For Quick Alerts
  ALLOW NOTIFICATIONS  
  For Daily Alerts

  RRR Twitter Review: ಟ್ವಿಟರ್‌ನಲ್ಲೂ ಬೆಂಕಿ ಹಚ್ಚಿದ ರಾಜಮೌಳಿ 'RRR'

  |

  RRR ರಾಜಮೌಳಿಯ ಮತ್ತೊಂದು ಮೆಗಾ ಸಿನಿಮಾ. ಟಾಲಿವುಡ್‌ನ ಇಬ್ಬರು ಸೂಪರ್‌ಸ್ಟಾರ್‌ಗಳನ್ನು ಒಂದೇ ಸ್ಕೀನ್‌ನಲ್ಲಿ ಕರೆತರುವುದು ಅಷ್ಟು ಸುಲಭದ ಮಾತಲ್ಲ. ಜೂ.ಎನ್‌ಟಿಆರ್ ಹಾಗೂ ರಾಮ್‌ಚರಣ್ ಇಬ್ಬರೂ ಪ್ರಮುಖ ಪಾತ್ರಗಳೂ ಇಲ್ಲಿ ಪವರ್‌ಫುಲ್ ಆಗಿರುವಂತೆ ನೋಡಿಕೊಳ್ಳಬೇಕು. ಅವರ ಮ್ಯಾನರಿಸಂಗೆ ತಕ್ಕಂತೆ ದೃಶ್ಯಗಳನ್ನು ಸೃಷ್ಟಿಸಬೇಕು. ಇದು ಒಬ್ಬ ನಿರ್ದೇಶಕನಿಗೆ ದೊಡ್ಡ ಸವಾಲು. ಇನ್ನೊಂದು ಕಡೆ ಜೂ.ಎನ್‌ಟಿಆರ್ ಹಾಗೂ ರಾಮ್‌ಚರಣ್ ಇಬ್ಬರೂ ಪೈಪೋಟಿಗೆ ಬಿದ್ದು ನಟಿಸಬೇಕು. ಆಗ ಮಾತ್ರ ಪ್ರೇಕ್ಷಕರ ಗಮನ ಸೆಳೆಯಲು ಸಾಧ್ಯ.

  RRR ಮಧ್ಯರಾತ್ರಿಯಿಂದಲೇ ಸ್ಪೆಷಲ್ ಶೋ ಕಂಡಿದೆ. ಈ ಸಿನಿಮಾಗಾಗಿ ಕಾದು ಕೂತಿದ್ದ ಅಭಿಮಾನಿಗಳು ಥಿಯೇಟರ್‌ಗೆ ನುಗ್ಗಿ ಸಿನಿಮಾ ನೋಡಿದ್ದಾರೆ. 'ಬಾಹುಬಲಿ' ಬಳಿಕ ರಾಜಮೌಳಿ ಸಿನಿಮಾ ನೋಡುತ್ತಿರುವ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ರಾಜಮೌಳಿ, ಜೂ.ಎನ್‌ಟಿಆರ್, ರಾಮ್‌ಚರಣ್ ಕಾಂಬಿನೇಷನ್‌ ಸಿನಿಮಾಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

  ರಾಜಮೌಳಿ ಸಿನಿಮಾ ಆರಂಭ ಮಾಡುವುದಕ್ಕೂ ಮುನ್ನವೇ ಇದು ಕೋಮರಂ ಭೀಮ್ ಹಾಗೂ ಅಲ್ಲೂ ಸೀತಾರಾಮ ರಾಜು ಬದುಕಿನ ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ ಎಂದು ಹೇಳಿದ್ದರು. ಹೀಗಾಗಿ RRR ಸಿನಿಮಾ ಕುತೂಹಲ ಕೆರಳಿಸಿತ್ತು. ಪ್ರೇಕ್ಷಕರು ಸಿನಿಮಾ ಬಂದವರೇ ಟ್ವಿಟರ್‌ನಲ್ಲಿ RRR ಬಗ್ಗೆ ಸಾಲುಗಳನ್ನು ಗೀಚುತ್ತಿದ್ದಾರೆ. ಹಾಗಿದ್ದರೆ, ಟ್ವಿಟರ್‌ನಲ್ಲಿ RRR ಹವಾ ಹೇಗಿದೆ? ನೋಡೋಣ ಬನ್ನಿ.

  RRR ಸಿನಿಮಾಗೆ 5 ಸ್ಟಾರ್

  ರಾಜಮೌಳಿ ನಿರ್ದೇಶನದ ಸಿನಿಮಾ RRR ನೋಡಿ ಸಿನಿಪ್ರಿಯರು ತಲೆಕೆಡಿಸಿಕೊಂಡಿದ್ದಾರೆ. ಸಿನಿಮಾ ಥ್ರಿಲ್ಲಿಂಗ್ ಆಗಿದೆ ಎನ್ನುತ್ತಿದ್ದಾರೆ. ಸಿನಿಮಾ ವೀಕ್ಷಿಸಿ ಬಂದ ಒಬ್ಬ ವ್ಯಕ್ತಿ "ಈಗಷ್ಟೇ RRR ಹಿಂದಿ ವರ್ಷನ್ ಸಿನಿಮಾ ನೋಡಿ ಬಂದೆ. ಈ ಮಾಸ್ಟರ್ ಪೀಸ್ ಬಾಹುಬಲಿ ಸಿನಿಮಾಗಿಂತ 10 ಪಟ್ಟು ಅದ್ಭುತವಾಗಿದೆ." ಎಂದು ಟ್ವಿಟರ್ ಕಮೆಂಟ್ ಮಾಡಿದ್ದಾನೆ.

  ಇದು ಮಾಸ್ಟರ್‌ಪೀಸ್

  ಇದು ಮಾಸ್ಟರ್‌ಪೀಸ್

  "ಟಾಲಿವುಡ್‌ನಲ್ಲಿ ನಿರ್ಮಿಸಿದ ಅತ್ಯದ್ಭುತ ಸಿನಿಮಾಗಳಲ್ಲಿ ಒಂದು. ಊಹಿಸಲು ಅಸಾಧ್ಯವಾದಂತಹ ಕೆಲಸ ಮಾಡಿದ್ದಕ್ಕೆ ಇಡೀ ತಂಡಕ್ಕೆ ಧನ್ಯವಾದಗಳು. ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ಇಬ್ಬರೂ ಸಿನಿಮಾ ಮೇಲೆ ಉತ್ತಮ ಪ್ರಭಾವ ಬೀರಿದ್ದಾರೆ. ಒಂದೇ ಪದ- ಮಾಸ್ಟರ್ ಪೀಸ್." ಎಂದು ಮತ್ತೊಬ್ಬ ನೆಟ್ಟಿಗ ಸಿನಿಮಾ ನೋಡಿದ ಕೂಡಲೇ ಟ್ವಿಟರ್‌ನಲ್ಲಿ ವಿಮರ್ಶೆ ಮಾಡಿದ್ದಾನೆ.

  RRR ಮೈಂಡ್‌ಬ್ಲೋಯಿಂಗ್

  RRR ಮೈಂಡ್‌ಬ್ಲೋಯಿಂಗ್

  RRR ಸಿನಿಮಾಗಾಗಿ ಇಷ್ಟು ದಿನ ಕಾದಿದ್ದಕ್ಕೂ ಸಾರ್ಥಕವಾಯ್ತು ಎನ್ನುವ ಭಾವನೆ ಸಿನಿಪ್ರಿಯರಲ್ಲಿದೆ. ಸಿನಿಮಾ ನೋಡಿದ ಅಭಿಮಾನಿಗಳಿಗೆ ಈ ಸಿನಿಮಾವನ್ನು ಹೇಗೆ ವರ್ಣಿಸಬೇಕೋ ಗೊತ್ತಾಗುತ್ತಿಲ್ಲ. ಅದಕ್ಕೆ ಸಿನಿಮಾದ ಒಂದು ದೃಶ್ಯದ ಫೋಟೊ ತೆಗೆದು ಸ್ಕ್ರೀನ್ ಶಾಟ್ ಅನ್ನು ಶೇರ್ ಮಾಡಿದ್ದಾರೆ. " ಮೈಂಡ್‌ಬ್ಲೋಯಿಂಗ್ ಮೂವಿ." ಅಂತ ಹೇಳುತ್ತಾ ಸಿನಿಮಾಗೆ 5 ಸ್ಟಾರ್ ನೀಡಿದ್ದಾರೆ.

  ರಾಜಮೌಳಿಯಿಂದ ಮಾತ್ರ ಸಾಧ್ಯ

  ರಾಜಮೌಳಿಯಿಂದ ಮಾತ್ರ ಸಾಧ್ಯ


  RRR ಸಿನಿಮಾವನ್ನು ಹೇಗೆ ಹೊಗಳುತ್ತಿದ್ದಾರೋ ಹಾಗೇ ರಾಜಮೌಳಿ ನಿರ್ದೇಶನವನ್ನೂ ಹಾಡಿ ಹೊಗಳುತ್ತಿದ್ದಾರೆ. " ನಾನು ಇದೂವರೆಗೂ ಸಿನಿಮಾವೊಂದು ಇಷ್ಟು ಅದ್ಭುತವಾಗಿ ಶುರುವಾಗಿದ್ದನ್ನು ನೋಡಿಲ್ಲ. ಇಂತಹದ್ದನ್ನು ರಾಜಮೌಳಿಯಿಂದ ಮಾತ್ರ ಸಾಧ್ಯ. ಇಂಟರ್‌ವಲ್‌ನಲ್ಲಿ ಪ್ರೇಕ್ಷಕರು ಎದ್ದು ನಿಲ್ಲುವುದನ್ನು ನಾನು ಇದೂವರೆಗೂ ನೋಡಿರಲಿಲ್ಲ. ಸಿನಿಮಾ ಆರಂಭದಿಂದಲೇ ವೇಗ ಪಡೆದುಕೊಂಡಿದೆ. ಸಿನಿಮಾದಲ್ಲಿ ಹಲವು ಬಾರಿ ಶಿಳ್ಳೆ ಹಾಕಬೇಕು ಎನಿಸುವ, ಮೈನವಿರೇಳಿಸುವ ದೃಶ್ಯಗಳಿವೆ." ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

  ಎನ್‌ಟಿಆರ್-ರಾಮ್‌ ಚರಣ್ ಸೂಪರ್

  ಎನ್‌ಟಿಆರ್-ರಾಮ್‌ ಚರಣ್ ಸೂಪರ್

  " ಜೂ.ಎನ್‌ಟಿಆರ್ ಹಾಗೂ ರಾಮ್‌ಚರಣ್ ಅಭಿನಯ ಅತ್ಯದ್ಭುತ. ರಾಜಮೌಳಿ ನಿರ್ದೇಶನವಂತೂ ಸೂಪರ್. ಪ್ರಭಾವಬೀರುವ ಕಥೆ. ಗ್ರ್ಯಾಂಡ್ ಮೇಕಿಂಗ್, ಅದ್ಭುತ ಎನಿಸುವ ದೃಶ್ಯಗಳು ಸಿನಿಮಾವನ್ನು ಮತ್ತೊಂದು ಲೆವೆಲ್‌ಗೆ ತೆಗೆದುಕೊಂಡು ಹೋಗಿದೆ. ಥಿಯೇಟರ್‌ನಲ್ಲಿ ನೋಡಬೇಕಾದ ಸಿನಿಮಾ." ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.

  English summary
  RRR Movie Twitter Review in Kannada: Here's what netizens have to say about Jr NTR, Ram Charan, Ali Bhatt, ajay devgn starrer movie.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X