Royal Twitter Review: 'ರಾಯಲ್' ರಾಜ್ಯಭಾರ ನೋಡಿದವರು ಏನಂದ್ರು?

ದಿನಕರ್ ತೂಗುದೀಪ ನಿರ್ದೇಶನದ 'ರಾಯಲ್' ಸಿನಿಮಾ ರಾಜ್ಯಾದ್ಯಂತ ತೆರೆಗೆ ಬಂದಿದೆ. ವಿರಾಟ್ ಹಾಗೂ ಶ್ರೀಲೀಲಾ ಚಿತ್ರದ ಲೀಡ್ ರೋಲ್‌ಗಳಲ್ಲಿ ಮಿಂಚಿದ್ದಾರೆ. ಈ ರೊಮ್ಯಾಂಟಿಕ್ ಆಕ್ಷನ್ ಚಿತ್ರವನ್ನು ನಟ ದರ್ಶನ್ ಕೂಡ ನೋಡಿ ಮೆಚ್ಚಿಕೊಂಡಿದ್ದರು. 6 ವರ್ಷಗಳ ಬಳಿಕ ದಿನಕರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಜಯಣ್ಣ, ಭೋಗೇಂದ್ರ ನಿರ್ಮಾಣದ 'ರಾಯಲ್' ಚಿತ್ರವನ್ನು ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ವಿತರಣೆ ಮಾಡಿದೆ. ಚರಣ್ ರಾಜ್ ಸಂಗೀತ, ಸಂಕೇತ್ ಮೈಸೂರು ಛಾಯಾಗ್ರಹಣ ಚಿತ್ರಕ್ಕಿದೆ. ಬಹಳ ಅದ್ಧೂರಿಯಾಗಿಯೇ ಸಿನಿಮಾ ಮೂಡಿ ಬಂದಿದೆ. ಚಿತ್ರದಲ್ಲಿ 4 ಹಾಡುಗಳಿಂದ 'ಟಾಂಗ್ ಟಾಂಗ್' ಹಾಡು ಬಹಳ ದಿನಗಳಿಂದ ಸದ್ದು ಮಾಡಿತ್ತು. ರಂಗಾಯಣ ರಘು, ಛಾಯಾ ಸಿಂಗ್, ರಘು ಮುಖರ್ಜಿ, ಅಚ್ಯುತ್‌ ಕುಮಾರ್, ಪ್ರಮೋದ್ ಶೆಟ್ಟಿ ಚಿತ್ರದ ತಾರಾಗಣದಲ್ಲಿದ್ದಾರೆ.

Royal Twitter Review  Check out what netizens have to say about the Dinakar Thoogudeepa Directional

ಬಹಳ ಹಿಂದೆ ಶುರುವಾಗಿದ್ದ 'ರಾಯಲ್' ಸಿನಿಮಾ ಕೊಂಚ ತಡವಾಗಿ ತೆರೆಗೆ ಬಂದಿದೆ. 'ಕಿಸ್' ಸಿನಿಮಾ ಬಂದು 6 ವರ್ಷಗಳ ಬಳಿಕ ವಿರಾಟ್ ಈ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದಾರೆ. ವಿಶೇಷ ಅಂದ್ರೆ ದಿನಕರ್ ಪುತ್ರ ಸೂರ್ಯ ಕೂಡ ಬಾಲನಟನಾಗಿ ಕಾಣಿಸಿಕೊಂಡಿದ್ದಾನೆ. ಚಿತ್ರದಲ್ಲಿ ನಾಯಕನ ಬಾಲ್ಯದ ಸನ್ನಿವೇಶಗಳಲ್ಲಿ ಮಿಂಚಿದ್ದಾನೆ. ಈಗಾಗಲೇ ಸಿನಿಮಾ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆ ಚಿತ್ರಕ್ಕೆ ಕಂಟಕವೊಂದು ಎದುರಾಗಿದೆ.

'ರಾಯಲ್' ಕ್ಲಾಸ್

ಒಳ್ಳೆ ಸಿನಿಮಾ. ವಿರಾಟ್ ಹಾಗೂ ಸಂಜನಾ ಆನಂದ್ ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡಿದ್ದಾರೆ. ಜಯಣ್ಣ, ಕೆಆರ್‌ಜಿ ಜೊತೆಯಾಗಿ ಬಂದಾಗ ಸೀನ್ 'ರಾಯಲ್' ಕ್ಲಾಸ್ ಆಗಿರುತ್ತೆ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

ದಿನಕರ್ ನಿರ್ದೇಶನ ಸೂಪರ್

ಚಿತ್ರಮಂದಿರಗಳಲ್ಲಿ 'ರಾಯಲ್' ಮಿಸ್ ಮಾಡಿಕೊಳ್ಳಬೇಡಿ. ಕನ್ನಡಿಗರ ಮನಗೆದ್ದ ಮಾಸ್. ಎಮೋಷನಲ್ ಎಂಟರ್‌ಟೈನರ್. ದಿನಕರ್ ನಿರ್ದೇಶನ ಚೆನ್ನಾಗಿದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

Royal Twitter Review  Check out what netizens have to say about the Dinakar Thoogudeepa Directional

ಕ್ಲೈಮ್ಯಾಕ್ಸ್‌ನಲ್ಲಿ ಒಳ್ಳೆ ಟ್ವಿಸ್ಟ್

ವಿರಾಟ್ ನಟನೆ ಬಹಳ ಚೆನ್ನಾಗಿದೆ. ಒಳ್ಳೆ ಸಿನಿಮಾ ಎಂದು ಮಗದೊಬ್ಬರು ಟ್ವೀಟಿಸಿದ್ದಾರೆ. ಸಿನಿಮಾ ಚೆನ್ನಾಗಿದೆ. ವಿರಾಟ್ ಡ್ಯಾನ್ಸ್, ಫೈಟ್ಸ್ ಬೆಂಕಿ. ಫ್ಯಾಮಿಲಿ ಎಂಟರ್‌ಟೈನರ್, ದಿನಕರ್ ನಿರ್ದೇಶನ ಸಖತ್ತಾಗಿದೆ. ಕ್ಲೈಮ್ಯಾಕ್ಸ್‌ನಲ್ಲಿ ಸಖತ್ ಟ್ವಿಸ್ಟ್ ಕೊಟ್ಟಿದ್ದಾರೆ ಎಂದು ಇನ್ನೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಟ್ವಿಸ್ಟ್ ಚೆನ್ನಾಗಿದೆ

ಸಾಂಗ್ಸ್ ತುಂಬಾ ಚೆನ್ನಾಗಿದೆ. ಇಂಟರ್‌ವಲ್ ಬ್ಲಾಕ್ ಹಾಗೂ ಟ್ವಿಸ್ಟ್ ಚೆನ್ನಾಗಿ ಇಟ್ಟಿದ್ದಾರೆ. ವಿರಾಟ್, ಸಂಜನಾ ಆಕ್ಟಿಂಗ್ ಸಖತ್ ಆಗಿದೆ. ಒಳ್ಳೆ ಲವ್ ಸ್ಟೋರಿ ಸಿನಿಮಾ ನೋಡಿದ ಮತ್ತೊಬ್ಬರ ಅಭಿಪ್ರಾಯ.

ನೆಗೆಟಿವ್ ರಿವ್ಯೂಸ್

'ರಾಯಲ್' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ರಿವ್ಯೂಸ್, ಕಾಮೆಂಟ್ಸ್ ಹೆಚ್ಚಾಗಿದೆ ಎನ್ನುವ ಆರೋಪ ಕೇಳಿಬರ್ತಿದೆ. ಕೆಲವರು ಬೇಕಂತಲೇ ಚಿತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದರ್ಶನ್ ಅಭಿಮಾನಿಗಳು ಆರೋಪಿಸುತ್ತಿದ್ದಾರೆ. ಹೊಸ ನಟನ ಚಿತ್ರಕ್ಕೆ ಹೀಗೆ ಮಾಡುವುದು ಸರಿಯಲ್ಲ ಎನ್ನುತ್ತಿದ್ದಾರೆ. ಬುಕ್‌ಮೈ ಶೋನಲ್ಲಿ ಸುಖಾ ಸುಮ್ಮನೆ ನೆಗೆಟಿವ್ ಹರಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

More from Filmibeat

English summary
Royal ‍‍‍X Review: Netizens left divided over Viraat and Sanjana Anand starrer Royal
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X