Saaho Twitter Review: ಪ್ರಭಾಸ್ ಇಷ್ಟ, ಸಾಹೋ ನೋಡೋಕೆ ಕಷ್ಟ

Recommended Video

ಹೇಗಿದೆ ಗೊತ್ತಾ ಸಾಹೋ ಸಿನಿಮಾ..? | saaho | FILMIBEAT KANNADA

ಬಾಹುಬಲಿ ನಂತರ ಪ್ರಭಾಸ್ ಅಭಿನಯದ ಸಾಹೋ ಸಿನಿಮಾ ತೆರೆಗೆ ಬಂದಿದ್ದು, ಬಾಕ್ಸ್ ಆಫೀಸ್ ನಲ್ಲಿ ಈ ಹಿಂದಿನ ಎಲ್ಲ ದಾಖಲೆಗಳನ್ನ ಅಳಿಸುಹಾಕುತ್ತೆ ಎಂಬ ಲೆಕ್ಕಾಚಾರ ಮಾಡಲಾಗಿದೆ. ಸುಮಾರು 350 ಕೋಟಿ ಬಜೆಟ್, ಹಾಲಿವುಡ್ ರೇಂಜ್ ಆಕ್ಷನ್, ಶ್ರದ್ಧಾ ಕಪೂರ್ ಹೀರೋಯಿನ್, ಕಲಾವಿದರ ದಂಡು ಇದೆಲ್ಲ ಸೇರಿ ಸಾಹೋ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಕೊಂಡಿತ್ತು.

ಇದಕ್ಕೆಲ್ಲಾ ಇಂದು ಸ್ಪಷ್ಟ ಉತ್ತರ ಸಿಕ್ಕಿದೆ. ಈಗಾಗಲೇ ಸಾಹೋ ಸಿನಿಮಾ ಎರಡ್ಮೂರು ಶೋ ಮುಗಿದಿದೆ. ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕರು, ಟ್ವಿಟ್ಟರ್ ಮೂಲಕ ತಮ್ಮ ತಮ್ಮ ಅಭಿಪ್ರಾಯಗಳನ್ನ ಹಂಚಿಕೊಂಡಿದ್ದಾರೆ.

ಕೆಲವರಿಗೆ ಸಿನಿಮಾ ಇಷ್ಟ ಆಗಿದ್ದರೆ, ಮತ್ತೆ ಕೆಲವರಿಗೆ ನಿರಾಸೆ ತಂದಿದೆ. ಹಾಗಿದ್ರೆ, ಸಾಹೋ ಚಿತ್ರದಲ್ಲಿ ಯಾರಿಗೆ ಏನು ಇಷ್ಟ ಆಯ್ತು, ಏನು ಇಷ್ಟ ಆಗಿಲ್ಲ ಎಂಬುದನ್ನ ನೋಡೋಣ. ಮುಂದೆ ಓದಿ....

100% ಹಿಟ್ ಸಾಹೋ

100% ಹಿಟ್ ಸಾಹೋ

''ಸಾಹೋ ಸಿನಿಮಾ ಫುಲ್ ಆಕ್ಷನ್. ಮಾಸ್ ಅವತಾರದಲ್ಲಿ ಡಾರ್ಲಿಂಗ್ ಪ್ರಭಾಸ್. ಎಂಟ್ರಿ, ಇಂಟರ್ ವಲ್ ಚಿಂದಿ. ಸುಜೀತ್ ಬ್ಲ್ಯಾಕ್ ಬಸ್ಟರ್. ಅಭಿನಯದಲ್ಲಿ ಎಲ್ಲರೂ ಬೆಸ್ಟ್. ಶ್ರದ್ಧಾ ಕಪೂರ್ ಮೇಲೆ ಲವ್ ಆಯ್ತು. ಪ್ರಭಾಸ್ ಮತ್ತೆ ಅಬ್ಬರಿಸಿದ್ದಾರೆ. 100% ಹಿಟ್'' ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ಬ್ಲ್ಯಾಕ್ ಬಸ್ಟರ್ ರೈಡ್

ಬ್ಲ್ಯಾಕ್ ಬಸ್ಟರ್ ರೈಡ್

''ಬ್ಲ್ಯಾಕ್ ಬಸ್ಟರ್ ರೈಡ್. ಮಾತುಗಳೇ ಇಲ್ಲ. ಸುಜೀತ್ ಚಿತ್ರಕಥೆ ಮತ್ತು ನಿರ್ದೇಶನ ಸೂಪರ್. ಪ್ರಭಾಸ್ ಚಿಂದಿ. ಹಿನ್ನೆಲೆ ಸಂಗೀತ ಚಿತ್ರಕ್ಕೆ ಜೀವಾಳ'' ಎಂದು ಮತ್ತೊಬ್ಬ ಅಭಿಮಾನಿ ಟ್ವೀಟ್ ಮಾಡಿದ್ದಾನೆ.

350 ಕೋಟಿ ವ್ಯರ್ಥ

350 ಕೋಟಿ ವ್ಯರ್ಥ

350 ಕೋಟಿಯನ್ನ ಹೇಗೆ ವ್ಯರ್ಥ ಮಾಡಬೇಕು ಎಂದು ತೋರಿಸಿಕೊಟ್ಟಿದ್ದಾರೆ. 30 ಕೋಟಿಯಲ್ಲಿ ಈ ಸಿನಿಮಾ ಮಾಡಿದ್ರೆ ಇದು ಬ್ಲ್ಯಾಕ್ ಬಸ್ಟರ್ ಆಗ್ತಿತ್ತು.'' ಎಂದು ಪ್ರೇಕ್ಷಕನೊಬ್ಬ ಬೇಸರ ವ್ಯಕ್ತಪಡಿಸಿದ್ದಾರೆ.

ಸೆಕೆಂಡ್ ಹಾಫ್ ಬೋರಿಂಗ್

ಸೆಕೆಂಡ್ ಹಾಫ್ ಬೋರಿಂಗ್

ಸಾಹೋ ಚಿತ್ರದ ಮೊದಲಾರ್ಧ ನೋಡಬಹುದು. ಪ್ರಭಾಸ್ ಎಂಟ್ರಿ ಆದ್ಮೇಲೆ ಸ್ವಲ್ಪ ಇಂಟರೆಸ್ಟಿಂಗ್ ಆಗಿದೆ. ಆದ್ರೆ, ಸೆಕೆಂಡ್ ಹಾಫ್ ಬೋರಿಂಗ್ ಆಗಿದೆ ಎಂಬುದು ಬಹುತೇಕರ ಅಭಿಪ್ರಾಯ. ''ಸೆಕೆಂಡ್ ಹಾಫ್ ಅನಾವಶ್ಯಕ ಮತ್ತು ಕೆಟ್ಟದಾಗಿದೆ. 5ಕ್ಕೆ 2 ನನ್ನ ರೇಟಿಂಗ್'' ಎಂದು ಮತ್ತೊಬ್ಬ ಪ್ರೇಕ್ಷಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರೋಮಾಂಚನಕಾರಿ ಕ್ಲೈಮ್ಯಾಕ್ಸ್

ರೋಮಾಂಚನಕಾರಿ ಕ್ಲೈಮ್ಯಾಕ್ಸ್

''ಒಂದೇ ಪದದಲ್ಲಿ ಸಾಹೋ ಬಗ್ಗೆ ಹೇಳುವುದಾದರೇ ಬ್ಲ್ಯಾಕ್ ಬಸ್ಟರ್. 28 ವರ್ಷದ ಸುಜೀತ್ ಕೆಲಸಕ್ಕೆ ಹ್ಯಾಟ್ಸಾಫ್. ಮ್ಯೂಸಿಕ್, ಸಿನಿಮಾಟೋಗ್ರಫಿ ಸೂಪರ್. ಟ್ವಿಸ್ಟ್ ಅಂಡ್ ಟರ್ನ್ ಹೊಂದಿರುವ ಚಿತ್ರಕಥೆ ಚೆನ್ನಾಗಿದೆ. ಕೊನೆಯ 30 ನಿಮಿಷ ರೋಮಾಂಚನಕಾರಿಯಾಗಿದೆ'' ಎಂದು ಪ್ರೇಕ್ಷಕರೊಬ್ಬರು ಹೇಳಿದ್ದಾರೆ.

ಬಜೆಟ್ ಮುಖ್ಯವಲ್ಲ

ಬಜೆಟ್ ಮುಖ್ಯವಲ್ಲ

''ದೊಡ್ಡ ಬಜೆಟ್ ಸಿನಿಮಾ ಮಾಡಿದ ತಕ್ಷಣ ಅದು ಸೂಪರ್ ಡೂಪರ್ ಹಿಟ್ ಆಗಲ್ಲ. ಪ್ರೊಡಕ್ಷನ್ ಹೌಸ್ ಗಳು ಈ ಬಗ್ಗೆ ಮುಂದಿನ ದಿನಗಳಲ್ಲಿ ಜಾಗೃತರಾಗಬೇಕು. ಬಜೆಟ್, ಹೀರೋ ಕ್ರೇಜ್ ನೋಡಿ ಸಿನಿಮಾ ಸಕ್ಸಸ್ ಆಗಲ್ಲ'' ಎಂದು ಸಾಹೋ ಸಿನಿಮಾ ನೋಡಿದ ಬಳಿಕ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

More from Filmibeat

English summary
Baahubali Star Prabhas's Saaho movie released all over wolrd today (august 30th). here is the twitter reaction about saaho.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X