twitter
    For Quick Alerts
    ALLOW NOTIFICATIONS  
    For Daily Alerts

    Review: ನಕ್ಕು ನಲಿಯಲು 'ಸಾರ್ವಜನಿಕರಿಗೆ ಸುವರ್ಣಾವಕಾಶ'

    |

    'ಸಾರ್ವಜನಿಕರಿಗೆ ಸುವರ್ಣಾವಕಾಶ' ಸಿಂಪಲ್ ಸಿನಿಮಾ. ನಾಯಕ, ನಾಯಕಿ ಜೊತೆಗೆ ಒಂದಷ್ಟು ಪಾತ್ರಗಳ ಸುತ್ತ ಕಥೆ ನಡೆಯುತ್ತದೆ. ಸರಳ ಕಥೆಯನ್ನು ಮನರಂಜನೆಯಾಗಿ ಪ್ರೇಕ್ಷಕರಿಗೆ ಹೇಳಿದ್ದಾರೆ. 'ಕೆಲವೊಂದು ಎಂದಿಗೂ ಕಳೆದು ಹೋಗುವುದಿಲ್ಲ.. ಕಳೆದು ಹೋದ ಹಾಗೆ ಅನಿಸುತ್ತೆ ಅಷ್ಟೇ..' ಎಂಬ ಸಂದೇಶ ಇಲ್ಲಿದೆ.

    Rating:
    3.5/5
    Star Cast: ರಿಷಿ, ಧನ್ಯ ಬಾಲಕೃಷ್ಣ, ದತ್ತಣ್ಣ
    Director: ಅನೂಪ್ ರಾಮಸ್ವಾಮಿ

    ಒನ್ ಲೈನ್ ಸೋರಿ

    ಒನ್ ಲೈನ್ ಸೋರಿ

    'ಸಾರ್ವಜನಿಕರಿಗೆ ಸುವರ್ಣಾವಕಾಶ' ಸಿನಿಮಾದ ಕಥೆ ತುಂಬ ಸಿಂಪಲ್. ನಾಯಕಿ ಹುಟ್ಟುಹಬ್ಬಕ್ಕೆ ಆಕೆಯ ತಾಯಿ ಒಂದು ವಸ್ತುವನ್ನು ಗಿಫ್ಟ್ ಆಗಿ ನೀಡುತ್ತಾಳೆ. ನಾಯಕನ ಜೊತೆಗೆ ಇರುವಾಗ ಆ ವಸ್ತು ಕಳೆದು ಹೋಗುತ್ತದೆ. ಆ ವಸ್ತು ಮರಳಿ ನಾಯಕಿಗೆ ಸಿಗುತ್ತದೆಯೇ?, ಅದಕ್ಕಾಗಿ ನಾಯಕ ಪಡುವ ಕಷ್ಟ ಏನು?, ಹಾಗಾದ್ರೆ, ಆ ವಸ್ತು ಯಾವುದು? ಎನ್ನುವುದು ಸಿನಿಮಾದ ಕಥೆಯಾಗಿದೆ.

    ಇಷ್ಟ ಆಗುವ ಪಾತ್ರಗಳು

    ಇಷ್ಟ ಆಗುವ ಪಾತ್ರಗಳು

    'ಸಾರ್ವಜನಿಕರಿಗೆ ಸುವರ್ಣಾವಕಾಶ' ಸಿನಿಮಾದ ಎಲ್ಲ ಪಾತ್ರಗಳು ಇಷ್ಟ ಆಗುತ್ತಿದೆ. ನಾಯಕ ವೇದಾಂತ್ (ರಿಷಿ), ನಾಯಕಿ ಜಾನು (ಧನ್ಯ ಬಾಲಕೃಷ್ಣ), ನಾಯಕನ ತಂದೆ ದೇವರಾಜ್ (ದತ್ತಣ್ಣ), ತಾಯಿ ಶಾಂತ, ನಾಯಕಿಯ ತಾಯಿ ಶಾಲಿನಿ, ನಾಯಕನ ಸ್ನೇಹಿತ ಸಿದ್, ರೌಡಿ ರಂಗಾಯಣ ರಘು, ಆಟೋ ಡ್ರೈವರ್ ಮಿತ್ರ ಹೀಗೆ ಎಲ್ಲ ಪಾತ್ರಗಳು ಚೆನ್ನಾಗಿ ತೆರೆ ಮೇಲೆ ಬಂದಿವೆ.

    ಡಿಸೆಂಬರ್ 20ರಂದು ಸ್ಯಾಂಡಲ್ವುಡ್ 'ಸಾರ್ವಜನಿಕರಿಗೆ ಸುವರ್ಣಾವಕಾಶ'ಡಿಸೆಂಬರ್ 20ರಂದು ಸ್ಯಾಂಡಲ್ವುಡ್ 'ಸಾರ್ವಜನಿಕರಿಗೆ ಸುವರ್ಣಾವಕಾಶ'

    ಏನರ್ಜಿ ತುಂಬಿದ್ದಾರೆ ರಿಷಿ

    ಏನರ್ಜಿ ತುಂಬಿದ್ದಾರೆ ರಿಷಿ

    ರಿಷಿ ಈಗಾಗಲೇ ತಮ್ಮ ನಟನೆಯನ್ನು ಸಾಬೀತು ಮಾಡಿ ತೋರಿಸಿದ್ದಾರೆ. ಇಲ್ಲಿಯೂ ರಿಷಿ ಯಾವುದರಲ್ಲಿಯೂ ಹಿಂದೆ ಬಿದ್ದಿಲ್ಲ. ರಿಷಿ ಕಾಮಿಡಿ ಟೈಮಿಂಗ್ ತುಂಬ ಚೆನ್ನಾಗಿ ವರ್ಕ್ ಔಟ್ ಆಗಿದೆ. ಅವರ ಡ್ಯಾನ್ಸ್ ಬಗ್ಗೆ ಮಾತನಾಡುವ ಹಾಗೆಯೇ ಇಲ್ಲ. ಇದೇ ರೀತಿ ಮುಂದುವರೆದರೆ ಕನ್ನಡ ನಟರ ಪೈಕಿ ಒನ್ ಆರ್ ದಿ ಬೆಸ್ಟ್ ಡ್ಯಾನ್ಸರ್ ಆಗುತ್ತಾರೆ. ಆಕ್ಷನ್ ನಲ್ಲಿಯೂ ಮಿಂಚಿದ್ದಾರೆ. ಒಟ್ಟಾರೆ, ಇಡೀ ಚಿತ್ರಕ್ಕೆ ರಿಷಿ ಏನರ್ಜಿ ತುಂಬಿದ್ದಾರೆ.

    ನಾಯಕಿ ಹಾಗೂ ಉಳಿದ ಪಾತ್ರಗಳು

    ನಾಯಕಿ ಹಾಗೂ ಉಳಿದ ಪಾತ್ರಗಳು

    ನಾಯಕಿ ಧನ್ಯ ಬಾಲಕೃಷ್ಣ ನಟನೆ ಚೆನ್ನಾಗಿದೆ. ಧನ್ಯ ಲವಲವಿಕೆ ಇಷ್ಟ ಆಗುತ್ತದೆ. ಉಳಿದಂತೆ, ದತ್ತಣ್ಣ, ರಂಗಾಯಣ ರಘು, ಶಾಲಿನಿ, ಮಿತ್ರ, ಸಿದ್ ಸಿನಿಮಾಗೆ ಬಲ ನೀಡಿದ್ದಾರೆ. ಎಲ್ಲರ ನಟನೆ ಸಿನಿಮಾಗೆ ಪ್ಲಸ್ ಆಗಿದೆ. ಇವರಲ್ಲಿ ಯಾರಾದರೂ ನಟನೆಯಲ್ಲಿ ಹಿಂದೆ ಬಿದ್ದಿದ್ದರೆ, ಸಿನಿಮಾಗೆ ದೊಡ್ಡ ಸಮಸ್ಯೆ ಆಗುತ್ತಿತ್ತು.

    ''ಏನು ಸ್ವಾಮಿ ಮಾಡೋಣ..'' ಅಂತ ಕೇಳ್ತಿದ್ದಾರೆ ಪುನೀತ್, ರಿಷಿ''ಏನು ಸ್ವಾಮಿ ಮಾಡೋಣ..'' ಅಂತ ಕೇಳ್ತಿದ್ದಾರೆ ಪುನೀತ್, ರಿಷಿ

    ಹಾಡುಗಳು, ಮೇಕಿಂಗ್

    ಹಾಡುಗಳು, ಮೇಕಿಂಗ್

    ಸಿನಿಮಾದ ಹಾಡುಗಳು ವಿಭಿನ್ನ ಶೈಲಿಯಲ್ಲಿವೆ. ಹೊಸತನದಿಂದ ಕೂಡಿದೆ. ಮೊದಲ ಹಾಡು ತಾಜಾ ಅನುಭವ ನೀಡಿದೆ. ಹಾಡುಗಳು ಎಷ್ಟು ಹೊಸತನದಲ್ಲಿ ಇದೆಯೋ, ಅದೇ ರೀತಿ ಹಾಡುಗಳನ್ನು ಚಿತ್ರೀಕರಣ ಮಾಡಲಾಗಿದೆ. ಸಿನಿಮಾದ ಎರಡನೇ ಹಾಡು ಇದ್ದಕ್ಕಿದ್ದ ಹಾಗೆ ಬರುವುದು ಏಕೆ ಎನಿಸುತ್ತದೆ. ಹಾಡುಗಳ ರೀತಿ ಇಡೀ ಸಿನಿಮಾದ ಮೇಕಿಂಗ್ ಚೆನ್ನಾಗಿದೆ.

    ಇನ್ನಷ್ಟು ಚೆನ್ನಾಗಿ ಹೇಳಬಹುದಿತ್ತು

    ಇನ್ನಷ್ಟು ಚೆನ್ನಾಗಿ ಹೇಳಬಹುದಿತ್ತು

    ಇರುವ ಕಥೆಯನ್ನು ಇನ್ನಷ್ಟು ಚೆನ್ನಾಗಿ ನಿರ್ದೇಶಕರು ಕೇಳಬೇಕಾಗಿತ್ತು ಎನ್ನುವ ಭಾವನೆ ಸಿನಿಮಾ ನೋಡಿದ ಮೇಲೆ ಆಗುತ್ತದೆ. ಐಪಿಎಲ್ ಬೆಟ್ಟಿಂಗ್ ದೃಶ್ಯ ತುಂಬ ಉದ್ದವಾಯಿತು. ಫಸ್ಟ್ ಹಾಫ್ ಹಾಗೂ ಸೆಕೆಂಡ್ ಹಾಫ್ ನ ಕೆಲವು ದೃಶ್ಯಗಳು ಬೋರ್ ಎನಿಸುತ್ತದೆ. ಇನ್ನಷ್ಟು ಹಾಸ್ಯ, ಇನ್ನಷ್ಟು ಆಪ್ತ ಎನ್ನುವ ಸನ್ನಿವೇಶಗಳ ಅಗತ್ಯ ಇತ್ತು.

    ಫೋಟೋ ಆಲ್ಬಂ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ರಿಷಿ-ಸ್ವಾತಿಫೋಟೋ ಆಲ್ಬಂ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ರಿಷಿ-ಸ್ವಾತಿ

    ಪಾತ್ರಗಳ ಕಾಂಬಿನೇಶನ್ ನಲ್ಲಿ ಚೆನ್ನಾಗಿದೆ

    ಪಾತ್ರಗಳ ಕಾಂಬಿನೇಶನ್ ನಲ್ಲಿ ಚೆನ್ನಾಗಿದೆ

    ಸಿನಿಮಾದ ಒಂದು ಪಾತ್ರ ಇನ್ನೊಂದು ಪಾತ್ರದ ಜೊತೆಗೆ ಚೆನ್ನಾಗಿ ಬೆರೆಯಬೇಕು. ಆಗ ಆ ದೃಶ್ಯ ಚೆನ್ನಾಗಿ ಬರುತ್ತದೆ. ಈ ಸಿನಿಮಾದಲ್ಲಿ ತಂದೆ ಹಾಗೂ ಮಗನ ಪಾತ್ರಗಳ ನಡುವಿನ ಬಾಂದವ್ಯ ಹತ್ತಿರ ಆಗುತ್ತದೆ. ಪ್ರೇಮಿಗಳು ಕ್ಯೂಟ್ ಆಗಿದ್ದಾರೆ. ತರ್ಲೆ ಗೆಳೆಯರ ಜೋಡಿ ಮಜಾ ನೀಡುತ್ತದೆ.

    ನೋಡಿ ನಗಬಹುದು

    ನೋಡಿ ನಗಬಹುದು

    ಒಂದು ಸಿನಿಮಾಗೆ ಹೋದ್ರೆ, ತಲೆ ಕೆಡಿಸುವ ಅಂಶಗಳು ಇರಬಾರದು. ಸಿಂಪಲ್ ಆಗಿ ನಮಗೆ ಮನರಂಜನೆ ನೀಡಬೇಕು, ನಗಿಸಬೇಕು ಎನ್ನುವವರು 'ಸಾರ್ವಜನಿಕರಿಗೆ ಸುವರ್ಣಾವಕಾಶ' ಸಿನಿಮಾವನ್ನು ನೋಡಬಹುದು. ಕೆಲವು ಸಣ್ಣ ತಪ್ಪುಗಳನ್ನು ಕ್ಷಮಿಸಿ, ಕೆಲವು ಕಡೆ ತಾಳ್ಮೆಯಿಂದ ತಡೆದುಕೊಂಡು ಸಿನಿಮಾ ನೋಡಬಹುದು.

    English summary
    Sarvajanikarige Suvarnavakasha movie review in kannada: Rating: 3.
    Monday, January 6, 2020, 18:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X