ರಾಧೇ ಟ್ವಿಟ್ಟರ್ ವಿಮರ್ಶೆ: 'ಸೂಪರ್ ಹಿಟ್' ಎಂದು ಘೋಷಿಸಿದ ಅಭಿಮಾನಿಗಳು

ಎಲ್ಲ ಅಂದುಕೊಂಡಂತೆ ಆಗಿದ್ದರೆ ಚಿತ್ರಮಂದಿರದಲ್ಲಿ ರಾಧೇ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಕೊರೊನಾ ಭೀತಿಯಿಂದ ಒಟಿಟಿಯಲ್ಲಿ ಮಾತ್ರ ರಾಧೇ ತೆರೆಕಂಡಿದೆ. ಈದ್ ಹಬ್ಬದ ಪ್ರಯುಕ್ತ ಸಲ್ಮಾನ್ ಖಾನ್ ಸಿನಿಮಾ ಇಂದು (ಮೇ 13) ಪ್ರೇಕ್ಷಕರ ಮುಂದೆ ಬಂದಿದ್ದು, ಸಿನಿಮಾ ನೋಡಿದ ಆಡಿಯೆನ್ಸ್ ಫುಲ್ ಖುಷ್ ಆಗಿದ್ದಾರೆ.

ಪ್ರಭುದೇವ ಮತ್ತು ಸಲ್ಮಾನ್ ಖಾನ್ ಕಾಂಬಿನೇಷನ್ ಹಾಗೂ ಸಲ್ಲು-ದಿಶಾ ಪಟಾನಿ ಜುಗಲ್‌ಬಂದಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಪ್ರಮುಖ ಖಳನಟನಾಗಿ ಅಭಿನಯಿಸಿರುವ ರಣದೀಪ್ ಹೂಡಾ ಬಹಳ ವಿಶೇಷವಾಗಿ ಗಮನ ಸೆಳೆದಿದ್ದಾರೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಈ ಮೂಲಕ 'ರಾಧೇ: ಯುವರ್ ಮೋಸ್ಟ್ ವಾಂಟೆಡ್ ಬಾಯ್' ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಎಂದು ಅಭಿಮಾನಿಗಳು ಘೋಷಣೆ ಮಾಡಿದ್ದಾರೆ. ಹಾಗಾದ್ರೆ, ರಾಧೇ ಸಿನಿಮಾ ನೋಡಿದ ಪ್ರೇಕ್ಷಕರು ಏನಂದ್ರು? ಮುಂದೆ ಓದಿ...

ರಾಧೇ ಪಕ್ಕಾ ಎಂಟರ್‌ಟೈನರ್

ರಾಧೇ ಪಕ್ಕಾ ಎಂಟರ್‌ಟೈನರ್

''ರಾಧೇ ಸಿನಿಮಾ ಪಕ್ಕಾ ಮಸಾಲ ಎಂಟರ್‌ಟೈನರ್. ಸಲ್ಮಾನ್ ಖಾನ್ ಸೂಪರ್ ಹಾಗೂ ದಿಶಾ ಪಟಾನಿ ಇಷ್ಟ ಆಗ್ತಾರೆ. ಹಾಗೆ, ರಣದೀಪ್ ಹೂಡಾ ಅಭಿನಯ ಮೆಚ್ಚುವಂತದ್ದು. ನನ್ನ ಸ್ನೇಹಿತ ದುಬೈನಲ್ಲಿ ಸಿನಿಮಾ ನೋಡಿ ವಿಮರ್ಶೆ ನೀಡಿದ್ದಾರೆ'' ಎಂದು ನೆಟ್ಟಿಗನೊಬ್ಬ ಟ್ವೀಟ್ ಮಾಡಿದ್ದಾರೆ.

ಸಲ್ಮಾನ್ ಖಾನ್ ದಿ ಬೆಸ್ಟ್

ಸಲ್ಮಾನ್ ಖಾನ್ ದಿ ಬೆಸ್ಟ್

''ರಾಧೇ ಸಿನಿಮಾ ಸಂಪೂರ್ಣವಾಗಿ ಆಕ್ಷನ್ ದೃಶ್ಯಗಳಿಂದ ತುಂಬಿದೆ. ಸಲ್ಮಾನ್ ಖಾನ್ ದಿ ಬೆಸ್ಟ್. ಸೆಕೆಂಡ್ ಹಾಫ್‌ನಲ್ಲಿ ಬಹುದೊಡ್ಡ ಸರ್ಪ್ರೈಸ್ ಇದೆ. ಸಿನಿಮಾದ ಅವಧಿ ಕೇವಲ 1 ಗಂಟೆ 45 ನಿಮಿಷ. ಸಲ್ಮಾನ್ ಮತ್ತು ರಣ್ದೀಪ್ ಹೂಡ ನಡುವಿನ ಸ್ಮೋಕ್ ಫೈಟ್ ಅತ್ಯಂತ ಪ್ರಮುಖ ಎನಿಸಿಕೊಳ್ಳುತ್ತದೆ. ಇದು ಅತ್ಯುತ್ತಮ ದೃಶ್ಯ'' ಎಂದು ಅಭಿಮಾನಿಯೊಬ್ಬ ಟ್ವೀಟ್ ಮಾಡಿದ್ದಾರೆ.

ಮಾಸ್‌ಗೆ ಅಪ್ಪ 'ರಾಧೇ'

ಮಾಸ್‌ಗೆ ಅಪ್ಪ 'ರಾಧೇ'

''ರಾಧೇ ಸಿನಿಮಾ ಮಾಸ್‌ಗೆ ಅಪ್ಪ. ಪವರ್‌ಫುಲ್ ಡೈಲಾಗ್‌ಗಳೊಂದಿಗೆ ಆಕ್ಷನ್ ಮನರಂಜನೆಯಿಂದ ಕೂಡಿರುವ ಚಿತ್ರ. ಸಲ್ಮಾನ್ ಖಾನ್ ಭಯಾನಕ, ರಣದೀಪ್ ಹೂಡಾ ಪರಿಣಾಮಕಾರಿ, ಫಸ್ಟ್ ಹಾಫ್ ರೇಜರ್ ರೀತಿ ಚುರುಕತನ ಹೊಂದಿದೆ. ಸೆಕೆಂಡ್ ಹಾಫ್ ಸಂಪೂರ್ಣವಾಗಿ ಮಾಸ್ ಹೊಂದಿದೆ. ಸೂಪರ್ ಮನರಂಜನೆ'' ಎಂದು ಪ್ರೇಕ್ಷಕರೊಬ್ಬರು ಟ್ವೀಟ್ ಮಾಡಿದ್ದಾರೆ.

ಸಲ್ಮಾನ್ ಖಾನ್ ಅತ್ಯುತ್ತಮ ಚಿತ್ರ

ಸಲ್ಮಾನ್ ಖಾನ್ ಅತ್ಯುತ್ತಮ ಚಿತ್ರ

'ಒಂದೇ ಮಾತಿನಲ್ಲಿ ಹೇಳುವುದಾದರೆ ಬ್ಲಾಕ್ ಬಸ್ಟರ್. ಇದುವರೆಗಿನ ಸಲ್ಮಾನ್ ಖಾನ್ ಸಿನಿಮಾಗಳಲ್ಲಿ ರಾಧೇ ಅತ್ಯುತ್ತಮ ಎಂದು ಹೇಳಬಹುದು. ಕಥೆಯಲ್ಲಿ ಸಂಪೂರ್ಣ ಹಿಡಿತ, ಅದಕ್ಕೆ ತಕ್ಕಂತೆ ನಟನೆ, ಎಲ್ಲವೂ ಅದ್ಭುತ. ನೋಡಬೇಕಾದ ಚಿತ್ರ'' ಎಂಬ ಅಭಿಪ್ರಾಯ ಬಂದಿದೆ.

More from Filmibeat

English summary
Salman Khan and Disha Patani Starrer Radhe movie has released in OTT. check out Twitter Review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X