For Quick Alerts
  ALLOW NOTIFICATIONS  
  For Daily Alerts

  ಟ್ವಿಟ್ಟರ್ ವಿಮರ್ಶೆ: ರಾಬರ್ಟ್ ಚಿಂದಿ, ಉಮಾಪತಿ ಗಿಫ್ಟ್ ಇದು, ತರುಣ್‌ಗೆ ಕ್ರೆಡಿಟ್

  |

  ಕೊನೆಗೂ ರಾಬರ್ಟ್ ಸಿನಿಮಾ ಚಿತ್ರಮಂದಿರಕ್ಕೆ ಬಂದೆ ಬಿಡ್ತು. ಮಾರ್ಚ್ 11ರ ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಥಿಯೇಟರ್‌ಗಳಲ್ಲಿ ಡಿ ಬಾಸ್ ಎಂಟ್ರಿ ಕೊಟ್ಟಿದ್ದಾರೆ. ಕೆಲವು ಕಡೆ ಮಧ್ಯರಾತ್ರಿ ಅಭಿಮಾನಿಗಳಿಗಾಗಿ ಫ್ಯಾನ್ಸ್ ಶೋ ಸಹ ಆಯೋಜಿಸಲಾಗಿತ್ತು. ಮೊಟ್ಟ ಮೊದಲ ಪ್ರದರ್ಶನದಲ್ಲಿ ರಾಬರ್ಟ್ ನೋಡಿದ ಪ್ರೇಕ್ಷಕರ ಫುಲ್ ಖುಷ್ ಆಗಿದ್ದಾರೆ.

  ಉಮಾಪತಿ ಗಿಫ್ಟ್,ತರುಣ್ ಗೆ ಕ್ರೆಡಿಟ್ ಅಂತಿದ್ದಾರೆ ರಾಬರ್ಟ್ ನೋಡಿದ ಪ್ರೇಕ್ಷಕರು | Roberrt | Filmibeat Kannada

  ತರುಣ್ ಸುಧೀರ್ ಮಾತು ಕೊಟ್ಟಂತೆ ದರ್ಶನ್ ಅಭಿಮಾನಿಗಳಿಗೆ ಸಖತ್ ಆಗಿರುವ ಸಿನಿಮಾ ಕೊಟ್ಟಿದ್ದಾರೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಈ ಹಿಂದಿನ ಯಾವ ಚಿತ್ರದಲ್ಲೂ ದಾಸನನ್ನು ಈ ರೀತಿ ನೋಡಿರಲಿಲ್ಲ. ಇದು ಪಕ್ಕಾ ಹಿಟ್ ಎಂದು ಹೇಳುತ್ತಿದ್ದಾರೆ.

  ರಾಬರ್ಟ್ ಅಬ್ಬರ: ಮೊದಲ ದಿನವೇ ದಾಖಲೆ ಬರೆದ ದಾಸನ ಸಿನಿಮಾರಾಬರ್ಟ್ ಅಬ್ಬರ: ಮೊದಲ ದಿನವೇ ದಾಖಲೆ ಬರೆದ ದಾಸನ ಸಿನಿಮಾ

  ಹಾಗಾದ್ರೆ, ರಾಬರ್ಟ್ ಚಿತ್ರವನ್ನು ಮೊದಲ ಶೋ ನೋಡಿದ ಪ್ರೇಕ್ಷಕರು ಏನಂದ್ರು? ರಾಬರ್ಟ್ ಚಿತ್ರಕ್ಕೆ ಎಷ್ಟು ಮಾರ್ಕ್ಸ್ ಕೊಟ್ಟರು? ಏನು ಇಷ್ಟ ಆಯಿತು ಎಂಬ ಟ್ವಿಟ್ಟರ್‌ ವಿಮರ್ಶೆ ಇಲ್ಲಿದೆ. ಮುಂದೆ ಓದಿ...

  ಡಿ ಬಾಸ್ ಎಂಟ್ರಿ ಚಿಂದಿ

  ಡಿ ಬಾಸ್ ಎಂಟ್ರಿ ಚಿಂದಿ

  ''ದರ್ಶನ್ ಅವರು ಎಂಟ್ರಿ ಸೂಪರ್. ದರ್ಶನ್ ಅವರ ಪಾತ್ರ ಸಖತ್ ಆಗಿದೆ, ದೃಶ್ಯಗಳನ್ನು ನೋಡುವುದು ಮಜಾ ಇದೆ. ಹಿನ್ನೆಲೆ ಸಂಗೀತ ಶಕ್ತಿ ತುಂಬಿದೆ. ರಾವಣನ ಫೈಟ್ ಮೈ ಜುಮ್ ಎನಿಸುತ್ತದೆ. ಅವನು ಯಾವ ರೇಂಜ್‌ಗೂ ಸಿಗಲ್ಲ ಕಣೋ, ಅವನ ರೇಂಜ್ ಬೇರೇ'' - ಕ್ರಿಯೇಟಿವ್

  ದರ್ಶನ್‌ರನ್ನು ಈ ರೀತಿ ನೋಡೇ ಇಲ್ಲ

  ದರ್ಶನ್‌ರನ್ನು ಈ ರೀತಿ ನೋಡೇ ಇಲ್ಲ

  ''ಮೊದಲಾರ್ಧದವರೆಗೂ: ನಾನು ದರ್ಶನ್ ಅವರನ್ನು ಈ ಹಿಂದೆ ಈ ರೀತಿ ನೋಡಿಯೇ ಇಲ್ಲ. ನೆಕ್ಸ್ಟ್ ಲೆವೆಲ್‌ಗೆ ಹೀರೋ ಕ್ಯಾರೆಕ್ಟರ್ ಇದೆ. ಈ ಎಲ್ಲದರ ಕ್ರೆಡಿಟ್ ತರುಣ್ ಸುಧೀರ್‌ಗೆ. ಕಾಮಿಡಿ ಸಖತ್ ಮಜಾ ಇದೆ'' - ನಾನೊಬ್ಬ ಕಳ್ಳ

  ದರ್ಶನ್ ಮತ್ತು ಮಗು ಅದ್ಭುತ

  ದರ್ಶನ್ ಮತ್ತು ಮಗು ಅದ್ಭುತ

  ''ವೇದಾಲಂ ಮತ್ತು ಬಾಷಾ ಸಿನಿಮಾದ ಮಿಶ್ರಣ ಇದ್ದಂತಿದೆ. ಆದರೆ, ಉತ್ತಮ ಮಮನರಂಜನೆ ಇದೆ. ದರ್ಶನ್ ಮತ್ತು ಆ ಮಗುವಿನ ಅಭಿನಯ ಅದ್ಭುತ. ರಾಬರ್ಟ್ ಲುಕ್ ಬೆಂಕಿ. ಉಮಾಪತಿ ಗೌಡ ಅವರಿಂದ ಕನ್ನಡಕ್ಕೆ ಗಿಫ್ಟ್. ತರುಣ್ ಸುಧೀರ್ ಚೆನ್ನಾಗಿ ಪ್ರೆಸೆಂಟ್ ಮಾಡಿದ್ದಾರೆ'' - ಮಂಜುನಾಥ್

  ಮೊದಲಾರ್ಧ ಓಕೆ ಓಕೆ...ಆದರೆ

  ಮೊದಲಾರ್ಧ ಓಕೆ ಓಕೆ...ಆದರೆ

  ''ರಾಬರ್ಟ್ ಮೊದಲಾರ್ಧ ಓಕೆ ಓಕೆ....ಸೆಕಂಡ್ ಹಾಫ್ ಅದ್ಭುತ'' - ಸುನೀಲ್ ಪಿ ಗೌಡ

  ದೊಡ್ಡ ಗಳಿಕೆ ಕಾಣುವ ಚಿತ್ರ

  ದೊಡ್ಡ ಗಳಿಕೆ ಕಾಣುವ ಚಿತ್ರ

  ''ರಾಬರ್ಟ್ ಅತ್ಯದ್ಭುತ. ದರ್ಶನ್ ವೃತ್ತಿ ಜೀವನದಲ್ಲಿ ಅತ್ಯುತ್ತಮ ಗಳಿಕೆ ಕಾಣುವ ಚಿತ್ರ. ಮೊದಲಾರ್ಧ ಚಿಂದಿ. ಸೆಕಂಡ್ ಹಾಫ್ ಪವರ್ ಪ್ಯಾಕ್ಡ್. ಬಾಸ್ ಆಕ್ಟಿಂಗ್ 25ರ ತರುಣನಂತಿದೆ. ಒಟ್ಟಾರೆ ಊಹೆಗೂ ಮೀರಿದ ಚಿತ್ರ'' - ವಿನಾಯಕ

  ಶಿವಣ್ಣ ಅಭಿಮಾನಿ ನಾನು...ರಾಬರ್ಟ್ ಚಿಂದಿ

  ಶಿವಣ್ಣ ಅಭಿಮಾನಿ ನಾನು...ರಾಬರ್ಟ್ ಚಿಂದಿ

  ''ಶಿವಣ್ಣ ಅಭಿಮಾನಿಯಾಗಿ ಹೇಳ್ತಿದ್ದೀನಿ, ರಾಬರ್ಟ್ ಸಿನಿಮಾ ಚಿಂದಿ ಇದೆ. ರಾಬರ್ಟ್ ಚಿತ್ರತಂಡಕ್ಕೆ ಒಳ್ಳೆಯದಾಗಲಿ'' - ಕಿಶನ್ ಶಿವರಾಜ್ ಕುಮಾರ್

  ಡಿ ಬಾಸ್ ಫ್ಯಾನ್ಸ್‌ಗೆ ಹಬ್ಬ

  ಡಿ ಬಾಸ್ ಫ್ಯಾನ್ಸ್‌ಗೆ ಹಬ್ಬ

  ''ದರ್ಶನ್ ಅಭಿಮಾನಿಗಳಿಗೆ ನಿಜಕ್ಕೂ ಇದು ಹಬ್ಬ. ಮೊದಲಾರ್ಧ ಮತ್ತು ಸೆಕಂಡ್ ಹಾಫ್ ಎಂಗೇಜಿಂಗ್ ಆಗಿದೆ. ಕ್ಲೈಮ್ಯಾಕ್ಸ್ ಟಾಪ್‌. ದರ್ಶನ್ ಅವರ ಹೊಸ ಲುಕ್, ಅಭಿನಯ ಕೌಶಲ್ಯ ಅದ್ಭುತ. ಕಡ್ಡಾಯವಾಗಿ ನೋಡಬಹುದಾದ ಚಿತ್ರ. ಹಿನ್ನೆಲೆ ಸಂಗೀತ ಸಖತ್ ಆಗಿದೆ''- ದಿಲೀಪ್

  ಛಾಯಾಗ್ರಾಹಕ ಸುಧಾಕರ್ ಶೋ

  ಛಾಯಾಗ್ರಾಹಕ ಸುಧಾಕರ್ ಶೋ

  ''ಛಾಯಾಗ್ರಾಹಕ ಸುಧಾಕರ್ ಅವರ ಟಾಪ್ ಕ್ಲಾಸ್ ಕೆಲಸ ಕಾಣ್ತಿದೆ. ಚಿತ್ರದ ಪ್ರೊಡಕ್ಷನ್ ಬಹಳ ಅದ್ಧೂರಿಯಾಗಿದೆ. ಆಶಾ ಭಟ್ ಅವರ ಪ್ರತಿಭೆ ಮೇಲೆ ಭರವಸೆ ಹುಟ್ಟಿದೆ. ತರುಣ್ ಸುಧೀರ್ ಮತ್ತೊಮ್ಮೆ ಮೋಡಿ ಮಾಡಿದ್ರೆ, ಡಿ ಬಾಸ್ ಕ್ಯಾರೆಕ್ಟರ್ ನಮ್ಮ ಹೃದಯದಲ್ಲಿ ಉಳಿದುಕೊಳ್ಳುತ್ತದೆ'' - ಸರ್ವಾಂತರ್ಯಾಮಿ

  English summary
  Kannada Challenging star Darshan's latest movie Roberrt is released in theatres today. Let's find out what the audience has to say about the movie. Here goes Roberrt Twitter Review.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X