twitter
    For Quick Alerts
    ALLOW NOTIFICATIONS  
    For Daily Alerts

    Dabanng-3: ಕನ್ನಡದಲ್ಲಿ ಮ್ಯಾಜಿಕ್ ಮಾಡಿದ 'ಚುಲ್ ಬುಲ್ ಪಾಂಡೆ'

    |

    ದಬಾಂಗ್, ದಬಾಂಗ್ 2 ಬಳಿಕ ದಬಾಂಗ್ 3 ಸಿನಿಮಾ ಬಂದಿದ್ದು, ಈ ಹಿಂದಿನ ಚಿತ್ರಗಳಂತೆ ಇದು ಕೂಡ ಭರಪೂರ ಮನರಂಜನೆ. ಚುಲ್ ಬುಲ್ ಪಾಂಡೆ ಜೊತೆ ಈ ಸಲ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದು, ದಬಾಂಗ್ 3 ಮ್ಯಾಜಿಕ್ ಮಾಡಿದೆ. ಪೂರ್ತಿ ವಿಮರ್ಶೆ.

    Rating:
    3.5/5

    ಚಿತ್ರ: ದಬಾಂಗ್ 3

    ನಿರ್ದೇಶಕ: ಪ್ರಭುದೇವ

    ನಿರ್ಮಾಪಕ: ಅರ್ಬಾಜ್ ಖಾನ್, ಸಲ್ಮಾನ್ ಖಾನ್

    ಕಲಾವಿದರು: ಸಲ್ಮಾನ್ ಖಾನ್, ಸುದೀಪ್, ಸೋನಾಕ್ಷಿ ಸಿನ್ಹಾ, ಸೈಯಿ ಮಂಜ್ರೇಕರ್ ಮತ್ತು ಇತರರು

    ಬಿಡುಗಡೆ: ಡಿಸೆಂಬರ್ 20

    ದಬಾಂಗ್ ಸ್ವೀಕೆಲ್ ಅಲ್ಲ, ಪ್ರೀಕ್ವೆಲ್

    ದಬಾಂಗ್ ಸ್ವೀಕೆಲ್ ಅಲ್ಲ, ಪ್ರೀಕ್ವೆಲ್

    ದಬಾಂಗ್ 3 ಎಂದು ಹೆಸರಿಟ್ಟಿದ್ದರೂ ಇದು ಸ್ವೀಕೆಲ್ ಅಲ್ಲ. ಪ್ರೀಕ್ವೆಲ್ ಸಿನಿಮಾ. ಚುಲ್ ಬುಲ್ ಪಾಂಡೆಯ ಹಿನ್ನೆಲೆ, ಆತ ಯಾರು? ಪೊಲೀಸ್ ಆಫೀಸರ್ ಹೇಗಾದ, ಚುಲ್ ಬುಲ್ ಪಾಂಡೆ ಹೆಸರು ಹೇಗೆ ಬಂತು ಎಂಬ ಕಥೆಯನ್ನು ಈ ಚಿತ್ರ ಒಳಗೊಂಡಿದ್ದು, ಆಸಕ್ತಿಕರವಾಗಿ ಮೂಡಿಬಂದಿದೆ. ಈ ಹಿಂದಿನ ಎರಡು ಚಿತ್ರಗಳಂತೆ ದಬಾಂಗ್ 3 ಕೂಡ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ.

    ಚುಲ್ ಬುಲ್ vs ಬಾಲಿ ಸಿಂಗ್

    ಚುಲ್ ಬುಲ್ vs ಬಾಲಿ ಸಿಂಗ್

    ಖಡಕ್ ಪೊಲೀಸ್ ಆಫೀಸರ್ ಚುಲ್ ಬುಲ್ ಪಾಂಡೆ (ಸಲ್ಮಾನ್ ಖಾನ್) ಜೀವನದಲ್ಲಿ ಒಂದು ಲವ್ ಸ್ಟೋರಿ ಇದೆ. ಖುಷಿ (ಸೈಯಿ ಮಂಜ್ರೇಕರ್) ಜೊತೆ ಚುಲ್ ಬುಲ್ ಗೆ ಲವ್ ಆಗುತ್ತೆ. ಆಕೆಯ ಜೊತೆ ಮದ್ವೆನೂ ಫಿಕ್ಸ್ ಆಗುತ್ತೆ. ಆದರೆ, ಖುಷಿಯನ್ನು ನೋಡಿದ ಮೊದಲ ನೋಟದಲ್ಲೇ ಬಾಲಿ ಸಿಂಗ್ ಗೂ (ಸುದೀಪ್) ಪ್ರೀತಿಯಾಗುತ್ತೆ. ಖುಷಿ ಮತ್ತು ಚುಲ್ ಬುಲ್ ಪ್ರೀತಿ ವಿಷ್ಯ ತಿಳಿದ ಬಾಲಿ ಸಿಂಗ್ ತನಗೆ ಸಿಗದ ಪ್ರೀತಿ ಬೇರೆಯವರಿಗೂ ಸಿಗಬಾರದು ಎಂದು ಖುಷಿ, ಆಕೆಯ ತಂದೆ-ತಾಯಿಯನ್ನು ಕ್ರೂರವಾಗಿ ಕೊಲ್ಲುತ್ತಾನೆ. ಆ ಸಂದರ್ಭದಲ್ಲಿ ಅಸಹಾಯಕನಾಗಿ ನಿಲ್ಲುವ ಚುಲ್ ಬುಲ್ ಪಾಂಡೆ ಬಾಲಿ ಸಿಂಗ್ ವಿರುದ್ಧ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದು ಕಥೆ.

    'ದಬಾಂಗ್-3' ಟ್ವಿಟ್ಟರ್ ವಿಮರ್ಶೆ: ಮೊದಲ ಶೋ ನೋಡಿ ಪ್ರೇಕ್ಷಕರು ಹೇಳಿದ್ದೇನು?

    ಕಂಪ್ಲೀಟ್ ಸಲ್ಮಾನ್ ಖಾನ್ ಶೋ

    ಕಂಪ್ಲೀಟ್ ಸಲ್ಮಾನ್ ಖಾನ್ ಶೋ

    ಇದು ಕಂಪ್ಲೀಟ್ ಸಲ್ಮಾನ್ ಖಾನ್ ಶೋ. ಖಡಕ್ ಆಫೀಸರ್ ಆದರೂ ನಗುವಿಗೆ ಎಲ್ಲಿಯೂ ಕೊರತೆ ಇಲ್ಲದಷ್ಟು ನಗಿಸುತ್ತಾರೆ. ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಫೈಟ್ ದೃಶ್ಯಗಳಿವೆ. ಫ್ಯಾಮಿಲಿ ಅಂಶಗಳು ಸೇರಿದೆ. ಕ್ಯೂಟ್ ಲವ್ ಸ್ಟೋರಿ ಗಮನ ಸೆಳೆಯುತ್ತೆ. ಸಲ್ಲು ಡ್ಯಾನ್ಸ್ ಗೆ ಶಿಳ್ಳೆ, ಚಪ್ಪಾಳೆ ಮಿಸ್ಸೆ ಆಗಲ್ಲ. ಸ್ಟೈಲ್ ನೋಡಿ ಫಿದಾ ಆಗೋದು ಪಕ್ಕಾ. ಹೀಗೆ, ಪ್ರತಿಯೊಂದರಲ್ಲು ಚುಲ್ ಬುಲ್ ಪಾಂಡೆ ಜನರನ್ನು ರಂಜಿಸುತ್ತಾರೆ. ಉಳಿದಂತೆ ಅರ್ಬಾಜ್ ಖಾನ್, ಸೋನಾಕ್ಷಿ ಸನ್ಹಾ, ಸೈಯಿ ಮಂಜ್ರೇಕರ್ ಪಾತ್ರಗಳು ಸಲ್ಲುಗೆ ಉತ್ತಮ ಸಾಥ್ ನೀಡಿದ್ದಾರೆ.

    ಸಲ್ಲುಗೆ ತಕ್ಕ ಎದುರಾಳಿ ಸುದೀಪ್

    ಸಲ್ಲುಗೆ ತಕ್ಕ ಎದುರಾಳಿ ಸುದೀಪ್

    ಸುದೀಪ್ ಈ ಚಿತ್ರದಲ್ಲಿ ವಿಲನ್ ಆಗಿದ್ದರೂ ಹೀರೋ ರೇಂಜ್ ಗೆ ಮಹತ್ವವಿದೆ. ಕನ್ನಡದಲ್ಲಿ ದಬಾಂಗ್ ನೋಡುವಾಗ, ಈ ಚಿತ್ರಕ್ಕೆ ಸುದೀಪ್ ಹೀರೋ ಎಂದು ಕೆಲವು ಕಡೆ ಫೀಲ್ ಆಗುತ್ತೆ. ಬಾಲಿ ಸಿಂಗ್ ಪಾತ್ರದಲ್ಲಿ ಸುದೀಪ್ ನಿಜಕ್ಕೂ ಆರ್ಭಟಿಸಿದ್ದಾರೆ. ಸುದೀಪ್ ಮತ್ತು ಸಲ್ಲು ಕಾಂಬಿನೇಷನ್ ಮೋಡಿ ಮಾಡಿದೆ. ಕೆಲವು ಕಡೆ ಸಲ್ಲುಗಿಂತ ಸುದೀಪ್ ಗೆ ಬಿಲ್ಡಪ್ ಹೆಚ್ಚಿದೆ ಎಂಬ ಭಾವನೆಯೂ ಬರುತ್ತೆ. ಅಷ್ಟರ ಮಟ್ಟಿಗೆ ಸುದೀಪ್ ಕಮಾಲ್ ಮಾಡಿದ್ದಾರೆ.

    'ದಬಾಂಗ್' ಬಳಿಕ ತಮಿಳು ಸ್ಟಾರ್ ನಟನ ಚಿತ್ರದಲ್ಲಿ ಸುದೀಪ್ ವಿಲನ್!'ದಬಾಂಗ್' ಬಳಿಕ ತಮಿಳು ಸ್ಟಾರ್ ನಟನ ಚಿತ್ರದಲ್ಲಿ ಸುದೀಪ್ ವಿಲನ್!

    ತಾಂತ್ರಿಕವಾಗಿ ಗುಣಮಟ್ಟ ಹೊಂದಿದೆ

    ತಾಂತ್ರಿಕವಾಗಿ ಗುಣಮಟ್ಟ ಹೊಂದಿದೆ

    ಈ ಹಿಂದೆ ಬಂದಿದ್ದ ಡಬ್ಬಿಂಗ್ ಚಿತ್ರಗಳಿಗೆ ಹೋಲಿಸಿಕೊಂಡರೆ ದಬಾಂಗ್ 3 ಒಳ್ಳೆಯ ಗುಣಮಟ್ಟ ಹೊಂದಿದೆ. ನುರಿತ ಕಲಾವಿದರಿಂದ ಧ್ವನಿ ಕೊಡಿಸಿದ್ದಾರೆ. ರವಿಶಂಕರ್ ಗೌಡ, ಗಿರಿರಾಜ್, ಶ್ರೀಧರ್, ಜಿಜಿ, ಉಗ್ರಂ ಮಂಜು ಅಂತವರು ವಾಯ್ಸ್ ಕೊಟ್ಟಿದ್ದಾರೆ. ಅನೂಪ್ ಭಂಡಾರಿ ಮತ್ತು ಗುರುದತ್ ಗಾಣಿಗ ಸಾಹಿತ್ಯದಲ್ಲೂ ಒಳ್ಳೆಯ ಕ್ವಾಲಿಟಿ ಇದೆ. ಕಲಾವಿದರ ವೇಷಭೂಷಣ, ಹಿಂದಿ ಹಾಡುಗಳು, ಬೋರ್ಡ್ ಗಳು, ಹಿಂದಿ ಅಕ್ಷರಗಳು ಇರುವುದರಿಂದ ಹಿಂದಿ ಸಿನಿಮಾ ಎನಿಸಿಕೊಳ್ಳುತ್ತೆ ಅಷ್ಟೆ.

    ದಬಾಂಗ್ ಕನ್ನಡ ನೋಡಬಹುದು

    ದಬಾಂಗ್ ಕನ್ನಡ ನೋಡಬಹುದು

    ಹಿಂದಿ ಪ್ರೇಕ್ಷಕರು ದಬಾಂಗ್ 3 ಚಿತ್ರದಲ್ಲಿ ಅಷ್ಟೇನೂ ವಿಶೇಷತೆ ಇರದೇ ಇರಬಹುದು. ಆದರೆ, ಕನ್ನಡದಲ್ಲಿ ದಬಾಂಗ್ 3 ಸಿನಿಮಾ ನೋಡಬಹುದು. ಸೂಪರ್ ಡೂಪರ್ ಅಲ್ಲದೇ ಹೋದರು, ಪರಭಾಷೆ ಚಿತ್ರಗಳನ್ನು ಈ ಮಟ್ಟಿಗೆ ಡಬ್ಬಿಂಗ್ ಮಾಡಿದರೆ ಆರಾಮಾಗಿ ಕನ್ನಡದಲ್ಲಿ ಸಿನಿಮಾ ನೋಡಬಹುದು.

    English summary
    Dabanng-3 Review: Bollywood actor Salman Khan and Sudeep starrer Dabanng-3 movie review. Dabanng-3 released today.
    Friday, December 20, 2019, 16:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X