Sapta Sagaradaache Ello Twitter Review: ಅದ್ಭುತ ಪ್ರೇಮ ಕಥನ.. ವಿವರಿಸಲು ಪದಗಳು ಸಾಲದು

ಹೇಮಂತ್ ರಾವ್ ನಿರ್ದೇಶನದ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಒಂದು ದಿನ ಮೊದಲೇ ಪೇಯ್ಡ್ ಪ್ರೇಮಿಯರ್‌ ಶೋಗಳು ನಡೆದು ಒಳ್ಳೆ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತ್ತು. ಸ್ಯಾಂಡಲ್‌ವುಡ್ ತಾರೆಯರು ಕೂಡ ಈ ರೊಮ್ಯಾಂಟಿಕ್ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಮನು- ಪ್ರಿಯಾ ಮನಮಿಡಿಯುವ ಪ್ರೇಮಕಾವ್ಯಕ್ಕೆ ಪ್ರೇಕ್ಷಕರು ರತ್ನಕಂಬಳಿ ಹಾಸುತ್ತಿದ್ದಾರೆ.

2 ಭಾಗಗಳಾಗಿ 'ಸಪ್ತ ಸಾಗರದಾಚೆ ಎಲ್ಲೋ' ಪ್ರೇಮಕಾವ್ಯವನ್ನು ಪ್ರೇಕ್ಷಕರ ಮುಂದೆ ಇಡಲಾಗುತ್ತಿದೆ. ಕಥೆಯನ್ನು ಒಂದೇ ಸಿನಿಮಾದಲ್ಲಿ ಹೇಳಬಹುದಿತ್ತಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ. ಇನ್ನು ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಕೆಮೆಸ್ಟ್ರಿ, ನಟನೆ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರ್ತಿದೆ. ಸಿನಿಮಾ ನಿಧಾನವಾಗಿ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವ ಸುಳಿವು ಸಿಗುತ್ತಿದೆ.

Sapta Sagaradaache Ello Twitter Review: What netizens Say about Rakshit Shettys New Movie

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದಲ್ಲಿ ತಂದೆ- ಮಗನ ಕಥೆ ಹೇಳಿದ್ದ ಹೇಮಂತ್ ರಾವ್ 'ಕವಲು ದಾರಿ' ಚಿತ್ರದಲ್ಲಿ ಒಂದು ಸಸ್ಪೆನ್ಸ್ ಥ್ರಿಲ್ಲರ್ ಕಹಾನಿ ತೆರೆದಿಟ್ಟಿದ್ದರು. ಈ ಬಾರಿ ಒಂದು ರೊಮ್ಯಾಂಟಿಕ್ ಪ್ರೇಮಕಥೆಯನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ. ಚಿತ್ರೀಕರಣಕ್ಕೂ ಮುನ್ನ ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವರ್ಕ್‌ಶಾಪ್‌ನಲ್ಲಿ ಭಾಗಿ ಆಗಿದ್ದರು. ಅವರಿಬ್ಬರ ಇಂಟೆನ್ಸ್ ನಟನೆ ನೋಡುತ್ತಿದ್ದರೆ ಆ ವರ್ಕ್‌ಶಾಪ್ ವರ್ಕ್ ಆಗಿರೋದು ಗೊತ್ತಾಗುತ್ತಿದೆ. ಪ್ರೇಕ್ಷಕರು ಕೂಡ ಸಿನಿಮಾ ನೋಡಿ ಟ್ವಿಟ್ಟರ್‌ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.

ಅದ್ಭುತ ಪ್ರೇಮ ಕಥನ

ದೀಕ್ಷಿತ್ ಹೊಸಹಳ್ಳಿ ಸುರೇಶ್ ಎಂಬುವವರು ಟ್ವೀಟ್ ಮಾಡಿ "ಯಾವ ಮೂವಿಯಲ್ಲೂ ಈ ಮಟ್ಟಿಗೆ ಭಾವನಾತ್ಮಕವಾಗಿ ಕಳೆದು ಹೋಗಿರಲಿಲ್ಲ ಆಗಿರ್ಲಿಲ್ಲ. ಮನು ಮಾಡಿದ್ದು ತಪ್ಪಲ್ಲ, ಪ್ರಿಯ ಮಾಡಿದ್ದು ತಪ್ಪಲ್ಲ. ತುಂಬಾ ಗಾಢವಾದ ಒಂದು ಅದ್ಭುತ ಪ್ರೇಮ ಕಥನ. ಈ ಚಿತ್ರವನ್ನು ಅರ್ಪಿಸಿದಕ್ಕೆ ಪರಂವಃ ಸಂಸ್ಥೆ, ರಕ್ಷಿತ್ ಶೆಟ್ಟಿ, ಹೇಮಂತ್ ರಾವ್, ರುಕ್ಮಿಣಿಗೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.

ವಿವರಿಸಲು ಪದಗಳು ಸಾಲದು

"ಅತ್ಯುತ್ತಮ ಕಥೆಯನ್ನು ಹೊಲಿಯಲಾಗಿದೆ, ಈ ಎರಡು ಹೃದಯಗಳ ನಡುವೆ. ಈ ಕಥೆಯ ಮೂಲಕ ಎಲ್ಲರ ಮನ ಮುಟ್ಟಿದೆ. ಮನು ಹಾಗು ಪ್ರಿಯ ಅಗಾಧವಾದ ಭಾವನೆಗಳನ್ನು ಹೊಂದಿರುವ ಒಂದು ಕವನ, ವಿವರಿಸಲು ಪದಗಳು ಸಾಲದು ಇಡೀ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು" ಎಂದು ಗೌತಮ್ ಸಿದ್ದಾರ್ಥ್ ಟ್ವೀಟ್ ಮಾಡಿದ್ದಾರೆ.

ಸ್ಕ್ರೀನ್‌ಪ್ಲೇ ಸ್ಲೋ ಎನಿಸಬಹುದು

'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ನನಗೆ ಇಷ್ಟವಾಯಿತು. ಆತುರವಿಲ್ಲದೇ ಎಲ್ಲಾ ಪಾತ್ರಗಳನ್ನು ಸೊಗಸಾಗಿ ನಿರ್ದೇಶಕರು ತೋರಿಸಿದ ರೀತಿ ಚೆನ್ನಾಗಿತ್ತು. ಜೈಲು ಸನ್ನಿವೇಶಗಳು ಚೆನ್ನಾಗಿದೆ. ನಿಮಗೆ ಸ್ಕ್ರೀನ್‌ಪ್ಲೇ ಸ್ಲೋ ಎನಿಸಬಹುದು. ಆದರೆ ಬಿಜಿಎಂ, ತಲುಪಿಸುವ ರೀತಿ ಸಾಕಾರವಾಗಿದೆ. ಕಲಾವಿದರ ಅಭಿನಯ ಹಾಗೂ ಛಾಯಾಗ್ರಹಣ ಚೆನ್ನಾಗಿದೆ"

ಪ್ಲಸ್ ಪಾಯಿಂಟ್ಸ್
1. ಮುಖ್ಯ ಪಾತ್ರವರ್ಗ & ಅವರ ಅಭಿನಯ
2. ಸಂಗೀತ & ಹಿನ್ನೆಲೆ ಸಂಗೀತ
3. ಛಾಯಾಗ್ರಹಣ
4. ಕಾಲಾವಧಿ
5. ಜೈಲು ಸನ್ನಿವೇಶಗಳು

ಮೈನಸ್
1. ಮೊದಲಾರ್ಧ ಕೊಂಚ ಲ್ಯಾಗ್

ಒಟ್ಟಾರೆಯಾಗಿ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಚೆನ್ನಾಗಿದೆ ಎಂದು ಸ್ವಯಂ ಕುಮಾರ್ ದಾಸ್ ಬರೆದುಕೊಂಡಿದ್ದಾರೆ.

More from Filmibeat

English summary
Explore What Twitter audience says about Sapta Sagaradaache Ello Kannada Movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X