Retro Twitter Review: ಇಲ್ಲ ಆರ್ಭಟ, ನಿಧಾನವಾಗಿ ಸೂರ್ಯ ರೆಟ್ರೋ ರಂಗು

ಸೂರ್ಯ ಹಾಗೂ ಪೂಜಾ ಹೆಗ್ಡೆ ನಟನೆಯ 'ರೆಟ್ರೋ' ಸಿನಿಮಾ ತೆರೆಗೆ ಬಂದಿದೆ. ಆದರೆ ಅಷ್ಟೇನು ಅಬ್ಬರ ಆರ್ಭಟ ಕಾಣುತ್ತಿಲ್ಲ. ಪ್ರೀಮಿಯರ್ ಶೋ, ಫ್ಯಾನ್ಸ್ ಶೋಗಳು ಕೂಡ ಪ್ರದರ್ಶನವಾಗಿಲ್ಲ. ಹಿಂದಿನ ಸಿನಿಮಾಗಳ ಬಿಡುಗಡೆ ವೇಳೆ ನಡೆದ ಗೊಂದಲದಿಂದ ಚಿತ್ರತಂಡ ಈ ನಿರ್ಧಾರಕ್ಕೆ ಬಂದಂತೆ ಕಾಣುತ್ತಿದೆ.

ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ 'ರೆಟ್ರೋ' ಸಿನಿಮಾ ಮೇಕಿಂಗ್ ಹಂತದಲ್ಲೇ ಸದ್ದು ಮಾಡಿತ್ತು. ರಜನಿಕಾಂತ್‌ಗೆ ಅಂತ ಮಾಡಿದ್ದ ಕಥೆಯನ್ನು ಕೊಂಚ ಬದಲಿಸಿ ಬಳಿಕ ಸೂರ್ಯ ಕಾಂಬಿನೇಷನ್‌ನಲ್ಲಿ ಕಾರ್ತಿಕ್ ಸುಬ್ಬರಾಜ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಸಂತೋಷ್ ನಾರಾಯಣ್ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿತ್ತು. ಸಾಂಗ್ಸ್ ಹಾಗೂ ಟ್ರೈಲರ್ ಹಿಟ್ ಆಗಿ ಸಿನಿಮಾ ಮೇಲೆ ನಿರೀಕ್ಷೆ ಮೂಡಿತ್ತು.

Retro Twitter Review  Fans praise Suriya  Pooja Hegde  Karthik Subbaraj  s film

'ಕಂಗುವ' ಸಿನಿಮಾ ಸೋಲಿನ ಸುಳಿಯಿಂದ ಸೂರ್ಯ ಹೊರಬರುವ ಲೆಕ್ಕಾಚಾರದಲ್ಲಿದ್ದಾರೆ. ಹಾಗಾಗಿ ಬಹಳ ವಿಭಿನ್ನ ಪ್ರಯತ್ನದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಸದ್ಯ 'ರೆಟ್ರೋ' ಸಿನಿಮಾ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಸೆಕೆಂಡ್ ಹಾಫ್ ನೋಡ್ಬೇಕು

ಫಸ್ಟ್ ಹಾಫ್ ನೋಡಿ ಮುಗಿಸಿದೆ. ವಿಂಟೇಜ್ ಭಾಗ ಚೆನ್ನಾಗಿದೆ. ಸೂರ್ಯ ಹಾಗೂ ಪೂಜಾ ಪಾತ್ರಗಳನ್ನು ಚೆನ್ನಾಗಿ ಬರೆದುಕೊಂಡಿದ್ದಾರೆ. ಸಿಂಗಲ್ ಶಾಟ್ ಸೀನ್ ಬಹಳ ಸೊಗಸಾಗಿದೆ. ನಿಧಾನವಾಗಿ ಕಥೆಯನ್ನು ಕಟ್ಟುತ್ತಿದ್ದಾರೆ. ಸೆಕೆಂಡ್ ಹಾಫ್ ನೋಡಲು ಕಾಯುತ್ತಿದ್ದೇನೆ" ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

'ವಾರ್' ನೋಡಲು ಕಾತರ

ಕನ್ನಿಮಾ ಸಾಂಗ್ ಸಕ್ಕಾಗಿದೆ ಮುಗಿಯಿತು. ಸ್ಲೋ ಅನ್ನಿಸಿದರೂ ಡಲ್ ಅನ್ನಿಸುವುದಿಲ್ಲ. ಸೂರ್ಯ ಹಾಗೂ ಪೂಜಾ ಹಾಸ್ಯದ ಸನ್ನಿವೇಶಗಳು ಚೆನ್ನಾಗಿದೆ. ಫಸ್ಟ್ ಹಾಫ್ ಚೆನ್ನಾಗಿದೆ. ಸೂರ್ಯ ಆಕ್ಷನ್ ಸನ್ನಿವೇಶಗಳಂತೂ ಬೆಂಕಿ. ಸೆಕೆಂಡ್ ಹಾಫ್ 'ವಾರ್' ನೋಡಲು ಕಾಯುತ್ತಿದ್ದೇನೆ. ಸಂತೋಷ್ ನಾರಾಯಣ್ ಮ್ಯೂಸಿಕ್ ಅದ್ಭುತ ಎಂದು ಮತ್ತೊಬ್ಬರು ಅಭಿಪ್ರಾಯ ತಿಳಿಸಿದ್ದಾರೆ.

ಪೂಜಾ ನಟನೆ ಸೂಪರ್

ಸತೀಶ್ ಎಂಬುವವರು ಟ್ಟೀಟ್ ಮಾಡಿ "ರೆಟ್ರೋ ಪಕ್ಕಾ ಬ್ಲಾಕ್‌ಬಸ್ಟರ್. ಸೂರ್ಯ ತಮ್ಮ ಗಮನಾರ್ಹ ನಟನಾ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ಈ ಚಿತ್ರವು ಸೂರ್ಯ ಅವರ ವೃತ್ತಿಜೀವನದಲ್ಲಿ ಅತ್ಯುತ್ತಮ ಚಿತ್ರವಾಗಿ ಎದ್ದು ಕಾಣುತ್ತದೆ. ಪೂಜಾ ತಮ್ಮ ವೃತ್ತಿಜೀವನದ ಅತ್ಯುತ್ತಮ ಅಭಿನಯ ನೀಡಿದ್ದಾರೆ. ಆಕೆ ನಿಜವಾಗಿಯೂ ಈ ಚಿತ್ರಕ್ಕಾಗಿ ತಮ್ಮ ಹೃದಯವನ್ನು ಧಾರೆಯೆರೆದಿದ್ದಾರೆ. ಇಂಟರ್‌ವಲ್ ಮತ್ತು ಸಾಹಸ ದೃಶ್ಯಗಳನ್ನು ಒಳಗೊಂಡಂತೆ ಚಿತ್ರಕಥೆಯ ಮೊದಲಾರ್ಧವು ಆಕರ್ಷಕವಾಗಿತ್ತು. ಹಿನ್ನೆಲೆ ಸಂಗೀತ, ಛಾಯಾಗ್ರಹಣ ಎಲ್ಲವೂ ಸೊಗಸಾಗಿದೆ. ನೆಗೆಟಿವೆ ಯಾವುದು ಇಲ್ಲ" ಎಂದಿದ್ದಾರೆ.

ಕೆಟ್ಟ ಸಿನಿಮಾ

"ಕಾರ್ತಿಕ್ ಸುಬ್ಬರಾಜ್ ಅವರ ಕಳಪೆ ಸಿನಿಮಾ. ಸೆಕೆಂಡ್ ಹಾಫ್ ಉಪ ಕಥೆಯಲ್ಲಿ ಮುಳುಗಿರುವುದರಿಂದ ಮುಖ್ಯ ಕಥೆಯಲ್ಲಿ ಯಾವುದೇ ಹುರುಳಿಲ್ಲ. ಎಂದಿನಂತೆ ಕಾರ್ತಿಕ್ ಸುಬ್ಬರಾಜ್ ಸೆಕೆಂಡ್ ಹಾಫ್ ಶಾಪ ಸಾಧಾರಣವಾದ ಫಸ್ಟ್‌ ಹಾಫ್ ಚಿತ್ರದಲ್ಲಿದೆ" ಎಂದು ಮತ್ತೊಬ್ಬರು ಬೇಸರ ವ್ಯಕ್ತಪಡಿದಿದ್ದಾರೆ.

ಸರಾಸರಿ ಸಿನಿಮಾ

ಕಾರ್ತಿಕ್ ಸುಬ್ಬರಾಜ್ ಸೊಗಸಾಗಿ ಪಾತ್ರಪೋಷಣೆ ಮಾಡುವುದರೊಂದಿಗೆ ಫಸ್ಟ್ ಹಾಫ್ ಓಕೆ ಎನಿಸುತ್ತದೆ. ಆವರೇಜ್‌ಗಿಂತ ಕಮ್ಮಿ ಎನ್ನುವ ಭಾವನೆ ಬರುತ್ತದೆ. ಹುಬ್ಬೇರಿಸುವಂತಹ ಸನ್ನಿವೇಶಗಳಿಲ್ಲ. ಅಷ್ಟೇನು ಮಜಾ ಕೊಡಲ್ಲ. ಸೂರ್ಯ ಎಂದಿನಂತೆ ಚೆನ್ನಾಗಿ ನಟಿಸಿದ್ದಾರೆ. ಸೂರ್ಯ ಅವರ ಕಮರ್ಷಿಯಲ್ ಬ್ಲಾಕ್‌ಬ್ಲಾಕ್ಬಸ್ಟರ್‌ಗಾಗಿ ದಶಕದ ಕಾಯುವಿಕೆ ಮುಂದುವರೆದಿದೆ. ರೆಟ್ರೋ ಸರಾಸರಿ ಸಿನಿಮಾ ಅಷ್ಟೇ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ಸಿಂಗಲ್ ಶಾಟ್ ಸೀನ್ ಸೂಪರ್

ಪಾರಿವೇಲ್ ಮತ್ತು ರುಕ್ಮಿಣಿಯ ಮದುವೆಯ 17 ನಿಮಿಷಗಳ "ಸಿಂಗಲ್ ಶಾಟ್" ಸೀಕ್ವೆನ್ಸ್ ಸರಳವಾಗಿ ಮನಸ್ಸಿಗೆ ಮುದ ನೀಡುತ್ತದೆ. ಕಲಾವಿದರ ನಟನೆ, ತಾಂತ್ರಿಕ ವರ್ಗ, ಡ್ರಾಮಾ, ಗದ್ದಲ, ಡ್ಯಾನ್ಸ್, ಆಕ್ಷನ್ ಮತ್ತು ಎಮೋಷನ್ ಮಟ್ಟ ಅಸಾಧಾರಣವಾಗಿದೆ. ಕಾರ್ತಿಕ್ ಸುಬ್ಬರಾಜ್ ನಿಮ್ಮ ಮೇಲೆ ಗೌರವ ಹೆಚ್ಚಾಯಿತು" ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.

More from Filmibeat

English summary
Retro X Review: Netizens Call First Half Fire, waiting for second half
Read more about: suriya kollywood pooja hegde
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X