Sapta Saagaradaache Ello- Side B Twitter Review: ಸೂರಿಯ ಆ ಚಿತ್ರವನ್ನೇ ನೆನಪಿಸ್ತಿದೆ.. ಪಕ್ಕಾ ಬ್ಲಾಕ್‌ಬಸ್ಟರ್
ರಕ್ಷಿತ್ ಶೆಟ್ಟಿ ನಟನೆಯ ಸಪ್ತಸಾಗರದಾಚೆ ಎಲ್ಲೋ ಸೈಡ್- B ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಒಂದು ದಿನ ಮೊದ್ಲೆ ಸಿನಿಮಾ ಪೇಯ್ಡ್ ಪ್ರೀಮಿಯರ್‌ಗಳು ನಡೆದಿದೆ. ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸೆಪ್ಟೆಂಬರ್ 1ರಂದು ಮೊದಲ ಭಾಗ ರಿಲೀಸ್ ಆಗಿತ್ತು. 2ನೇ ಭಾಗ 4 ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಗಪ್ಪಳಿಸುತ್ತಿದೆ.
ಹೇಮಂತ್ ರಾವ್ ನಿರ್ದೇಶನದ ರೊಮ್ಯಾಂಟಿಕ್ ಎಂಟರ್‌ಟೈನರ್ 'ಸಪ್ತಸಾಗರದಾಚೆ ಎಲ್ಲೋ ಸೈಡ್- A' ಸೂಪರ್ ಹಿಟ್ ಆಗಿತ್ತು. ಇದೀಗ 2ನೇ ಭಾಗಕ್ಕೆ ಬ್ಲಾಕ್‌ಬಸ್ಟರ್ ರಿಪೋರ್ಟ್ ಬರ್ತಿದೆ. ಎಲ್ಲಾ ವಿಭಾಗದಲ್ಲೂ ಸಿನಿಮಾ ಸೂಪರ್ ಎನ್ನಲಾಗ್ತಿದ್ದು ಒಂದೊಳ್ಳೆ ಸೀಕ್ವೆಲ್ ಎನ್ನುವ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಸಾಮಾನ್ಯವಾಗಿ ಸೀಕ್ವೆಲ್ ಸಿನಿಮಾಗಳು ಅಷ್ಟಾಗಿ ಸಕ್ಸಸ್ ಕಾಣಲ್ಲ. KGF-2 ಬಳಿಕ 'ಸಪ್ತಸಾಗರದಾಚೆ ಎಲ್ಲೋ ಸೈಡ್- B ಗೆದ್ದಿದೆ ಎನ್ನುವ ಚರ್ಚೆ ಶುರುವಾಗಿದೆ.

ರಕ್ಷಿತ್ ಶೆಟ್ಟಿ ಸ್ವತಃ ನಿರ್ಮಿಸಿ 'ಸಪ್ತಸಾಗರದಾಚೆ ಎಲ್ಲೋ' ಸರಣಿ ಸಿನಿಮಾದಲ್ಲಿ ನಟಿಸಿದ್ದಾರೆ. ಮೊದಲ ಭಾಗದಲ್ಲಿ ಮನು - ಪ್ರಿಯಾ ಮೋಡಿ ಮಾಡಿದೆ 2ನೇ ಭಾಗದಲ್ಲಿ ಮನು- ಸುರಭಿ ಕಮಾಲ್ ಮಾಡಿದ್ದಾರೆ. ಒಂದು ದಿನ ಮೊದ್ಲೆ ಮನು ಪ್ರೀತಿಯ ಸಪ್ತಸಾಗರದಲ್ಲಿ ಮಿಂದೆದ್ದವರು ಟ್ವಿಟ್ಟರ್‌ನಲ್ಲಿ(ಎಕ್ಸ್ ವೇದಿಕೆ) ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕ್ಲೈಮ್ಯಾಕ್ಸ್ ಫೈಟ್ ಸೂಪರ್
ಸೈಡ್-A ಮನುಗಾಗಿ ಪ್ರಿಯಾ, ಸೈಡ್-B ಪ್ರಿಯಾಗಾಗಿ ಮನು. ಆದರೆ ಸೈಡ್-A ಗಿಂತ ಭಿನ್ನವಾಗಿ, ಸೈಡ್- B ವಾಸ್ತವಕ್ಕೆ ದೂರವಾಗಿದೆ.ಮೊದಲ ಭಾಗಕ್ಕೆ ಹೋಲಿಸಿದರೆ ಕಥಾ ನಿರೂಪಣೆಯ ತೀವ್ರತೆ ಮತ್ತು ಕಾವ್ಯಾತ್ಮಕವಾಗಿ ಹೇಳಿರುವುದು ಅಷ್ಟು ಸರಳವಾಗಿಲ್ಲ. ಕ್ಲೈಮ್ಯಾಕ್ಸ್ ಫೈಟ್ ತುಂಬಾ ಚೆನ್ನಾಗಿದೆ, ರಕ್ಷಿತ್ ನಟನೆ ಭಯಂಕರ. ಅವರ ಮಾಸ್ ಸೈಡ್ ಮತ್ತಷ್ಟು ಬೇಕು" ಎಂದು ಆಕಾಶ್ ಪಟೇಲ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ಕಾಡುವ ಸಿನಿಮಾ
ವಿನೋದ್ ಎಂಬುವವರು ಟ್ವೀಟ್ ಮಾಡಿ "ಸೈಡ್- A ಬಹಳ ಕಾಡುತ್ತದೆ ಎನ್ನುವವರಿಗೆ ಸೈಡ್- B ಇನ್ನಷ್ಟು ಕಾಡುತ್ತದೆ. ಹೇಮಂತ್ ರಾವ್ ಮೇಕಿಂಗ್, ನಿರೂಪಣೆ ಹಾಗೂ ಅದನ್ನು ಕಟ್ಟಿಕೊಟ್ಟಿರುವ ಬಗೆ ಅದ್ಭುತ. ನೀವು ಸಿನಿಮಾ ಪ್ರೇಮಿಗಳಾಗಿದ್ದರೆ ಸಿನಿಮಾ ನೋಡಿ ಖುಷಿ ಪಡುತ್ತೀರಿ. ಅದು BGM ಆಗಿರಲಿ, ನಟನೆ ಇರಲಿ, ದೃಶ್ಯರೂಪಕ್ಕೆ ಇಳಿಸಿರುವ ಬಗೆ ಇರಲಿ ಪ್ರತಿಯೊಂದರಲ್ಲೂ ಸೈಡ್- B ಚೆನ್ನಾಗಿದೆ. ಚೈತ್ರಾ ಆಚಾರ್ 'ಟೋಬಿ' ಚಿತ್ರದಲ್ಲಿ ನಿಮ್ಮ ನಟನೆ ಮೆಚ್ಚಿದ್ದೆ. ಈ ಸಿನಿಮಾ ನೋಡಿದ ಮೇಲೆ ನಿಮ್ ಅಭಿಮಾನಿ ಆಗಿಬಿಟ್ಟೆ. ಎಂದಿನಂತೆ ರಕ್ಷಿತ್, ರುಕ್ಮಿಣಿ ತಮ್ಮ ತಮ್ಮ ಪಾತ್ರಗಳನ್ನು ಸೊಗಸಾಗಿ ನಿಭಾಯಿಸಿದ್ದಾರೆ. ಫಸ್ಟ್ ಹಾಫ್ ಎಂಜಾಯ್ ಮಾಡುವಂತಿದೆ. ಸೆಕೆಂಡ್ ಹಾಫ್ ಭಾವನಾತ್ಮಕವಾಗಿದೆ" ಎಂದು ಬರೆದಿದ್ದಾರೆ.
ಕ್ಲೈಮ್ಯಾಕ್ಸ್ ಇಡೀ ಚಿತ್ರದ ಆತ್ಮ
"5ಕ್ಕೆ 4 ನನ್ನ ರೇಟಿಂಗ್. ಹೇಮಂತ್ ರಾವ್ ಬರವಣಿಗೆ ಹಾಗೂ ಮೇಕಿಂಗ್ ಅದ್ಭುತ. ಫಾಸ್ಟ್ ಪೇಸಿಂಗ್ ಸಿನಿಮಾ ಅಲ್ಲ. ಆದರೆ ಬಹಳ ಎಂಗೇಜಿಂಗ್ ಆಗಿದೆ. ಕ್ಲೈಮ್ಯಾಕ್ಸ್ ಇಡೀ ಚಿತ್ರದ ಆತ್ಮ. ರಕ್ಷಿತ್ ಶೆಟ್ಟಿ, ರುಕ್ಮಿಣಿ ಮತ್ತು ಚಿತ್ರಾ ತಮ್ಮ ಅತ್ಯುತ್ತಮ ಅಭಿನಯ ನೀಡಿದ್ದಾರೆ. ಹಾಡುಗಳು, ಹಿನ್ನೆಲೆ ಸಂಗೀತ ಸೊಗಸಾಗಿದೆ. ಟ್ರೈಲರ್ ನೋಡಿದ್ದಕ್ಕಿಂತ ಸಿನಿಮಾ ಒಳ್ಳೆ ಪ್ಯಾಕೇಜ್. ಒಟ್ಟಾರೆಯಲ್ಲಿ ಥಿಯೇಟರ್‌ನಲ್ಲಿ ಒಳ್ಳೆ ಅನುಭವ ನೀಡುವ ಸಿನಿಮಾ" ಎಂದು ಅಮೃತಭಾರತಿ ಎಂಬುವವರು ಬರೆದಿದ್ದಾರೆ.
ಬ್ಲಾಕ್‌ಬಸ್ಟರ್ ಡೌಟೇ ಇಲ್ಲ
ಸುಮಂತ್ ಎನ್ನುವ ಮತ್ತೊಬ್ಬರು 'ಸಪ್ತಸಾಗರದಾಚೆ ಎಲ್ಲೋ'- B ನಿಜಕ್ಕೂ ವಿನ್ನರ್ ಅದರಲ್ಲಿ ಅನುಮಾನವಿಲ್ಲ. ಅಬ್ಬಾ ಆ ಸಿನಿಮಾದಿಂದ ಹೊರ ಬರೋಕ್ಕೆ ಸಾಧ್ಯವಾಗುತ್ತಿಲ್ಲ. ರಕ್ಷಿತ್ ಶೆಟ್ಟಿ ಹ್ಯಾಟ್ಸಾಪ್. ನಿಮ್ಮ ಅದ್ಭುತ ಅಭಿನಯ ಜೀವನಪೂರ್ತಿ ನೆನಪಿನಲ್ಲಿರುತ್ತದೆ. ಬ್ಲಾಕ್‌ಬಸ್ಟರ್ ಯಾವುದೇ ಅನುಮಾನವಿಲ್ಲ. ಹೇಮಂತ್ ರಾವ್ ಮನಸ್ಸು ಕದ್ದು ಬಿಟ್ಟಿರಿ. ಅತ್ಯದ್ಬುತ" ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ರಕ್ಷಿತ್ ನಟನೆಗೆ ಫುಲ್ ಮಾರ್ಕ್ಸ್
ಪರಿಶುದ್ಧ ಪ್ರೀತಿ ಮುಂದುವರೆಯುತ್ತದೆ. ರಕ್ಷಿತ್ ಶೆಟ್ಟಿ ಅಭಿನಯಕ್ಕೆ ಫುಲ್ ಮಾರ್ಕ್ಸ್. ಮೊದಲ ಭಾಗಕ್ಕಿಂತ 2ನೇ ಭಾಗ ಸ್ಕ್ರೀನ್‌ಪ್ಲೇ ವೇಗವಾಗಿದೆ. ಸಾಂಕೇತಿಕವಾಗಿ ತೋರಿಸಿರುವ ಸಾಕಷ್ಟು ಸಂಗತಿಗಳು ಭಾವನಾತ್ಮಕವಾಗಿ ಚೆನ್ನಾಗಿದೆ, ಬರವಣಿಗೆ, ಛಾಯಾಗ್ರಹಣ ಚೆನ್ನಾಗಿದೆ. ಒಟ್ಟಾರೆಯಾಗಿ ಅದ್ಭುತ ಸಿನಿಮಾ ಎಂದು ಪುನೀತ್ ಕೆ. ಆರ್. ರಾಜ್ ಬರೆದಿದ್ದಾರೆ.
'ಇಂತಿ ನಿನ್ನ ಪ್ರೀತಿಯ' ನೆನಪಾಗುತ್ತೆ
ಕೆಲವರು 'ಸಪ್ತಸಾಗರದಾಚೆ ಎಲ್ಲೋ ಸೈಡ್- B ದುನಿಯಾ ಸೂರಿ ನಿರ್ದೇಶನದ 'ಇಂತಿ ನಿನ್ನ ಪ್ರೀತಿಯ' ಸಿನಿಮಾ ನೆನಪಿಸುತ್ತದೆ. ಅದೇ ರೀತಿ ಮ್ಯೂಸಿಕಲಿ, ಭಾನನಾತ್ಮಕವಾಗಿ, ತೀವ್ರವಾಗಿ ಆವರಿಸಿಕೊಳ್ಳುತ್ತದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 'ಇಂತಿ ನಿನ್ನ ಪ್ರೀತಿಯ' ಚಿತ್ರದ ದೃಶ್ಯಗಳನ್ನು ಕಟ್ ಮಾಡಿ ಶೇರ್ ಮಾಡುತ್ತಿದ್ದಾರೆ.


Click it and Unblock the Notifications











