twitter
    For Quick Alerts
    ALLOW NOTIFICATIONS  
    For Daily Alerts

    'ಕ್ವೀನ್' ಕಂಗನಾ'ಳ ರಂಗು ರಂಗಿನಾ 'ರಂಗೂನ್' ವಿಮರ್ಶೆ

    By Suneel
    |

    ಸೈಫ್ ಅಲಿಖಾನ್, ಶಾಹಿದ್ ಕಪೂರ್ ಮತ್ತು ಕಂಗನಾ ರನೌತ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ರಂಗೂನ್' ಇಂದು(ಫೆಬ್ರವರಿ 24) ತೆರೆಕಂಡಿದೆ. ವಿಶಾಲ್ ಭಾರದ್ವಜ್ ಆಕ್ಷನ್ ಕಟ್ ಹೇಳಿರುವ 'ರಂಗೂನ್' ಟ್ರೈಲರ್ ನಿಂದ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಈ ಚಿತ್ರದ ವಿಮರ್ಶೆಯನ್ನು ಕೆಳಗಿನ ಫೋಟೋ ಸ್ಲೈಡ್ ಗಳಲ್ಲಿ ಓದಿರಿ.

    ಚಿತ್ರ: ರಂಗೂನ್
    ನಿರ್ಮಾಣ: ಅಶಿಶ್ ಪೌಲ್, ವಿಶಾಲ್ ಭಾರದ್ವಜ್, ವಿಯಾಕಾಂ 18 ಮೋಶನ್ ಪಿಕ್ಚರ್
    ನಿರ್ದೇಶನ: ವಿಶಾಲ್ ಭಾರದ್ವಜ್
    ಸಂಕಲನ: ಆಲಾಪ್ ಮಜ್ಗಾವ್ಕರ್
    ಸಂಗೀತ ನಿರ್ದೇಶನ: ವಿಶಾಲ್ ಭಾರದ್ವಜ್
    ತಾರಾಗಣ: ಸೈಫ್ ಅಲಿ ಖಾನ್, ಶಾಹಿದ್ ಕಪೂರ್, ಕಂಗನಾ ರನೌತ್,
    ಬಿಡುಗಡೆ: ಫೆಬ್ರವರಿ 24, 2017

    ಕಥಾಹಂದರ

    ಕಥಾಹಂದರ

    1943 ನೇ ಇಸವಿ. ಅದು ಎರಡನೇ ಮಹಾಯುದ್ಧ ಸಂದರ್ಭ. ಇನ್ನೊಂದು ಕಡೆ ಗಾಂಧೀಜಿಯ ಅಹಿಂಸಾ ಮಾರ್ಗ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 'ಐಎನ್ಎ' ಬಣದಲ್ಲಿ ಸಿಕ್ಕಿಕೊಂಡಿದ್ದ ಭಾರತೀಯರು. ಈ ಸಂದರ್ಭದಲ್ಲಿ ಜರುಗುವ ಒಂದು ಟ್ರೈಯಾಂಗಲ್ ಲವ್ ಸ್ಟೋರಿಯೇ 'ರಂಗೂನ್'.

    ಟ್ರಯಾಂಗಲ್ ಲವ್ ಸ್ಟೋರಿ

    ಟ್ರಯಾಂಗಲ್ ಲವ್ ಸ್ಟೋರಿ

    ರುಸಿ ಬಿಲ್ಮೊರಿಯಾ(ಸೈಫ್ ಅಲಿಖಾನ್), ಮಾಜಿ ಫಿಲ್ಮ್ ಸ್ಟಾರ್ ನಿರ್ಮಾಪಕನಾಗಿರುತ್ತಾನೆ. ಈತನ ಕಂಪನಿಯಲ್ಲಿ ಮಿಸ್ ಜೂಲಿಯಾ(ಕಂಗನಾ ರನೌತ್) ದೊಡ್ಡ ತಾರೆ. ಜಮದರ್ ನವಾಬ್ ಮಲ್ಲಿಕ್ (ಶಾಹಿದ್ ಕಪೂರ್) ಸೈನಿಕ. ಈ ಮೂವರ ನಡುವೆ ಟ್ರಯಾಂಗಲ್ ಲವ್ ಸ್ಟೋರಿ ನಡೆಯುತ್ತದೆ. ಆದ್ರೆ ಮಿಸ್ ಜೂಲಿಯಾಗೆ ಯಾರ ಮೇಲೆ ಲವ್ ಆಗುತ್ತೆ, ಕಥೆಯ ಟ್ವಿಸ್ಟ್ ಏನು ಅನ್ನೋದನ್ನ ಚಿತ್ರದಲ್ಲೇ ನೋಡಿ..

    ವಿಶಾಲ್ ಭಾರದ್ವಜ್ ನಿರ್ದೇಶನ ಹೇಗಿದೆ?

    ವಿಶಾಲ್ ಭಾರದ್ವಜ್ ನಿರ್ದೇಶನ ಹೇಗಿದೆ?

    2014 ರ ಇಂಪ್ರೆಸ್ಸಿವ್ 'Haider' ಚಿತ್ರದ ನಂತರ 'ರಂಗೂನ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ವಿಶಾಲ್ ಭಾರದ್ವಜ್, ಚಿತ್ರದ ಸಂಗೀತ ಮತ್ತು ನಿರೂಪಣೆ ಶೈಲಿಯಲ್ಲಿ ಎಡವಿದ್ದು, ಪ್ರೇಕ್ಷಕರಿಗೆ ಬೇಸರ ತರಿಸುತ್ತದೆ. ಅಲ್ಲದೇ ಪಾತ್ರಗಳನ್ನು ಫೀಲ್ ಮಾಡಲು 'Haider' ಚಿತ್ರದಷ್ಟು ಉತ್ತಮವಾಗಿ ನಿರ್ದೇಶನ ಮಾಡಿಲ್ಲ. ಚಿತ್ರದ ಪಾತ್ರಗಳು ಮತ್ತು ದೃಶ್ಯಗಳ ಮೇಲೆ ಇನ್ನಷ್ಟು ಗಮನಹರಿಸಬೇಕಿತ್ತು.

    ಕಂಗನಾ ರನೌತ್ ಅಭಿನಯ...

    ಕಂಗನಾ ರನೌತ್ ಅಭಿನಯ...

    ಕಂಗನಾ ರನೌತ್ 'ರಂಗೂನ್' ಚಿತ್ರದ ಮುಖ್ಯ ಆಕರ್ಷಣೆ. ಯಾವುದೇ ಅಂಜಿಕೆ ಇಲ್ಲದೆ ತಾವು ಧರಿಸಿರುವ ಮಾರ್ಡನ್ ಉಡುಪುಗಳಲ್ಲಿ 'ಬ್ಲಡಿ ಹೆಲ್' ಹಾಡಿಗೆ ಸೊಂಟ ಬಳುಕಿಸಿ ಚಿತ್ರಕ್ಕೆ ಹೆಚ್ಚು ಆಕರ್ಷಣೆ ನೀಡಿದ್ದಾರೆ.

    ಉಳಿದವರು

    ಉಳಿದವರು

    ಶಾಹಿದ್ ಕಪೂರ್ ಚಿತ್ರದಲ್ಲಿ ಏಕಾಂಗಿ ಸೈನಿಕನಾಗಿದ್ದು, ಪ್ರೇಕ್ಷಕರ ಮನಸ್ಸಲ್ಲಿ ಉಳಿಯುವುದಿಲ್ಲ. ಸೈಫ್ ಅಲಿ ಖಾನ್ ಉತ್ತಮ ಸೆನ್ಸ್ ಇರುವ ನಿರ್ಮಾಪಕನಾಗಿ, ತೆರೆ ಮೇಲೆ ಕಾಣಿಸಿದಷ್ಟು ಸಮಯ ಸಿನಿ ಪ್ರಿಯರ ಮನಸ್ಸಲ್ಲಿ ಉಳಿಯಲು ಪ್ರಯತ್ನಿಸಿದ್ದಾರೆ.

    ತಾಂತ್ರಿಕವಾಗಿ 'ರಂಗೂನ್'

    ತಾಂತ್ರಿಕವಾಗಿ 'ರಂಗೂನ್'

    ಭಾರದ್ವಜ್ ಅವರ 'ರಂಗೂನ್' ಹೆಚ್ಚು ಕಾವ್ಯತ್ಮಕ ಡೈಲಾಗ್ ಗಳಿಂದ ಕೂಡಿದೆ. ಆದರೆ ಚಿತ್ರಕಥೆಗೆ ತಕ್ಕ ಕ್ಯಾಮೆರಾ ವರ್ಕ್ ನಿರ್ವಹಿಸುವಲ್ಲಿ ಮುಗ್ಗರಿಸಿರುವುದು ಕಂಡುಬರುತ್ತದೆ. ಅಲ್ಲದೆ ಸಂಕಲನದಲ್ಲಿ ಹಲವು ಕಡೆ ತೊಡಕು ಉಂಟಾಗಿದೆ.

    ಸಂಗೀತ

    ಸಂಗೀತ

    'ರಂಗೂನ್' ಚಿತ್ರದ ಎರಡು ಹಾಡುಗಳು ಸುಂದರವಾಗಿ ಮೂಡಿಬಂದಿದ್ದು, ಪ್ರೇಕ್ಷಕರ ಮನದಲ್ಲಿ ಉಳಿಯುತ್ತವೆ.

    ಫೈನಲ್ ಸ್ಟೇಟ್ಮೆಂಟ್

    ಫೈನಲ್ ಸ್ಟೇಟ್ಮೆಂಟ್

    'ರಂಗೂನ್' ಚಿತ್ರ ವಿಶಾಲ್ ಭಾರದ್ವಜ್ ಅವರ ಉತ್ತಮ ಸಿನಿಮಾಗಳಲ್ಲಿ ಒಂದು ಎಂದು ಹೇಳಲು ಆಗುವುದಿಲ್ಲ. ಆದರೆ ಕಂಗನಾ ರನೌತ್ ತಮ್ಮ ಮೋಹಕ ಅಭಿನಯದಿಂದ ಎಲ್ಲರ ಹೃದಯವನ್ನು ಗೆಲ್ಲುತ್ತಾರೆ.

    English summary
    Saif Ali Khan and Kangana Ranaut starrer 'Rangoon' movie hit the screen today(February 24). Here is 'Rangoon' movie review
    Saturday, February 25, 2017, 11:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X