For Quick Alerts
  ALLOW NOTIFICATIONS  
  For Daily Alerts

  'ರೂಮ್ ಫಾರ್ ರೆಂಟ್': ಮುದುಕಿ, ಯುವಕನ ನಡುವಿನ ಪ್ರೀತಿ ಪ್ರೇಮ ಪ್ರಣಯ

  By ರವೀಂದ್ರ ಕೊಟಕಿ
  |

  'ರೂಮ್ ಫಾರ್ ರೆಂಟ್' 2019 ರಲ್ಲಿ ಬಿಡುಗಡೆಯಾದ ಇಂಗ್ಲಿಷ್ ಚಿತ್ರ ಇದು. 80 ವರ್ಷ ವಯಸ್ಸಿನ ಜೋಸಿ ಆಗಷ್ಟೇ ತನ್ನ ಗಂಡನನ್ನು ಕಳೆದುಕೊಂಡು ಏಕಾಂಗಿತನದ ನೋವಿನಲ್ಲಿ ಇರುತ್ತಾಳೆ. ಇದೇ ಸಂದರ್ಭದಲ್ಲಿ ಬಾಬ್ ಎಂಬ ಸುಂದರ ಮತ್ತು ಹ್ಯಾಂಡ್ಸಮ್ ಯುವಕನ ಪ್ರವೇಶವಾಗುತ್ತದೆ. ಮೊದಲ ನೋಟದಲ್ಲೇ ಅವನ ಪ್ರೀತಿಯಲ್ಲಿ ಬಿದ್ದ ಜೋಸಿ ತನ್ನವನಾಗಿಸಿಕೊಳ್ಳಲು ಅನೇಕ ತರದಲ್ಲಿ ಪ್ರಯತ್ನಿಸುತ್ತಾಳೆ. ಈ ಪ್ರಯತ್ನದಲ್ಲಿ ಜೋಸಿ ಸಫಲಳಾದಳೇ? ಜೋಸಿ ಪ್ರೀತಿಯನ್ನ ಬಾಬ್ ಅಕ್ಸೆಪ್ಟ್ ಮಾಡ್ತಾನ ಅಥವಾ ರಿಜೆಕ್ಟ್ ಮಾಡ್ತಾನ? ಇದಕ್ಕಾಗಿ ಚಿತ್ರದ ಕ್ಲೈಮ್ಯಾಕ್ಸ್ ವರೆಗೂ ಕಾಯಬೇಕು.

  ಚಿತ್ರ ಆರಂಭವಾಗುವುದು ಒಂದು ಮನೆಯ ಮುಂದೆ ಆಂಬುಲೆನ್ಸ್ ನಿಂತಿರುತ್ತೆ. ಆ ಮನೆಯ ಹಿರಿಯ ಸಾವನ್ನಪ್ಪಿರುತ್ತಾನೆ. ಆತ ಮತ್ಯಾರು ಅಲ್ಲ ಜೋಸಿ ಗಂಡ. ಜೋಸಿ ಗಂಡನನ್ನು ಕಳೆದುಕೊಂಡು ಏಕಾಂಗಿಯಾಗಿ ಬದುಕುತ್ತಿರುತ್ತಾಳೆ. ಅವಳ ಗಂಡ ಸಾಕಷ್ಟು ಸಾಲ ಮಾಡಿರುತ್ತಾನೆ ಜೊತೆಗೆ$ 2,200 ಮಾತ್ರ ಬಿಟ್ಟು ಹೋಗಿರುತ್ತಾನೆ. ಹೀಗಾಗಿ ಇವಳ ಹೆಸರಿಗೆ ಆ ಮನೆ ಬಿಟ್ಟರೆ ಯಾವುದೇ ರೀತಿಯ ಅಸೆಟ್ ಅಂತ ಕೂಡ ಇರುವುದಿಲ್ಲ. ಒಂದು ದಿನ ಜೋಸಿ ಲೈಬ್ರರಿಗೆ ಹೋಗುತ್ತಾಳೆ. ಅವಳಿಗೆ ರೋಮ್ಯಾಂಟಿಕ್ ಪುಸ್ತಕಗಳೆಂದರೆ ತುಂಬಾ ಇಷ್ಟ ಹಾಗಾಗಿ ಅಲ್ಲಿ ಆಕೆ ಒಂದು ರೋಮ್ಯಾಂಟಿಕ್ ಪುಸ್ತಕವನ್ನು ತಗೊಳ್ಳುತ್ತಾಳೆ. ಹಾಗೆ ಪುಸ್ತಕ ತಗೊಂಡು ಹೊರಡುವಾಗ ಒಂದು ಪಂಪ್ಲೆಟ್ ಕಾಣುತ್ತದೆ. ನಿಮ್ಮ ಮನೆಯನ್ನು ಹೋಟೆಲ್ ಆಗಿ ಪರಿವರ್ತಿಸಿ, ಕಸ್ಟಮರ್ಸ್ ಅನ್ನು ನಾವು ಕಳುಹಿಸಿಕೊಡುತ್ತೇವೆ ಇದಕ್ಕಾಗಿ ನೀವು ನಮ್ಮ ಆಪ್ ನಲ್ಲಿ ರಿಜಿಸ್ಟರ್ ಮಾಡ್ಕೋಬೇಕು ಅಂತ ಬರೆದಿರುತ್ತೆ. ಈ ಐಡಿಯಾ ಜೋಸಿ ಗೆ ತುಂಬಾ ಇಷ್ಟವಾಗಿ ಆಕೆ .ಅದರಲ್ಲಿ ರಿಜಿಸ್ಟರ್ ಮಾಡಿಕೊಳ್ಳುತ್ತಾಳೆ. ತನ್ನ ಮನೆಯನ್ನೇ ಹೋಟೆಲಾಗಿ ಪರಿವರ್ತಿಸಿದ ಜೋಸಿ ಗ್ರಾಹಕನಿಗಾಗಿ ಎದುರು ನೋಡುತ್ತಿರುತ್ತಾಳೆ.

  ಆಗ ಮೊದಲ ಕಷ್ಟಮರ್ ಆಗಿ ಸಾರಾ ಮತ್ತು ಅವಳ ಗಂಡ ಅಲ್ಲಿಗೆ ಬರುತ್ತಾರೆ. ಸಾರಾಗೆ ಈ ಹೋಟೆಲ್ ತುಂಬಾ ಇಷ್ಟವಾಗುತ್ತದೆ. ಜೋಸಿ ಮಾಡುವ ಅಡುಗೆ, ಹಾಸ್ಪಿಟಲಿಟಿ ಇಂದ ಸಾರಾಗೆ ತುಂಬಾ ಇಷ್ಟ ಆಗುತ್ತದೆ. ಆದರೆ ಸಾರಾ ಗಂಡನಿಗೆ ಮಾತ್ರ ಇಲ್ಲಿ ಇರಲು ಸುತರಾಂ ಇಷ್ಟವಾಗುವುದಿಲ್ಲ. ಏಕೆಂದರೆ ಜೋಸಿ ತನಗೆ ಇಷ್ಟ ಬಂದಾಗ ಇವರ ಪರ್ಮಿಶನ್ ಇಲ್ಲದೇ ಇವರ ಬೆಡ್ ರೂಮಿಗೆ ಬಂದು ಆಹಾರ ನೀಡುತ್ತಿರುತ್ತಾಳೆ. ಇದನ್ನು ಪ್ರಶ್ನಿಸಿದರೆ 'ಇದು ನನ್ನ ಮನೆ, ನಾನು ಇಷ್ಟ ಬಂದಾಗ ಇಷ್ಟಬಂದ ಊಟ ನೀಡ್ತೀನಿ' ಅಂತ ಜವಾಬು ಕೊಡುತ್ತಾಳೆ. ಸಾರಾ ಗಂಡ ಹೊರಗೆ ಹೋದ ಸಮಯದಲ್ಲಿ ಜೋಸಿ, ಸಾರಾ ವಾಕಿಂಗ್ ಅಂತ ಹೋಗ್ತಾರೆ. ಆಗ ಜೋಸಿ ನಿನ್ನ ಗಂಡ ಅಂತಹವನು ಅಂತ ಪ್ರಶ್ನೆ ಮಾಡುತ್ತಾಳೆ. 'ಅವನ ಕ್ಯಾರೆಕ್ಟರ್ ಅಷ್ಟಾಗಿ ಚೆನ್ನಾಗಿಲ್ಲ' ಅಂತ ಸಾರಾ ಬದಲು ಕೊಡುತ್ತಾಳೆ.

  Rating:
  2.5/5

  ತನ್ನ ಮನೆ ಇಷ್ಟವಾಯಿತು ಅಂತ ಕೇಳಲು, ತಾನೊಂದು ಲೇಖಕಿ 'ನನ್ನ ಬರವಣಿಗೆಗೆ ಹೇಳಿಮಾಡಿಸಿದ ಜಾಗ ಇದು' ಅಂತ ಖುಷಿಯಿಂದ ಹೇಳುತ್ತಾಳೆ. ಒಬ್ಬರು ವಾಪಸ್ ಮನೆಗೆ ಬಂದಾಗ ಸಾರಾ ಗಂಡ ನನಗೆ ಈ ಮನೆ ಅಸಲಿಗೆ ಇಷ್ಟವೇ ಆಗಲಿಲ್ಲ, ನಾವು ತಕ್ಷಣ ಇಲ್ಲಿಂದ ಹೊರಡಬೇಕು ಅಂತ ಹೆಂಡತಿಯ ಮೇಲೆ ಒತ್ತಡ ಹಾಕುತ್ತಾನೆ. ಸಾರಾ ಜೋಸಿನ ಹಗ್ ಮಾಡಿಕೊಂಡು, ಕಣ್ಣೀರಿನೊಂದಿಗೆ ವಿದಾಯ ಹೇಳಿ ಅಲ್ಲಿಂದ ಹೊರಟುಹೋಗುತ್ತಾಳೆ.

  ಮತ್ತೆ ಏಕಾಂಗಿಯಾಗುವ ಜೋಸಿ

  ಮತ್ತೆ ಏಕಾಂಗಿಯಾಗುವ ಜೋಸಿ

  ಜೋಸಿ ಮತ್ತೆ ಏಕಾಂಗಿ ಆಗುತ್ತಾಳೆ. ಇವಳನ್ನು ಒಂದು ಹುಡುಗರ ಗ್ಯಾಂಗ್ ಸದಾ ಮಾನಸಿಕವಾಗಿ ಹಿಂಸೆ ಮಾಡುತ್ತಿರುತ್ತಾರೆ. ಇದರಿಂದ ತುಂಬಾ ನೊಂದಿರುವ ಜೋಸಿನ ತನಗೆ ಜೀವನದಲ್ಲಿ ಯಾರೂ ಇಲ್ಲವೆಂದು ಕಣ್ಣೀರು ಹಾಕುತ್ತಿರುತ್ತಾಳೆ. ಹೀಗೆ ಒಂದಷ್ಟು ಸಮಯ ಕಳೆದ ಮೇಲೆ ಒಂದು ದಿನ ಅವಳಿಗೊಂದು ಪತ್ರ ಬರುತ್ತದೆ. ಅದು ಸಾರಾ ಬರೆದಿರುವ ಪತ್ರ, ತಾನು ಅಲ್ಲಿದ್ದಷ್ಟು ಸಮಯ ಸಂತೋಷದಿಂದ ಇದಿದ್ದಾಗಿಯೂ ಈಗ ಗಂಡನಿಂದ ದೂರ ಸರಿದಿರುವುದಾಗಿ ಅದರಲ್ಲಿ ಬರೆದಿರುತ್ತಾಳೆ. ಇದಕ್ಕೆ ಪ್ರತ್ಯುತ್ತರ ನೀಡುವ ಜೋಸಿ 'ನನ್ನ ಮನೆ ನಿನಗಾಗಿ ಸದಾ ತೆರೆದಿರುತ್ತದೆ. ನಿನಗಿಷ್ಟವಾದ ಸಮಯದಲ್ಲಿ ನೀನು ಇಲ್ಲಿಗೆ ಬರಬಹುದು' ಅಂತ ಬರೆದು ಸಾರಾಗೆ ಕಳಿಸುತ್ತಾಳೆ.

  ಲವ್ ಅಟ್ ಫಸ್ಟ್ ಸೈಟ್!

  ಲವ್ ಅಟ್ ಫಸ್ಟ್ ಸೈಟ್!

  ಎಂದಿನಂತೆ ಜೋಸಿ ಲೈಬ್ರರಿಗೆ ಹೋಗುತ್ತಾಳೆ. ಅಲ್ಲೊಂದು ಯ0ಗ್ ಅಂಡ್ ಹ್ಯಾಂಡ್ಸಮ್ ಹುಡುಗನನ್ನ ನೋಡುತ್ತಾಳೆ, ಅವನೇ ಬಾಬ್. ಅವನನ್ನು ನೋಡಿದ ತಕ್ಷಣ ಜೋಸಿಯಲ್ಲಿ ಹೊಸ ಆಸೆಗಳು ಚಿಗುರುತ್ತದೆ. ಇವನು ನನ್ನ ಜೀವನದಲ್ಲಿ ಬಂದರೆ ತನ್ನನ್ನು ಕಾಡುತ್ತಿರುವ ಏಕಾಂಗಿತನ ಹೋಗುತ್ತದೆ. ಜೀವನಪೂರ್ತಿ ಸಂತೋಷವಾಗಿ ಬದುಕಬಹುದು ಅಂತ ಭಾವಿಸುತ್ತಾಳೆ. ಅದರಲ್ಲೂ ಅಲ್ಲಿ ಬಾಬ್ 'ರೂಮ್ ಫಾರ್ ರೆಂಟ್' ಗೋಡೆ ಮೇಲೆ ಅಂಟಸಿದ್ದ ಪಂಪ್ಲೆಟ್ ನೋಡ್ತಾ ಇರ್ತಾನೆ. ನೇರವಾಗಿ ಅವನ ಹತ್ತಿರಕ್ಕೆ ಹೋದ ಜೋಸಿ' ಆ ಪಂಪ್ಲೆಂಟ್ ನಲ್ಲಿರುವ ಮನೆಲ್ಲಿ ರೂಮ್ ಸದ್ಯಕ್ಕೆ ರೆಂಟ್ ಗೆ ಇಲ್ಲ, ನಾನೊಂದು ಸಣ್ಣ ಹೋಟೆಲ್ ನಡೆಸುತ್ತಿದ್ದೀನಿ ನೀವು ಅಲ್ಲೇ ಬಂದು ಇರಬಹುದು' ಅಂತ ಆಫರ್ ಮಾಡ್ತಾಳೆ. ಬಾಬ್ ಕೂಡ ಅದಕ್ಕೆ ಒಪ್ಪಿಗೆ ಸೂಚಿಸಿ ಜೋಸಿಯ ಮನೆಯಲ್ಲಿ ಹೋಗಿ ಉಳಿದುಕೊಳ್ಳುತ್ತಾನೆ.

  ಜೋಸಿಯಲ್ಲಿ ಚಿಗುರಿದ ಕನಸುಗಳು

  ಜೋಸಿಯಲ್ಲಿ ಚಿಗುರಿದ ಕನಸುಗಳು

  ಬಾಬ್ ಮನೆಗೆ ಬಂದದ್ದೇ ತಡ ಜೋಸಿ ಜೀವನದಲ್ಲಿ ಬದಲಾವಣೆಗಳು ಮೊದಲಾಗುತ್ತದೆ. ಬಾಬ್ ಯನ್ನು ಸದಾ ಸಂತೋಷವಾಗಿಡಲು ಸಮಯಕ್ಕೆ ಸರಿಯಾಗಿ ಅವನಿಗೆ ಫುಡ್,ಹಾಸ್ಪಿಟಲಿಟಿ ವ್ಯವಸ್ಥೆ ಮಾಡುತ್ತಿರುತ್ತಾಳೆ. ಬಾಬ್ ಕೂಡ ಬೇರೆ ಯಾವುದೇ ಹೋಟಲ್ಗೆ ಹೋಗಿದ್ದರು ಇಂತಹ ವ್ಯವಸ್ಥೆಗಳು ಸಿಗುತ್ತಿರಲಿಲ್ಲ ಅಂತ ಹೇಳುತ್ತಾನೆ.

  ಇಲ್ಲಿಂದ 18 ಹರೆಯದ ಹುಡುಗಿಯಂತೆ ಡ್ರೆಸ್ ಮಾಡಿಕೊಂಡು ಬಾಬ್ ನ ಇಂಪ್ರೆಸ್ ಮಾಡಲು ನೋಡುತ್ತಾಳೆ. ಬಾಬ್ ಮಾತ್ರ ಆಕೆಯನ್ನು ಹಿರಿಯ ವಯಸ್ಸಿನ ಮಹಿಳೆ ಅಂತ ಗೌರವದಿಂದ ನೋಡುತ್ತಿರುತ್ತಾನೆ. ಅದರಲ್ಲೂ ಒಂದು ದಿನ ಅವಳನ್ನು ಸದಾ ಕೆಣಕುತ್ತಿದ್ದ ಯುವಕರ ಗುಂಪು ಜೋಸಿ ನ ಕೆಣಕಲು ನೋಡಿದಾಗ ಬಾಬ್ ಆ ಹುಡುಗರಿಗೆ ಹೊಡೆದು ಬುದ್ಧಿ ಕಲಿಸುತ್ತಾನೆ. ಇದರಿಂದ ಮತ್ತಷ್ಟು ಸಂತೋಷಗೊಂಡ ಜೋಸಿ ಪೂರ್ತಿಯಾಗಿ ಬಾಬ್ ಯ ಪ್ರೀತಿಯಲ್ಲಿ ಬೀಳುತ್ತಾಳೆ. ಇದರ ಮಧ್ಯೆ ಸಾರಾ ಕಡೆಯಿಂದ ಒಂದು ಪತ್ರ ಬರುತ್ತದೆ. ನಾನು ಕೆಲಕಾಲ ಅಲ್ಲಿಗೆ ಬಂದು ಉಳಿಯುವುದಾಗಿ ಸಾರಾ ಪತ್ರದಲ್ಲಿ ಬರೆದಿರುತ್ತಾಳೆ. ನೀನು ನಿನಗೆ ಇಷ್ಟಬಂದಷ್ಟು ಸಮಯ ಇಲ್ಲಿ ಉಳಿಯಬಹುದು ಅಂತ ಜೋಸಿ ಪತ್ರ ಬರೆದು ಹೇಳುತ್ತಾಳೆ. ಇದಾದ ಕೆಲವೇ ದಿನಕ್ಕೆ ಸಾರಾ ಮನೆಗೆ ಬರುತ್ತಾಳೆ. ಇಲ್ಲಿಂದ ಕತೆಗೆ ಯಾವ ತರದ ತಿರುವು ಸಿಗಬಹುದು ಅಂತ ನೀವು ಉಳಿಸಬಹುದು! ಜೋಸಿ ಸಾರಾಗೆ ತಾನು ಬಾಬ್ ಯಿಂದ ತಾನು ತುಂಬಾ ಸಂತೋಷವಾಗಿ ಇರುವುದಾಗಿ ಹೇಳುತ್ತಾಳೆ. ಅವಳ ಮಾತುಗಳನ್ನು ಕೇಳಿದ ಸಾರಾಗೆ ಜೋಸಿ, ಬಾಬ್ ವಿಷಯದಲ್ಲಿ ಭ್ರಮೆಯಲ್ಲಿ ಬದುಕುತ್ತಿದ್ದಾಳೆ ಅಂತ ಅರಿವಿಗೆ ಬರುತ್ತದೆ.

  ಬಾಬ್ ತನ್ನಿಂದ ದೂರವಾಗುವ ಆತಂಕ

  ಬಾಬ್ ತನ್ನಿಂದ ದೂರವಾಗುವ ಆತಂಕ

  ಒಂದು ರಾತ್ರಿ ಆಲ್ ಆಫ್ ಸಡನ್ ವಿಕ್ಕಿ-ಸಾರಾ ಮೈ ಮರೆತು ಒಂದಾಗುತ್ತಾರೆ. ಇದನ್ನು ಕಣ್ಣಾರೆ ನೋಡುವ ಜೋಸಿ ಗೆ ಸಾರಾ ಮೇಲೆ ಕೆಟ್ಟ ಕೋಪ ಬರುತ್ತದೆ. ಬಾಬ್ ತನ್ನ ಜೀವನದಿಂದ ದೂರವಾಗುತ್ತಿದ್ದಾನೆ ಎಂಬ ಭಯ ಜೊತೆಗೆ ತಾನು ಮತ್ತೆ ಏಕಾಂಗಿ ಆಗುವ ನೋವು ಕೂಡ ಅಲ್ಲಿ ವ್ಯಕ್ತವಾಗುತ್ತದೆ. ಮರುದಿನ ಜೋಸಿಗೆ ಸಾರಾ ಮಧ್ಯೆ ಸಣ್ಣ ಮನಸ್ತಾಪ ಕೂಡ ಉಂಟಾಗುತ್ತದೆ. ಇದನ್ನು ದೂರದಿಂದ ಗಮನಿಸುತ್ತಿದ್ದ ಪಕ್ಕದಮನೆಯ ಹಿರಿಯ ವಯಸ್ಸಿನ ಮುದುಕಿಯನ್ನು ಬೇಟಿಯಾಗಲು ಸಾರಾ ಅವರ ಮನೆಗೆ ಹೋಗುತ್ತಾಳೆ. ಆಕೆ ಮೂಲತಃ ಒಂದು ಅಂಗವಿಕಲೆ ನಡೆಯಲಾಗದ ದುಸ್ಥಿತಿಯಲ್ಲಿರುವ ಆಕೆ ಸಾರಾಗೆ ಜೋಸಿಯ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳುತ್ತಾಳೆ. ಆದರೆ ಮನೆಯ ಮೇಲ್ಭಾಗದ ಕಿಟಕಿಯಿಂದ ಇದನ್ನು ಗಮನಿಸಿದ ಜೋಸಿ ಪಕ್ಕದ ಮನೆಯವಳು ತನ್ನ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಮೂಡಿಸುವ ಮಾತುಗಳು ಹೇಳಿದ್ದಾಳೆ ಎಂದು ಭಾವಿಸುತ್ತಾಳೆ. ಮನೆಗೆ ಬಂದ ಸಾರಾ ಜೊತೆಯಲ್ಲಿ ಗಲಾಟೆ ಮಾಡುತ್ತಾಳೆ. ಸಾರಾ ತಾನು ಇನ್ನು ಇಲ್ಲಿ ಇರಲು ಸಾಧ್ಯವಿಲ್ಲ ಎಂದು ಹೇಳಿ ಅಲ್ಲಿಂದ ಹೊರಟುಹೋಗುತ್ತಾಳೆ. ಜೋಸಿ ಪಕ್ಕದ ಮನೆಗೆ ಹೋಗುತ್ತಾಳೆ ಹ್ಯಾಂಡಿಕ್ಯಾಪ್ ವುಮೆನ್ ಇವಳ ಜೊತೆ ಅತ್ಯಂತ ಆತ್ಮೀಯವಾಗಿ ಮಾತನಾಡುತ್ತಾಳೆ. ಆದರೆ ಜೋಸಿ ದಿಂಬಿನಿಂದ ಉಸಿರುಗಟ್ಟಿಸಿ ಆಕೆಯನ್ನು ಸಾಯಿಸಿ ಬಿಡುತ್ತಾಳೆ.

  ಲೈಂಗಿಕ ಸುಖದ ಬಯಕೆ

  ಲೈಂಗಿಕ ಸುಖದ ಬಯಕೆ

  ಒಂದು ರಾತ್ರಿ ಡ್ರಗ್ಸ್ ತೆಗೆದುಕೊಂಡು ಮಲಗಿದ್ದ ಬಾಬ್ ಮೇಲೆ ಮಲಗಿ ಬಲವಂತವಾಗಿ ಅವನ ಜೊತೆ ಲೈಂಗಿಕ ಸುಖ ಅನುಭವಿಸುವ ಪ್ರಯತ್ನ ಜೋಸಿ ಮಾಡುತ್ತಲೇ. ಬೆಳಗ್ಗೆ ಮತ್ತಿನಲ್ಲಿದ್ದ ಜಾಬ್ ಗೆ ಏನು ನಡೆದಿದೆ ಎಂಬುದು ಕೂಡ ತಿಳಿಯದಾಗಿರುತ್ತದೆ.

  ಬಾಬ್ ಅನ್ನು ಕೊಂದು ಬಿಡುತ್ತಾಳೆ ಜೋಸಿ

  ಬಾಬ್ ಅನ್ನು ಕೊಂದು ಬಿಡುತ್ತಾಳೆ ಜೋಸಿ

  ಈತನ್ಮಧ್ಯೆ ಬಾಬ್ ಗೆ ಒಂದು ಪತ್ರ ಬರುತ್ತದೆ. ಅದು ಸಾರಾ ಕಡೆಯಿಂದ, ಅವಳು ಪ್ರೆಗ್ನೆಂಟ್ ಆಗಿರುವ ವಿಷಯ ಅದರಲ್ಲಿ ಬರೆದಿರುತ್ತಾಳೆ. ತನ್ನಿಂದ ಸಾರಾ ಪ್ರೆಗ್ನೆಂಟ್ ಆಗುತ್ತಿರುವ ವಿಷಯ ತಿಳಿದು ಸಾರಾನ ಬೇಟಿಯಾಗಲು

  ಅಲ್ಲಿಂದ ಹೊರಡಲು ಮುಂದಾಗುತ್ತಾನೆ. ಶಾಶ್ವತವಾಗಿ ಮನೆ ತೊರೆದು ಹೋಗುತ್ತಿರುವುದಾಗಿ ಬಾಬ್ ಹೇಳಿದಾಗ ಆವೇಶದಲ್ಲಿ ಜೋಸಿ ತವಾ ಫ್ಯಾನ್ ಹಿಡಿದು ಬಲವಾಗಿ ಅವನ ತಲೆಗೆ ಹೊಡೆಯುತ್ತಾಳೆ. ಅವನು ಕೆಳಗೆ ಕುಸಿದು ಬೀಳುತ್ತಾನೆ. ಹಾಗೆ ಕುಸಿದುಬಿದ್ದ ಅವನನ್ನು ಜೋಸಿ ಕೊಂದು ಕುಂದುಬಿಡುತ್ತಾಳೆ. ನಂತರ ಸಾರಾ ಬರೆದ ಪತ್ರ ನೋಡಿ ಪಶ್ಚಾತಾಪ ಪಡುತ್ತಾಳೆ. ಬಾಬ್ ಶವವನ್ನು ತೆಗೆದುಕೊಂಡು ಹೋಗಿ ಮನೆಯ ಮುಂದಿನ ಗಾರ್ಡನ್‌ನಲ್ಲಿ ಹೂತು ಬಿಡುತ್ತಾಳೆ. ಆನಂತರ ಸಾರಾಗೆ ಒಂದು ಪತ್ರ ಬರೆದು ತಾನು ಕೂಡಿಟ್ಟಿರುವ ಹಣದಲ್ಲಿ ವರ್ಲ್ಡ್ ಟೂರ್ ಹೊರಟಿರುವುದಾಗಿಯೂ, ನೀನು ಬಯಸಿದರೆ ಇಲ್ಲಿ ಬಂದು ಇರಬಹುದು ಅಂತ ಅದರಲ್ಲಿ ಬರೆದಿರುತ್ತಾಳೆ. ಸಾರಾ ಅವಳ ಮನೆಗೆ ಬಂದಾಗ ಗಾರ್ಡನ್ನಲ್ಲಿ ಒಂದು ಗಿಡ ಕಾಣುತ್ತದೆ (ಬಾಬ್ ಹೂತಿಟ್ಟ ಜಾಗ)ಹಿಂದೆ ಬಂದಾಗ ಈ ಗಿಡ ಇರಲಿಲ್ಲ ಅಂತ ಅವಳು ಕೇಳಿದಾಗ, ಇತ್ತೀಚೆಗೆ ಪ್ರೀತಿಯಿಂದ ಗಿಡವನ್ನು ಬೆಳೆಸುತ್ತಿರುವುದಾಗಿ ಜೋಸಿ ಹೇಳುತ್ತಾಳೆ. ಜಾಬ್ ಬಗ್ಗೆ ಸಾರಾ ವಿಚಾರಿಸಿದಾಗ ' ಅವನಿಗೊಂದು ಪತ್ರ ಬಂತು, ಅದನ್ನು ಓದಿದವನೇ ಇಲ್ಲಿಂದ ಹೊರಟುಬಿಟ್ಟ' ಅಂತ ಬದಲು ಕೊಡುತ್ತಾಳೆ ಜೋಸಿ. ಜೋಸಿ ವರ್ಲ್ಡ್ ಟೂರ್ ಗೆ ಹೊರಡುತ್ತಾಳೆ. ಸಾರಾ, ಬಾಬ್ ಮತ್ತೆ ಬರಬಹುದು ಎಂಬ ನಿರೀಕ್ಷೆಯೊಂದಿಗೆ ಆ ಮನೆಯೊಳಗೆ ಉಳಿಯುತ್ತಾಳೆ. ಇಲ್ಲಿಗೆ ಕಥೆ ಮುಗಿಯುತ್ತದೆ.

  2019 ರಲ್ಲಿ ಬಿಡುಗಡೆ ಆದ ಸಿನಿಮಾ

  2019 ರಲ್ಲಿ ಬಿಡುಗಡೆ ಆದ ಸಿನಿಮಾ

  81 ನಿಮಿಷಗಳ ಅವಧಿಯ ಟಾಮಿ ಸ್ಟೋವಾಲ್ ನಿರ್ದೇಶನದ ಈ ಚಿತ್ರ 2019ರಲ್ಲಿ ಬಿಡುಗಡೆಯಾಯಿತು. ರೂಮ್ ಫಾರ್ ರೆಂಟ್ ನೋಡುಗರಿಗೆ ಅಂತಹ ವಿಶೇಷ ಆಸಕ್ತಿಯನ್ನು ಉಂಟುಮಾಡುವುದಿಲ್ಲ. ಕೆಲವೊಂದು ಸಂದರ್ಭಗಳು ಮತ್ತು ಸಮಯದಲ್ಲಿ ಚಿತ್ರ ಎಮೋಷನಲ್ ಆಗಿ ಕಂಡರು, ಒಟ್ಟಾರೆ ಚಿತ್ರ ಮಂದಗತಿಯಲ್ಲಿ ಸಾಗುತ್ತದೆ. 80 ವರ್ಷದ ಮುದುಕಿಯ ಭಾವನೆಗಳನ್ನು ಹೆಚ್ಚಿಗೆ ಲೈಂಗಿಕ ಆಸೆಗಳಿಗೆ ಜೋಡಿಸಿರುವುದು ಈ ಚಿತ್ರದ ದೊಡ್ಡ ಡ್ರಾಬ್ಯಾಕ್.

  English summary
  English movie 'Room For Rent' review in Kannada. This movie released in 2019, directed by Tommy Stovall.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X