»   » ಹತ್ತು ಚಿತ್ರಗಳ ನಂತರ ಮತ್ತೊಂದು ಚಿತ್ರ ಎಂಬಂತಾಗಬೇಕಾಗಿದ್ದ ಗಲಾಟೆ ಅಳಿಯಂದ್ರು ಹಾಗಾಗಿಲ್ಲ ಅನ್ನುವುದೇ ಸಮಾಧಾನದ ಸಂಗತಿ.

ಹತ್ತು ಚಿತ್ರಗಳ ನಂತರ ಮತ್ತೊಂದು ಚಿತ್ರ ಎಂಬಂತಾಗಬೇಕಾಗಿದ್ದ ಗಲಾಟೆ ಅಳಿಯಂದ್ರು ಹಾಗಾಗಿಲ್ಲ ಅನ್ನುವುದೇ ಸಮಾಧಾನದ ಸಂಗತಿ.

Posted By:
Subscribe to Filmibeat Kannada

* ಸತ್ಯನಾರಾಯಣ

ಅದಕ್ಕೆ ಕಾರಣ ಶಿವರಾಜ್‌ ಅಭಿನಯ, ದೊಡ್ಡಣ್ಣನ ಹಾಸ್ಯ, ಸಾಕ್ಷಿ ಶಿವಾನಂದ್‌ ಗ್ಲಾಮರ್‌ ಹಾಗೂ ಅವೆಲ್ಲಕ್ಕಿಂತ ಹೆಚ್ಚಾಗಿ ಕುಮಾರಸ್ವಾಮಿ ಅವರ ಅದ್ದೂರಿ ನಿರ್ಮಾಣ.

ಒಂದು ಅರ್ಥದಲ್ಲಿ -ಬಜೆಟ್‌ , ಕನಸು, ಕಲ್ಪನೆ ದೃಷ್ಟಿಯಿಂದ- ಇದು ಪ್ರೀತ್ಸೆಯಷ್ಟೇ ಅದ್ದೂರಿ ಚಿತ್ರ. ಮಾರಿಷಸ್‌ ಸೊಬಗು ಇಂಚಿಂಚಾಗಿ ನಿಮ್ಮ ಮುಂದೆ ತೆರೆಯುತ್ತಾ ಹೋಗುತ್ತಿರುವ ಹಾಗೇ, ಪ್ರಭು ದೇವನನ್ನು ನೆನಪಿಸುವ ಶೈಲಿಯಲ್ಲಿ ಶಿವರಾಜ್‌ ಕುಮಾರ್‌ ನರ್ತಿಸುತ್ತಾರೆ. ನುಣುಪಾದ ಹೊಟ್ಟೆಯನ್ನು ಕ್ಯಾಮರಾ ಕಣ್ಣಿನ ವಶಕ್ಕೆ ಕೊಟ್ಟು, ಸಾಕ್ಷಿ ಶಿವಾನಂದ್‌ ಕೆಲವು ಕೋನಗಳಲ್ಲಿ ಸೋನಾಲಿ ಬೇಂದ್ರೆಗೆ ಸಾಟಿಯಾಗುತ್ತಾರೆ. ದೇವ ಸಂಗೀತದಲ್ಲಿ ಎರಡು ಹಾಡುಗಳು ಬೆಚ್ಚಿ ಬೀಳಿಸುವಂತಿವೆ. ಇನ್ನೊಂದು ಸಾಹಿತ್ಯ -ಸಂಗೀತ ಸಮಾರಾಧನೆ ನೀಡುತ್ತದೆ.

ಈಗಾಗಲೇ ತಮಿಳಿನಲ್ಲಿ ಬಂದ ಉಳ್ಳೆತ್ತೆೈ ಅಳಿತ್ತಾ ಹಾಗೂ ತೆಲುಗಿನ ವಿವುಡೇ ವಿಡಂಡಿ ಬಾಬು ಚಿತ್ರಗಳನ್ನು ಎಸ್‌. ನಾರಾಯಣ್‌ ಕನ್ನಡಕ್ಕೆ ತಂದಿದ್ದಾರೆ. ತಮಿಳಿನಲ್ಲಿ ಗೌಂಡಮಣಿ ಹಾಗೂ ತೆಲುಗಿನಲ್ಲಿ ಬ್ರಹ್ಮಾನಂದಮ್‌ ನಿರ್ವಹಿಸಿದ ಪಾತ್ರವನ್ನು ತಾನೇ ಮಾಡಹೋಗಿ ಸೋತಿದ್ದಾರೆ. ಈ ಸೋಲಿಗೆ ಅನ್ಯ ಕಾರಣಗಳೂ ಇವೆ ಅನ್ನೋದು ಚಿತ್ರ ತಂಡದವರ ಅಭಿಮತ. ಆದರೆ ಪ್ರೇಕ್ಷಕನಿಗೆ ತೆರೆಯ ಮೇಲೆ ಮೂಡಿ ಬಂದಿರುವುದಷ್ಟೇ ಮುಖ್ಯವಾಗಿರುವಾಗ, ತೆರೆಯ ಹಿಂದಿನದರ ಬಗ್ಗೆ ಪ್ರಸ್ತಾಪ ಬೇಕಿಲ್ಲ.

ಗಿರಿ ಛಾಯಾಗ್ರಹಣ, ಸೌಂದರ್‌ರಾಜನ್‌ ಎಡಿಟಿಂಗ್‌ ಚಿತ್ರದ ಉಳಿದ ಪ್ಲಸ್‌ ಪಾಯಿಂಟ್‌ಗಳು. ಹಾಗೇ ಪುಟ್ಟ ಗ್ಲಾಮರಸ್‌ ಪಾತ್ರದಲ್ಲಿ ತಾರಾ ಮಿಂಚಿದ್ದಾರೆ. ಕರಿಬಸಯ್ಯ ಹಾಗೂ ಮನ್‌ ದೀಪರಾಯ್‌ ಕೂಡ ಇಷ್ಟವಾಗುತ್ತಾರೆ. ಬಹಳ ದಿನಗಳ ನಂತರ ಮುಖ್ಯಮಂತ್ರಿ ಚಂದ್ರು ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಗ್ರಾಫಿಕ್‌ ಜಾದೂ ಕೂಡ ಚಿತ್ರದಲ್ಲಿದೆ. ಸಂಜೆ ಮನರಂಜನೆಗೆ ಹೇಳಿ ಮಾಡಿಸಿದ ಚಿತ್ರ.

ಚಿತ್ರ : ಗಲಾಟೆ ಅಳಿಯಂದ್ರು
ನಿರ್ಮಾಣ : ಹೆಚ್‌. ಡಿ. ಕುಮಾರ ಸ್ವಾಮಿ
ನಿರ್ದೇಶನ : ಎಸ್‌. ನಾರಾಯಣ್‌
ಬ್ಯಾನರ್‌ : ಚಿನ್ನಾಂಬಿಕಾ ಫಿಲ್ಮ್ಸ್‌
ಅಭಿನಯ : ಶಿವರಾಜ್‌ ಕಮಾರ್‌ , ಎಸ್‌. ನಾರಾಯಣ್‌, ಸಾಕ್ಷಿ ಶಿವಾನಂದ್‌, ದೊಡ್ಡಣ್ಣ , ತಾರಾ

ಚಿತ್ರ ವಿಮರ್ಶೆ: ಕಿಲಾಡಿ : ಕಿತ್ತರೂ ಇಲ್ಲ , ಅತ್ತರೂ ಇಲ್ಲ...

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada