For Quick Alerts
  ALLOW NOTIFICATIONS  
  For Daily Alerts

  'ಸರ್ಕಾರಿ ಹಿ.ಪ್ರಾ.ಶಾಲೆ'ಗೆ ಹೋಗಿ ಹಾಜರಿ ಹಾಕಿ ಬನ್ನಿ

  By ಚಂದ್ರಮ್ಮ
  |

  ನಾವು ಶಾಲೆಗೆ ಹೋಗುತ್ತಿದ್ದಾಗ ಪ್ರತಿ ವರ್ಷ ನಮ್ಮನ್ನು ಮಕ್ಕಳ ಚಲನಚಿತ್ರ ತೋರಿಸಲು ಕರೆದುಕೊಂಡು ಹೋಗುತ್ತಿದ್ದರು. 'ಪುಟಾಣಿ ಏಜೆಂಟ್ 123' ನೋಡಿದ್ದು ನನಗಿನ್ನೂ ನೆನಪಿದೆ. ಆಗೆಲ್ಲ ಮಕ್ಕಳಿಗಾಗಿಯೇ ಚಲನಚಿತ್ರ ತಯಾರಾಗುತ್ತಿದ್ದವು.

  ತುಂಬಾ ವರುಷಗಳ ನಂತರ ಅಂಥ ಚಿತ್ರವೊಂದು ನಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಅದೇ ರಿಷಬ್ ಶೆಟ್ಟಿ ನಿರ್ದೇಶನದ 'ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು'.

  ಇದು ಮಕ್ಕಳು ತಮ್ಮ ಕನ್ನಡ ಶಾಲೆಯನ್ನು ಉಳಿಸಿಕೊಳ್ಳಲು ಹೋರಾಡುವ ಕಥೆಯಿರುವ ಚಿತ್ರ. ನಮ್ಮ ಕನ್ನಡ ಭಾಷೆ ನಮಗೆ ಏಕೆ ಮುಖ್ಯ ಎಂದು ತಿಳಿಸುವ ಚಿತ್ರ. ಮಕ್ಕಳು ಮುಖ್ಯ ಪಾತ್ರಗಳಲ್ಲಿ ನಟಿಸುವ ಚಿತ್ರವಾದರೂ ಇದು ದೊಡ್ಡವರಿಗಾಗಿ ಮಾಡಿದ ಚಿತ್ರ.

  Sarkari Hi. Pra. Shaale, Kasaragodu, Koduge: Ramanna Rai review by Chandramma

  ವಿಮರ್ಶೆ: ಕನ್ನಡ ಭಾಷಾಭಿಮಾನ ಹೆಚ್ಚಿಸುವ 'ಸರ್ಕಾರಿ ಹಿ.ಪ್ರಾ. ಶಾಲೆ, ಕಾಸರಗೋಡು'ವಿಮರ್ಶೆ: ಕನ್ನಡ ಭಾಷಾಭಿಮಾನ ಹೆಚ್ಚಿಸುವ 'ಸರ್ಕಾರಿ ಹಿ.ಪ್ರಾ. ಶಾಲೆ, ಕಾಸರಗೋಡು'

  ಎಲ್ಲ ಪಾತ್ರಧಾರಿಗಳು ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಕೊನೆಯಲ್ಲಿ ಧೋನಿ ತರಹ ಬಂದು ಸಿಕ್ಸರ್ ಬಾರಿಸಿ ಸಿನೆಮಾ ಗೆಲ್ಲಿಸುವುದು ಮಾತ್ರ ಅನಂತನಾಗ್.

  ಕಥೆ ಚೆನ್ನಾಗಿದೆ. ಸಂಭಾಷಣೆ ಚುರುಕಾಗಿದೆ. ಆದರೆ ಇಲ್ಲಿ ಕಾಸರಗೋಡಿನ ಭಾಷೆ ಇದ್ದುದರಿಂದ ಕೆಲವು ಕಡೆ ಕೆಲವು ಜನರಿಗೆ ಕೆಲವು ಶಬ್ದಗಳು ಅರ್ಥವಾಗಲಿಕ್ಕಿಲ್ಲ. ಹಲವು ಕಡೆ ಇಂಗ್ಲೀಷ್ ಬಳಸಲಾಗಿದೆ. ಆದರೆ ಸಬ್ ಟೈಟಲ್ ಇರುವುದರಿಂದ ತೊಂದರೆಯಾಗಲಿಕ್ಕಿಲ್ಲ.

  ನವಿರು ನಿರೂಪಣೆಯ ಸಿನೆಮಾ ನವಿರು ನಿರೂಪಣೆಯ ಸಿನೆಮಾ "ಸರ್ಕಾರಿ ಹಿ.ಪ್ರಾ.ಶಾಲೆ, ಕಾಸರಗೋಡು

  ಸಂಗೀತ ಒಳ್ಳೆಯ ಸಾಥ್ ನೀಡಿದೆ. "ಪ್ರವೀಣಾ ದಡ್ಡ ದಡ್ಡ" ಹಾಡು ಜನಪ್ರಿಯವಾಗುವುದು ಖಂಡಿತ. ಕ್ಯಾಮರಾಮನ್ ಕಾಸರಗೋಡಿನ ಸೊಗಡನ್ನು ತುಂಬಾ ಚೆನ್ನಾಗಿ ಸೆರೆಹಿಡಿದಿದ್ದಾರೆ.

  ಸರಕಾರ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವ ಈ ಸಂಧರ್ಭದಲ್ಲಿ ಈ ಚಿತ್ರ ತುಂಬಾ ಪ್ರಾಮುಖ್ಯತೆ ವಹಿಸುತ್ತದೆ. ಎಲ್ಲ ರಾಜಕಾರಣಿಗಳು, ಕನ್ನಡ ಹೋರಾಟಗಾರರು ಮತ್ತು ಕನ್ನಡದ ಜನ ನೋಡಬೇಕಾದ ಚಿತ್ರ.

  ಈ ಚಿತ್ರಕ್ಕೆ ಸರಕಾರ ಟ್ಯಾಕ್ಸ್ ಫ್ರೀ ಮಾಡಬೇಕು. ಎಲ್ಲ ಶಾಲೆಗಳ ಮಕ್ಕಳನ್ನು ಕರೆದುಕೊಂಡು ಹೋಗಿ ಈ ಚಿತ್ರವನ್ನು ತೋರಿಸಬೇಕು.

  English summary
  'Sarkari Hi. Pra. Shaale, Kasaragodu, Koduge: Ramanna Rai' review by Chandramma.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X