twitter
    For Quick Alerts
    ALLOW NOTIFICATIONS  
    For Daily Alerts

    ರಿಷಬ್ ಶೆಟ್ಟಿಯ 'ಸರ್ಕಾರಿ ಹಿ.ಪ್ರಾ ಶಾಲೆ'ಗೆ ಹೋದ ವಿಮರ್ಶಕರು ಖುಷ್

    By Bharath Kumar
    |

    ರಿಷಬ್ ಶೆಟ್ಟಿ ನಿರ್ದೇಶನ 'ಸರ್ಕಾರಿ ಹಿ.ಪ್ರಾ ಶಾಲೆ.ಕಾಸರಗೂಡು. ಕೊಡುಗೆ: ರಾಮಣ್ಣ ರೈ' ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಕೊಂಡಿದೆ.

    ಕಿರಿಕ್‌ ಪಾರ್ಟಿ ಮಾಡಿ ಗೆದ್ದ ರಿಷಬ್ ಶೆಟ್ಟಿ ಈಗ ಸರ್ಕಾರಿ ಹಿ. ಪ್ರಾ.ಶಾಲೆ, ಕಾಸರಗೋಡು ಮೂಲಕ ಮತ್ತೊಮ್ಮೆ ತಮ್ಮ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆದಿದ್ದಾರೆ. ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳಲು ಕಾಸರಗೋಡು ಜನರು ಏನು ಮಾಡುತ್ತಾರೆ ಎನ್ನುವುದನ್ನು ಪ್ರೇಕ್ಷಕರಿಗೆ ಇಷ್ಟವಾಗುವಂತೆ ತೆರೆಗೆ ತಂದಿದ್ದಾರೆ. ಚಿತ್ರಕ್ಕೆ ಕ್ಲಾಸ್‌ ಮತ್ತು ಕಮರ್ಷಿಯಲ್ ಸ್ಪರ್ಶ ನೀಡಿದ್ದಾರೆ.

    ಇನ್ನು ಸಿನಿಮಾದ ಬಗ್ಗೆ ಕನ್ನಡದ ದಿನ ಪತ್ರಿಕೆಗಳಲ್ಲಿಯೂ ಪಾಸಿಟೀವ್ ರೆಸ್ಪಾನ್ಸ್ ಬಂದಿದೆ. ಹಾಗಿದ್ರೆ, ಕರ್ನಾಟಕದ ಖ್ಯಾತ ದಿನಪತ್ರಕೆಗಳಲ್ಲಿ ಪ್ರಕಟವಾಗಿರುವ ''ಸರ್ಕಾರಿ ಹಿ.ಪ್ರಾ ಶಾಲೆ.ಕಾಸರಗೂಡು'' ಚಿತ್ರದ ವಿಮರ್ಶೆಯ ಕಲೆಕ್ಷನ್ ಇಲ್ಲಿದೆ. ಮುಂದೆ ಓದಿ....

    ಕನ್ನಡ ಶಾಲೆಗಳಿಗೆ ಕನ್ನಡಿ ಹಿಡಿವ ಚಿತ್ರ

    ಕನ್ನಡ ಶಾಲೆಗಳಿಗೆ ಕನ್ನಡಿ ಹಿಡಿವ ಚಿತ್ರ

    ''ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳಲು ಕಾಸರಗೋಡು ಜನರು ಏನು ಮಾಡುತ್ತಾರೆ ಎನ್ನುವುದನ್ನು ಪ್ರೇಕ್ಷಕರಿಗೆ ಇಷ್ಟವಾಗುವಂತೆ ತೆರೆಗೆ ತಂದಿದ್ದಾರೆ ರಿಷಬ್. ಚಿತ್ರಕ್ಕೆ ಕ್ಲಾಸ್‌ ಮತ್ತು ಕಮರ್ಷಿಯಲ್ ಸ್ಪರ್ಶ ನೀಡಿದ್ದಾರೆ. ಇದು ಮಕ್ಕಳ ಸಿನಿಮಾ ಎಂದುಕೊಳ್ಳಬೇಕಿಲ್ಲ. ಎಲ್ಲಾ ವರ್ಗದ ಜನರೂ ನೋಡಬಹುದಾದ ಸಿನಿಮಾ. ಚಿತ್ರದ ಸ್ಕ್ರೀನ್ ಪ್ಲೇ ಸೊಗಸಾಗಿ ಮಾಡಿದ್ದಾರೆ ರಿಷಬ್. ಎಲ್ಲೂ ಬೋರ್‌ ಆಗದಂತೆ ದೃಶ್ಯಗಳನ್ನು ಪೋಣಿಸಿದ್ದಾರೆ. ಮಕ್ಕಳ ಶಾಲಾ ಬದುಕನ್ನು ಸಹಜವಾಗಿ ರಂಗಾಗಿ ಕಟ್ಟಿಕೊಟ್ಟಿದ್ದಾರೆ. ಮಕ್ಕಳೆಲ್ಲರೂ ಅತ್ಯುತ್ತಮವಾಗಿ ನಟಿಸಿದ್ದಾರೆ. ಪ್ರಮೋದ್‌ ಶೆಟ್ಟಿ ಮತ್ತು ಪ್ರಕಾಶ್‌ ತುಮಿನಾಡ್ ದಿ ಬೆಸ್ಟ್‌ ಎನ್ನುವಂತೆ ನಟಿಸಿದ್ದಾರೆ. ದ್ವಿತಿಯಾರ್ಧ ಅನಂತ್ ನಾಗ್‌ಮಯ. ಮನಸ್ಸಿಗೆ ಮುದ ನೀಡುವ ನಟನೆಯಿಂದ ಪ್ರತಿ ಫ್ರೇಮಿನಲ್ಲೂ ಮಿಂಚಿದ್ದಾರೆ. ನಿರ್ದೇಶನದಲ್ಲಿ ರಿಷಬ್ ಶೆಟ್ಟಿ ಮತ್ತಷ್ಟು ಪಳಗಿದ್ದಾರೆ. '' - ವಿಜಯ ಕರ್ನಾಟಕ

    ರಿಷಬ್ ಶೆಟ್ಟಿಯ 'ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ' ಮೆಚ್ಚಿದ ಸುದೀಪ್ರಿಷಬ್ ಶೆಟ್ಟಿಯ 'ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ' ಮೆಚ್ಚಿದ ಸುದೀಪ್

    ಶಾಲೆ ಚೆಂದ ಉಂಟು; ಮೇಷ್ಟ್ರೇ ಎಡವಟ್ಟು!

    ಶಾಲೆ ಚೆಂದ ಉಂಟು; ಮೇಷ್ಟ್ರೇ ಎಡವಟ್ಟು!

    ''ಸರ್ಕಾರಿ ಹಿ. ಪ್ರಾ. ಶಾಲೆ, ಕಾಸರಗೋಡು. ಕೊಡುಗೆ ರಾಮಣ್ಣ ರೈ' ಚಿತ್ರ ಶುರುವಾಗುವುದು ಒಂದು ಸುಂದರ ಹಾಡಿನಿಂದ. ಕಾಸರಗೋಡಿನ ಕಣ್ಮನ ತಣಿಸುವ ಸೌಂದರ್ಯ, ಮೀನುಗಾರರು, ವಿವಿಧ ಕಲಾಪ್ರಕಾರಗಳ ದರ್ಶನ ಈ ಹಾಡಿನಲ್ಲಿ ಸಿಗುತ್ತದೆ. ಅದನ್ನು ಕಥೆ ನಡೆಯುವ ಭೌತಿಕ ಜಗತ್ತಿನೊಳಗೆ ನಮ್ಮನ್ನು ಒಳಬಿಟ್ಟುಕೊಳ್ಳುವ ಹೆಬ್ಬಾಗಿಲಂತೆಯೂ ನೋಡಬಹುದು. ಈ ದೃಶ್ಯಸೌಂದರ್ಯವನ್ನು ಚಿತ್ರದುದ್ದಕ್ಕೂ ಮತ್ತೆ ಮತ್ತೆ ಸವಿಯಬಹುದು. ಕರಾವಳಿಯ ಉಪ್ಪುಗಾಳಿಯಲ್ಲಿಯೇ ಬೆರೆತಿರುವಂಥ ವಿಶಿಷ್ಟ ಕನ್ನಡ ಸೊಗಡು ಮತ್ತು ಅದನ್ನು ಆಡುವ ಪಾತ್ರಗಳ ವರ್ತನೆಯೂ ಕಥೆಗೊಂದು ಗಟ್ಟಿಯಾದ ಪ್ರಾದೇಶಿಕತೆಯ ಮುದ್ರೆಯೊತ್ತುವ ಹಾಗಿದೆ. ಇದರಲ್ಲಿ ವೆಂಕಟೇಶ್‌ ಅಂಗುರಾಜ್ ಅವರ ಛಾಯಾಗ್ರಹಣ ಮತ್ತು ವಾಸುಕಿ ವೈಭವ್ ಅವರ ಸಂಗೀತ ಸಂಯೋಜನೆಯ ಹಾಡುಗಳೂ ಗಮನಾರ್ಹ ಪಾತ್ರ ವಹಿಸಿವೆ'' - ಪ್ರಜಾವಾಣಿ

    ಸಮೀರನ ಮುಗ್ಧತೆ ಕಂಡು ಮಗುವಾದರು ವಿಮರ್ಶಕರುಸಮೀರನ ಮುಗ್ಧತೆ ಕಂಡು ಮಗುವಾದರು ವಿಮರ್ಶಕರು

    ಶಾಲೆಗೆ ಹೋಗಲು ಕಾರಣಗಳು ಒಂದಲ್ಲಾ ಎರಡಲ್ಲಾ...

    ಶಾಲೆಗೆ ಹೋಗಲು ಕಾರಣಗಳು ಒಂದಲ್ಲಾ ಎರಡಲ್ಲಾ...

    ''ರಿಷಭ್ ಗೆ ತಮ್ಮ ಚಿತ್ರ ಎಲ್ಲಾ ವರ್ಗದವರಿಗೂ ತಲುಪಿಸಬೇಕೆಂಬ ಆಸೆ. ಅದಕ್ಕಾಗಿಯೇ ಇದೇ ಕಥೆಯನ್ನು ಬೇರೆಯದೇ ರೂಟಿನಲ್ಲಿ ತೆಗೆದುಕೊಂಡು ಹೋಗುತ್ತಾರೆ. ಒಂದು ಕಮರ್ಷಿಯಲ್‌ ಚಿತ್ರ ಹೇಗಿರುತ್ತದೋ, ಅದೇ ನಿಟ್ಟಿನಲ್ಲಿ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಯಾವುದೇ ಒಂದು ವರ್ಗಕ್ಕೆ ಅಂತ ಈ ಚಿತ್ರವನ್ನು ಸೀಮಿತಗೊಳಿಸದೆ, ಮನೆಮಂದಿಯೆಲ್ಲಾ ಕೂತು ನೋಡುವಂತಹ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಇಲ್ಲಿ ಬರೀ ಸಮಸ್ಯೆ, ನೋವು, ಪರಿಹಾರ ಅಷ್ಟೇ ಅಲ್ಲ. ಅದೆಲ್ಲವನ್ನು ಮರೆಮಾಚುವ ನಗುವಿದೆ, ಮರೆಸುವ ಜನಜೀವನವಿದೆ'' - ಉದಯವಾಣಿ

    ವಿಮರ್ಶೆ: ಕನ್ನಡ ಭಾಷಾಭಿಮಾನ ಹೆಚ್ಚಿಸುವ 'ಸರ್ಕಾರಿ ಹಿ.ಪ್ರಾ. ಶಾಲೆ, ಕಾಸರಗೋಡು'ವಿಮರ್ಶೆ: ಕನ್ನಡ ಭಾಷಾಭಿಮಾನ ಹೆಚ್ಚಿಸುವ 'ಸರ್ಕಾರಿ ಹಿ.ಪ್ರಾ. ಶಾಲೆ, ಕಾಸರಗೋಡು'

    ಕಾಸರಗೋಡು ಶಾಲೆಯಲ್ಲಿ ಕನ್ನಡ ಕಲರವ

    ಕಾಸರಗೋಡು ಶಾಲೆಯಲ್ಲಿ ಕನ್ನಡ ಕಲರವ

    '' ‘ಕಿರಿಕ್ ಪಾರ್ಟಿ'ಯಲ್ಲಿ ನೀಡಿದಷ್ಟೇ ಮನರಂಜನೆಯನ್ನು ಈ ಸಿನಿಮಾದಲ್ಲೂ ನೀಡಬೇಕೆಂಬ ಧಾವಂತದಲ್ಲಿ ನಿರ್ದೇಶಕರು ಪ್ರತಿ ದೃಶ್ಯವನ್ನೂ ಹೆಣೆದಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಅದು ಕೆಲವು ಕಡೆ ಮಾತ್ರ ಸೂಕ್ತವೆನಿಸುತ್ತದೆ! ಕನ್ನಡ ಶಾಲೆ ಉಳಿಸುವುದಕ್ಕೆಂದು ಮೈಸೂರಿನಿಂದ ಬರುವ ಅನಂತ್​ಪದ್ಮನಾಭ ಪಾತ್ರಕ್ಕೆ ಕೊಂಚ ಗಟ್ಟಿಯಾದ ಹಿನ್ನೆಲೆ ಇರಬೇಕಿತ್ತು. ಗಂಭೀರತೆ ಇರಬೇಕಾದ ಸನ್ನಿವೇಶಗಳಲ್ಲೂ ಹಾಸ್ಯ ಜಾಗ ಪಡೆದಿರುವುದು ಕೆಲವೆಡೆ ಮೈನಸ್ ಎನಿಸಿದೆ. ಸಿನಿಮಾದ ಮೊದಲರ್ಧವು ಮುಂಜಾನೆಗೆ ಆರಂಭಗೊಳ್ಳುವ ಶಾಲೆಯಂತೆ ಉಲ್ಲಾಸಮಯವಾಗಿದ್ದರೆ, ದ್ವಿತಿಯಾರ್ಧವು ಮಧ್ಯಾಹ್ನದ ಕ್ಲಾಸುಗಳ ರೀತಿ ಅಲ್ಲಲ್ಲಿ ಬೋರಾದಂತೆ ಅನಿಸುತ್ತದೆ. ಆದರೆ, ಕ್ಲೈಮ್ಯಾಕ್ಸ್ ನಲ್ಲಿ ಸಂದೇಶ ರವಾನಿಸಿ ಸಿನಿಮಾ ಮುಗಿಸಿ ಶಾಲೆಯ ಬೆಲ್ ಹೊಡೆಯುತ್ತಾರೆ ನಿರ್ದೇಶಕರು. '' - ವಿಜಯವಾಣಿ

    'ಸೆಲ್ಫಿ' ಸಹವಾಸ ಕೆಲವರಿಗೆ ಇಷ್ಟವಾಯ್ತು, ಕೆಲವರಿಗೆ ಕಿರಿಕಿರಿಯಾಯ್ತು'ಸೆಲ್ಫಿ' ಸಹವಾಸ ಕೆಲವರಿಗೆ ಇಷ್ಟವಾಯ್ತು, ಕೆಲವರಿಗೆ ಕಿರಿಕಿರಿಯಾಯ್ತು

    Pursuit of a worthy cause lacks force

    Pursuit of a worthy cause lacks force

    ''The film is unnecessarily long for whatever content it has to show. There is fun in the dialogues and characterisation but they get repetitive very soon as the screenplay struggles to sustain the story. The actors are natural and real, the issue important and the effort sincere. But in the end it is the film that should be able to make an impact. It sputters '' - Bangalore mirror

    English summary
    Read Kannada Movie 'Sarkari Hi. Pra. Shaale, Kasaragodu, Koduge: Ramanna Rai' review collection.
    Saturday, August 25, 2018, 15:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X