ಮಾಸ್ಟರ್ ಪೀಸ್: ಮೊದಲು ದಾರಿ ತಪ್ಪಿದ ಮಗ, ನಂತರ ತಾಯಿಗೆ ತಕ್ಕ ಮಗ

ಕಾಲೆಳೆಯುವರು ಇದ್ರೂ ಮೇಲೆ ಬಂದೆ, ಹೇಗೆ ಅಂತೀಯಾ ಹಾರ್ಡ್ ವರ್ಕ್ ಕಣ್ಲಾ..
ನಮ್ಮನ್ನೂ ನೋಡಿ ಉರ್ಕೋಳ್ಳೋರು ಒಬ್ರಾ, ಇಬ್ರಾ, ದುಷ್ಮನ್ ಕಿದರ್ ಹೆ ಅಂದ್ರೆ ಉರ್ ತುಂಬಾ ಹೆ...
ಹೊಡೆದ್ರೆ ಡೈನೋಸರನ್ನೇ ಹೋಡಿಬೇಕು...
ತಪ್ಪು ಮಾಡಿದಾಗಲೇ ತಲೆ ಎತ್ಗಂಡ ಓಡಾಡೋರು ನಾವು, ಇನ್ನು ತಪ್ಪೇ ಮಾಡಿಲ್ಲ ಅಂದ್ರೆ ತಲೆತಗ್ಗಿಸೋ ಸೀನೇ ಇಲ್ಲಾ..
ಎಲೆಕ್ಷನ್ ಗೆಲ್ಲೋಕೆ ಬೇಕಾಗಿರೋದು ಕಲರ್ ಅಲ್ಲ,, ಖದರ್
ನನ್ನ ಹುಡುಗಿ ಮೇಲೆ ಕಣ್ ಹಾಕಿದ್ರೆ ಬಿಡಲ್ಲ, ಇನ್ನು ಗನ್ ಇಟ್ರೆ ಬಿಡ್ತಿನಾ!
ತಿಂಕ್ ಬಿಗ್ .. ತಿನ್ ಬಿಗ್[ಟ್ವಿಟ್ಟರ್ ನಲ್ಲಿ 'ಮಾಸ್ಟರ್ ಪೀಸ್' ಚಿಂದಿ ಚಿತ್ರಾನ್ನ]

ತೆರೆಗೆ ಅಪ್ಪಳಿಸಿರುವ ರಾಕಿಂಗ್ ಸ್ಟಾರ್ ಯಶ್ ಅವರ ಮಾಸ್ಟರ್ ಪೀಸ್ ಗೆ ಡೈಲಾಗ್ ಗಳೇ ಜೀವಾಳ. ಸಂಭಾಷಣೆಕಾರ ಚಿತ್ರದ ನಿರ್ದೇಶಕ ಎನ್ನುವುದನ್ನು ಪ್ರತಿಯೊಂದು ಸೀನ್ ಗಳು ಸಾರಿ ಸಾರಿ ಹೇಳುತ್ತವೆ.

ತಾಯಿಗೆ ತನ್ನ ಮಗ ಭಗತ್ ಸಿಂಗ್ ಆಗಬೇಕು ಎನ್ನುವ ಕನಸು, ಮಗನಿಗೆ ತಾನು ಬಾಸ್ ಎಂದು ಕರೆಸಿಕೊಳ್ಳಬೇಕೆಂಬ ಮಹದಾಸೆ. ಬಾಸ್ ಆಗಲು ಮಗ ಏನೇನೆಲ್ಲಾ ಮಾಡುತ್ತಾನೆ. ಆತ ಮಾಡುವುದು ಕಾನೂನಿಗೆ ಬದ್ಧವೋ? ಬಾಹಿರವೋ? ಸಮಾಜಘಾತುಕರ ಜತೆ ಕೈ ಜೋಡಿಸುತ್ತಾನೆಯೇ? ಇಲ್ಲಾ ತಾಯಿ ಆಸೆಯಂತೆ ದೇಶಕ್ಕೆ ಒಳಿತಾಗುವ ಕೆಲಸ ಮಾಡುತ್ತಾನೆಯೇ? ಇದೆಕ್ಕಲ್ಲ ಉತ್ತರ ಮಾಸ್ಟರ್ ಪೀಸ್ ನಲ್ಲಿ ಸಿಗುತ್ತದೆ.

ಯುವಕರು ರಾಜಕಾರಣಿಗಳ ದಾಳವಾಗಿ ಹೇಗೆ ಬಳಕೆಯಾಗುತ್ತಿದ್ದಾರೆ? ನಿಜವಾದ ನಾಯಕ ಹೇಗಿರಬೇಕು? ಸಮಾಜದ ಒಳಿತಿಗೆ ಯುವಕರು ಏನು ಮಾಡಬಹುದು? ಎಂಬುದರ ಮೇಲೂ ನಿರ್ದೇಶಕ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದರೂ ಡೈಲಾಗ್ ಗಳ ಅಬ್ಬರದಲ್ಲಿ ವೀಕ್ಷಕರಿಗೆ ಅದು ತಲುಪಲ್ಲ. ಇದು ಪಕ್ಕಾ ಮಾಸ್ ಸಿನಿಮಾ. ಯಶ್ ಅಭಿಮಾನಿಗಳಿಗೆ ಹಬ್ಬದೂಟ. ಉಳಿದವರಿಗೆ ಒಂದು ಸಾರಿ ಸಾಮಾನ್ಯ ಭೋಜನ. ಒಟ್ಟಿನಲ್ಲಿ ಮಾಸ್ಟರ್ ಪೀಸ್ ಮೊದಲಾರ್ಧ ದಾರಿ ತಪ್ಪಿದ ಮಗ, ದ್ವಿತೀಯಾರ್ಧ ತಾಯಿಗೆ ತಕ್ಕ ಮಗ.

Rating:
3.0/5
Star Cast: ಯಶ್, ಶಾನ್ವಿ ಶ್ರೀವಾತ್ಸವ, ಸುಹಾಸಿನಿ ಮಣಿರತ್ನಂ, ಚಿಕ್ಕಣ್ಣ, ಅಚ್ಯುತ್ ಕುಮಾರ್
Director: ಮಂಜು ಮಾಂಡವ್ಯ

ಸಿನಿಮಾದ ಸಂಪೂರ್ಣ ವಿಮರ್ಶೆಗೆ ಮುಂದಿನ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ

ತಾಯಿಗೆ ಭಗತ್ ಸಿಂಗ್ ಕನಸು

ತಾಯಿಗೆ ಭಗತ್ ಸಿಂಗ್ ಕನಸು

ತಾಯಿ (ಸುಹಾಸಿನಿ) ಗೆ ತನ್ನ ಮಗ ಯುವ(ಯಶ್) ದೇಶಪ್ರೇಮಿಯಾಗಬೇಕೆಂಬ ಬಯಕೆ. ಅದರಂತೆ ಮಗನನ್ನು ಬೆಳೆಸಲು ಮುಂದಾಗಿದ್ದರೂ ಮಗ ಮಾತ್ರ ಪೋಕರಿಗಳ ಜತೆ ಸೇರಿ ಪುಂಡಾಟಗಳನ್ನು ಮಾಡುತ್ತಿರುತ್ತಾನೆ.

ಕಾಲೇಜಿನ ಲೀಡರ್

ಕಾಲೇಜಿನ ಲೀಡರ್

ಕಾಲೇಜಿನ ನಾಯಕನಾಗಿ ಕಾಣಿಸಿಕೊಳ್ಳುವ ಯಶ್ ಚಿಕ್ಕಣ್ಣನ ಮೂಲಕ ತನ್ನ ಇಮೇಜನ್ನು ಮತ್ತಷ್ಟು ವರ್ಧಿಸಿಕೊಳ್ಳುತ್ತಾನೆ. ಚಿಕ್ಕಣ್ಣ ಕಾಲೇಜಿನ ಎಲೆಕ್ಷನ್ ಗೆಲ್ಲುವ ಪರಿಯೇ ಚಿತ್ರದ ಕತೆಯ ಆರಂಭ. ಅಲ್ಲಿಂದ ಸ್ಥಳೀಯ ನಾಯಕ ನೂರ್ ಅಹಮದ್ ಜತೆ ಕೈ ಮಿಲಾಯಿಸುವ ನಾಯಕ, ಆತನನ್ನೂ ಚುನಾವಣೆಯಲ್ಲಿ ಗೆಲ್ಲಿಸುತ್ತಾನೆ.

ಶಿಳ್ಳೆ ಗಿಟ್ಟಿಸಿಕೊಳ್ಳುವ ಡೈಲಾಗ್‌ಗಳು

ಶಿಳ್ಳೆ ಗಿಟ್ಟಿಸಿಕೊಳ್ಳುವ ಡೈಲಾಗ್‌ಗಳು

ಡೈಲಾಗ್ ಗಳೇ ಮಾಸ್ಟರ್ ಪೀಸ್ ನ ಉದ್ದಕ್ಕೂ ಶಿಳ್ಳೆ ಗಿಟ್ಟಿಸಿಕೊಳ್ಳುತ್ತವೆ. ಮೊದಲ ಬಾರಿಗೆ ನಿರ್ದೇಶಕ ಕ್ಯಾಪ್ ತೊಟ್ಟ ಸಂಭಾಷಣೆಕಾರ ಮಂಜು ಮಾಂಡವ್ಯ ಯಶ್ ಮತ್ತು ಚಿಕ್ಕಣ್ಣ ಇಮೇಜಿಗೆ ತಕ್ಕದಾದ ಡೈಲಾಗ್ ಗಳನ್ನೇ ಬರೆದಿದ್ದಾರೆ. ಮಾಸ್ ಪ್ರೇಕ್ಷಕರು ಇಷ್ಟಪಡುವ ಡೈಲಾಗ್ ಗಳನ್ನು ನೀಡಿದ್ದಾರೆ. ಚಿಕ್ಕಣ್ಣನಿಗೂ ಸಖತ್ ಆಗೇ ಬಿಲ್ಡ್ ಅಪ್ ನೀಡಲಾಗಿದೆ.

ಪಳ ಪಳ ಹೊಳೆಯುವ ಶಾನ್ವಿ

ಪಳ ಪಳ ಹೊಳೆಯುವ ಶಾನ್ವಿ

ತನಗೆ ಇಷ್ಟವಾಗುವ ಹುಡುಗನ ಆರಿಸಲು ಹುಚ್ಚಳಂತೆ ನಟಿಸುವ ನಾಯಕಿ ನಾಯಕನ ಮೈ ಮೇಲೆ ಬಿದ್ದು 'ಎಲ್ಲದಕ್ಕೂ' ಆಹ್ವಾನ ನೀಡುತ್ತಾಳೆ. ಇದನ್ನು ನಯವಾಗಿ ತಿರಸ್ಕರಿಸುವ ನಾಯಕ ನಾಯಕಿಯ ನಿಜ ಪ್ರೇಮಿಯಾಗುತ್ತಾನೆ.

ಮಾಧ್ಯಮ ಬಳಸಿಕೊಳ್ಳುವ ನಾಯಕ

ಮಾಧ್ಯಮ ಬಳಸಿಕೊಳ್ಳುವ ನಾಯಕ

ಮಾಧ್ಯಮಗಳನ್ನು ಬಳಸಿಕೊಳ್ಳುವ ನಾಯಕ ತನ್ನನ್ನು ಬಾಸ್ ಎಂದು ಬಿಂಬಿಸಿಕೊಳ್ಳುವ ಕೆಲಸ ಮಾಡ್ತಾನೆ. ತಾಯಿ ದುರ್ಗಾಮಾತೆ(ಸುಹಾಸಿನಿ) ಆತನ ಬಾಲ್ಯದ 'ಹೋರಾಟ' ಗಳನ್ನು ವರದಿಗಾರ್ತಿ ಮುಂದೆ ಬಿಚ್ಚಿಟ್ಟಾಗ ದಾರಿ ತಪ್ಪಿದ ಮಗನಂತೆ ಪ್ರೇಕ್ಷಕನಿಗೆ ತೋರುತ್ತಾನೆ.

 ಡ್ರಗ್ ಮಾಫಿಯಾ

ಡ್ರಗ್ ಮಾಫಿಯಾ

ಪೊಲೀಸರು ಅಟ್ಟಿಸಿಕೊಂಡು ಬಂದ ಡ್ರಗ್ ಮಾಫಿಯಾ ಡಾನ್ (ರವಿಶಂಕರ್) ನಾಯಕನ ಕೈಗೆ ಸಿಕ್ಕಿ ಜೈಲು ಪಾಲಾಗುತ್ತಾನೆ. ಇಲ್ಲಿಂದ ಕತೆಗೆ ನಿಜವಾದ ಆರಂಭ ಸಿಗುತ್ತದೆ.

ಕುಟುಂಬಕ್ಕೆ ಅಭದ್ರತೆ

ಕುಟುಂಬಕ್ಕೆ ಅಭದ್ರತೆ

ನಾಯಕನ ಕುಟುಂಬದವರನ್ನು ಅಪಹರಿಸಿ ನಾವು ಏನು ಬೇಕಾದರೂ ಮಾಡಬಲ್ಲೆವು ಎಂಬ ರವಿಶಂಕರ್ ಚೇಲಾಗಳು ಅಂತಿಮವಾಗಿ ನಾಯಕಿಯನ್ನು ಒತ್ತೆ ಇಟ್ಟುಕೊಂಡು ನಮ್ಮ ಡಾನ್ ನನ್ನು ಕರೆದುಕೊಂಡು ಬಾ, ನಿನ್ನ ಹುಡುಗಿ ವಾಪಸ್ ಕರೆದುಕೊಂಡು ಹೋಗು ಎಂಬ ಆಯ್ಕೆ ಮುಂದಿಡುತ್ತಾರೆ.

ಯುವ ಮಾಫಿಯಾ ಡಾನ್

ಯುವ ಮಾಫಿಯಾ ಡಾನ್

ನಾಯಕನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡದೇ ಬಿಟ್ಟು ಹೋಗುವ ರವಿಶಂಕರ್ ಗ್ಯಾಂಗ್ ಯುವ ಅಲಿಯಾಸ್ ಬಾಸ್ ಗೆ ಕರ್ನಾಟಕದ ಮಾಫಿಯಾ ಡಾನ್ ಎಂಬ ಹಣೆಪಟ್ಟಿ ಕಟ್ಟುತ್ತಾರೆ.

ಸತ್ಯ ನಿರೂಪಣೆ

ಸತ್ಯ ನಿರೂಪಣೆ

ಮಾಫಿಯಾ ಡಾನ್ ಹಣೆಪಟ್ಟಿ ಕಿತ್ತೆಸೆಯಲು, ಸತ್ಯ ನಿರೂಪಣೆಗೆ ಹೊರಟ ಯುವ ವೈರಿಗಳನ್ನು ಹೇಗೆ ಸದೆಬಡಿಯುತ್ತಾನೆ. ತಂತ್ರಜ್ಞಾನದ ನೆರವನ್ನು ಹೇಗೆ ಪಡೆದುಕೊಳ್ಳುತ್ತಾನೆ? ಹೇಗೆ ತಾಯಿಗೆ ತಕ್ಕ ಮಗ ಆಗುತ್ತಾನೆ ಎಂಬುದೇ ಕತೆಯ ತಿರುಳು.

ಹರಿಕೃಷ್ಣ ಫಸ್ಟ್ ಕ್ಲಾಸ್

ಹರಿಕೃಷ್ಣ ಫಸ್ಟ್ ಕ್ಲಾಸ್

ಮೆಲೊಡಿ ಹಾಡುಗಳಿಗೆ ಚಿತ್ರದಲ್ಲಿ ಅವಕಾಶವಿಲ್ಲ. ಇಂಗ್ಲಿಷ್ ಮಿಶ್ರಿತ ಕನ್ನಡ ಹಾಡುಗಳನ್ನೇ ಗುನುಗಿಕೊಳ್ಳಬೇಕು. "ಐ ಕಾಂಟ್ ವ್ಯೈಟ್ ಬೇಬಿ" ಹಾಡು ಚಿತ್ರಮಂದಿರದಿಂದ ಹೊರಬಂದ ಮೇಲೂ ತಲೆಯೊಳಗೆ ಗುಯ್ ಗುಡುತ್ತಿರುತ್ತದೆ.

ಇಷ್ಟ-ಕಷ್ಟ

ಇಷ್ಟ-ಕಷ್ಟ

ಬೆಡಗಿ ಶಾನ್ವಿ ಶ್ರೀವಾತ್ಸವ್ ಗೆ ಸಿನಿಮಾದ ಮೊದಲಾರ್ಧದಲ್ಲಿ ಮಾತ್ರ ಕೆಲಸ. ಆರಂಭದಿಂದ ಅಂತ್ಯದವರೆಗೂ ತಮ್ಮ ಅಭಿನಯದಿಂದ ಕಾಡುವ ಸುಹಾಸಿನಿ, ನೂರ್ ಅಹಮದ್ ಆಗಿ ಉರ್ದು ಮಿಶ್ರಿತ ಕನ್ನಡ ಮಾತನಾಡುವ ಅಚ್ಯುತ್ ಕುಮಾರ್, ಕೊನೆಯಲ್ಲಿ ಆರ್ಭಟಿಸುವ ರವಿಶಂಕರ್, ಖಡಕ್ ಪೊಲೀಸ್ ಅಧಿಕಾರಿಯಾಗಿ ಅವಿನಾಶ್ ಇಷ್ಟವಾಗುತ್ತಾರೆ.

ಸಿಟಿ ಮಾರ್ಕೆಟ್

ಸಿಟಿ ಮಾರ್ಕೆಟ್

ಬೆಂಗಳೂರಿನ ಸಿಟಿ ಮಾರ್ಕೆಟ್ ನಲ್ಲಿ ಒಂದು ಹಾಡು ಚಿತ್ರೀಕರಣ ಮಾಡಲಾಗಿದ್ದು ತಂಡದ ಪರಿಶ್ರಮ ಮೆಚ್ಚಲೇಬೇಕು. ಆಕ್ಷನ್ ಸೀನ್ ಗಳು ಸಹ ಅಷ್ಟೇ ಚೆನ್ನಾಗಿ ಮೂಡಿಬಂದಿರುವುದು ಮತ್ತೊಂದು ಹೈಲೈಟ್.

ಮೇಕಿಂಗ್ ಸೂಪರ್

ಮೇಕಿಂಗ್ ಸೂಪರ್

ದುಬೈನ ಬಹುಮಹಡಿ ಕಟ್ಟಡ, ಮುಂಬೈನ ಸಮುದ್ರ ತೀರ, ಗೋವಾದ ಬೀಚ್ ಗಳನ್ನು ಒಮ್ಮೆ ಕಂಡು ಆನಂದಿಸಬಹುದು. ಬಹುತೇಕ ಸಿನಿಮಾವನ್ನು ಬೆಂಗಳೂರಿನಲ್ಲೇ ಚಿತ್ರೀಕರಣ ಮಾಡಲಾಗಿದ್ದು ಕ್ಯಾಮರಾ ಕೈಚಳಕ ಚೆನ್ನಾಗಿದೆ.

ರಾಮಾಚಾರಿಗಿಂತ ಭಿನ್ನ

ರಾಮಾಚಾರಿಗಿಂತ ಭಿನ್ನ

ನೃತ್ಯ ಮತ್ತು ಆಕ್ಷನ್ 'ಮಾಸ್ಟರ್ ಪೀಸ್' ಚಿತ್ರದಲ್ಲಿದೆ. ಆದರೆ ಮೆಲೊಡಿ ಹಾಡುಗಳಿಲ್ಲ. ಈ ಸಿನಿಮಾ ಮಾಸ್ ಗೆ ಇಷ್ಟವಾಗುವುದರಲ್ಲಿ ಯಾವ ಅನುಮಾನ ಇಲ್ಲ.

More from Filmibeat

English summary
Kannada Movie 'Masterpiece' Review. Sandalwood Rocking star Yash, Actress Shanvi Srivastava in the lead role. The movie is directed by Manju Mandavya. Here is the complete review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X