Salaar First Half Review: ಬರ್ಮಾ ಗಡಿಯಲ್ಲಿ ದೇವ.. ಫ್ಲ್ಯಾಶ್‌ಬ್ಯಾಕ್‌ನಲ್ಲಿ ಸ್ನೇಹಿತರು ದೂರ ದೂರ
'ಕೆಜಿಎಫ್ 2' ಸಿನಿಮಾ ಬಳಿಕ ಪ್ರಶಾಂತ್ ನೀಲ್ ನಿರ್ದೇಶಿಸಿರುವ 'ಸಲಾರ್' ಇಂದು (ಡಿಸೆಂಬರ್ 22) ರಿಲೀಸ್ ಆಗಿದೆ. ಬಾಹುಬಲಿ ಬಳಿಕ ಮತ್ತೊಂದು ಮೆಗಾ ಸಕ್ಸಸ್‌ಗೆ ಕಾದಿರುವ ಪ್ರಭಾಸ್‌ಗೆ ಈ ಸಿನಿಮಾ ಬ್ಲಾಕ್ ಬಸ್ಟರ್ ಸಕ್ಸಸ್ ಕೊಡುತ್ತಾ? ಈ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ.
'ಸಲಾರ್' ಸಿನಿಮಾ ಪ್ರಶಾಂತ್ ನೀಲ್ ಅವರೇ ನಿರ್ದೇಶಿಸಿದ 'ಉಗ್ರಂ' ಸಿನಿಮಾದ ರಿಮೇಕ್ ಎಂದು ಹೇಳಿಕೊಂಡಿದ್ದಾರೆ. ಆದರೆ, ಕನ್ನಡದ 'ಉಗ್ರಂ' ಸಿನಿಮಾಗೂ, ಇದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಸಿನಿಮಾ ಮೇಕಿಂಗ್, ಸ್ಕ್ರೀನ್ ಪ್ಲೇ, ಸ್ಕೇಲ್, ಕಾಸ್ಟ್ಯೂಮ್ಸ್ ಎಲ್ಲವೂ ವಿಭಿನ್ನವಾಗಿ ಕಾಣಿಸುತ್ತಿವೆ.
ಪ್ರಭಾಸ್,ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಬಂದಿರೋ 'ಸಲಾರ್' ಫಸ್ಟ್ ಹಾಫ್ ಪ್ರೇಕ್ಷಕರಿಗೆ ಕಿಕ್ ಕೊಟ್ಟಿದೆ. ಫಸ್ಟ್ ಹಾಫ್‌ನಲ್ಲಿ ಬ್ಲಾಕ್‌ಬಸ್ಟರ್ ಅನ್ನೋ ಸುಳಿವು ಸಿಕ್ಕಿದೆ. ಹಾಗಿದ್ದರೆ, ಮೊದಲಾರ್ಧದಲ್ಲಿ ಏನೆಲ್ಲ ಇದೆ? ಸಿನಿಮಾದ ಹೈಲೈಟ್ ಏನು? ತಿಳಿಯಲು ಮುಂದೆ ಓದಿ.

ಮೊದಲ ಭಾಗದಲ್ಲಿ ಕಥೆಗೆ ಪೀಠಿಕೆ
ದೇವ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಬರ್ಮಾ ಗಡಿಯ ಕಲ್ಲಿದ್ದಲು ಗಣಿಯಲ್ಲಿ ದೇವ ಕೆಲಸ ಮಾಡಿಕೊಂಡಿರುತ್ತಾನೆ. ಚಿಕ್ಕಂದಿನಲ್ಲಿ ಆತ್ಮೀಯ ಸ್ನೇಹಿತರಾಗಿದ್ದ ದೇವ ಮತ್ತು ವರದ ಅನಿವಾರ್ಯ ಕಾರಣಗಳಿಗೆ ದೂರವಾಗಿರುತ್ತಾರೆ. ನಾಯಕಿ ಶ್ರುತಿ ಹಾಸನ್ ವಿದೇಶದಿಂದ ದೇವ ಮನೆಗೆ ಬರುವುದರಿಂದ ಈ ಕಥೆ ಆರಂಭ ಆಗುತ್ತೆ. 1985 ರಿಂದ 2019ರ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ಹೇಳಲಾಗಿದೆ.
ಫ್ಲ್ಯಾಶ್ ಬ್ಯಾಕ್ ತಂತ್ರ ಬಳಕೆ
'ಸಲಾರ್' ಸಿನಿಮಾದ ಕಥೆಯನ್ನು ಪ್ರಶಾಂತ್ ನೀಲ್ ಫ್ಲ್ಯಾಶ್ ಬ್ಯಾಕ್ ತಂತ್ರ ಬಳಸಿ ಕಥೆ ಹೇಳಿದ್ದಾರೆ. ಇಂಟರ್ ವಲ್ ಫೈಟ್ ಸೂಪರ್ ಆಗಿದೆ. ತಾಯಿ ಮಾತಿಗೆ ಬೆಲೆ ಕೊಟ್ಟು, ಭೂಮಿಯೊಳಗೆ ಕುದಿಯುತ್ತಿರುವ ತಣ್ಣನೆಯ ಜ್ವಾಲಾಮುಖಿ ರೀತಿ ಕೋಪವನ್ನು ಒಳಗೆ ಇಟ್ಟುಕೊಂಡಿರೋ ದೇವ ಮುಂದೆ ಸಂದರ್ಭಗಳು ಹೇಗೆ ಬರುತ್ತವೆ ಅನ್ನೋದೇ ಕಥೆ.
ದೇವ, ವರದ ದೂರ ದೂರ
ಚಿಕ್ಕಂದಿನಲ್ಲಿ ಅನಿವಾರ್ಯ ಕಾರಣಕ್ಕೆ ದೂರಾಗುವ ದೇವ ಹಾಗೂ ವರದ ದೂರಾವಾಗುತ್ತಾರೆ. ಸ್ನೇಹಿತ ಕರೆದಾಗ ಮತ್ತೆ ಬರ್ತೀನಿ ಅಂತ ಮಾತು ಕೊಟ್ಟು ಹೋಗಿರುತ್ತಾನೆ.
ಸ್ನೇಹಿತನಿಗೆ ಸಮಸ್ಯೆ ಆಗಾದ ಬಂದು ಸಹಾಯ ಮಾಡುತ್ತಾನೆ. ಜೊತೆಗೆ ಸ್ನೇಹಿತನ ವೈರತ್ವ ಕಟ್ಟಿಕೊಂಡು ಹೋಗಿರುತ್ತಾನೆ. ಮುಂದೇನಾಗುತ್ತೆ ಅನ್ನೋದು ಇಂಟ್ರೆಸ್ಟಿಂಗ್ ಆಗಿ ಹೇಳುವುದಕ್ಕೆ ಹೊರಟಿದ್ದಾರೆ.
ಫಸ್ಟ್‌ಹಾಫ್‌ನಲ್ಲಿ ಡೈಲಾಗ್ ಕಮ್ಮಿ
ಫಸ್ಟ್‌ಹಾಫ್‌ನಲ್ಲಿ ಪ್ರಭಾಸ್ ಡೈಲಾಗ್ ಕಮ್ಮಿಯಿದೆ. ಇನ್ನು ಇಂಟರ್‌ವಲ್ ವೇಳೆ ಬರೋ ಫೈಟ್ ಅದ್ಭುತವಾಗಿದೆ. ಪ್ರಭಾಸ್ ಅಭಿಮಾನಿಗಳಿಗೆ ಈ ಹೈ ವೋಲ್ಟೇಜ್ ಫೈಟ್ ಕಿಕ್ ಕೊಡುವುದರಲ್ಲಿ ಅನುಮಾನವೇ ಇಲ್ಲ. ಅಂದ್ಹಾಗೆ ಇಂಟರ್ ವಲ್ ಬಳಿಕವಷ್ಟೇ ಖಾನ್ಸರ್ ಕೋಟೆ ದರ್ಶನ ಆಗುತ್ತೆ. ಒಟ್ಟಿನಲ್ಲಿ ಫಸ್ಟ್ ಹಾಫ್ ಮೆಗಾ ಬ್ಲಾಕ್‌ಬಸ್ಟರ್ ಎನ್ನಬಹುದು. ಸೆಕೆಂಡ್ ಹಾಫ್ ಮೇಲೆ ಸಿನಿಮಾ ಸಕ್ಸಸ್ ನಿಂತಿದೆ.


Click it and Unblock the Notifications











