twitter
    For Quick Alerts
    ALLOW NOTIFICATIONS  
    For Daily Alerts

    ನಾ ನೋಡಿದ ಸಿನಿಮಾ 'ದಬಾಂಗ್' ವಿಮರ್ಶೆ: ಕಿಚ್ಚನೇ ಚಿತ್ರದ ಉಸಿರೇ ಉಸಿರು..

    |

    ಭಾರೀ ನಿರೀಕ್ಷೆ ಹುಟ್ಟುಹಾಕಿದ್ದ ಸಲ್ಮಾನ್ ಖಾನ್, ಸೋನಾಕ್ಷಿ ಸಿನ್ಹಾ, ಸುದೀಪ್, ಮುಖ್ಯಭೂಮಿಕೆಯ ದಬಾಂಗ್ ಸರಣಿಯ 'ದಬಾಂಗ್ - 3' ಚಿತ್ರ ಕನ್ನಡವೂ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿದೆ.

    ಚಿತ್ರದ ಪ್ರಮುಖ ವಿಲನ್ ಆಗಿ ಕಿಚ್ಚ ಸುದೀಪ್ ಅಭಿನಯಿಸುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಈ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರನ್ನು ಖುಷಿಗೊಳಿಸುವಲ್ಲಿ ಯಶಸ್ವಿಯಾಗಿದೆಯೇ ಎಂದರೆ, ಅದಕ್ಕೆ 'ಹೌದು' ಎನ್ನುವುದು ಕಷ್ಟ.

    Dabanng-3: ಕನ್ನಡದಲ್ಲಿ ಮ್ಯಾಜಿಕ್ ಮಾಡಿದ 'ಚುಲ್ ಬುಲ್ ಪಾಂಡೆ'Dabanng-3: ಕನ್ನಡದಲ್ಲಿ ಮ್ಯಾಜಿಕ್ ಮಾಡಿದ 'ಚುಲ್ ಬುಲ್ ಪಾಂಡೆ'

    ದಬಾಂಗ್ ಸರಣಿಯ ಎಲ್ಲಾ ಸಿನಿಮಾಗಳಲ್ಲಿ ನಾಯಕನದ್ದು ಕಾಮಿಡಿ ಮಿಕ್ಸ್ ಪೊಲೀಸ್ ಪಾತ್ರವಾಗಿರುವುದರಿಂದ, ಇಲ್ಲೂ ಸಲ್ಮಾನ್ ಖಾನ್ ಅವರದ್ದು ಅದೇ ರೋಲ್.

    4ನೇ ದಿನ ದಬಾಂಗ್ ಚಿತ್ರಕ್ಕೆ ಭಾರಿ ಹಿನ್ನಡೆ: ದಿಢೀರ್ ಕುಸಿದ ಕಲೆಕ್ಷನ್4ನೇ ದಿನ ದಬಾಂಗ್ ಚಿತ್ರಕ್ಕೆ ಭಾರಿ ಹಿನ್ನಡೆ: ದಿಢೀರ್ ಕುಸಿದ ಕಲೆಕ್ಷನ್

    ಚಿತ್ರದ ಕಥೆ ಮತ್ತು ಚಿತ್ರಕಥೆ ಸಲ್ಮಾನ್ ಖಾನ್ ಅವರದ್ದೇ ಆಗಿರುವುದರಿಂದ, ತಮ್ಮ ಫ್ಯಾನ್ಸ್ ಗಳನ್ನು ಸಂತೃಪ್ತಿಗೊಳಿಸಲು ಬೇಕಾಗಿರುವ ಎಲ್ಲಾ ಎಲಿಮೆಂಟ್ಸ್ ಗಳನ್ನು ಚಿತ್ರದಲ್ಲಿ ಬೇಕಾಬಿಟ್ಟಿ ತೂರಲಾಗಿದೆ.

    ಮೈನಸ್ ಪಾಯಿಂಟ್ ಗಳೇ ಹೆಚ್ಚಾಗಿ ಎದ್ದುಎದ್ದು ಕಾಣುತ್ತದೆ

    ಮೈನಸ್ ಪಾಯಿಂಟ್ ಗಳೇ ಹೆಚ್ಚಾಗಿ ಎದ್ದುಎದ್ದು ಕಾಣುತ್ತದೆ

    ಚಿತ್ರದಲ್ಲಿನ ಪ್ಲಸ್ ಪಾಯಿಂಟ್ ಹೇಳುವುದಕ್ಕಿಂತ ಹೆಚ್ಚಾಗಿ ಮೈನಸ್ ಪಾಯಿಂಟ್ ಗಳೇ ಹೆಚ್ಚಾಗಿ ಎದ್ದುಎದ್ದು ಕಾಣುತ್ತದೆ. ಚಿತ್ರ ಇಂಟರ್ವಲ್ ಬರುವ ತನಕ ಗೇರ್ ಬದಲಿಸಿಕೊಳ್ಳುವುದೇ ಇಲ್ಲ. ಮೊದಲಾರ್ಥದಲ್ಲಿ ಪ್ರೇಕ್ಷಕ ಸ್ವಲ್ಪ ಅಲರ್ಟ್ ಆಗುತ್ತಾನೆ ಎಂದರೆ ಸ್ಕ್ರೀನ್ ಮೇಲೆ ಅಭಿನಯ ಚಕ್ರವರ್ತಿ ಬಂದಿದ್ದಾನೆ ಎಂದರ್ಥ.

    ಚಿತ್ರದ ಬಿಜಿಎಂ ನಲ್ಲಿ ಕೂಡಾ ಅಂತಹ ವಿಶೇಷತೆಯಿಲ್ಲ

    ಚಿತ್ರದ ಬಿಜಿಎಂ ನಲ್ಲಿ ಕೂಡಾ ಅಂತಹ ವಿಶೇಷತೆಯಿಲ್ಲ

    ಒಂದಷ್ಟು ಫೈಟ್, ಹಾಡುಗಳು, ಒಂದು ಐಟಂ ಸಾಂಗ್ ಬೇಕೆನ್ನುವ ಸಿದ್ದಸೂತ್ರವನ್ನು ನಿರ್ದೇಶಕರು ಪಾಲಿಸಿದಂತಿದೆ. ಮೊದಲಾರ್ಧ ಮೊದಲೇ ಆಮೆಗತಿಯಲ್ಲಿ ಸಾಗುವ ಚಿತ್ರಕಥೆಯ ನಡವೆ ಅನಾವಶ್ಯಕವಾಗಿ ಹಾಡುಗಳನ್ನು ತೂರಲಾಗಿದೆ. ಚಿತ್ರದ ಬಿಜಿಎಂ ನಲ್ಲಿ ಕೂಡಾ ಅಂತಹ ವಿಶೇಷತೆಯಿಲ್ಲ.

    ಸಲ್ಮಾನ್ ಖಾನ್ ಉತ್ತಮವಾಗಿ ಅಭಿನಯಿಸಿದ್ದಾರೆ

    ಸಲ್ಮಾನ್ ಖಾನ್ ಉತ್ತಮವಾಗಿ ಅಭಿನಯಿಸಿದ್ದಾರೆ

    ಇನ್ನು ಚಿತ್ರದ ಸಾಹಸ ದೃಶ್ಯಗಳಲ್ಲಿ ಅಂತಹ ಬೆನ್ನುತಟ್ಟಬಹುದಾಂತಹ ಅಂಶಗಳಿಲ್ಲ. ಕಾಮಿಡಿ ಮತ್ತು ಸೀರಿಯಸ್ ದೃಶ್ಯಗಳಲ್ಲಿ ಸಲ್ಮಾನ್ ಖಾನ್ ಉತ್ತಮವಾಗಿ ಅಭಿನಯಿಸಿದ್ದಾರೆ. ಆದರೆ, ಯಾತಕ್ಕಾಗಿ ಅವರಿಂದ ಬಲವಂತವಾಗಿ ಡ್ಯಾನ್ಸ್ ಮಾಡಿಸಿದ್ದಾರೋ ಎನ್ನುವುದಿಲ್ಲಿ ಪ್ರಶ್ನೆ, ಬಹುಷಃ ನಿರ್ದೇಶಕ ಪ್ರಭುದೇವ ಉತ್ತಮ ಡ್ಯಾನ್ಸರ್ ಆಗಿರುವುದರಿಂದ ಈ ಪ್ರಯತ್ನಕ್ಕೆ ಕೈಹಾಕಿರಬಹುದು.

    ಸೋನಾಕ್ಷಿ ಸಿನ್ಹಾ ಉತ್ತಮ ನಟನೆ

    ಸೋನಾಕ್ಷಿ ಸಿನ್ಹಾ ಉತ್ತಮ ನಟನೆ

    ಇನ್ನು, ಸೋನಾಕ್ಷಿ ಸಿನ್ಹಾ, ಅರ್ಬಾಜ್ ಖಾನ್,ಪ್ರಮೋದ್ ಖನ್ನಾ, ಮಹೇಶ್ ಮಂಜ್ರೇಕರ್ ಮುಂತಾದವರು ಕೊಟ್ಟ ಪಾತ್ರವನ್ನು ಸರಿಯಾಗಿ ನಿಭಾಯಿಸಿದ್ದಾರೆ. ಚಿತ್ರದ ಸೆಕೆಂಡ್ ಹಿರೋಯಿನ್ ಸಾಯಿ ಮಂಜ್ರೇಕರ್, ಸ್ವಲ್ಪಹೊತ್ತು ಸ್ಕ್ರೀನ್ ನಲ್ಲಿ ಬಂದರೂ ಕ್ಯೂಟ್ ಕ್ಯೂಟ್ ಆಗಿ ಅಭಿನಯಿಸಿದ್ದಾರೆ. ಮುದ್ದುಮುದ್ದಾಗಿ ಕಾಣಿಸುತ್ತಾರೆ ಕೂಡಾ.. 'ಸ್ವಾಗತ್ ತೊ ಕರೋ ಹಮಾರಾ' ಎನ್ನುವ ಡೈಲಾಗ್ ಗಳೂ ಚಿತ್ರದಲ್ಲಿ ಅಂತದ್ದೇನೂ ಇಲ್ಲ.

    ನೆನಪಿನಲ್ಲಿ ಏನಾದರೂ ಉಳಿಯುತ್ತೆ ಎಂದರೆ ಅದು ನಮ್ಮ ಸುದೀಪ್ ಅಭಿನಯ

    ನೆನಪಿನಲ್ಲಿ ಏನಾದರೂ ಉಳಿಯುತ್ತೆ ಎಂದರೆ ಅದು ನಮ್ಮ ಸುದೀಪ್ ಅಭಿನಯ

    ಚಿತ್ರ ನೋಡಿ ಹೊರಬಂದ ಮೇಲೆ, ನೆನಪಿನಲ್ಲಿ ಏನಾದರೂ ಉಳಿಯುತ್ತೆ ಎಂದರೆ ಅದು ನಮ್ಮ ಸುದೀಪ್ ಅಭಿನಯ. ನಾಯಕನಿಗೆ, ಸರಿಸಮಾನವಾಗಿ ಎನ್ನುವಂತೆ ಸ್ಕ್ರೀನ್ ಪ್ರೆಸೆನ್ಸ್ ಸುದೀಪ್ ಗೆ ಸಿಕ್ಕಿದೆ. ಸಿಕ್ಕ ಅವಕಾಶವನ್ನು ಚೆನ್ನಾಗಿ ಎನ್ನುವುದಕ್ಕಿಂತ, ಸುದೀಪ್ ಭರ್ಜರಿಯಾಗಿ ಬಳಸಿಕೊಂಡಿದ್ದಾರೆ. ಒಟ್ಟಾರೆಯಾಗಿ, ದಬಾಂಗ್ - 3 ಚಿತ್ರಕ್ಕೆ ಕಿಚ್ಚನೇ ಉಸಿರೇ..ಉಸಿರು..

    English summary
    Readers Review: Salman Khan, Kichcha Sudeep, Sonakshi Sinha Starer 'Dabangg 3'.
    Wednesday, December 25, 2019, 14:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X