twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ: ಸಾಹೇಬ್ ಬಿವಿ ಔರ್ ಗ್ಯಾಂಗ್ ಸ್ಟರ್

    By Bharath Kumar
    |

    'ಸಾಹೇಬ್ ಬಿವಿ ಔರ್ ಗ್ಯಾಂಗ್ ಸ್ಟರ್' ಸರಣಿಯ ಮೂರನೇ ಭಾಗ ಇದಾಗಿದ್ದು, ಪ್ರೇಕ್ಷಕರನ್ನ ರಂಜಿಸುವಲ್ಲಿ ಯಶಸ್ವಿಯಾಗಿದೆ. ಟಿಗ್ಮಾಂಶು ಧುಲಿಯಾ ಮತ್ತು ಸಂಜಯ್ ಚೌಹಾನ್ ಚಿತ್ರಕಥೆ ಎಲ್ಲ ಪಾತ್ರಗಳನ್ನ ಚೆನ್ನಾಗಿ ನಿಭಾಯಿಸಿದೆ.

    ಸಾಹೇಬ್, ಅವರ ಪತ್ನಿ ಮತ್ತು ಲಂಡನ್ ಮೂಲದ ಗ್ಯಾಂಗ್ ಸ್ಟರ್ ಈ ಮೂವರ ನಡುವಿನ ರೋಚಕೆ ಕಥೆಯೇ 'ಸಾಹೇಬ್ ಬಿವಿ ಔರ್ ಗ್ಯಾಂಗ್ ಸ್ಟರ್'

    ಚಿತ್ರಕ್ಕೆ ಆಧಾರಸ್ತಂಭ ರಾಣಿ ಮಾಧವಿ ದೇವಿ ಪಾತ್ರ. ತುಂಬಾ ಚಾಲೆಂಜಿಂಗ್ ಪಾತ್ರವನ್ನ ಮಾಹಿ ಗಿಲ್ ಸರಾಗವಾಗಿ ಅಭಿನಯಿಸಿದ್ದಾರೆ. ಬಹಳ ಅಚ್ಚುಕಟ್ಟಾಗಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದು, ಆಕೆಯ ಪಾತ್ರ ನೋಡುಗರನ್ನ ಗಮನ ಸೆಳೆಯುತ್ತೆ.

    Saheb Biwi Aur Gangster 3 movie review

    ಆದಿತ್ಯ ಪ್ರತಾಪ್ ಸಿಂಗ್ ಜಿಮ್ಮಿ ಶೆರ್ಗಿಲ್ ಕಾಣಿಸಿಕೊಂಡಿದ್ದು, ಕಳೆದುಹೋದ ಪ್ರೀತಿ ಮತ್ತು ಶ್ರೀಮಂತಿಕೆಯನ್ನ ಸಮತೋಲನ ಮಾಡುವ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದಾರೆ. ಕಬೀರ್ ಅಕಾ ಬಾಬಾ ಪಾತ್ರದಲ್ಲಿರುವ ಮಿಂಚಿರುವ ಸಂಜಯ್ ದತ್ ಗ್ಯಾಂಗ್ ಸ್ಟರ್ ಆಗಿ ಹೆಚ್ಚು ಕಾಣಿಸಿಕೊಂಡಿಲ್ಲ. ಆದ್ರೆ, ದುಷ್ಕರ್ಮಿಯಾಗಿ ಮೋಡಿ ಮಾಡ್ತಾರೆ. ಇನ್ನುಳಿದಂತೆ ಕಬೀರ್ ಬೇಡಿ, ನಫೀಸಾ ಅಲಿ ಮತ್ತು ದೀಪಕ್ ಟಿಜೊರಿ ಅವರು ರಾಜವಂಶಸ್ಥರ ಪಾತ್ರಗಳಲ್ಲಿ ಸಮರ್ಪಕವಾಗಿ ಬಳಕೆಯಾಗಿದ್ದಾರೆ.

    Saheb Biwi Aur Gangster 3 movie review

    ಚಿತ್ರದಲ್ಲಿ ಅನೇಕ ಪಾತ್ರಗಳ ಬರುವುದು ನೋಡುಗರಿಗೆ ಗೊಂದಲ ಉಂಟು ಮಾಡುತ್ತೆ. ಆದ್ರೆ, ಬರಹಗಾರ ಸಂಜಯ್ ಚೌಹಾನ್ ಮತ್ತು ಟಿಗ್ಮಾಂಶು ಧುಲಿಯಾ ಅವರ ಪಾತ್ರಕ್ಕೆ ಪ್ರಾಮುಖ್ಯತೆ ನೀಡಿ ಅವರನ್ನ ಉಳಿಸುತ್ತಾರೆ.

    ಒಟ್ಟಾರೆ ಹೇಳುವುದಾದರೇ ಚಿತ್ರಕಥೆ ಮತ್ತು ಅದಕ್ಕೆ ಸೂಕ್ತವಾದ ಅಭಿನಯ ಸಾಹೇಬ್ ಬಿವಿ ಔರ್ ಗ್ಯಾಂಗ್ ಸ್ಟರ್ ಚಿತ್ರವನ್ನ ಯಶಸ್ವಿಯಾಗಿ ದಡ ಮುಟ್ಟಿಸುವಲ್ಲಿ ಸಕ್ಸಸ್ ಕಂಡಿದೆ.

    English summary
    saheb biwi aur gangster 3 review : With unending series of dialogue delivery, Saheb Biwi aur Gangster 3 is an incoherent ode to Sanjay Dutt’s bad boy image.
    Saturday, July 28, 2018, 17:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X