜಕುಮಾರ್ ಹಿರಾನಿಯ 'ಮಾಸ್ಟರ್ ಪೀಸ್'!

'ಒನ್ ಮ್ಯಾನ್ ಮೆನಿ ಲೈವ್ಸ್' (ವ್ಯಕ್ತಿಯೊಬ್ಬ, ಜೀವನ ಹಲವು) ಎಂಬ ಟ್ಯಾಗ್ ಲೈನ್ ಹೊಂದಿರುವ ಸಿನಿಮಾ 'ಸಂಜು'. ಟ್ಯಾಗ್ ಲೈನ್ ಗೆ ತಕ್ಕ ಹಾಗೆ ಬಾಲಿವುಡ್ ನಟ ಸಂಜಯ್ ದತ್ ನಿಜ ಬದುಕಿನ ಕಷ್ಟ-ಸುಖಗಳ ಚರಿತ್ರೆಯನ್ನ ತೆರೆಮೇಲೆ ಪರಿಣಾಮಕಾರಿಯಾಗಿ ತೋರಿಸುವಲ್ಲಿ ನಿರ್ದೇಶಕ ರಾಜಕುಮಾರ್ ಹಿರಾನಿ ಯಶಸ್ವಿ ಆಗಿದ್ದಾರೆ.

Rating:
4.0/5
Star Cast: ರಣ್ಬೀರ್ ಕಪೂರ್, ಮನೀಶಾ ಕೊಯಿರಾಲ, ಪರೇಶ್ ರಾವಲ್
Director: ರಾಜಕುಮಾರ್ ಹಿರಾನಿ

ಸಂಜಯ್ ದತ್ ವಿವಾದಾತ್ಮಕ ಬದುಕಿನ ಸುತ್ತ...

ಸಂಜಯ್ ದತ್ ವಿವಾದಾತ್ಮಕ ಬದುಕಿನ ಸುತ್ತ...

ಬಾಲಿವುಡ್ ನಟ ಸಂಜಯ್ ದತ್ ರವರ ವಿವಾದಾತ್ಮಕ ನಿಜ ಬದುಕಿನ ಸುತ್ತ ಬೆಳಕು ಚೆಲ್ಲುವ ಸಿನಿಮಾ 'ಸಂಜು'. ಸಂಜಯ್ ದತ್ ಡ್ರಗ್ ಅಡಿಕ್ಟ್ ಆಗಿದ್ದು ಯಾಕೆ.? 1993 ರಲ್ಲಿ ನಡೆದ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಂಜಯ್ ದತ್ ಸಿಲುಕಿದ್ದು ಹೇಗೆ.? ಎಂಬ ಪ್ರಶ್ನೆಗಳಿಗೆ 'ಸಂಜು' ಸಿನಿಮಾದಲ್ಲಿ ಉತ್ತರ ಇದೆ. ಬೇಜವಾಬ್ದಾರಿಯಾಗಿ ವರ್ತಿಸಿದ್ದಕ್ಕೆ ಸಂಜಯ್ ದತ್ ತೆತ್ತ ಬೆಲೆ, ಎದುರಿಸಿದ ಅವಮಾನ, ಅನುಭವಿಸಿದ ಕಷ್ಟಗಳ ಸುತ್ತ 'ಸಂಜು' ಚಿತ್ರಕಥೆ ಹೆಣೆಯಲಾಗಿದೆ.

ಅಪ್ಪ-ಮಗನ ಅನುಬಂಧ

ಅಪ್ಪ-ಮಗನ ಅನುಬಂಧ

'ಸಂಜು' ಸಿನಿಮಾದಲ್ಲಿ ಸಂಜಯ್ ದತ್ (ರಣ್ಬೀರ್ ಕಪೂರ್) ಹಾಗೂ ಸುನೀಲ್ ದತ್ (ಪರೇಶ್ ರಾವಲ್) ನಡುವಿನ ಅನುಬಂಧವನ್ನ ತೋರಿಸಲಾಗಿದೆ. ಹಾಗ್ನೋಡಿದ್ರೆ, ಇಡೀ ಸಿನಿಮಾದಲ್ಲಿ ಅಪ್ಪ-ಮಗನ ಅನ್ಯೋನ್ಯತೆಗೆ ಹೆಚ್ಚು ಒತ್ತು ಕೊಡಲಾಗಿದೆ.

ಎಲ್ಲವನ್ನೂ ನಿರೀಕ್ಷೆ ಮಾಡಬೇಡಿ

ಎಲ್ಲವನ್ನೂ ನಿರೀಕ್ಷೆ ಮಾಡಬೇಡಿ

'ಸಂಜು' ಚಿತ್ರದಲ್ಲಿ ಸಂಜಯ್ ದತ್ ರವರ ಮದುವೆ ಹಾಗೂ ಅಫೇರ್ ಗಳ ಬಗ್ಗೆ ಹೆಚ್ಚು ಉಲ್ಲೇಖ ಇಲ್ಲ. ಸಿನಿಮಾದಲ್ಲಿ ಮಾನ್ಯತಾ (ದಿಯಾ ಮಿರ್ಝಾ) ಪಾತ್ರ ಕಂಡುಬಂದರೂ, ಸಂಜಯ್ ದತ್ ರವರ ಹಿಂದಿನ ಮದುವೆಗಳ ಬಗ್ಗೆ ಹೇಳುವ ಗೋಜಿಗೆ ನಿರ್ದೇಶಕರು ಹೋಗಿಲ್ಲ. ಸಂಜಯ್ ದತ್ ಮೊದಲ ಮಗಳ (ತ್ರಿಶಾಲ) ಜನನದ ಬಗ್ಗೆಯೂ ಚಿತ್ರದಲ್ಲಿ ತೋರಿಸಿಲ್ಲ.

ಕಣ್ಣೀರು ತರಿಸುತ್ತೆ

ಕಣ್ಣೀರು ತರಿಸುತ್ತೆ

ತಾಯಿ ನರ್ಗೀಸ್ ದತ್ (ಮನೀಶಾ ಕೊಯಿರಾಲ) ಕೆಲವೇ ಕ್ಷಣ ತೆರೆಮೇಲೆ ಕಾಣಿಸಿಕೊಂಡರೂ, ಅಮ್ಮ-ಮಗ ನಡುವಿನ ದೃಶ್ಯಗಳು ಕಣ್ಣಾಲಿಗಳನ್ನ ತೇವಗೊಳಿಸುತ್ತೆ.

ರಣ್ಬೀರ್ ಕಪೂರ್ ಸೂಪರ್ರೋ ಸೂಪರ್

ರಣ್ಬೀರ್ ಕಪೂರ್ ಸೂಪರ್ರೋ ಸೂಪರ್

'ಸಂಜು' ಸಿನಿಮಾದಲ್ಲಿ ರಣ್ಬೀರ್ ಕಪೂರ್ ಆಕ್ಟಿಂಗ್ ಬಗ್ಗೆ ಕೆಮ್ಮಂಗಿಲ್ಲ. ಸಂಜಯ್ ದತ್ ಪಾತ್ರಕ್ಕೆ ರಣ್ಬೀರ್ ನ್ಯಾಯ ಒದಗಿಸಿದ್ದಾರೆ. ಇಡೀ ಚಿತ್ರವನ್ನ ತಮ್ಮ ಹೆಗಲ ಮೇಲೆ ಹೊತ್ತುಕೊಂಡಿರುವ ರಣ್ಬೀರ್, ವೃತ್ತಿಜೀವನದ ಬೆಸ್ಟ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಸಂಜಯ್ ದತ್ ಗೆಳೆಯ ಕಮಲೇಶ್ ಪಾತ್ರಧಾರಿ ವಿಕ್ಕಿ ಕೌಶಲ್ ಅಭಿನಯದ ಕೂಡ ಅಮೋಘವಾಗಿದೆ.

ಉಳಿದವರ ಪರ್ಫಾಮೆನ್ಸ್ ಹೇಗಿದೆ.?

ಉಳಿದವರ ಪರ್ಫಾಮೆನ್ಸ್ ಹೇಗಿದೆ.?

ಪರೇಶ್ ರಾವಲ್, ಮನೀಶಾ ಕೊಯಿರಾಲ ರದ್ದು ಅಚ್ಚುಕಟ್ಟಾದ ಅಭಿನಯ. ಸೋನಂ ಕಪೂರ್, ಅನುಶ್ಕಾ ಶರ್ಮಾ, ದಿಯಾ ಮಿರ್ಝಾ ನಟನೆ ಚೆನ್ನಾಗಿದೆ.

ಚಿತ್ರಕಥೆಗೆ ತಕ್ಕ ಸಂಗೀತ

ಚಿತ್ರಕಥೆಗೆ ತಕ್ಕ ಸಂಗೀತ

ಎ.ಆರ್.ರೆಹಮಾನ್, ರೋಹನ್-ರೋಹನ್, ವಿಕ್ರಮ್ ಮಾನ್ಟ್ರೋಸ್ ಸಂಗೀತ ಚಿತ್ರಕಥೆಯ ಮೂಡಿಗೆ ತಕ್ಕ ಹಾಗಿದೆ. ಸಿನಿಮಾದ ಬ್ಯಾಕ್ ಗ್ರೌಂಡ್ ಸ್ಕೋರ್ ಕೂಡ ಚೆನ್ನಾಗಿದೆ.

'ರಾಜಕುಮಾರ್ ಹಿರಾನಿ'ಯ ಮಾಸ್ಟರ್ ಪೀಸ್

'ರಾಜಕುಮಾರ್ ಹಿರಾನಿ'ಯ ಮಾಸ್ಟರ್ ಪೀಸ್

ಸಂಜಯ್ ದತ್ ಬದುಕಿನ ವಿವಿಧ ಘಟ್ಟಗಳನ್ನ ತೆರೆಮೇಲೆ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ರಾಜಕುಮಾರ್ ಹಿರಾನಿ. ಅದರಲ್ಲೂ, ಸಂಜಯ್ ದತ್ ಮಾದಕ ದ್ರವ್ಯ ವ್ಯಸನಿ ಆಗಿದ್ದಾಗಿನ ಸನ್ನಿವೇಶಗಳು ಪರಿಣಾಮಕಾರಿಯಾಗಿವೆ. ಸಿನಿಮಾದ ಮೊದಲಾರ್ಧ ವೇಗವಾಗಿ ಸಾಗುತ್ತದೆ. ಆದ್ರೆ, ದ್ವಿತೀಯಾರ್ಧದಲ್ಲಿ ಸಂಜು 'ಭಯೋತ್ಪಾದಕ ಅಲ್ಲ' ಅನ್ನೋದನ್ನ ಪ್ರೂವ್ ಮಾಡಲು ಕೊಂಚ ಎಳೆಯಲಾಗಿದೆ. ಸಿನಿಮಾ ದೊಡ್ಡದು ಅಂತ ಅನಿಸಿದರೂ, ಪ್ರೇಕ್ಷಕರಿಗೆ ಎಂಟರ್ ಟೇನ್ಮೆಂಟ್ ನೀಡುವಲ್ಲಿ ರಾಜಕುಮಾರ್ ಹಿರಾನಿ ಸಕ್ಸಸ್ ಆಗಿದ್ದಾರೆ.

ಮಿಸ್ ಮಾಡಿಕೊಳ್ಳಬೇಡಿ

ಮಿಸ್ ಮಾಡಿಕೊಳ್ಳಬೇಡಿ

'ಸಂಜು' ಸಿನಿಮಾದಲ್ಲಿ ಪ್ರೇಕ್ಷಕರು ನಿರೀಕ್ಷೆ ಮಾಡಿದ್ದ ಎಷ್ಟೋ ಅಂಶಗಳು ಮಿಸ್ ಆಗಿವೆ. ಆದರೂ, ಜೀವನದಲ್ಲಿ ಸಾಕಷ್ಟು ತಪ್ಪುಗಳನ್ನು ಮಾಡಿರುವ ಸ್ಟಾರ್ ನಟನೊಬ್ಬನ ಕಥೆಯನ್ನ ತೆರೆಗೆ ತಂದಿರುವ ರೀತಿ ಚೆನ್ನಾಗಿದೆ. ಸಂಜಯ್ ದತ್ ಬದುಕಿನಿಂದ ಕಲಿಯಬೇಕಾಗಿರುವುದು ಬೇಕಾದಷ್ಟಿದೆ. ವೃತ್ತಿ ಜೀವನದಲ್ಲಿಯೇ ರಣ್ಬೀರ್ ಕಪೂರ್ ಅತ್ಯುತ್ತಮ ಅಭಿನಯ ನೀಡಿರುವುದು 'ಸಂಜು' ಸಿನಿಮಾದಲ್ಲಿಯೇ. 'ಸಂಜು' ಸ್ವಲ್ಪ ಎಳೆದಂತೆ ಭಾಸವಾದರೂ, ಮನರಂಜನೆಗೆ ಮೋಸ ಮಾಡಿಲ್ಲ. ಹೀಗಾಗಿ, 'ಸಂಜು' ಚಿತ್ರವನ್ನ ಧಾರಾಳವಾಗಿ ನೋಡಬಹುದು.

More from Filmibeat

English summary
Read Bollywood Actor Ranbir Kapoor starrer 'Sanju' review in Kannada.
Read in English: Sanju Movie Review
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X