Mango Pachcha X Review ; ಸುದೀಪ್ ಕಾರ್ಬನ್ ಕಾಪಿಯಂತೆ ಸಂಚಿತ್ ಸಂಜೀವ್, ಹೆಂಗೈತೆ ಮ್ಯಾಂಗೋ ಪಚ್ಚಾ?ಇಲ್ಲಿದೆ ಪಬ್ಲಿಕ್ ರಿವ್ಯೂ

ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗೋದು ಹೇಗೆ ಕಾಮನ್ನೋ ಅದೇ ತರ ಸಿನಿಮಾರಂಗದಲ್ಲಿ ಸ್ಟಾರ್ ಗಳ ಮಕ್ಕಳು ಸ್ಟಾರ್ ಗಳಾಗೋದು ಕೂಡ ಕಾಮನ್ನೇ. ಇದಕ್ಕೆ ಬಣ್ಣದ ಪ್ರಪಂಚದಲ್ಲಿ ಅನೇಕ ಉದಾಹರಣೆಗಳಿವೆ. ಅದರಲ್ಲಿಯೂ.. ಬಾಲಿವುಡ್‌ನಲ್ಲಿ ಇವತ್ತು ಆಳುತ್ತಿರುವ ಬಹುತೇಕರು, ಒಂದ್ಕಾಲಿನ ಸ್ಟಾರ್ ಕಲಾವಿದರ ಮಕ್ಕಳೇ. ಕೇವಲ ಮಕ್ಕಳು ಮಾತ್ರವಲ್ಲ ಅವರ ಹತ್ತಿರದ ಸಂಬಂಧಿಕರು ದೂರದ ನೆಂಟರು ಎಲ್ಲರೂ ಆಯಾ ಕ್ಷೇತ್ರಕ್ಕೆ ಧುಮುಕುವ ಪ್ರಯತ್ನ ಮಾಡುತ್ತಾರೆ.

ಕನ್ನಡ ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ಇದಕ್ಕೆ ಕೈಗನ್ನಡಿ ಎನ್ನುವಂತೆ ಹಲವಾರು ಜನ ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಬಂದಿದ್ಧಾರೆ. ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಗೆದ್ದಿದ್ದಾರೆ. ಇನ್ನು ಕೆಲವರು ಸೋತಿದ್ದಾರೆ.

Sanchith Sanjeev Hailed as Kichcha Sudeep   s    Carbon Copy    in Mango Pachcha First Reviews

ಮಾಸ್ ಎಂಟರ್ಟೈನರ್

ಕೇವಲ 95 ನಿಮಿಷಗಳ ಈ ಸಿನಿಮಾ, ಸೂಪರ್ ಥ್ರಿಲ್ಲರ್ಸ್, ಮಾಸ್ ಎಲಿಮೆಂಟ್ಸ್ ಮತ್ತು ಫಾಸ್ಟ್ ಸ್ಕ್ರೀನ್‌ಪ್ಲೇ ಮೂಲಕ ಎಲ್ಲೂ ಬೋರ್ ಹೊಡೆಸದೆ ಸಖತ್ ಎಂಟರ್ಟೈನ್ ಮಾಡತ್ತೆ. ಸಂಚಿತ್ ಸಂಜೀವ್ ತಮ್ಮ ಮೊದಲ ಚಿತ್ರದಲ್ಲೇ ಅದ್ಭುತವಾಗಿ ನಟಿಸಿದ್ದಾರೆ. ಚರಣ್ ರಾಜ್ ಅವರ ಮ್ಯೂಸಿಕ್ ಮತ್ತು ಬಿಜಿಎಂ ಸಿನಿಮಾದ ಅತಿ ದೊಡ್ಡ ಪ್ಲಸ್ ಪಾಯಿಂಟ್ಸ್.

ಮೈಸೂರಿನ ಲೊಕೇಶನ್‌ಗಳು ಸ್ಕ್ರೀನ್ ಮೇಲೆ ತುಂಬಾ ಬ್ಯೂಟಿಫುಲ್ ಆಗಿ ಮೂಡಿಬಂದಿವೆ, ಸಿನೆಮಾಟೋಗ್ರಫಿ ಅಂತೂ ಅಲ್ಟಿಮೇಟ್ ಆಗಿದೆ. ಎಮೋಷನಲ್ ಸೀನ್‌ಗಳು ಚೆನ್ನಾಗಿ ವರ್ಕ್‌ ಆಗಿವೆ, ಫೈಟ್ಸ್ ಕೂಡ ಪವರ್‌ಫುಲ್ ಆಗಿವೆ. ಎಲ್ಲೂ ಕೃತಕತೆ ಇಲ್ಲದೆ ಎಲ್ಲಾ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ, ನಾಯಕಿ ನಟನೆ ಕೂಡ ಓಕೆ ಎನ್ನುವಂತಿದೆ.

ಕಥೆ ಮತ್ತು ಚಿತ್ರಕಥೆ ಸ್ವಲ್ಪ ಪ್ರಿಡಿಕ್ಟಬಲ್ ಅನಿಸಿದರೂ, ಡೈರೆಕ್ಟರ್ ಪ್ರೆಸೆಂಟೇಷನ್ ಮತ್ತು ಮೇಕಿಂಗ್ ಶೈಲಿ ಎಲ್ಲೂ ಕ್ಯೂರಿಯಾಸಿಟಿ ಕಮ್ಮಿಯಾಗದಂತೆ ನೋಡಿಕೊಳ್ಳುತ್ತದೆ. ಸಿನಿಮಾ ಸರಾಗವಾಗಿ ಸಾಗುತ್ತದೆಯಾದರೂ, ಮಧ್ಯದಲ್ಲಿ ಬರುವ ಒಂದು 15 ನಿಮಿಷಗಳ ದೃಶ್ಯಗಳು ಚಿತ್ರದ ವೇಗಕ್ಕೆ ಕೊಂಚ ಬ್ರೇಕ್ ಹಾಕಿದಂತಾಗತ್ತೆ.

''ಮ್ಯಾಂಗೋ ಪಚ್ಚಾ'' ಸಂಚಿತ್ ಸಂಜೀವ್ ಅವರ ಒಂದು ಸಕ್ಸಸ್‌ಫುಲ್ ಫಸ್ಟ್‌ ಅಟೆಂಪ್ಟ್. ಇಡೀ ಫ್ಯಾಮಿಲಿ ಒಟ್ಟಿಗೆ ಕೂತು ಎಂಜಾಯ್ ಮಾಡಬಹುದಾದ ಪಕ್ಕಾ ಮಾಸ್ ಎಂಟರ್ಟೈನರ್.

ಚಿತ್ರಮಂದಿರದಲ್ಲಿ ನೋಡಬಹುದಾ ?

ಸಂಚಿತ್ ಮತ್ತು ನಿರ್ದೇಶಕ ವಿವೇಕ್ ತಮ್ಮ ಮೊದಲ ಪ್ರಯತ್ನದಲ್ಲಿ ನೋಡಲು ಯೋಗ್ಯವಾದ ಸಿನಿಮಾವೊಂದನ್ನು ನೀಡಿದ್ಧಾರೆ. ಅತಿಯಾದ ಬಿಲ್ಡಪ್‌ಗೆ ಜಾಗ ನೀಡದೇ, ಓವರ್ ಹೀರೋಯಿಸಂಗೆ ಕೈಹಾಕದೆ, ನೀಟ್ ಹಾಗೂ ರಗಡ್ ಆದ ಆಕ್ಷನ್ ಚಿತ್ರವನ್ನು ನೀಡಿದ್ದಾರೆ.

ಸಂಚಿತ್ ಅವರ ಪ್ರತಿಭೆಯನ್ನು ಪ್ರೂವ್ ಮಾಡಬೇಕು ಅಂತ ಡೈರೆಕ್ಟರ್ ಎಲ್ಲೂ ಅತಿರೇಕದ ಡೈಲಾಗ್‌ಗಳು, ಅಸಾಧ್ಯವಾದ ಸ್ಟಂಟ್‌ಗಳು ಅಥವಾ ಮೈ ಮುರಿಯುವ ಡ್ಯಾನ್ಸ್ ಸ್ಟೆಪ್ಸ್‌ಗಳನ್ನು ತುರುಕುವ ಸಾಹಸಕ್ಕೆ ಹೋಗಿಲ್ಲ. ಬದಲಿಗೆ, ಕಥೆಗೆ ಎಷ್ಟು ಬೇಕೋ ಅಷ್ಟಕ್ಕೆ ಮಾತ್ರ ಅವರನ್ನು ಬಳಸಿಕೊಂಡಿದ್ದಾರೆ. ಇದು ಇಲ್ಲಿ ಮೆಚ್ಚಬೇಕಾದ ಅಂಶ.

ಹಳೇ ಮೈಸೂರಿನ ಡ್ರಗ್ ಪೆಡ್ಲರ್ ಒಬ್ಬ, ತನ್ನ ಇಡೀ ಕುಟುಂಬವೇ ತೊಡಗಿಸಿಕೊಂಡಿರುವ ಈ ಬ್ಯುಸಿನೆಸ್‌ನ ಕಹಿ ಸತ್ಯಗಳನ್ನು ಹೇಗೆ ಎದುರಿಸುತ್ತಾನೆ ಎಂಬುದೇ ಕಥೆ. ಅನಗತ್ಯವಾದ ಲವ್ ಸಾಂಗ್ಸ್ ಅಥವಾ ಕಾಮಿಡಿ ಟ್ರ್ಯಾಕ್‌ಗಳ ಹಿಂದೆ ಬಿದ್ದು ಸಮಯ ವೇಸ್ಟ್ ಮಾಡದೆ, ನರೇಷನ್ ಅನ್ನು ತುಂಬಾ ಟೈಟ್ ಆಗಿ ಇಡಲಾಗಿದೆ.

''ಶಾಂತಿ ಕ್ರಾಂತಿ'' ಚಿತ್ರದ "ಇದ್ದಾರೆ ಇದ್ದಾರೆ" ಹಾಡನ್ನು ಇಲ್ಲಿ ಸೂಕ್ತವಾಗಿ ಬಳಸಿರುವುದು, ಸದ್ಯದ ಕನ್ನಡ ಚಿತ್ರರಂಗ ಮ್ಯೂಸಿಕ್ ಡಿಪಾರ್ಟ್‌ಮೆಂಟ್‌ನಲ್ಲಿ ಎಷ್ಟು ಹಿಂದುಳಿದಿದೆ ಎಂಬುದನ್ನು ವ್ಯಂಗ್ಯವಾಗಿ ನೆನಪಿಸುವಂತಿದೆ.

ಥಿಯೇಟರ್‌ನಲ್ಲಿ ನೋಡಬಹುದಾ? ಖಂಡಿತ ನೋಡಬಹುದು. ರೋಮಾಂಚನ ಉಂಟುಮಾಡುವ ಸೀನ್‌ಗಳು ಜಾಸ್ತಿ ಇಲ್ಲದೇ ಇರಬಹುದು, ಆದರೆ ಸಿನಿಮಾಗೆ ಅತಿ ಮುಖ್ಯವಾದ ಒಂದು ಒಳ್ಳೆ ಕಥೆ ಮತ್ತು ವೇಗವಾದ ನಿರೂಪಣೆಯನ್ನು ''ಮ್ಯಾಂಗೋ ಪಚ್ಚಾ'' ನೀಡುತ್ತದೆ.

ಆದರೆ, ಥಿಯೇಟರ್‌ಗಳಿಂದ ಸಂಪೂರ್ಣವಾಗಿ ದೂರ ಸರಿದಿರುವ ಕನ್ನಡ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಕ್ಕೆ ಎಳೆದು ತರಲು ಇದು ಸಾಕಾಗುತ್ತಾ? ಅದನ್ನಂತೂ ಕಾಲವೇ ನಿರ್ಣಯಿಸಬೇಕು ಎಂದು ಪತ್ರಕರ್ತ ಶ್ಯಾಮ್ ಪ್ರಸಾದ್ ಚಿತ್ರದ ಕುರಿತು ವಿಮರ್ಶೆ ಹಂಚಿಕೊಂಡಿದ್ಧಾರೆ.

ಚಿತ್ರಮಂದಿರದಲ್ಲಿ ನೋಡುವಂತಹ ಸಿನಿಮಾ

ನಾನು ಈಗಷ್ಟೇ ''ಮ್ಯಾಂಗೋ ಪಚ್ಚಾ'' ಸಿನಿಮಾ ನೋಡಿದೆ. ಸಿನಿಮಾ ಶುರುವಾದ ನಂತರ ಆಸಕ್ತಿ ಒಂದು ಹಂತಕ್ಕೆ ತಲುಪುತ್ತೆ. ಚಿತ್ರಕಥೆ ತುಂಬಾ ಎಂಗೇಜಿಂಗ್ ಆಗಿದೆ. ಸೆಕೆಂಡ್ ಹಾಫ್ ಕಂಪ್ಲೀಟ್ ಫೈರ್ ಅನ್ನಬಹುದು. ಚಿತ್ರಮಂದಿರದಲ್ಲಿ ನೋಡುವಂತಹ ಸಿನಿಮಾ.

English summary
Sanchith Sanjeev dominates the screen in his hard-hitting debut film Mango Pachcha. Read what audiences are saying about this gripping new Kannada crime drama.
Read more about: sudeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X