twitter
    For Quick Alerts
    ALLOW NOTIFICATIONS  
    For Daily Alerts

    RRR Kannada dubbed Movie Review : (ಕನ್ನಡ ಆವೃತ್ತಿ) ಚಿತ್ರ ವಿಮರ್ಶೆ: ಸ್ಲೋ ಎಂಡ್ ಸ್ಟಡಿ ವಿನ್ಸ್ ದಿ ರೇಸ್

    |

    ಬಾಲಕಿಯೊಬ್ಬಳು ಬ್ರಿಟಿಷ್ ರಾಣಿಗೆ ಮೆಹಂದಿ ಹಾಕುತ್ತಿರುತ್ತಾಳೆ, ಅದಕ್ಕೊಂದು ಸುಂದರವಾದ ಹಿನ್ನಲೆ ಸಂಗೀತ. ಕೈಗೆ ಹಾಕಿದ ಮೆಹಂದಿಗೆ ಭಕ್ಷೀಸ್ ಎನ್ನುವಂತೆ ಎರಡು ಕಾಯಿನ್ ಗಳನ್ನು ಆಂಗ್ಲ ಅಧಿಕಾರಿಗಳು ಬಿಸಾಕಿ, ಬಾಲಕಿಯ ತಾಯಿಗೆ ಹೊಡೆದು ಅವಳನ್ನು ರಾಣಿ ತನ್ನ ಅರಮನೆಗೆ ಕರೆದುಕೊಂಡು ಹೋಗುತ್ತಾಳೆ. ಅಲ್ಲಿಂದ ಎಸ್.ಎಸ್.ರಾಜಮೌಳಿಯ ಕನಸಿನ RRR ದೃಶ್ಯಕಾವ್ಯ ಆರಂಭವಾಗುತ್ತದೆ.

    Rating:
    3.5/5

    ಟೈಟಲ್ ಕಾರ್ಡ್ ಮುಗಿದು ಚಿತ್ರ ಆರಂಭವಾಗುವಾಗ ಸೀಟಿನ ಹಿಂದಿನಿಂದ ಒಬ್ಬ ಪ್ರೇಕ್ಷಕ ಇನ್ನೊಬ್ಬನಲ್ಲಿ ಹೇಳುತ್ತಿದ್ದ, ''ಏನ್ ಗುರು ಪುನೀತ್ ರಾಜಕುಮಾರ್ ಗೆ ಕನಿಷ್ಠ ಒಂದು ಶ್ರದ್ದಾಂಜಲಿ ಚಿತ್ರತಂಡ ಅರ್ಪಿಸಿಲ್ಲ ನೋಡು'' ಎಂದು. ಇರಲಿ, ಪುನೀತ್ ಇದ್ದಾಗಲೂ ಇದನ್ನೆಲ್ಲಾ ಬಯಸಿದವರಲ್ಲಾ, ಈಗ ಅವರ ಆತ್ಮವೂ ಅದನ್ನು ಬಯಸದು..

    RRR: ಚಿತ್ರವನ್ನು ಯಾಕೆ ನೋಡಬೇಕು? 3 ಕಾರಣ ಇಲ್ಲಿವೆ ನೋಡಿ!RRR: ಚಿತ್ರವನ್ನು ಯಾಕೆ ನೋಡಬೇಕು? 3 ಕಾರಣ ಇಲ್ಲಿವೆ ನೋಡಿ!

    ಬುಡಕಟ್ಟು ಜನಾಂಗದ ಯುವಕನೊಬ್ಬ (ಜೂ. ಎನ್ಟಿಆರ್) ಕಾಡಿನಿಂದ ಬ್ರಿಟೀಷರು ಬಲವಂತದಿಂದ ಕರೆದುಕೊಂಡು ಹೋಗಿರುವ ಬಾಲಕಿಯನ್ನು ವಾಪಸ್ ಕರೆತರುವ ಉದ್ದೇಶವನ್ನು ಹೊಂದಿರುತ್ತಾನೆ. ಇನ್ನೊಂದು ಕಡೆ, ತಂದೆಯ ಮಾತಿನಂತೆ ಬ್ರಿಟೀಷ್ ಅಧಿಕಾರಿಯಾಗಿ (ರಾಮ್ ಚರಣ್) ತನ್ನ ಊರಿನ ಪ್ರತಿಯೊಬ್ಬರ ಕೈಗೂ ಬಂದೂಕನ್ನು ನೀಡುವ ಉದ್ದೇಶವನ್ನು ಇಟ್ಟುಕೊಂಡು ಆಂಗ್ಲ ಪಡೆ ಸೇರಿಕೊಂಡಿರುತ್ತಾನೆ.

    ಇಬ್ಬರ ಪ್ರಯತ್ನಕ್ಕೆ ಯಶಸ್ಸು ಸಿಗುತ್ತದೆಯೇ ಎನ್ನುವುದು ಚಿತ್ರಕಥೆ. ಚಿತ್ರ ಏರಿಳಿತದಿಂದ ಸಾಗಿದರೂ, ಎಟ್ ದಿ ಎಂಡ್ ಭಾರತೀಯರು ಹೆಮ್ಮೆಪಡುವಂತಹ ಚಿತ್ರವನ್ನು ರಾಜಮೌಳಿ ನೀಡಿದ್ದಾರೆಂದರೆ ತಪ್ಪಾಗಲಾರದು. ಹಾಗಂತ ಸಿನಿಮಾದಲ್ಲಿ ನೆಗೆಟೀವ್ ಅಂಶ ಇಲ್ಲವೆಂದಲ್ಲ..

     RRR ಪ್ಯಾನ್ ಇಂಡಿಯಾ ರಿಲೀಸ್ ಎನ್ನುವ ಐವಾಶ್: ಇದಕ್ಕೆ ಕಾರಣ ನಮ್ಮವರೇ RRR ಪ್ಯಾನ್ ಇಂಡಿಯಾ ರಿಲೀಸ್ ಎನ್ನುವ ಐವಾಶ್: ಇದಕ್ಕೆ ಕಾರಣ ನಮ್ಮವರೇ

     ಇಬ್ಬರು ಸ್ಟಾರ್ ನಟರಿಗೆ ಅಪಾರವಾದ ಅಭಿಮಾನಿ ಬಳಗ

    ಇಬ್ಬರು ಸ್ಟಾರ್ ನಟರಿಗೆ ಅಪಾರವಾದ ಅಭಿಮಾನಿ ಬಳಗ

    ದೇಶಪ್ರೇಮ, ಸೆಂಟಿಮೆಂಟ್, ಗೆಳೆತನ, ಸಾಹಸ ದೃಶ್ಯಗಳು, ಹಾಡುಗಳನ್ನು ಹದವಾಗಿ ಬೆರೆಸಿ 186 ನಿಮಿಷದ ಚಿತ್ರವನ್ನು ನಿರ್ದೇಶಕರು ತೆರಗೆ ತಂದಿದ್ದಾರೆ. ಇಬ್ಬರು ಸ್ಟಾರ್ ನಟರಿಗೆ ಅಪಾರವಾದ ಅಭಿಮಾನಿ ಬಳಗ ಇರುವುದರಿಂದ ಸಮನಾಗಿ ಸ್ಕ್ರೀನ್ ಸ್ಪೇಸ್ ಅನ್ನು ಇಬ್ಬರಿಗೂ ಕೊಡಬೇಕಾಗುತ್ತದೆ. ಇದನ್ನು ಚೆನ್ನಾಗಿ ಅರಿತಿರುವ ನಿರ್ದೇಶಕರು ಇಬ್ಬರನ್ನೂ ಹದವಾಗಿ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಜೊತೆಗೆ, ಈ ಇಬ್ಬರು ನಟರು ಪೈಪೋಟಿಗೆ ಬಿದ್ದಂತೆ ನಟಿಸಿದ್ದಾರೆ ಕೂಡಾ..

     ಚಿತ್ರದ ಪ್ರತೀ ಫ್ರೇಂಗಳು ಶ್ರೀಮಂತಿಕೆಯಿಂದ ಕೂಡಿದೆ

    ಚಿತ್ರದ ಪ್ರತೀ ಫ್ರೇಂಗಳು ಶ್ರೀಮಂತಿಕೆಯಿಂದ ಕೂಡಿದೆ

    ಚಿತ್ರದ ಪ್ರತೀ ಫ್ರೇಂಗಳು ಶ್ರೀಮಂತಿಕೆಯಿಂದ ಕೂಡಿದೆ. ಸೇತುವೆಯಲ್ಲಿ ರೈಲು ಚಲಿಸುತ್ತಿರುವಾಗ ಅದಕ್ಕೆ ಬೆಂಕಿ ತಗುಲಿ ಅದರ ಬೋಗಿಗಳು ನದಿಗೆ ಬೀಳುವುದು. ಅಲ್ಲಿ ದೋಣಿಯಲ್ಲಿ ಸಿಲುಕಿದ್ದ ಬಾಲಕನನ್ನು ಇಬ್ಬರು ಹೀರೋಗಳು ರಕ್ಷಿಸುವ ದೃಶ್ಯವಂತೂ ಸೂಪರ್. ನಿರ್ದೇಶಕರ ಪರಿಕಲ್ಪನೆ ಮತ್ತು ಲಾಂಗ್ ಶಾಟ್ ನಲ್ಲಿ ಬಂದ ಸಿನಿಮಾಟೋಗ್ರಾಫರ್ ಕೈಚಳಕಕ್ಕೆ ಶಹಬ್ಬಾಸ್ ಅನ್ನಲೇಬೇಕು. ಚಿತ್ರದ ಕನ್ನಡ ಡಬ್ಬಿಂಗ್ ನಲ್ಲಿ ತೆಲುಗು ಶ್ಯಾಡೋ ಇದ್ದರೂ, ಅಚ್ಚುಕಟ್ಟಾಗಿ ಬಂದಿದೆ. ಜ್ಯೂ.ಎನ್ಟಿಆರ್ ಮತ್ತು ರಾಮ್ ಚರಣ್ ಅವರೇ ಕನ್ನಡ ವಾಯ್ಸ್ ಡಬ್ ಮಾಡಿರುವುದು ಎನ್ನುವುದು ಗಮನಿಸಬೇಕಾದ ವಿಚಾರ.

     ನಾಟು..ನಾಟು ಹಾಡಂತೂ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿ ಕುಣಿಸುತ್ತದೆ

    ನಾಟು..ನಾಟು ಹಾಡಂತೂ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿ ಕುಣಿಸುತ್ತದೆ

    ಚಿತ್ರದಲ್ಲಿ ಬರುವ ನಾಟು..ನಾಟು ಹಾಡಂತೂ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿ ಕುಣಿಸುತ್ತದೆ. ಜ್ಯೂ.ಎನ್ಟಿಆರ್ ಮತ್ತು ರಾಮ್ ಚರಣ್ ತಮಗಿರುವ ಡ್ಯಾನ್ಸ್ ಪ್ರತಿಭೆಯನ್ನು ಅಕ್ಷರಶಃ ಒರೆಗೆ ಹಚ್ಚಿದ್ದಾರೆ. ಚಿತ್ರದ ಹಿನ್ನಲೆ ಸಂಗೀತ, 'ಕೊಮರಂ ಭೀಮಂ 'ಹಾಡಂತೂ ಮತ್ತೆ-ಮತ್ತೆ ಕೇಳಬೇಕೆನಿಸುತ್ತದೆ. ಸಂಗೀತ ನೀಡಿದ ಎಂ.ಎಂ.ಕೀರವಾಣಿ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಚಿತ್ರದಲ್ಲಿ ಕಲಾವಿದರ ದಂಡೇ ಇದೆ. ಅಜಯ್ ದೇವಗನ್, ರೇ ಸ್ಟೀವನ್ಸನ್, ಆಲಿಸನ್ ಡೊಡಿ, ಸಮುತಿರಕಣಿ, ಆಲಿಯಾ ಭಟ್, ಶ್ರೇಯಾ ಶಿರಿನ್, ಮಕರಂದ್ ದೇಶಪಾಂಡೆ ಮುಂತಾದವರು ತಮ್ಮ-ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

     ಸಾಹಸ ದೃಶ್ಯಗಳಂತೂ ಮೈನವಿರೇಳಿಸುವಂತೆ ತೆಗೆಯಲಾಗಿದೆ

    ಸಾಹಸ ದೃಶ್ಯಗಳಂತೂ ಮೈನವಿರೇಳಿಸುವಂತೆ ತೆಗೆಯಲಾಗಿದೆ

    ತಾಂತ್ರಿಕ ವಿಭಾಗದ ಪರಿಶ್ರಮ ಚಿತ್ರದ ಪ್ರತೀ ಫ್ರೇಂನಲ್ಲೂ ಎದ್ದು ಕಾಣುತ್ತದೆ. ಸಾಹಸ ದೃಶ್ಯಗಳಂತೂ ಮೈನವಿರೇಳಿಸುವಂತೆ ತೆಗೆಯಲಾಗಿದೆ. ಚಿತ್ರ ಕೆಲವೊಮ್ಮೆ ನಿಧಾನಗತಿಯಲ್ಲಿ ಸಾಗುತ್ತದೆ, ಕೆಲವೊಮ್ಮೆ ಸೀಟಿನ ಅಂಚಿನಲ್ಲಿ ಕೂತು ಕೊಳ್ಳುವಂತೆ ಮಾಡುತ್ತದೆ. ಚಿತ್ರಕ್ಕೆ ಹದಿನೈದು ನಿಮಿಷ ಕತ್ತರಿ ಪ್ರಯೋಗಿಸಬಹುದಿತ್ತು. ಇನ್ನು, ಚಿತ್ರದ ಗ್ರಾಫಿಕ್ ಕೆಲಸಗಳು ಹೈಸ್ಟ್ಯಾಂಡರ್ಡ್ ಎಂದು ಹೇಳಲು ಬರುವುದಿಲ್ಲ. ಜೊತೆಗೆ, ಚಿತ್ರದಲ್ಲಿ ಲಾಜಿಕ್ ಕೇಳುವಂತಿಲ್ಲಾ.. ಬರೀ ಮ್ಯಾಜಿಕ್..

     ರಾಜಮೌಳಿ ಎಂಥ ಕ್ರಿಯೇಟಿವ್ ನಿರ್ದೇಶಕ ಎನ್ನುವುದನ್ನು ಮತ್ತೆ ತೋರಿಸಿದ್ದಾರೆ

    ರಾಜಮೌಳಿ ಎಂಥ ಕ್ರಿಯೇಟಿವ್ ನಿರ್ದೇಶಕ ಎನ್ನುವುದನ್ನು ಮತ್ತೆ ತೋರಿಸಿದ್ದಾರೆ

    'ನನ್ನ ಪ್ರತೀ ಚಿತ್ರದಲ್ಲೂ ರಾಮಾಯಣ ಮತ್ತು ಮಹಾಭಾರತದ ಪ್ರಭಾವ ಇರುತ್ತದೆ. ಆ ಮಹಾನ್ ಗ್ರಂಥದ ಎಳೆಯನ್ನು ಇಟ್ಟುಕೊಂಡೇ ನಾನು ಸಿನಿಮಾ ಮಾಡುವುದು' ಎಂದು ಹಿಂದೊಮ್ಮೆ ರಾಜಮೌಳಿ ಹೇಳಿದ್ದರು. RRR ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲೂ ಅದರ ಪ್ರಭಾವವನ್ನು ನೋಡಬಹುದು. ರಾಜಮೌಳಿ ತಾನೊಬ್ಬ ಎಂತಹ ಕ್ರಿಯೇಟಿವ್ ನಿರ್ದೇಶಕ ಎನ್ನುವುದನ್ನು ಮತ್ತೆ-ಮತ್ತೆ ತೋರಿಸಿದ್ದಾರೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಆರ್ ಆರ್ ಆರ್ ಸಿನಿಮಾ..

    English summary
    Most Anticipated Rajamouli Directed RRR Kannada Version Movie Review. Know More
    Monday, March 28, 2022, 13:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X