For Quick Alerts
  ALLOW NOTIFICATIONS  
  For Daily Alerts

  ಕನ್ನಡ ಚಿತ್ರರಂಗಕ್ಕೊಂದು ಹೊಸ ಅಲೆ ಪುಕ್ಸಟ್ಟೆ ಲೈಫು!

  |

  ದಿವಂಗತ ನಟ ಸಂಚಾರಿ ವಿಜಯ್ ಅಭಿನಯದ ಪುಕ್ಸಟ್ಟೆ ಲೈಫು ಸಿನಿಮಾ ಈ ವಾರ ತೆರೆಗೆ ಬಂದಿದೆ. ವಿಜಯ್ ಅಗಲಿಕೆಯ ಬಳಿಕ ಚಿತ್ರಮಂದಿರಕ್ಕೆ ಬರುತ್ತಿರುವ ಈ ಚಿತ್ರ ಸಹಜವಾಗಿ ನಿರೀಕ್ಷೆ ಮೂಡಿಸಿತ್ತು. ಈಗ ಸಿನಿಮಾ ನೋಡಿದ ಮಂದಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಂಚಾರಿ ನಟನೆ, ನಿರ್ದೇಶಕರ ಕೆಲಸಕ್ಕೆ ಭೇಷ್ ಎನ್ನುತ್ತಿದ್ದಾರೆ.

  ಗುರುವಾರ ಬೆಂಗಳೂರಿನಲ್ಲಿ ಪುಕ್ಸಟ್ಟೆ ಲೈಫು ಚಿತ್ರದ ಪ್ರೀಮಿಯರ್ ಪ್ರದರ್ಶನ ಆಯೋಜಿಸಲಾಗಿತ್ತು. ಸಿನಿಮಾ ವೀಕ್ಷಣೆ ಮಾಡಿದ ಬರಹಗಾರ್ತಿ, ಪತ್ರಕರ್ತೆ ರೇಖಾ ರಾಣಿ ಕಶ್ಯಪ್ ಚಿತ್ರದ ಬಗ್ಗೆ ಫೇಸ್‌ಬುಕ್‌ನಲ್ಲಿ ಅಭಿನಂದಿಸಿದ್ದಾರೆ.

  ''ಅರವಿಂದ್ ಕುಪ್ಳೀಕರ್, ಕನ್ನಡಕ್ಕೊಬ್ಬ ಒಳ್ಳೆಯ ನಿರ್ದೇಶಕ ಸಿಕ್ಕ ಖುಷಿ ನನಗೆ. ಈ ಚಿತ್ರ ನೋಡಿ ಬಹಳ ದಿನಗಳ ನಂತರ ನಕ್ಕು ನಕ್ಕು ಹಗುರಾದೆ ಆದರೆ ಸಂಚಾರಿ ವಿಜಯನನ್ನು ನೋಡಿ ಅಳುತ್ತಲೇ ನಕ್ಕೆ. ಪುಗ್ಸಟ್ಟೆ ಲೈಫ್ ಒಂಥರಾ ಸಂಚಾರಿ ತಂಡದವರ ಒಡನಾಡಿ ಚಿತ್ರ. ಇಲ್ಲಿರುವ ನಟ-ನಿರ್ದೇಶಕ ಅರವಿಂದ್ ಕುಪ್ಳೀಕರ್, ಸಂಚಾರಿ ವಿಜಯ್ ರಿಂದ ಹಿಡಿದು ಬಹುತೇಕ ಕಲಾವಿದರೆಲ್ಲರೂ ಮಂಗಳಮ್ಮನ ಸಂಚಾರಿ ತಂಡದ ಕಲಾವಿದರು..ಹಾಗಾಗಿ ಇಡೀ ಚಿತ್ರ ಪ್ರತಿಭೆಗಳ ಮಹಾಪೂರದಲ್ಲಿ ಮಿಂದೆದ್ದಿದೆ.

  Rekha Rani kashyap appreciates Puksatte Lifu Pursotte Illa Movie

  ಉತ್ತಮ ನಟನಾಗಿ ಗುರುತಿಸಿಕೊಂಡಿದ್ದ ಅರವಿಂದ್ ಕುಪ್ಳೀಕರ್ 'ಪುಗ್ಸಟ್ಟೆ ಲೈಫ್' ಮೊದಲ ಚಿತ್ರದ ಮೂಲಕ, ಇಷ್ಟು ಬೇಗ ಉತ್ತಮ ನಿರ್ದೇಶಕರಾಗಿಯೂ ಗಮನ ಸೆಳೆದಿದ್ದು ಆಶ್ಚರ್ಯ ಮತ್ತು ಸಂತೋಷದ ಸಂಗತಿ. ಇಡೀ ಚಿತ್ರ ಕಾತುರ, ಹಾಸ್ಯ, ಕುತೂಹಲಗಳಿಂದ ಉಸಿರಾಟಕ್ಕೂ ಎಡೆಗೊಡದೆ ಸೀಟಿನ ಅಂಚಿಗೆ ಅಂಟಿಸಿ ಕೂಡಿಸುತ್ತದೆ. ಒಂದು ಕಡೆ ಸಂಚಾರಿ ವಿಜಯ್ ನಟನೆ ಹರ್ಷಿಸುತ್ತಾ ಕುಳಿತವರಿಗೆ ಅಚ್ಯುತ್ ರಾವ್ ಅಭಿನಯ ವಿಜಯ್ ಜೊತೆಗೆ ಸ್ಪರ್ಧೆ ಮಾಡುತ್ತದೆ. ಅವರಿಬ್ಬರ ನಟನೆಯನ್ನು ಕಣ್ಣು ತುಂಬಿಸಿಕೊಳ್ಳುವಷ್ಟರಲ್ಲಿ ರಂಗಾಯಣ ರಘು ಧುಮುಕಿ ಎಲ್ಲರನ್ನೂ ಬದಿಗೆ ಸರಿಸಿಬಿಡುತ್ತಾರೆ. ಇವೆಲ್ಲಕ್ಕೂ ಕಲಶವಿಟ್ಟಂತೆ ಕಥೆಯಲ್ಲಿ ಟರ್ನಿಂಗ್ ಪಾಯಿಂಟ್ ನೀಡುವ 'ಸಣ್ಣ ಪಾತ್ರಗಳು'. ಎಷ್ಟೊಂದು ಸೊಗಸಾದ ಕುಸುರಿಕೆಲಸವಿದೆ ಈ ಚಿತ್ರದಲ್ಲಿ...

  ಆಭಾಷೆಯ ಸಿನೆಮಾ ಚೆನ್ನಾಗಿದೆ, ಈ ಭಾಷೆಯ ಸಿನೆಮಾ ಚೆನ್ನಾಗಿದೆ ಎನ್ನುವವರಿಗೆ' ನಮ್ಮ ಕನ್ನಡ ಭಾಷೆಯಲ್ಲಿಯೂ ಒಳ್ಳೆ ಸಿನೆಮಾ ಬಂದಿದೆ' ಎಂದು ಹೆಮ್ಮೆಯಿಂದ ಹೇಳಬಹುದಾದ ಚಿತ್ರ ಪುಗ್ಸಟ್ಟೆ ಲೈಫ್ ಎಂದು ಶ್ಲಾಘಿಸಿದ್ದಾರೆ.

  ''ಬರೀ ಭೂಮಿತೂಕದ ಹೆಣ್ಣುಗಳ ಬಗ್ಗೆ ಹೇಳ್ತೀಯಲ್ಲ.,ಭೂಮಿತೂಕದ ಗಂಡುಗಳು ನಿನ್ನ ಲಿಸ್ಟ್ ನಲ್ಲಿ ಇಲ್ಲವೇನಮ್ಮ? - ಹಾಗಂತ ಅಶೋಕ್ ಕಶ್ಯಪ್ ಕೇಳಿದಾಗೊಮ್ಮೆ ಹೇಳಿದ್ದೆ...'ಇದ್ದಾರಲ್ಲಪ್ಪಾ...ಎತ್ತರ ಗಾತ್ರದಲ್ಲಿ ರಾಕ್ಷಸನನ್ನು ಮೀರಿಸುವ ನಮ್ಮ ರಂಗಾಯಣ ರಘು!. ಪಟಕ್ಕನೆ ಅಶೋಕ್ 'ದೇಹವಲ್ಲ...ರಾಕ್ಷಸನಂತಿರುವುದು ಅವರ ಪ್ರತಿಭೆ...ಕನ್ನಡ ಚಿತ್ರರಂಗದ ದೈತ್ಯ ಪ್ರತಿಭೆ' ಎಂದಿದ್ದರು.

  Rekha Rani kashyap appreciates Puksatte Lifu Pursotte Illa Movie

  ನಟರ ತಾಕತ್ತು, ಸತ್ವಪರೀಕ್ಷೆ ಹೊರಬರಲು ಬೆರಳೆಣಿಕೆಯ ಚಿತ್ರಗಳಷ್ಟೇ ಅವರ ಪಾಲಿಗೆ ದಕ್ಕುತ್ತವೆ. ಅದನ್ನೂ ಹುರಿದುಮುಕ್ಕಿಬಿಡುತ್ತಾರೆ ರಂಗಾಯಣರಘುರಂತಹವರು.

  ಇಷ್ಟೆಲ್ಲಾ ಯಾಕೆ ಪೀಠಿಕೆ ಹಾಕಿದೆ ಅಂದರೆ...

  ಪುಗ್ಸಟ್ಟೆ ಲೈಫ್ ಸಿನೆಮಾ ನೋಡಿ! ಮಿಕ್ಕಿದ್ದೆಲ್ಲಾ ನಿಮಗೇ ಅರ್ಥವಾಗುತ್ತೆ ಎಂದು ರಂಘಾಯಣ ರಘು ಅವರ ಬಗ್ಗೆ ವಿಶೇಷವಾಗಿ ಅಭಿನಂದಿಸಿದ್ದಾರೆ.

  ಪ್ರೀಮಿಯರ್ ಶೋ ನೋಡಿದ ಬಹುತೇಕ ಪತ್ರಕರ್ತರು ಹಾಗೂ ಸೆಲೆಬ್ರಿಟಿಗಳು ಸಹ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಲಾಕ್‌ಡೌನ್‌ ಆದ್ಮೇಲೆ ಚಿತ್ರಮಂದಿರಕ್ಕೆ ಬಂದಿರುವ ಒಂದೊಳ್ಳೆ ಮನರಂಜನೆಯ ಚಿತ್ರ ಇದು ಎಂದು ಖುಷಿ ವ್ಯಕ್ತಪಡಿಸಿದರು.

  ಅಂದ್ಹಾಗೆ, 'ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ' ಚಿತ್ರ ಸೆಪ್ಟೆಂಬರ್ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಅರವಿಂದ್ ಕುಪ್ಳೀಕರ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಅಚ್ಯುತ್ ಕುಮಾರ್, ರಂಗಾಯಣ ರಘು ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಸಂಚಾರಿ ವಿಜಯ್‌ಗೆ ಜೋಡಿಯಾಗಿ ಮಾತಂಗಿ ಪ್ರಸನ್ನಾ ನಟಿಸಿದ್ದಾರೆ.

  English summary
  Writter and journalist Rekha Rani kashyap appreciates Sanchari Vijay starrer Puksatte Lifu Pursotte Illa Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X