twitter
    For Quick Alerts
    ALLOW NOTIFICATIONS  
    For Daily Alerts

    Gargi Movie Review: ಹೃದಯ ಕಲಕುವ 'ಗಾರ್ಗಿ'

    By ಫಿಲ್ಮಿಬೀಟ್ ಡೆಸ್ಕ್
    |

    ಸಾಯಿ ಪಲ್ಲವಿ ನಟಿಸಿರುವ 'ಗಾರ್ಗಿ' ಸಿನಿಮಾ ಇಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಒಂದೇ ಸಾಲಿನಲ್ಲಿ ಹೇಳುವುದಾದರೆ 'ಗಾರ್ಗಿ' ಮನಸ್ಸು ಕರಗಿಸುತ್ತದೆ'.

    'ಗಾರ್ಗಿ' ಒಂದು ಕೆಳ ಮಧ್ಯಮ ವರ್ಗದ ಕುಟುಂಬದ ಯುವತಿ, ಶಾಲೆಯೊಂದರಲ್ಲಿ ಟೀಚರ್ ಕೆಲಸ, ತಂದೆ ಅಪಾರ್ಟ್‌ಮೆಂಟ್‌ ಒಂದರಲ್ಲಿ ವಾಚ್‌ಮ್ಯಾನ್, ಅಮ್ಮ ದೋಸೆಹಿಟ್ಟು ಮಾರುವ ಗೃಹಿಣಿ, ತಂಗಿ ಇನ್ನೂ ಶಾಲೆಗೆ ಹೋಗುತ್ತಿದ್ದಾಳೆ. ಬಡತನವಿದ್ದರೂ ಇದ್ದುದ್ದರಲ್ಲಿ ಖುಷಿಯಾಗಿರುವ ಕುಟುಂಬ.

    ಆದರೆ ಅಪ್ಪ ವಾಚ್‌ಮ್ಯಾನ್ ಆಗಿ ಕೆಲಸ ಮಾಡುವ ಅಪಾರ್ಟ್‌ಮೆಂಟ್‌ನಲ್ಲಿ ಘಟನೆಯೊಂದು ನಡೆದಾಗ ಕುಟುಂಬಕ್ಕೆ ಭರ ಸಿಡಿಲೇ ಅಪ್ಪಳಿಸುತ್ತದೆ. ಅಪಾರ್ಟ್‌ಮೆಂಟ್‌ನಲ್ಲಿ ಆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಗಾರ್ಗಿಯ ತಂದೆಯನ್ನು ಬಂಧಿಸಿ ಒಯ್ಯುತ್ತಾರೆ ಪೊಲೀಸರು. ಆದರೆ ಗಾರ್ಗಿಗೆ ನಂಬಿಕೆ, ಅಪ್ಪ ಹೀಗೆ ಮಾಡುವವರಲ್ಲ ಎಂದು. ಹಾಗಾಗಿ ಅಪ್ಪನ ಪರವಾಗಿ ಹೋರಾಟಕ್ಕೆ ಇಳಿಯುತ್ತಾಳೆ.

    Rating:
    4.0/5

    ಅತ್ಯಾಚಾರಿಯ ಮಗಳಾಗಿ, ಬಡ ಕುಟುಂಬದ ಯುವತಿಯಾಗಿ ಒಟ್ಟಾರೆ ಮಹಿಳೆಯಾಗಿ ಆಕೆಯ ಹೋರಾಟದ ಕಥನವೇ 'ಗಾರ್ಗಿ' ಸಿನಿಮಾ. ಈ ಕತೆಯನ್ನು ಯುವತಿಯ ಹೋರಾಟದ ಕಥನವಾಗಿಸುವ ಜೊತೆಗೆ ಥ್ರಿಲ್ಲರ್ ಅಂಶಗಳನ್ನೂ ತಂದು ಚೆನ್ನಾಗಿ ಹೆಣೆದುಕೊಟ್ಟಿದ್ದಾರೆ ನಿರ್ದೇಶಕ ಗೌತಮ್ ರಾಮಚಂದ್ರನ್. ಇವರು ಬೆಂಗಳೂರಿಗರು ಎಂಬುದು ಖುಷಿಗೆ ಇನ್ನೊಂದು ಕಾರಣ.

    ಹಲವು ಪ್ರಶ್ನೆ ಎತ್ತುವ 'ಗಾರ್ಗಿ'

    ಹಲವು ಪ್ರಶ್ನೆ ಎತ್ತುವ 'ಗಾರ್ಗಿ'

    'ಗಾರ್ಗಿ' ಹಲವು ಪ್ರಶ್ನೆಗಳನ್ನು ಎತ್ತುವ ಸಿನಿಮಾ. ಲೈಂಗಿಕ ದೌರ್ಜನ್ಯ, ಪುರುಷ ಪ್ರಧಾನ ಸಮಾಜ, ನ್ಯಾಯ ವ್ಯವಸ್ಥೆ, ಮಧ್ಯಮ ವರ್ಗದ ಮಾನಸಿಕತೆ, ಉಳ್ಳವರ ಅನುಕೂಲಗಳು ಹೀಗೆ ಹಲವು ವಿಷಯದ ಬಗ್ಗೆ 'ಗಾರ್ಗಿ' ಮಾತನಾಡುತ್ತದೆ. ಈ ಎಲ್ಲ 'ಮಾತನಾಡುವಿಕೆ'ಗಳು ಕತೆಯ ಜೊತೆಗೆ ಆಗುತ್ತವೆ ಎಂಬುದು ಸಿನಿಮಾದ ಬಹುದೊಡ್ಡ ಧನಾತ್ಮಕ ಅಂಶ.

    ಭಿನ್ನ ಪಾತ್ರಗಳು ಒಂದೇ ಸೂತ್ರದಲ್ಲಿ

    ಭಿನ್ನ ಪಾತ್ರಗಳು ಒಂದೇ ಸೂತ್ರದಲ್ಲಿ

    ಪಾತ್ರಗಳನ್ನು ನಿರ್ದೇಶಕ ಮೋಲ್ಡ್ ಮಾಡಿರುವ ರೀತಿಗೆ ಶಭಾಷ್ ಹೇಳಲೇ ಬೇಕು. ಅಪ್ಪನಿಗಾಗಿ ಹೋರಾಡುವ ಮಗಳು, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಗಳ ತಂದೆ, ಮಗಳ ಮದುವೆ ಮಾಡಲಿರುವ ಅಪ್ಪ ಹೀಗೆ ಭಿನ್ನ ಭಿನ್ನರಾದರೂ ಒಂದೇ ಸೂತ್ರದಡಿ ಪಾತ್ರಗಳನ್ನು ಬಂಧಿಸಿರುವ ರೀತಿ ಅದ್ಭುತ. ಜೊತೆಗೆ ಆ ಪಾತ್ರಗಳಿಗೆ ಆಯ್ಕೆ ಮಾಡಿಕೊಂಡಿರುವ ನಟರೂ ಸಹ.

    ನಟನೆಯಲ್ಲಿ ಕಾಂಚನಗಂಗಾ ಏರುತ್ತಿರುವ ಸಾಯಿ ಪಲ್ಲವಿ

    ನಟನೆಯಲ್ಲಿ ಕಾಂಚನಗಂಗಾ ಏರುತ್ತಿರುವ ಸಾಯಿ ಪಲ್ಲವಿ

    ಗಾರ್ಗಿಯಾಗಿ ಸಾಯಿ ಪಲ್ಲವಿ ಬಹುಕಾಲ ಪ್ರೇಕ್ಷಕರ ಮನದಲ್ಲಿ ಉಳಿಯಲಿದ್ದಾರೆ. ಸಾಯಿ ಪಲ್ಲವಿ ಪಾತ್ರವೇ ತಾನಾಗಿದ್ದಾರೆ. ಆಕೆಯ ನೋವು, ಹತಾಶೆಗಳು ಪ್ರೇಕ್ಷಕನದ್ದೂ ಆಗಿಬಿಡುವಷ್ಟು ಅವರು ಪಾತ್ರವನ್ನು ಆವರಿಸಿಕೊಂಡಿದ್ದಾರೆ. ಕೋರ್ಟ್‌ ರೂಂ ಅನ್ನೇ ನೋಡದ ಆದರೆ ಗಾರ್ಗಿಯ ಪರವಾಗಿ ನಿಲ್ಲುವ ವಕೀಲನ ಪಾತ್ರದಲ್ಲಿ ಕಾಳಿ ವೆಂಕಟೇಶ್ ನಟನೆಯೂ ಸೂಪರ್. ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ವೆಂಕಟೇಶ್ ಈ ಸಿನಿಮಾದಲ್ಲಿ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಐಶ್ವರ್ಯಾ ಲಕ್ಷ್ಮಿ ಸೇರಿದಂತೆ ಇನ್ನೂ ಹಲವರು ತಮ್ಮ ಬೆಸ್ಟ್ ಪ್ರದರ್ಶನವನ್ನು ಸಿನಿಮಾದಲ್ಲಿ ನೀಡಿದ್ದಾರೆ.

    ಸಂಗೀತ, ಕ್ಯಾಮೆರಾ ಕೆಲಸವೂ ಅದ್ಭುತ

    ಸಂಗೀತ, ಕ್ಯಾಮೆರಾ ಕೆಲಸವೂ ಅದ್ಭುತ

    ಸಿನಿಮಾದ ಕತೆ, ಸನ್ನಿವೇಶ, ಕೋರ್ಟ್‌ ರೂಂನಲ್ಲಿ ನಡೆವ ವಾದ-ವಿವಾದ, ಗಾರ್ಗಿಯ ಹೋರಾಟಗಳ ಜೊತೆಗೆ ವಸಂತ್‌ರ ಹಿನ್ನೆಲೆ ಸಂಗೀತವೂ ಪ್ರೇಕ್ಷಕನಿಗೆ ನೆನಪುಳಿಯುತ್ತದೆ. ಸರಳ ಸಿನಿಮಾವನ್ನು ಅದ್ಭುತವಾಗಿ, ಮನಕ್ಕೆ ತಾಕುವಂತೆ ದೃಶ್ಯೀಕರಿಸಿರುವ ಸರಿಯಂತಿ, ಪ್ರೇಮಕೃಷ್ಣ ಅಕ್ಕಟ್ಟು ಅವರಿಗೂ ಶಹಭಾಷ್ ಹೇಳಲೇ ಬೇಕು. ಒಟ್ಟಾರೆ 'ಗಾರ್ಗಿ' ನೋಡಬೇಕಾದ ಸಿನಿಮಾ.

    English summary
    Sai Pallavi starrer Gargi movie Kannada review. Movie is must watch
    Saturday, July 16, 2022, 10:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X