Sapta Sagaradaache Ello Review: ರಿವೇಂಜ್.. ಕಣ್ಣೀರು.. ಪ್ರೀತಿ.. ಕೆಂಪು ಬಣ್ಣದ ಸಪ್ತ ಸಾಗರದಲ್ಲಿ ನೀಲಿಯೇ ಹೈಲೈಟ್..!

By ಯಶವಂತ್

Rating:
3.5/5

'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಎ ನೋಡಿದವರಿಗೆ ಸೈಡ್ ಬಿ ಯಾವಾಗ ನೋಡುತ್ತೇವೋ ಅಂತ ಅನಿಸಿತ್ತು. ನಿರೀಕ್ಷೆಯಂತೆ ಪ್ರಿಯಾ, ಮನು ಪ್ರೇಮಕಥೆಯ ಸೈಡ್ ಬಿ ಪ್ರೇಕ್ಷಕರ ಮುಂದೆ ಬಂದಿದೆ. ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಹಾಗೂ ಚೈತ್ರಾ ಆಚಾರ್ ಜೋಡಿ ಪ್ರೇಕ್ಷಕರನ್ನು ಪ್ರೀತಿಯ ಅಲೆಯಲ್ಲಿ ತೇಲಿಸಲು ಬರುತ್ತಿದೆ.

ಸೈಡ್ ಎ ನೋಡದ ಕೆಲವರು ತುಂಬಾನೇ ಎಮೋಷನಲ್ ಆಗಿತ್ತು ಎಂಬ ಅಭಿಪ್ರಾಯ ಪಟ್ಟಿದ್ದರು. ಮತ್ತೆ ಕೆಲವರಿಗೆ ಈ ಸಿನಿಮಾ ಸಿಕ್ಕಾಪಟ್ಟೆ ಇಷ್ಟ ಆಗಿತ್ತು. ಓಟಿಟಿಗೆ ಬಂದ್ಮೇಲೆ ಈ ಸಿನಿಮಾಗೆ ಫ್ಯಾನ್ ಫಾಲೋವಿಂಗ್ ಮತ್ತಷ್ಟು ಹೆಚ್ಚಾಗಿದ್ದರು.

Sapta Sagaradaache Ello Side B Review in Kannada

ಈಗ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ರಿಲೀಸ್ ಆಗಿದೆ. ರಕ್ಷಿತ್ ಶೆಟ್ಟಿಯ ಮತ್ತೊಂದು ಶೇಡ್ ಅನ್ನು ನೋಡುವುದಕ್ಕೆ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಹಾಗಿದ್ರೆ, 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ ಹೇಗಿದೆ? ಸಿನಿಮಾದ ಹೈಲೈಟ್ ಏನು? ಏನು ಇಷ್ಟ ಆಗುತ್ತೆ? ಏನು ಇಷ್ಟ ಆಗೋದಿಲ್ಲ? ತಿಳಿಯಲು ಮುಂದೆ ಓದಿ.

ಸಿನಿಮಾದ ಕಥೆ ಏನು?

'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ 2021 ರಿಂದ ಸಿನಿಮಾ ಆರಂಭ ಆಗುತ್ತೆ. ಸೈಡ್ ಎ ನಲ್ಲಿ ಹೇಗೆ ಎಂಡ್ ಮಾಡಲಾಗಿತ್ತೋ ಅಲ್ಲಿಂದಲೇ ಸಿನಿಮಾ ಓಪನ್ ಆಗುತ್ತೆ. ಹೀರೊ ಜೈಲಿನಿಂದ ಹೊರಗೆ ಬರುತ್ತಾನೆ. ಪ್ರಿಯಾ (ರುಕ್ಮಿಣಿ ವಸಂತ್) ಆಡಿದ ಮಾತುಗಳ ಆಡಿಯೋವನ್ನು ಕೇಳಿಸಿಕೊಳ್ಳುತ್ತಲೇ ಇರುತ್ತಾನೆ. ಒಮ್ಮೆ ಪ್ರಿಯಾಳನ್ನು ಮತ್ತೆ ನೋಡಬೇಕು ಅಂತ ಅನಿಸುತ್ತೆ. ಪ್ರಿಯಾಗೆ ಅದಾಗಲೇ ಮದುವೆ ಆಗಿ, ಮಗು ಇರುತ್ತೆ. ಆದರೆ, ಕೋವಿಡ್‌ನಿಂದ ಅವರ ಜೀವನ ಕೆಳ ಮಧ್ಯಮ ವರ್ಗಕ್ಕೆ ಬಂದು ನಿಂತಿರುತ್ತೆ. ಬಳಿಕ ಆಕೆಯ ಬದುಕನ್ನು ಅವನು ಹೇಗೆ ಬದಲಾಯಿಸುತ್ತಾನೆ? ಮುಂದೆ ಮನು (ರಕ್ಷಿತ್ ಶೆಟ್ಟಿ) ಕಥೆ ಏನಾಗುತ್ತೆ ಅನ್ನೋದೇ ಸಿನಿಮಾ.

Sapta Sagaradaache Ello Side B Review in Kannada

ಚೈತ್ರಾ-ಮನು ಎಪಿಸೋಡ್ ಹೈಲೈಟ್

ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಹೈಲೈಟ್ ಚೈತ್ರಾ ಮತ್ತು ಮನು ಕ್ಯಾರೆಕ್ಟರ್. ಸಿನಿಮಾದಲ್ಲಿ ಜೋಡಿಯ ದೃಶ್ಯಗಳು ಮಜವಾಗಿದೆ. ಸಿನಿಮಾದಲ್ಲಿ ಮನು, ಚೈತ್ರಾ (ಸುರಭಿ) ಪಾತ್ರದಲ್ಲಿ ಪ್ರಿಯಾಗಳನ್ನು ಕಾಣುತ್ತಾನೆ. ಹೀಗಾಗಿ ಇಬ್ಬರ ನಡುವಿನ ದೃಶ್ಯಗಳೇ ಸಿನಿಮಾ ಹೈಲೈಟ್ ಎಂದು ಎನಿಸುತ್ತವೆ. ಇಬ್ಬರ ಪಾತ್ರವನ್ನು ತುಂಬಾನೇ ಅದ್ಭುತವಾಗಿ ತೆಗೆದುಕೊಂಡು ಹೋಗಿದ್ದಾರೆ.

ಸೈಡ್‌ ಬಿನಲ್ಲೂ ಎಲೋಷನ್ಸ್ ಜಾಸ್ತಿ

ಸೈಡ್‌ ಬಿ ಒಂದು ರಿವೇಂಜ್ ಸ್ಟೋರಿ ಇರಬಹುದು ಅನ್ನೋ ನಿರೀಕ್ಷೆಯಿತ್ತು. ಆದರೆ, ಸೈಡ್ ಬಿ ರಿವೇಂಜ್ ಎಪಿಸೋಡ್ ಇದ್ದರೂ, ಹೀಗೆ ಬಂದು ಹಾಗೇ ಹೋಗುತ್ತೆ. ಇಲ್ಲೂ ಸಿಕ್ಕಾಪಟ್ಟೆ ಎಮೋಷನ್ಸ್ ಹಾಗೂ ಪ್ರೀತಿ ಜಾಸ್ತಿಯಿದೆ. ಒಬ್ಬ ನಿಜವಾದ ಪ್ರೇಮಿ ತಮ್ಮ ಪ್ರೇಯಸಿಗಾಗಿ ಏನೆಲ್ಲ ಮಾಡುತ್ತಾನೆ ಅನ್ನೋದೇ ಸಿನಿಮಾದ ಹೈಲೈಟ್.

ಪ್ಲಸ್ ಏನು?

ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಹಾಗೂ ಚೈತ್ರಾ ಆಚಾರ್ ಸೇರಿದಂತೆ ಸಿನಿಮಾದಲ್ಲಿ ಬರೋ ಎಲ್ಲಾ ಪಾತ್ರಗಳು ಕೂಡ ಅದ್ಭುತವಾಗಿ ನಟಿಸಿವೆ. ಸೈಡ್ ಎ ವಿಲನ್ (ರಮೇಶ್) ಸೈಡ್‌ ಬಿನಲ್ಲೂ ತಮ್ಮ ಪಾತ್ರವನ್ನು ತಿಂದು ಹಾಕಿದ್ದಾರೆ. ಚರಣ್ ರಾಜ್ ಹಿನ್ನೆಲೆ ಸಂಗೀತ ಸಿನಿಮಾದ ಪ್ಲಸ್ ಪಾಯಿಂಟ್‌ಗಳಲ್ಲೊಂದು. ಹಾಗೇ ಕೆಲವು ದೃಶ್ಯಗಳಲ್ಲಿ ಹೇಮಂತ್ ರಾವ್ ನಿರ್ದೇಶನ ಎದ್ದು ಕಾಣುತ್ತೆ. ಹೀಗಾಗಿ ಇದೊಂದು ಲವ್ ಕಮ್ ಎಮೋಷನಲ್ ಸಿನಿಮಾ ಆಗಿದ್ದರೂ, ತಾಂತ್ರಿಕವಾಗಿಯೂ ಗಮನ ಸೆಳೆಯುತ್ತೆ.

ಮೈನಸ್ ಏನು?

ಸೈಡ್‌ ಎಗಿಂತಲೂ ಸೈಡ್ ಬಿ ತುಂಬಾನೇ ಲ್ಯಾಗ್ ಆಗಿದೆ ಎಂತ ಅನಿಸುತ್ತೆ. ಫಸ್ಟ್ ಹಾಫ್‌ನಲ್ಲಿ ಲವ್ ಹಾಗೂ ಎಮೋಷನ್ಸ್ ಸಿಕ್ಕಾಪಟ್ಟೆ ಅಂತ ಅನಿಸಬಹುದು. ರಿವೇಂಜ್ ಸ್ಟೋರಿ ಅಂತ ನಿರೀಕ್ಷೆ ಇಟ್ಟುಕೊಂಡವರಿಗೆ ಸೈಡ್ ಬಿ ನಿರಾಸೆಯಾಗಬಹುದು. ಅದು ಬಿಟ್ಟರೆ, ಲವ್ ಸ್ಟೋರಿ, ಎಮೋಷನ್ ಬಯಸುವವರಿಗೆ ಹೇಳಿ ಮಾಡಿಸಿದ ಸಿನಿಮಾ.

More from Filmibeat

English summary
Sapta Sagaradaache Ello Side B Review in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X