twitter
    For Quick Alerts
    ALLOW NOTIFICATIONS  
    For Daily Alerts

    Sahoo Review: ಹೊಗಳಿಕೆಗಿಂತ ತೆಗಳಿಕೆಯೇ ಹೆಚ್ಚು

    |

    'ಬಾಹುಬಲಿ' ಸಿನಿಮಾದ ಬಳಿಕ ಪ್ರಭಾಸ್ ಅಭಿನಯದ ಚಿತ್ರ ಬರ್ತಿರುವುದರಿಂದ ಸಹಜವಾಗಿ ಕುತೂಹಲ, ನಿರೀಕ್ಷೆ ಹೆಚ್ಚಿತ್ತು. ಅದಕ್ಕೆ ತಕ್ಕಂತೆ ಸಾಹೋ ಸಿನಿಮಾ ಕೂಡ ರಿಲೀಸ್ಗೆ ಮುಂಚೆ ಸದ್ದು ಮಾಡಿತ್ತು. ಸಾಹೋ ಚಿತ್ರಮಂದಿರಕ್ಕೆ ಬಂದಮೇಲೆ ಮಿಶ್ರಪ್ರತಿಕ್ರಿಯೆ ಎದುರಾಗಿದೆ.

    ಚಿತ್ರ: ಸಾಹೋ
    ನಿರ್ದೇಶಕ: ಸುಜಿತ್ ರೆಡ್ಡಿ
    ಕಲಾವಿದರು: ಪ್ರಭಾಸ್, ಶ್ರದ್ಧಾ ಕಪೂರ್, ಜಾಕಿ ಶ್ರಾಫ್, ನೀಲ್ ನಿತಿನ್ ಮುಖೇಶ್, ಅರುಣ್ ವಿಜಯ್, ಮಂದಿರಾ ಬೇಡಿ
    ಬಿಡುಗಡೆ: 30 ಆಗಸ್ಟ್ 2019

    Recommended Video

    ಹೇಗಿದೆ ಗೊತ್ತಾ ಸಾಹೋ ಸಿನಿಮಾ..? | saaho | FILMIBEAT KANNADA

    ರಾಯ್ ಗ್ರೂಪ್ ತನ್ನ ಒಡೆಯನನ್ನ ಅಪಘಾತದಲ್ಲಿ ಕಳೆದುಕೊಂಡು ಸಮಸ್ಯೆಯಲ್ಲಿರುತ್ತೆ. ಆ ಕಂಪನಿಯ ಸಾರ್ವಭೌಮತ್ವಕ್ಕಾಗಿ ಪ್ರಮುಖರ ಮಧ್ಯೆ ಪೈಪೋಟಿ ನಡೆಯುತ್ತಿರುತ್ತೆ. ಮತ್ತೊಂದೆಡೆ ಅಶೋಕ್ ಚಕ್ರವರ್ತಿ (ಪ್ರಭಾಸ್) ಮುಂಬೈನಲ್ಲಿ ಕಳ್ಳತನದ ಪ್ರಕರಣವನ್ನ ಕೈಗೆತ್ತಿಕೊಂಡು ತನಿಖೆ ಆರಂಭಿಸುತ್ತಾರೆ.

     Sahoo Movie Review in Kannada

    ಈ ಎರಡು ಘಟನೆಗಳಿಗೂ ಸಂಬಂಧ ಏನು? ಪೊಲೀಸ್ ಆಫೀಸರ್ ಆಗಿ ಎಂಟ್ರಿಯಾದ ಅಶೋಕ ಚಕ್ರವರ್ತಿ ಸಾಹೋ ಆಗಿ ಯಾಕೆ ಬದಲಾಗುತ್ತಾನೆ ಎಂಬುದು ಚಿತ್ರದ ರೋಚಕ ಕಥೆ. ಸಿನಿಮಾದಲ್ಲಿ ಹಲವು ರೀತಿ ಟ್ವಿಸ್ಟ್ ಗಳಿವೆ. ಬ್ಲಾಕ್ ಬಾಕ್ಸ್ ಮೇಲೆ ಸಾಹೋ ಯಾಕೆ ಕಣ್ಣು ಹಾಕುತ್ತಾನೆ, ಅದೇ ಬ್ಲಾಕ್ ಬಾಕ್ಸ್ ಗಾಗಿ ಉಳಿದ ವಿಲನ್ ಗಳು ಯಾಕೆ ಸಂಚು ರೂಪಿಸುತ್ತಾರೆ, ಆ ರಾಯ್ ಕಂಪನಿ ಮಾಲೀಕ ಸತ್ತಿದ್ದು ಯಾಕೆ? ಶ್ರದ್ಧಾ ಕಪೂರ್ ಜೊತೆಗಿನ ಲವ್ ಸೀಕ್ರೆಟ್ ಏನು ಎಂಬ ಪ್ರಶ್ನೆಗಳಿಗೆ ಸಮಾಧಾನ ಸಾಹೋ ಸಿನಿಮಾ.

    Saaho Twitter Review: ಪ್ರಭಾಸ್ ಇಷ್ಟ, ಸಾಹೋ ನೋಡೋಕೆ ಕಷ್ಟSaaho Twitter Review: ಪ್ರಭಾಸ್ ಇಷ್ಟ, ಸಾಹೋ ನೋಡೋಕೆ ಕಷ್ಟ

    ಎರಡು ಗ್ಯಾಂಗ್ ಸ್ಟರ್ ಗಳ ಮಧ್ಯೆ ಅಧಿಪತ್ಯಕ್ಕಾಗಿ ಪೈಪೋಟಿಯೊಂದಿಗೆ ಕತೆ ಆರಂಭವಾಗುತ್ತೆ. ಸಾಮಾನ್ಯ ಪ್ರೇಕ್ಷಕರಿಗೆ ಗೊಂದಲ ಉಂಟು ಮಾಡುವ ರೀತಿ ಸ್ಕ್ರೀನ್ ಪ್ಲೇ ಮಾಡಲಾಗಿದೆ. ಪ್ರಭಾಸ್ ಎಂಟ್ರಿ ಸ್ವಲ್ಪ ರಿಲೀಫ್ ಕೊಟ್ಟರೂ ಶ್ರದ್ಧಾ ಜೊತೆಗಿನ ದೃಶ್ಯಗಳು ಮತ್ತೆ ಅದೇ ಮೂಡ್ ಗೆ ಹೋಗುತ್ತೆ. ಹಾಡುಗಳು ಸ್ಲೋ ಮಾಡುತ್ತೆ. ಹಾಗ್ನೋಡಿದ್ರೆ, ಮೊದಲಾರ್ಧ ಪ್ರೇಕ್ಷಕರಿಗೆ ಕಿರಿಕಿರಿ ಉಂಟು ಮಾಡುತ್ತೆ. ಸೆಕೆಂಡ್ ಹಾಫ್ ಸ್ವಲ್ಪ ವೇಗವಾಗಿ ಆರಂಭವಾಗಿ ಥ್ರಿಲ್ ಹೆಚ್ಚಿಸುತ್ತೆ. ಕಾರಣ ಆಕ್ಷನ್ ದೃಶ್ಯಗಳು. ಟ್ವಿಸ್ಟ್ ಗಳೊಂದಿಗೆ ಆಕ್ಷನ್ ಜೊತೆಗೆ ಸೆಕೆಂಡ್ ಹಾಫ್ ಮ್ಯಾಜಿಕ್ ಮಾಡುತ್ತೆ.

     Sahoo Movie Review in Kannada

    Exclusive Interview : ಮೊದಲ ಹಿಂದಿ ಚಿತ್ರದ ಬಗ್ಗೆ ನ್ಯಾಷನಲ್ ಸ್ಟಾರ್ ಟಾಕ್Exclusive Interview : ಮೊದಲ ಹಿಂದಿ ಚಿತ್ರದ ಬಗ್ಗೆ ನ್ಯಾಷನಲ್ ಸ್ಟಾರ್ ಟಾಕ್

    ಕಥೆಯಿಲ್ಲದೇ ಕಸರತ್ತು ಮಾಡಿದ್ರೆ ಹೇಗಿರುತ್ತೆ ಎಂಬುದಕ್ಕೆ ಸಾಹೋ ಉತ್ತಮ ಉದಾಹರಣೆ. ಕೇವಲ ತಾಂತ್ರಿಕವಾಗಿ ಹೆಚ್ಚು ವರ್ಕೌಟ್ ಆಗಿರುವ ಈ ಚಿತ್ರದಲ್ಲಿ ಕಥೆಗೆ ಪ್ರಾಮುಖ್ಯತೆ ಕೊಟ್ಟಿಲ್ಲ. ತೆಲುಗು ಪ್ರೇಕ್ಷಕರಿಗೆ ನಿಲುಕದ ರೀತಿ ಸಿನಿಮಾ ಮಾಡಿರುವ ನಿರ್ದೇಶಕರು, ಜೇಮ್ಸ್ ಬಾಂಡ್ ರೀತಿ ಪ್ರಭಾಸ್ ಅವರನ್ನ ಬಿಂಬಿಸಿದ್ದಾರೆ.

    ಪ್ರಭಾಸ್ ಈ ಸಿನಿಮಾದ ಒನ್ ಮ್ಯಾನ್ ಆರ್ಮಿ. ಆಫೀಸರ್, ಗ್ಯಾಂಗ್ ಸ್ಟರ್, ಲವರ್ ಹೀಗೆ ಎಲ್ಲ ಆಯಾಮದಲ್ಲೂ ಇಷ್ಟ ಆಗ್ತಾರೆ. ಪ್ರಭಾಸ್ ಗೆ ತಕ್ಕಂತೆ ಶ್ರದ್ಧಾ ಕೂಡ ಆಕ್ಷನ್ ಮೂಲಕ ಮೋಡಿ ಮಾಡಿದ್ದಾರೆ.

     Sahoo Movie Review in Kannada

    ಸಂಪೂರ್ಣೇಶ್ 2 ಲಕ್ಷ ಕೊಟ್ರು, ಉತ್ತರ ಕರ್ನಾಟಕಕ್ಕೆ ನೀವೇನು ಕೊಟ್ರಿ? ಪ್ರಭಾಸ್ ಹೇಳಿದ್ದೇನು?ಸಂಪೂರ್ಣೇಶ್ 2 ಲಕ್ಷ ಕೊಟ್ರು, ಉತ್ತರ ಕರ್ನಾಟಕಕ್ಕೆ ನೀವೇನು ಕೊಟ್ರಿ? ಪ್ರಭಾಸ್ ಹೇಳಿದ್ದೇನು?

    ಸಾಮಾನ್ಯವಾದ ಕಥೆಯನ್ನ ಕನ್ ಫ್ಯೂಸ್ ಮಾಡಿ ಹೇಳಲು ಹೊರಟ ನಿರ್ದೇಶಕರು ನಿರೀಕ್ಷೆಯನ್ನ ತಲುಪುವಲ್ಲಿ ವಿಫಲವಾಗಿದ್ದಾರೆ. ಪ್ರಭಾಸ್ ಅಭಿಮಾನಿಗಳು ಹೊರತಾಗಿ ನೋಡಿದವರಿಗೆ ಸಾಹೋ ಖುಷಿ ಕೊಡಲ್ಲ. ತೆರೆಮೇಲೆ ಪ್ರಭಾಸ್ ನೋಡಿದ ಡಾರ್ಲಿಂಗ್ ಅಭಿಮಾನಿಗಳಿಗೆ ಸಿನಿಮಾ ಚೆನ್ನಾಗಿಲ್ಲ ಎಂಬ ಬೇಸರವೇ ಕಾಣಲ್ಲ.

    English summary
    Sahoo Movie Review in Kananda: Rating: 2.5 stars. prabhas, shraddha kapoorin the lead role.
    Friday, August 30, 2019, 15:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X