Salaar Teaser: ಪ್ರಭಾಸ್ - ಪ್ರಶಾಂತ್ ನೀಲ್‌ರ ಸುನಾಮಿಗೆ ಬಾಕ್ಸ್ ಆಫೀಸ್ ತತ್ತರಿಸುವುದು ಪಕ್ಕಾ!

ಬಹು ನಿರೀಕ್ಷಿತ ಸಲಾರ್ ಚಿತ್ರದ ಟೀಸರ್ ಬಿಡುಗಡೆಗೊಂಡಿದೆ. ಮೊದಲೇ ಹೇಳಿದಂತೆ ಇಂದು ( ಜುಲೈ 6 ) ಬೆಳಗ್ಗೆ 5.12ಕ್ಕೆ ಸಲಾರ್ ಚಿತ್ರದ ಟೀಸರ್ ಹೊಂಬಾಳೆ ಫಿಲ್ಮ್ಸ್ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.
1.46 ನಿಮಿಷವಿರುವ ಈ ಟೀಸರ್‌ನಲ್ಲಿ ಶುರುವಿನಿಂದ ಕೊನೆಯವರೆಗೂ ಮಾಸ್ ಎಲಿಮೆಂಟ್‌ಗಳ ಸರಮಾಲೆಯೇ ಇದೆ. ವಿದೇಶಿ ವಿಲನ್‌ಗಳ ಗುಂಪು ಓರ್ವನನ್ನು ಗುಂಡಿಕ್ಕಿ ಕೊಲ್ಲಲು ಗುಂಪುಗಟ್ಟಿ ನಿಂತಿರುವಾಗ ಆ ವಿಲನ್‌ಗಳ ಜತೆ ಆತ ( ಟಿನ್ನು ಆನಂದ್ ) ಮಾತನಾಡಲು ಆರಂಭಿಸುತ್ತಾನೆ.
'ಸಿಂಪಲ್ ಇಂಗ್ಲಿಷ್.. ನೋ ಕನ್‌ಫ್ಯೂಷನ್.." ಎಂದು ಡೈಲಾಗ್ ಆರಂಭಿಸುವ ಆತ "ಲಯನ್, ಚೀತಾ, ಟೈಗರ್, ಎಲಿಫೆಂಟ್ ವೆರಿ ಡೇಂಜರಸ್.. ಬಟ್.. ನಾಟ್ ಇನ್ ಜುರಾಸಿಕ್ ಪಾರ್ಕ್.. ಬಿಕಾಸ್ ಇನ್ ದಟ್ ಪಾರ್ಕ್, ದೇರ್ ಈಸ್ ಎ.." ಎಂದು ನಾಯಕ ನಟ ಪ್ರಭಾಸ್‌ಗೆ ಬಿಲ್ಡಪ್ ಕೊಡ್ತಾನೆ.
ಇಷ್ಟರಲ್ಲಿ ಲಯನ್, ಚೀತಾ, ಎಲಿಫೆಂಟ್ ಹಾಗೂ ಟೈಗರ್ ಡೈಲಾಗ್‌ಗೆ ಖಳ ನಾಯಕರ ಅಟ್ಟಹಾಸವನ್ನು ತೋರಿಸುವ ಪ್ರಶಾಂತ್ ನೀಲ್ ಬಳಿಕ ಪ್ರಭಾಸ್ ಮಾಸ್ ಅವತಾರವನ್ನೂ ಸಹ ತೋರಿಸಿದ್ದಾರೆ. ಇಲ್ಲಿ ತನ್ನ ಸುತ್ತುವರಿದಿದ್ದ ವಿದೇಶಿ ವಿಲನ್‌ಗಳಿಗೆ ನಾಯಕನ ಪರಿಚಯ ಮಾಡಿಸಲು ಪ್ರಾಣಿಗಳನ್ನು ಹೋಲಿಸಿ ಬಿಲ್ಡಪ್ ನೀಡಲಾಗಿದೆ.
ಸಿಂಹ, ಹುಲಿ, ಚಿರತೆ ಹಾಗೂ ಆನೆ ಈ ಎಲ್ಲಾ ಪ್ರಾಣಿಗಳು ತುಂಬಾ ಭಯಂಕರ.. ಆದರೆ ಜುರಾಸಿಕ್ ಪಾರ್ಕ್‌ನಲ್ಲಿ ಅವು ಭಯಾನಕ ಅಲ್ಲ. ಏಕೆಂದರೆ ಅಲ್ಲಿ ಸಲಾರ್‌ನ ನಾಯಕನಿದ್ದಾನೆ ಎಂದು ತಿಳಿಸಿ ನಾಯಕನ ವೈಭವೀಕರಣ ಮಾಡಲಾಗಿದೆ.
ಹೀಗೆ ದೊಡ್ಡ ಮಟ್ಟದ ಬಿಲ್ಡಪ್ ಬಳಿಕ ಪ್ರಭಾಸ್ ಕ್ಯಾರೆಕ್ಟರ್ ರಿವೀಲ್ ಆಗಿದ್ದು, ಇಡೀ ಟೀಸರ್‌ನಲ್ಲಿ ಎಲ್ಲಿಯೂ ಪ್ರಭಾಸ್ ಡೈಲಾಗ್ ಹೇಳಿಲ್ಲ. ಒಂದು ದೃಶ್ಯದಲ್ಲಿ ಮಾತ್ರ ಸೈಡ್ ಆಂಗಲ್‌ನಲ್ಲಿ ಪ್ರಭಾಸ್ ಮುಖ ದರ್ಶನ ಮಾಡಿಸಿದ್ದು ಬಿಟ್ಟರೆ ಇನ್ನೆಲ್ಲೂ ಸಹ ಪ್ರಭಾಸ್ ಕಾಣಿಸುವುದಿಲ್ಲ. ಈ ದೃಶ್ಯವೇ ಕಿಚ್ಚು ಹಚ್ಚಿದ್ದು, ಈ ಅವತಾರ ನೋಡಿದ ಸಿನಿ ರಸಿಕರು ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಶನ್ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುವುದು ಪಕ್ಕಾ ಎಂದು ಮಾತನಾಡಿಕೊಳ್ತಿದ್ದಾರೆ.
ಟೀಸರ್ ಉದ್ದಕ್ಕೂ ಗಣಿಯೊಂದರಲ್ಲಿ ನಡೆಯುವ ಫೈಟ್ ಸೀನ್‌ನ ದೃಶ್ಯಗಳನ್ನು ತೋರಿಸಲಾಗಿದೆ. ಈ ದೃಶ್ಯಗಳು ಎಲ್ಲರಿಗೂ ಕೆಜಿಎಫ್ ಚಿತ್ರವನ್ನು ನೆನಪಿಸಿವೆ. ಈ ಮೂಲಕ ಸಿನಿ ರಸಿಕರು ಸಲಾರ್ ಕೆಜಿಎಫ್ ಫ್ರಾಂಚೈಸ್‌ನ ಚಿತ್ರವಾ ಎಂಬ ಮಾತುಗಳನ್ನು ಆರಂಭಿಸಿದ್ದಾರೆ.
ಟೀಸರ್‌ನಲ್ಲಿ ಪ್ರಭಾಸ್ ಮುಖವನ್ನು ಒಮ್ಮೆ ಸೈಡ್ ಆಂಗಲ್‌ನಲ್ಲಿ ಮಾತ್ರ ತೋರಿಸಿರುವ ಪ್ರಶಾಂತ್ ನೀಲ್ ಅದೇ ರೀತಿ ಚಿತ್ರದ ಕಂಟೆಂಟ್ ಅನ್ನೂ ಸಹ ಸ್ವಲ್ಪವೇ ಮಾತ್ರ ತೋರಿಸಿ ಕಥೆ ಯಾವ ಆಧಾರಿತ ಎಂಬುದನ್ನು ಇನ್ನೂ ಸಹ ನಿಗೂಢವಾಗಿ ಉಳಿಸಿಕೊಂಡಿದ್ದಾರೆ. ಟೀಸರ್ ವೀಕ್ಷಿಸಿದ ಸಿನಿ ರಸಿಕರಿಗೆ ಇದೊಂದು ಮಾಸ್ ಚಿತ್ರ ಎಂಬುದನ್ನು ಹೊರತುಪಡಿಸಿ ಕಥೆಯನ್ನು ನೀಲ್ ಬಿಟ್ಟುಕೊಟ್ಟಿಲ್ಲ.
ಕೆಜಿಎಫ್ ತಂಡದ ಸದಸ್ಯರೇ ಸಲಾರ್ ಚಿತ್ರಕ್ಕೂ ಕೆಲಸ ಮಾಡಿರುವುದರಿಂದ ಅತ್ಯದ್ಭುತ ಕ್ವಾಲಿಟಿಯ ಟೀಸರ್ ಮೂಡಿ ಬಂದಿದ್ದು, ಕೊನೆಯಲ್ಲಿ ಸಲಾರ್ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ, ಮೊದಲ ಭಾಗ "ಪಾರ್ಟ್ ಒನ್ ಸೀಸ್‌ಫೈರ್" ಎಂದು ತೋರಿಸಲಾಗಿದೆ. ಈ ಮೂಲಕ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗುವುದನ್ನು ಖಚಿತಪಡಿಸಲಾಗಿದೆ.


Click it and Unblock the Notifications











