For Quick Alerts
  ALLOW NOTIFICATIONS  
  For Daily Alerts

  ನಾ ನೋಡಿದ ಸಿನಿಮಾ 'ಅವನೇ ಶ್ರೀಮನ್ನಾರಾಯಣ' ವಿಮರ್ಶೆ: ಚರಿತ್ರೆ ಸೃಷ್ಟಿಸೋ ಮೇಕಿಂಗ್, ಡೋಂಟ್ ಮಿಸ್ ಇಟ್

  |

  ಮೇಕಿಂಗ್ ನಲ್ಲಿ ಪ್ರೇಕ್ಷಕರ ಪ್ರಶಂಸೆಗಳಿಸಿದ ಉಗ್ರಂ, ಟಗರು, ಮಫ್ತಿ, ಕೆಜಿಎಫ್, ಸಾಲಿಗೆ ಸೇರುವ ಇನ್ನೊಂದು ಸಿನಿಮಾ ಸಚಿನ್ ನಿರ್ದೇಶನದ ಬಹುನಿರೀಕ್ಷಿತ ಅವನೇ ಶ್ರೀಮನ್ನಾರಾಯಣ ಚಿತ್ರ.

  ಅವನೇ ಶ್ರೀಮನ್ನಾರಾಯಣ ಸಿನಿಮಾದ ಪ್ರತಿಯೊಂದು ಫ್ರೇಮ್ ನಲ್ಲೂ ಚಿತ್ರತಂಡದ ಪರಿಶ್ರಮ ಎದ್ದು ಕಾಣುತ್ತದೆ. ಸಿಂಪಲ್ ಸ್ಟೋರಿ ಲೈನ್ ಅನ್ನು ಹೇಗೆ ಡಿಫರೆಂಟ್ ಆಗಿ ತೆರೆಮೇಲೆ ತರಬಹುದು ಎನ್ನುವುದಕ್ಕೆ ಕೊಡಬಹುದಾದ ಉದಾಹರಣೆ ಈ ಚಿತ್ರ ಎನ್ನುವುದಕ್ಕೆ ಅಡ್ದಿಯಿಲ್ಲ.

  ಚಿತ್ರ ವಿಮರ್ಶೆ: ದುಷ್ಟಕೂಟದ ನಡುವೆ ನಾರಾಯಣನ ವಿನೋದ ಲೀಲೆಚಿತ್ರ ವಿಮರ್ಶೆ: ದುಷ್ಟಕೂಟದ ನಡುವೆ ನಾರಾಯಣನ ವಿನೋದ ಲೀಲೆ

  ಹಾಗಂತ, ನಿರ್ದೇಶಕರು ಚಿತ್ರದಲ್ಲಿ ಎಲ್ಲೂ ಎಡವಿಲ್ಲ ಎಂದು ಹೇಳಲು ಬರುವುದಿಲ್ಲ. ಕೆಲವೊಂದು, ಪ್ರಶ್ನೆಗಳಿಗೆ ಉತ್ತರ ಕೊಡುವ ವಿಚಾರದಲ್ಲಿ ನಿರ್ದೇಶಕರೂ ಗೊಂದಲದಲ್ಲಿದ್ದಾರಾ, ಗೊತ್ತಿಲ್ಲ? ಆದರೆ, ಇದು, ಒಟ್ಟಾರೆಯಾಗಿ, ಚಿತ್ರದ ಔಟ್ ಪುಟ್ ಗೆ ಅಷ್ಟಾಗಿ ಎಫೆಕ್ಟ್ ಕೊಡುವುದಿಲ್ಲ.

  'ಶ್ರೀಮನ್ನಾರಾಯಣ'ನನ್ನು ನೋಡಿ ದೀರ್ಘ ವಿಮರ್ಶೆ ಮಾಡಿದ ನಟಿ ಆಶಿಕಾ ರಂಗನಾಥ್'ಶ್ರೀಮನ್ನಾರಾಯಣ'ನನ್ನು ನೋಡಿ ದೀರ್ಘ ವಿಮರ್ಶೆ ಮಾಡಿದ ನಟಿ ಆಶಿಕಾ ರಂಗನಾಥ್

  ನಾಯಕನ ಇಂಟ್ರಡಕ್ಷನ್ ಸೀನ್ ನಿಂದು ಹಿಡಿದು, ಹಲವು ದೃಶ್ಯಗಳು ವಿಭಿನ್ನತೆಯಿಂದ ಕೂಡಿದೆ. ಚಿತ್ರಕ್ಕಾಗಿ ಕಾಲ್ಪನಿಕವಾಗಿ ಸೃಷ್ಟಿಸಿರುವ ಅಮರಾವತಿ ಎನ್ನುವ ಊರಿನಲ್ಲಿ, ಹಾಕಿರುವ ಎಲ್ಲಾ ಸೆಟ್ ಗಳು ತಾಜಾತನದಿಂದ ಕೂಡಿದ್ದು ಚಿತ್ರಕ್ಕೆ ಪೂರಕವಾಗಿದೆ.

  ಇಬ್ಬರು ಮಕ್ಕಳಾದ ಜಯರಾಮ ಮತ್ತು ತುಕಾರಾಮ

  ಇಬ್ಬರು ಮಕ್ಕಳಾದ ಜಯರಾಮ ಮತ್ತು ತುಕಾರಾಮ

  ಅಭೀರ ಸಂಸ್ಥಾನದ ರಾಮಚಂದ್ರನ ಇಬ್ಬರು ಮಕ್ಕಳಾದ ಜಯರಾಮ ಮತ್ತು ತುಕಾರಾಮ ನಡುವೆ 'ಲೂಟಿ' ಪತ್ತೆಗಾಗಿ ನಡೆಯುವ ಸಹೋದರರ ಕಲಹ, ಅಲ್ಲಿಗೆ, ಪೊಲೀಸ್ ಅಧಿಕಾರಿಯಾಗಿ ಎಂಟ್ರಿ ಕೊಡುವ ನಾಯಕ, ಅಲ್ಲಿಂದ ಲೂಟಿಗಾಗಿ ಕಳ್ಳ-ಪೊಲೀಸ್ ನಡುವೆ ನಡೆಯುವ ಆಟವೇ ಚಿತ್ರದ ಕಥಾಹಂದರ.

  ಅಮರಾವತಿ ಎನ್ನುವ ಸೃಷ್ಟಿಯೇ ಒಂದು ಅದ್ಭುತ

  ಅಮರಾವತಿ ಎನ್ನುವ ಸೃಷ್ಟಿಯೇ ಒಂದು ಅದ್ಭುತ

  ಚಿತ್ರದಲ್ಲಿನ ಅಮರಾವತಿ ಎನ್ನುವ ಸೃಷ್ಟಿಯೇ ಒಂದು ಅದ್ಭುತ. ಚಿತ್ರದ ಕಲಾನಿರ್ದೇಶಕರ ಈ ಪ್ರಯತ್ನಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸಲೇ ಬೇಕು. ತಮ್ಮ ಕಲಾಕುಸುರಿಯಿಂದ ಚಿತ್ರಕ್ಕೆ ಹೊಸ ಮೆರುಗನ್ನು ಇವರು ನೀಡಿದ್ದಾರೆ. ಹಾಗೆಯೇ, ಚಿತ್ರದ ಮೈನಸ್ ಪಾಯಿಂಟ್ ಏನಂದರೆ, ಚಿತ್ರದ ಅವಧಿ. ಇಂಟರ್ವಲ್ ನಂತರ, ಕೆಲವೊಂದು ದೃಶ್ಯಕ್ಕೆ ಸಂಕಲನಕಾರರೂ ಆಗಿರುವ ನಿರ್ದೇಶಕರು ಸಚಿನ್ ಕತ್ತರಿ ಪ್ರಯೋಗಿಸಬಹುದಿತ್ತು.

  ತಾಂತ್ರಿಕ ವರ್ಗದ ಪರ್ಫೆಕ್ಟ್ ಕೆಲಸ

  ತಾಂತ್ರಿಕ ವರ್ಗದ ಪರ್ಫೆಕ್ಟ್ ಕೆಲಸ

  ಚಿತ್ರದ ಎಲ್ಲಾ ವರ್ಗವು ತಮ್ಮತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ, ಸಿನಿಮಾವನ್ನು ಇನ್ನೊಂದು ಮಜಲಿಗೆ ತೆಗೆದುಕೊಂಡು ಹೋಗಲು ಕಾರಣರಾಗಿದ್ದಾರೆ. ಅದರಲ್ಲೂ, ಸಿನಿಮಾಟೋಗ್ರಾಫರ್ ಕರ್ಮ್ ಚಾವ್ಲಾ ತುಂಬಾ ಕಣ್ಮನ ಸೆಳೆಯುವಂತೆ ಸೆರೆ ಹಿಡಿದಿದ್ದಾರೆ. ಚರಣ್ ರಾಜ್ ನೀಡಿದ ಸಿನಿಮಾದ ಎರಡು ಹಾಡುಗಳು ಈಗಾಗಲೇ ಭರ್ಜರಿಯಾಗಿ ಹಿಟ್ ಆಗಿದೆ.

  ಬಿಜಿಎಂ - ಅಜನೀಶ್ ಲೋಕನಾಥ್ ಎನ್ನುವ ಪ್ರತಿಭೆ

  ಬಿಜಿಎಂ - ಅಜನೀಶ್ ಲೋಕನಾಥ್ ಎನ್ನುವ ಪ್ರತಿಭೆ

  ಈ ವಿಷಯವನ್ನು ಒತ್ತಿಒತ್ತಿ ಹೇಳಬೇಕಿದೆ. ಅದು, ಚಿತ್ರವನ್ನು ಹಾಲಿವುಡ್ ಲೆವೆಲಿಗೆ ತೆಗೆದುಕೊಂಡು ಹೋಗುವುದು ಚಿತ್ರದ ಹಿನ್ನಲೆ ಸಂಗೀತ. ಈ ಹಿಂದೆಯೇ ತಾನೆಂತಹ ಪ್ರತಿಭೆ ಎನ್ನುವುದನ್ನು ನಿರೂಪಿಸಿರುವ ಅಜನೀಶ್ ಲೋಕನಾಥ್, ಈ ಚಿತ್ರಕ್ಕೆ ನೀಡಿದ ಬಿಜಿಎಂ, ಒಂದೊಂದು ಸನ್ನಿವೇಶವನ್ನು ಇನ್ನೊಂದು ಲೆವೆಲಿಗೆ ತೆಗೆದುಕೊಂಡು ಹೋಗಲು (ಚಿತ್ರದಲ್ಲಿ ಅಜನೀಶ್) ಕಾರಣವಾಗುತ್ತದೆ.

  ಬಾಲಾಜಿ ಮನೋಹರ್ (ಜಯರಾಮ) ಮತ್ತು ಪ್ರಮೋದ್ ಶೆಟ್ಟಿ (ತುಕಾರಾಂ)

  ಬಾಲಾಜಿ ಮನೋಹರ್ (ಜಯರಾಮ) ಮತ್ತು ಪ್ರಮೋದ್ ಶೆಟ್ಟಿ (ತುಕಾರಾಂ)

  ಚಿತ್ರದ ಇಬ್ಬರು ಸಹೋದರರ ಪಾತ್ರಧಾರಿಗಳಾದ ಬಾಲಾಜಿ ಮನೋಹರ್ (ಜಯರಾಮ) ಮತ್ತು ಪ್ರಮೋದ್ ಶೆಟ್ಟಿ (ತುಕಾರಾಂ) ಅದ್ಭುತವಾಗಿ ನಟಿಸಿದ್ದಾರೆ. ಅದರಲ್ಲೂ, ಜಯರಾಮ ಪಾತ್ರಧಾರಿಯಂತೂ ಪರಕಾಯ ಪ್ರವೇಶ ಮಾಡಿದ್ದಾರೆ. ಮಾತಿಲ್ಲದೇ ರಿಷಬ್ ಶೆಟ್ಟಿ ಗಮನ ಸೆಳೆಯುತ್ತಾರೆ. ಇನ್ನು, ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ (ಬ್ಯಾಂಡ್ ಮಾಸ್ಟರ್, ಸಲ್ಮಾನ್ ಅಹಮದ್, ಯೋಗರಾಜ್ ಭಟ್ ಉತ್ತಮವಾಗಿ ನಟಿಸಿದ್ದಾರೆ.

  ಚರಿತ್ರೆ ಸೃಷ್ಟಿಸೋ ಮೇಕಿಂಗ್, ಡೋಂಟ್ ಮಿಸ್ ಇಟ್

  ಚರಿತ್ರೆ ಸೃಷ್ಟಿಸೋ ಮೇಕಿಂಗ್, ಡೋಂಟ್ ಮಿಸ್ ಇಟ್

  ಚಿತ್ರದ ನಾಯಕಿ ಶಾನ್ವಿ ಶ್ರೀವಾಸ್ತವ್ ಗೆ ಇದೊಂದು ಹೊಸರೀತಿಯ ಪಾತ್ರ ಮತ್ತು ಅದನ್ನು ಚೆನ್ನಾಗಿ ನಿಭಾಯಿಸಿದ್ದಾರೆ ಕೂಡಾ... ಮೂರು ವರ್ಷಗಳ ಲಾಂಗ್ ಗ್ಯಾಪ್ ನಂತರ, ತೆರೆಮೇಲೆ ಬಂದ ರಕ್ಷಿತ್ ಶೆಟ್ಟಿ, ಸೀರಿಯಸ್ ಮತ್ತು ಕಾಮಿಡಿ ಪಾತ್ರಗಳಲ್ಲಿ ಉತ್ತಮವಾಗಿ ನಟಿಸಿದ್ದಾರೆ. ಚಿತ್ರದ ನಿರ್ದೇಶಕ ಸಚಿನ್, ಮೂರು ದಿನಗಳ ಹಿಂದೆ ಒಂದು ಮಾತನ್ನು ಹೇಳಿದ್ದರು. ತಿಂಗಳಾನುಗಟ್ಟಲೆ ಎಡಿಟಿಂಗ್ ರೂಂನಿಂದ ಹೊರಬಂದಿಲ್ಲ ಎಂದು. ಅವರ ಪ್ರಯತ್ನ ಚಿತ್ರದ ಎಲ್ಲಾ ಸನ್ನಿವೇಶಗಳಲ್ಲಿ ಕಾಣಿಸುತ್ತದೆ. ಒಟ್ಟಾರೆಯಾಗಿ ರೆಟ್ರೋ ಶೈಲಿಯಲ್ಲಿ ಸಾಗುವ ಸಿನಿಮಾ ಇದಾಗಿದೆ. ಡೋಂಟ್ ಮಿಸ್ ಇಟ್.

  English summary
  Readers Review Rakshit Shetty Starer, Sachin Directed Avane Srimannarayana, Worth Watch It. Pushkara Mallikarjunaiah Is The Producer Of This Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X