»   » ತುಳು ಸಿನಿಮಾಕ್ಕೆ ಹೊಸ ಆಯಾಮ: ರಂಗ್ ಚಿತ್ರವಿಮರ್ಶೆ

ತುಳು ಸಿನಿಮಾಕ್ಕೆ ಹೊಸ ಆಯಾಮ: ರಂಗ್ ಚಿತ್ರವಿಮರ್ಶೆ

By: ರಾಜೇಶ್ ಕಾಮತ್
Subscribe to Filmibeat Kannada

1971ರಲ್ಲಿ ಬಿಡುಗಡೆಯಾದ ಎನ್ನ ತಂಗಡಿ (ನನ್ನ ತಂಗಿ) ಚಿತ್ರದಿಂದ ಇತ್ತೀಚೆಗೆ ಬಿಡುಗಡೆಯಾದ 'ರಂಗ್' ಚಿತ್ರದ ವರೆಗೆ ತುಳು ಸಿನಿಮಾ ರಂಗ ವೈವಿಧ್ಯಮಯ ಚಿತ್ರಗಳನ್ನು ನೀಡುತ್ತಾ ಬಂದಿದೆ.

1993ರಲ್ಲಿ ರಿಚರ್ಡ್ ಕ್ಯಾಸ್ಟಿಲಿನೋ ನಿರ್ದೇಶನದ 'ಬಂಗಾರ್ ಪಟ್ಲೇರ್' ಚಿತ್ರ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡು ತುಳು ಸಿನಿಮಾದ ಮಾರುಕಟ್ಟೆಯ ಬುನಾದಿಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿತ್ತು.

ಸುಮಾರು ಒಂದು ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡ ಸೂಪರ್ ಹಿಟ್ ನಾಟಕ 'ಒರಿಯರ್ದೊರಿ ಅಸಲ್', ನಂತರ ಹಾ.ಸು ರಾಜಶೇಖರ್ ನಿರ್ದೇಶನದಲ್ಲಿ ಸಿನಿಮಾ ರೂಪದಲ್ಲಿ ಬಂದು ಅಲ್ಲೂ ಯಶಸ್ವಿ ಕಂಡಿತ್ತು. (ವಿಮರ್ಶೆ: 'ರಂಗ್' ಕುಟುಂಬಸಮೇತ ನೋಡುವ ಚಿತ್ರ)

ಆಗಸ್ಟ್ ಎಂಟರಂದು ಬಿಡುಗಡೆಯಾದ ದೇವದಾಸ್ ಕುಮಾರ್ ಪಾಂಡೇಶ್ವರ್ ನಿರ್ಮಾಣದ 'ರಂಗ್ 'ಚಿತ್ರ ತುಳು ಸಿನಿಮಾರಂಗಕ್ಕೆ ಹೊಸ ಆಯಾಮ ನೀಡಲಿದೆ ಎನ್ನುವುದು ಚಿತ್ರ ವೀಕ್ಷಿಸಿದವರ ಒಕ್ಕೂರಿಲಿನ ಅಭಿಪ್ರಾಯ.

ತೆಲುಗು ಮೂಲದ ಖ್ಯಾತ ಬಾಲಿವುಡ್ ಹಾಸ್ಯ ಕಲಾವಿದ ಜಾನಿ ಲೀವರ್, ರಂಗ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ತುಳುವಿನಲ್ಲೇ ಸಂಭಾಷಣೆ ನಡೆಸಿ ಸೈ ಎನಿಸಿಕೊಂಡಿದ್ದಾರೆ ಜಾನಿ ಲೀವರ್. ರಂಗ್ ಚಿತ್ರದ ವಿಮರ್ಶೆ ಸ್ಲೈಡಿನಲ್ಲಿ...

ಚಿತ್ರದ ತಾರಾಗಣ ಮತ್ತು ತಂತ್ರಜ್ಞರು

ತಾರಾಗಣದಲ್ಲಿ: ಅರ್ಜುನ್ ಕಾಪಿಕಾಡ್, ದೀಕ್ಷಿತಾ ಆಚಾರ್ಯ, ದೇವದಾಸ್ ಕಾಪಿಕಾಡ್, ನವೀನ್ ಪಡೀಲ್, ಭೋಜರಾಜ್ ವಾಮಂಜೂರು , ಗೋಪಿನಾಥ್ ಭಟ್, ಇತರರು
ಕ್ಯಾಮರಾ : ಸಂದೀಪ್
ಎಡಿಟಿಂಗ್: ಇ ಎಸ್ ಈಶ್ವರ್
ಸಂಗೀತ : ಮಣಿಕಾಂತ್ ಕದ್ರಿ
ನಿರ್ಮಾಪಕರು : ದೇವದಾಸ್ ಕುಮಾರ್ ಪಾಂಡೇಶ್ವರ್
ಕಾರ್ಯಕಾರಿ ನಿರ್ಮಾಪಕರು: ಸುತ್ಪಾಲ್ ಪೊಳಲಿ
ನಿರ್ದೇಶನ: ಸುಹಾನ್ ಪ್ರಸಾದ್, ವಿಸ್ಮಯ ವಿನಾಯಕ್


(ಚಿತ್ರದಲ್ಲಿ ಗೋಪಿನಾಥ್ ಭಟ್)

ಚಿತ್ರದ ಕಥೆಯ ಬಗ್ಗೆ

ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿಗೆ ತನ್ನ ಸ್ನೇಹಿತನ ಜೊತೆಗೆ ಸೇರುವ ನಾಯಕ ಸಿದ್ದಾರ್ಥ್ ಗೆ (ಅರ್ಜುನ್ ಕಾಪಿಕಾಡ್) ಹಿಂದಿನ ಕಹಿ ಘಟನೆಯೊಂದು ಕಾಡುತ್ತಿರುತ್ತದೆ. ಆದಾಗ್ಯೂ, ಕಾಲೇಜಿನಲ್ಲಿ ನಾಯಕಿ ಪೂನಂ (ದೀಕ್ಷಿತಾ ಆಚಾರ್ಯ) ಮೇಲೆ ನಾಯಕನಿಗೆ ಪ್ರೇಮಾಂಕುರವಾಗುತ್ತದೆ. (ಚಿತ್ರದಲ್ಲಿ ಅರ್ಜುನ್ ಕಾಪಿಕಾಡ್)

ಮಧ್ಯಂತರದ ನಂತರ ಇನ್ನೂ ಕುತೂಹಲ ಮೂಡಿಸುವ ಚಿತ್ರ

ನಾಯಕ ಅನುಭವಿಸುತ್ತಿರುವ ಕಹಿ ಘಟನೆ ಮಧ್ಯಂತರದ ನಂತರ ಮತ್ತೆ ಮತ್ತೆ ಪುನಾರವರ್ತನೆಗೊಂಡು ಚಿತ್ರ ಅತ್ಯಂತ ಕುತೂಹಲ ಘಟ್ಟಕ್ಕೆ ತೆರಳುತ್ತದೆ. ನಾಯಕನಿಗೆ ಕಾಡುತ್ತಿದ್ದ ಆ ಸಮಸ್ಯೆಗೆ ಕಾರಣವೇನು? ಘಟನೆಯಿಂದ ಹೊರಬರಲು ನಾಯುಕನಿಗೆ ನಾಯಕಿ ಸಹಕರಿಸುತ್ತಾಳಾ? ಪ್ರೀತಿಸಿದ ಹುಡುಗಿ ನಾಯಕನಿಗೆ ಸಿಗುತ್ತಾಳಾ ಎನ್ನುವುದೇ ಚಿತ್ರದ ಜೀವಾಳ. (ಚಿತ್ರದಲ್ಲಿ ಭೋಜರಾಜ್ ವಾಮಂಜೂರು, ದೇವದಾಸ್ ಕಾಪಿಕಾಡ್)

ಕಲಾವಿದರ ನಟನೆಯ ಬಗ್ಗೆ

ಹಾಸ್ಯ ನಟ ದೇವದಾಸ್ ಕಾಪಿಕಾಡ್ ಪುತ್ರ ಮತ್ತು ಚಿತ್ರದ ನಾಯಕ ಅರ್ಜುನ್ ಕಾಪಿಕಾಡಿಗೆ ಉತ್ತಮ ಭವಿಷ್ಯವಿದೆ. ಚಿತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ರೀತಿ ಪ್ರಶಂನಾರ್ಹ. ಇನ್ನು ಪ್ರತಿಭಾನ್ವಿತ ದೇವದಾಸ್ ಕಾಪಿಕಾಡ್, ನವೀನ್ ಪಡೀಲ್, ವಾಮಂಜೂರು, ವಿಸ್ಮಯ ವಿನಾಯಕ್, ಗೋಪಿನಾಥ್ ಭಟ್ ಮುಂತಾದವರು ತಮಗಿರುವ ನಟನಾ ಶಕ್ತಿಯನ್ನು ಮತ್ತೊಮ್ಮೆ ತೋರಿಸಿದ್ದಾರೆ. (ಚಿತ್ರದಲ್ಲಿ ಜಾನಿ ಲೀವರ್ ಮತ್ತು ಸಂಗಡಿಗರು)

ಲಾಸ್ಟ್ ಬಟ್ ನಾಟ್ ಲೀಸ್ಟ್

ಚಿತ್ರದಲ್ಲಿ ಗಮನಸೆಳೆಯುವ ಅಂಶವೆಂದರೆ ಸಂದೀಪ್ ಅವರ ಸಿನಿಮಾಟೋಗ್ರಾಫಿ. ಈಶ್ವರ್ ಅವರ ಎಡಿಟಿಂಗ್, ಸನ್ನಿವೇಶಕ್ಕೆ ತಕ್ಕಂತೆ ಮಣಿಕಾಂತ್ ಕದ್ರಿ ಅವರ ಸಂಗೀತ ಚಿತ್ರಕ್ಕೆ ಮತ್ತಷ್ಟು ಮೆರುಗು ತಂದಿದೆ. 'ಪ್ರೇಮನಾಥೆ, ಪಾಸಾತೆ' ಎನ್ನುವ ಹಾಡು ಭಾರೀ ಜನಪ್ರಿಯಗೊಂಡಿದೆ. ನಿರ್ದೇಶಕದ್ವಯರಾದ ಸುಹಾನ್ ಪ್ರಸಾದ್, ವಿಸ್ಮಯ ವಿನಾಯಕ್ ಒಂದು ಸುಂದರ ಕೌಟುಂಬಿಕ ಚಿತ್ರವನ್ನು ಚಿತ್ರಪ್ರೇಮಿಗಳಿಗೆ ಮುಂದಿಟ್ಟಿದ್ದಾರೆ. ಗುಡ್ ಜಾಬ್ (ಚಿತ್ರದಲ್ಲಿ ನವೀನ್ ಪಡೀಲ್)

English summary
Readers Review - Tulu Movie Rang, Directed by Suhana Prasad and Vismaya Nayak. Arjun Kapikad and Deekshita Acharya in lead role. 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada