»   » ಆರ್ ಎಕ್ಸ್ ಸೂರಿ : ರಕ್ತಸಿಕ್ತ ಬೊಂಬಾಟ್ ಲವ್ ಸ್ಟೋರಿ

ಆರ್ ಎಕ್ಸ್ ಸೂರಿ : ರಕ್ತಸಿಕ್ತ ಬೊಂಬಾಟ್ ಲವ್ ಸ್ಟೋರಿ

Posted By: ಸುನಿ ಗೌಡ
Subscribe to Filmibeat Kannada

ಬಹಳ ನಿರೀಕ್ಷೆಯಿಂದ ಚಿತ್ರಮಂದಿರಕ್ಕೆ ಕಾಲಿಡುವ ದುನಿಯಾ ವಿಜಿ ಅಭಿಮಾನಿಗಳಿಗೆ ಬರೀ ಮಚ್ಚು, ಲಾಂಗು, ಹೊಡಿಯೋ, ಏ ಎತ್ರೋ ಅವನ್ನನ್ನ, ಈ ಸಲ ಬಿಡಬಾರದು ಮಚ್ಚ ಅವನನ್ನ ಅನ್ನೋ ಡೈಲಾಗ್ ಜೊತೆಗೆ ಚಿತ್ರದ ಜರ್ನಿ ಪ್ರಾರಂಭವಾಗುತ್ತದೆ.


ಮಧ್ಯಮವರ್ಗದ ಸುಂದರವಾದ ಕುಟುಂಬದಲ್ಲಿ ಬೆಳೆದಿರುವ ಸೂರಿ ಯಾವುದೋ ಕೆಟ್ಟ ಗಳಿಗೆಯಲ್ಲಿ ದೊಡ್ಡ ರೌಡಿಶೀಟರ್ ಒಬ್ಬನನ್ನು ನಡು ರಸ್ತೆಯಲ್ಲಿ ಕೊಚ್ಚಿ ಹಾಕುವ ಮೂಲಕ ಆರ್ ಎಕ್ಸ್ ಸೂರಿ ಅಂತ ಫೇಮಸ್ ಆಗ್ತಾನೆ.

ಒಟ್ನಲ್ಲಿ ರೌಡಿಸಂನ ಭೂಗತ ಜಗತ್ತಿನಲ್ಲಿ ಇರುವ ಆರ್ ಎಕ್ಸ್ ಸೂರಿ(ವಿಜಯ್) ತಮ್ಮ ಫ್ಯಾಮಿಲಿ, ಪ್ರೀತಿಸುವ ಹುಡುಗಿಯನ್ನು ಹೇಗೆ ಬ್ಯಾಲೆನ್ಸ್ ಮಾಡುತ್ತಾರೆ ಅನ್ನೋದು ಇಡೀ ಚಿತ್ರದ ಹೈಲೈಟ್.


ಹೊಸ ನಿರ್ದೇಶಕ ಶ್ರೀ ಜೈ ಅವರ ಆಕ್ಷನ್-ಕಟ್ ನಲ್ಲಿ ಮೂಡಿಬಂದಿರುವ ಚಿತ್ರದಲ್ಲಿ ಸ್ಯಾಂಡಲ್ ವುಡ್ ಗೆ ಹೊಸ ಮುಖ, ಗ್ಲಾಮರ್ ಬೊಂಬೆ ಆಕಾಂಕ್ಷ ಹಾಗೂ 'ಕರಿಚಿರತೆ' ದುನಿಯಾ ವಿಜಯ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.[ದುನಿಯಾ ವಿಜಯ್ ಆರ್ ಎಕ್ಸ್ ಸೂರಿ ಏಕೆ ನೋಡ್ಬೇಕು?]


ಖಡಕ್ ಲುಕ್, ಡಿಫರೆಂಟ್ ಡೈಲಾಗ್, ಸ್ವಲ್ಪ ಮಸ್ತಿ, ಒಂಚೂರು ಕಾಮಿಡಿ, ಪಕ್ಕಾ ಲವ್ ಸೆಂಟಿಮೆಂಟ್, ಫ್ಯಾಮಿಲಿ ಡ್ರಾಮಾ, ಸೇರಿದಂತೆ, ಚಿತ್ರದುದ್ದಕ್ಕೂ ಮಚ್ಚು, ಲಾಂಗು, ರಕ್ತ-ಸಿಕ್ತ ದೇಹ, ರೌಡಿಸಂ ದರ್ಬಾರು ಹಾಗೂ ಪರಪ್ಪನ ಅಗ್ರಹಾರ ಪೋಲೀಸ್ ಠಾಣೆ ಇಡೀ ಚಿತ್ರದ ಹೈಲೈಟ್. 'ಆರ್ ಎಕ್ಸ್ ಸೂರಿ' ಸಂಪೂರ್ಣ ವಿಮರ್ಶೆಗೆ ಕೆಳಗಿನ ಸ್ಲೈಡ್ ಕ್ಲಿಕ್ ಮಾಡಿ..


Rating:
3.0/5

ಚಿತ್ರ: ಆರ್ ಎಕ್ಸ್ ಸೂರಿ
ನಿರ್ಮಾಣ
: ಕೆ.ಎಸ್ ಸುರೇಶ್
ಕಥೆ-ಚಿತ್ರಕಥೆ-ನಿರ್ದೇಶನ
: ಶ್ರೀಜೈ
ಛಾಯಾಗ್ರಹಣ: ಹೆಚ್.ಸಿ.ವೇಣು
ಸಂಗೀತ : ಅರ್ಜುನ್ ಜನ್ಯಾ
ತಾರಾಗಣ
: ದುನಿಯಾ ವಿಜಯ್, ಆಕಾಂಕ್ಷ, .ಪಿ.ರವಿಶಂಕರ್, ಆದಿ ಲೋಕೇಶ್, ವಿನಯಾ ಪ್ರಸಾದ್, ಸಾಧುಕೋಕಿಲ, ಅವಿನಾಶ್, ಬುಲೆಟ್ ಪ್ರಕಾಶ್, ಶೋಭರಾಜ್, ತುಳಸಿ ಶಿವಮಣಿ.


ರೈಲೈ ಟ್ರ್ಯಾಕ್ ನಲ್ಲಿ ಕೊಲೆ ದೃಶ್ಯದ ಮೂಲಕ ಚಿತ್ರ ಆರಂಭ

ಚಿತ್ರ ಪ್ರಾರಂಭವಾಗುವುದೇ ರೈಲೈ ಟ್ರ್ಯಾಕ್ ನಲ್ಲಿ ಕೊಲೆ ಮಾಡುವ ದೃಶ್ಯದ ಮೂಲಕ. ತದನಂತರ ಪೊಲೀಸ್ ಅಧಿಕಾರಿಯಾಗಿರುವ ಶೋಭರಾಜ್ ಎಂಟ್ರಿ ಪಡೆದುಕೊಂಡು ಕೊಲೆ ಮಾಡಿದ ನಾಲ್ವರನ್ನು ಯದ್ವಾ ತದ್ವಾ ತದುಕುತ್ತಾರೆ. ಈ ನಾಲ್ವರು ಆರ್ ಎಕ್ಸ್ ಸೂರಿ ಗೆಳೆಯರಾಗಿರುತ್ತಾರೆ. ಇವರು ಲಾಕಪ್ ನಲ್ಲಿ ಕುಳಿತು ಫ್ಲ್ಯಾಶ್ ಬ್ಯಾಕ್ ಗೆ ಹೋಗುತ್ತಾರೆ.


ಸ್ಮಶಾನದಲ್ಲಿ ಬ್ಲ್ಯಾಕ್ ಕೋಬ್ರಾ ಜಬರ್ದಸ್ತ್ ಎಂಟ್ರಿ

ಸಖತ್ ಪವರ್ ಫುಲ್ ಡೈಲಾಗ್ ಜೊತೆಗೆ 'ಆರ್ ಎಕ್ಸ್ ಬೈಕ್ ಏರಿ ಬಂದು ಸ್ಮಶಾನದಲ್ಲಿ ಜಬರ್ದಸ್ತ್ ಪೈಟ್ ಮಾಡುವ ಮೂಲಕ ಗ್ರ್ಯಾಂಡ್ ಎಂಟ್ರಿ ಪಡೆದುಕೊಳ್ಳುವ ಸೈಲ್ ಗೆ ಪ್ರೇಕ್ಷಕರು ಸಿಳ್ಳೆ ಹೊಡೆಯುತ್ತಾರೆ.


ಗ್ಲಾಮರ್ ಬೊಂಬೆ ಆಕಾಂಕ್ಷ ಎಂಟ್ರಿ

ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಹೊಸ ಮುಖ ಆಕಾಂಕ್ಷ(ಮೀನಾಕ್ಷಿ) ಮಿಡ್ಲ್ ಕ್ಲಾಸ್ ಫ್ಯಾಮಿಲಿ ಹುಡುಗಿ ಆರ್ ಎಕ್ಸ್ ಸೂರಿಯ ಪ್ರೀತಿಯಲ್ಲಿ ಬಿದ್ದು, ಪ್ರೀತಿ-ಪ್ರೇಮಕ್ಕೆ ವಿರುದ್ಧವಾಗಿರುವ ಸೂರಿಯನ್ನು ಕಾಡಿಸಿ ಪೀಡಿಸಿ ಪ್ರೀತಿಸುವಂತೆ ಹಿಂದೆ-ಹಿಂದೆ ಸುತ್ತುತ್ತಿರುತ್ತಾರೆ. ನಟನಾಕ್ಷೇತ್ರಕ್ಕೆ ಹೊಸಬರಾದರು ತಮ್ಮ ಗ್ಲಾಮರ್ ಹಾಗೂ ಮುದ್ದು ಅಭಿನಯದ ಮೂಲಕ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ.


ಪಕ್ಕಾ ಫ್ಯಾಮಿಲಿ ಡ್ರಾಮಾ ಜೊತೆಗೆ ರೋಮ್ಯಾನ್ಸ್

ಒಟ್ಟಾರೆ ಚಿತ್ರದ ಕಥೆ ನೋಡಿದರೆ ಒಂಥರಾ ಫ್ಯಾಮಿಲಿ ಡ್ರಾಮಾ, ಜೊತೆಗೆ ನಾಯಕಿ ನಾಯಕನ ಮೇಲಿಟ್ಟಿರುವ ಮುದ್ದಾದ ಪ್ರೀತಿ ಪ್ರೇಕ್ಷಕನಿಗೆ ಇಷ್ಟವಾಗುತ್ತದೆ. ಚಿತ್ರದಲ್ಲಿ ನಾಯಕಿಯ ಅಮ್ಮನ ಪಾತ್ರ ಮಾಡಿರುವ ತುಳಸಿ ಶಿವಮಣಿ ಅವರ ನಟನೆ ಅದ್ಧುತವಾಗಿದೆ, ಇನ್ನುಳಿದಂತೆ ಅವಿನಾಶ್, ವಿನಯಾ ಪ್ರಸಾದ್ ನಟನೆ ಚೆನ್ನಾಗಿದೆ


ಖಳನಟ ರವಿಶಂಕರ್(ಟೈಗರ್)

ಖಳನಟನಾಗಿ ಮಿಂಚಿರುವ ರವಿಶಂಕರ್ ಟೈಗರ್ ಅಂತ ಹೆಸರಿಟ್ಟುಕೊಂಡರು ಇಲ್ಲಿ ಒಂಥರಾ ಇಲಿಮರಿಯಂತೆ ಆಡುತ್ತಾರೆ. ಆರ್ ಎಕ್ಸ್ ಸೂರಿ ಹೆಸರು ಕೇಳುತ್ತಿದ್ದಂತೆ ಹೆದರಿ ನಡುಗುವುದು, ತಮ್ಮ ಉಳಿದ ಸಹಚರರಿಗೆ ಹಿಂಸೆ ಮಾಡುವ ಪಾತ್ರದಲ್ಲಿ ಇವರು ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಇವರ ಡಬ್ಬಲ್ ಮೀನಿಂಗ್ ಡೈಲಾಗ್ ಹಾಗೂ ಕೆಲವೊಂದು ಕಾಮಿಡಿ ಪಂಚ್ ಗಳು ವೀಕ್ಷಕರ ಮುಖದಲ್ಲಿ ಸಣ್ಣದಾಗಿ ನಗು ಮೂಡಿಸುತ್ತದೆ.


ಸಾಧು-ಬುಲೆಟ್ ಪ್ರಕಾಶ್ ಕಾಮಿಡಿ ಪಂಚ್

ಇಡೀ ಚಿತ್ರದಲ್ಲಿ ಪ್ರೇಕ್ಷಕರಿಂದ ಶಿಳ್ಳೆ ಗಿಟ್ಟಿಸಿಕೊಳ್ಳುವುದೆಂದರೆ ಸಾಧುಕೊಕಿಲ ಹಾಗೂ ಬುಲೆಟ್ ಪ್ರಕಾಶ್ ಅವರ ಡಬ್ಬಲ್ ಮೀನಿಂಗ್ ಡೈಲಾಗ್ಸ್. ಇವರ ಜೊತೆ ಖಳನಟ ರವಿಶಂಕರ್ ಅವರನ್ನು ಸೇರಿಸಿಕೊಂಡಿರುವುದು ಇನ್ನೊಂದು ಹೈಲೈಟ್.


ಫಸ್ಟ್ ಹಾಫ್ ಲವ್ , ಸೆಕೆಂಡ್ ಹಾಫ್ ಫ್ಲ್ಯಾಶ್ ಬ್ಯಾಕ್

ಆರ್ ಎಕ್ಸ್ ಸೂರಿ ಫಸ್ಟ್ ಹಾಫ್ ಫುಲ್ ಲವ್ ಸ್ಟೋರಿ, ಇಂಟರ್ ವಲ್ ಟ್ವಿಸ್ಟ್. ಪ್ರೇಕ್ಷಕರ ತಲೆಗೆ ಹುಳ ಬಿಡುವ ನಿರ್ದೇಶಕರು, ಸೆಕೆಂಡ್ ಹಾಫ್ ನಲ್ಲಿ ಟ್ವಿಸ್ಟ್ ಗೆ ಹಾಗೂ ಪ್ರೇಕ್ಷಕರ ಪ್ರಶ್ನೆಗೆ ಉತ್ತರ ದೊರಕಿಸಿ ಕೊಡುತ್ತಾರೆ. ಒಟ್ನಲ್ಲಿ ಕ್ಲೈಮಾಕ್ಸ್ ಮಾತ್ರ ಟ್ರಾಜಿಡಿ ಅನ್ನೋದು ದುನಿಯಾ ವಿಜಿ ಅಭಿಮಾನಿಗಳಿಗೆ ಬೇಜಾರು.


ಸಂಗೀತ

ಆರ್ ಎಕ್ಸ್ ಸೂರಿ ಚಿತ್ರದಲ್ಲಿ ಭಾರಿ ಮೆಚ್ಚುಗೆ ಗಳಿಸುವುದು ಕಲರ್ ಫುಲ್ ಹಾಡುಗಳು ಹಾಗು ಹಿನ್ನಲೆ ಸಂಗೀತ. ಸ್ಯಾಂಡಲ್ ವುಡ್ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಅವರು ಚಿತ್ರದ ಎಲ್ಲಾ ಹಾಡುಗಳಿಗೆ ಅದ್ಭುತ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಟೈಟಲ್ ಸಾಂಗ್ 'ಸೂರಿ ಸೂರಿ ಆರ್ ಎಕ್ಸ್ ಸೂರಿ' ಮತ್ತು 'ಡವ್ ಹೊಡಿಬ್ಯಾಡ' ಎನ್ನುವ ಎರಡು ಹಾಡುಗಳು ಈಗಾಗಲೆ ಸಖತ್ ಹಿಟ್ ಆಗಿವೆ.


ಚಿತ್ರದ ತಾಂತ್ರಿಕತೆ

ನವ ನಿರ್ದೇಶಕ ಶ್ರೀಜೈ ಅವರು ಮೊದಲ ಪ್ರಯತ್ನದಲ್ಲಿಯೇ ದುನಿಯಾ ವಿಜಿ ಅವರ ಅಭಿಮಾನಿಗಳಿಗೆ ಒಂಥರಾ ಮಾಸ್ ಎಂರ್ಟಟೈನ್ಮೆಂಟ್ ಪ್ಯಾಕೇಜ್ ನೀಡಿದ್ದಾರೆ. ಚಿತ್ರದಲ್ಲಿ ಡಿಫರೆಂಟ್ ಡ್ಯಾನಿ ಅವರ ಫೈಟ್ ತುಂಬಾ ಹೈಲೈಟ್ ಆಗುತ್ತದೆ. ಕಥೆ-ಚಿತ್ರಕಥೆ ಓಕೆ, ಓಕೆ. ಲವ್, ರೊಮ್ಯಾನ್ಸ್, ಕಾಮಿಡಿ ಚಿತ್ರಗಳನ್ನು ನೋಡಿ ಬೋರಾಗಿದ್ದವರು ಈ ಚಿತ್ರವನ್ನು ಥಿಯೇಟರ್ ನಲ್ಲಿ ಒಮ್ಮೆ ಹೋಗಿ ನೋಡಬಹುದು.


ಒಟ್ಟಾರೆ 'ಆರ್ ಎಕ್ಸ್ ಸೂರಿ'

ತುಂಬಾ ದಿನಗಳ ನಂತರ ದುನಿಯಾ ವಿಜಯ್ ಅವರು ಅಭಿಮಾನಿಗಳ ಎದುರು ಜಬರ್ದಸ್ತಾಗಿ ಕಂಪ್ಲೀಟ್ ಆಕ್ಷನ್ ಹೀರೊ ಆಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅದ್ದೂರಿ ಮೇಕಿಂಗ್ ಹಾಗೂ ಆಂಧ್ರಪ್ರದೇಶ ಮೂಲದ ರೌಡಿಶೀಟರ್ ರಿಯಲ್ ಕಥೆಯಾಧರಿಸಿದ ಚಿತ್ರ ಭೂಗತ ಜಗತ್ತಿನ ಲೋಕವನ್ನು ಪ್ರೇಕ್ಷಕರ ಎದುರು ತೆರೆದಿಡುತ್ತದೆ.


English summary
RX Soori has released all over Karnataka, today(September 4). The crime story weaved around under-world has raised huge expectations in Kannada audiences. The movie stars Duniya Vijay, Ravishankar, Adi Lokesh and other talented actors as villains. Debutant Akanksha is playing the lead actress opposite black cobra Vijay.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada