twitter
    For Quick Alerts
    ALLOW NOTIFICATIONS  
    For Daily Alerts

    ಮಂಡ್ಯದ ಅ'ಯೋಗ್ಯ'ನ ಬಗ್ಗೆ ವಿಮರ್ಶಕರು ಹಿಂಗೆ ಹೇಳವ್ರೆ

    By Naveen
    |

    ನಿನ್ನೆ ಬಿಡುಗಡೆಯಾಗಿರುವ 'ಅಯೋಗ್ಯ' ಸಿನಿಮಾಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ಜನರ ಕಡೆಯಿಂದ ಸಿನಿಮಾಗೆ ಬಂದಿರುವ ಒಳ್ಳೆಯ ರೆಸ್ಪಾನ್ಸ್ ಚಿತ್ರತಂಡದ ಶಕ್ತಿ ಹೆಚ್ಚು ಮಾಡಿದೆ. ಈಗ ವಿಮರ್ಶಕರು ಕೂಡ ಚಿತ್ರವನ್ನು ಹೊಗಳಿದ್ದಾರೆ.

    ಒಳ್ಳೆಯ ಹಾಡುಗಳು, ಒಂದೆರಡು ಫೈಟುಗಳು, ಬೇಕಾದಷ್ಟು ಕಾಮಿಡಿ, ಹೀರೋ - ವಿಲನ್ ಜುಗಲ್ ಬಂದಿ, ಜೊತೆಗೆ ಜೊತೆಗೆ ಪ್ರೀತಿ - ಪ್ರೇಮ ಇವಿಷ್ಟು ಅಂಶಗಳು ಅಯೋಗ್ಯ ಸಿನಿಮಾದಲ್ಲಿ ಇವೆ. ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ಎಲ್ಲ ವರ್ಗದವರು ನೋಡಬಹುದಾದ 'ಯೋಗ್ಯ' ಸಿನಿಮಾ ಇದಾಗಿದೆ.

     ವಿಮರ್ಶೆ : ಈ ಮಂಡ್ಯದ ಗಂಡು ಅಯೋಗ್ಯ ಅಲ್ಲ 'ಯೋಗ್ಯ' ವಿಮರ್ಶೆ : ಈ ಮಂಡ್ಯದ ಗಂಡು ಅಯೋಗ್ಯ ಅಲ್ಲ 'ಯೋಗ್ಯ'

    ಹಳ್ಳಿ ಕಥೆ ಅಯೋಗ್ಯ ಬಹುತೇಕರಿಗೆ ತುಂಬ ಇಷ್ಟ ಆಗಿದೆ. ಬಹುತೇಕ ವಿಮರ್ಶಕರು ಸಿನಿಮಾದ ಬಗ್ಗೆ ಒಳ್ಳೆಯ ಮಾತನ್ನು ಆಡಿದ್ದಾರೆ. ಅಂದಹಾಗ, ಕನ್ನಡ ದಿನಪತ್ರಿಕೆಗಳಲ್ಲಿ ಬಂದ 'ಅಯೋಗ್ಯ' ಸಿನಿಮಾದ ವಿಮರ್ಶೆ ಮುಂದಿದೆ ಓದಿ...

    ಬೆಲ್ಲ ಮತ್ತು ಬಾಡೂಟದ ಮಿಶ್ರಣ: ವಿಜಯ ಕರ್ನಾಟಕ

    ಬೆಲ್ಲ ಮತ್ತು ಬಾಡೂಟದ ಮಿಶ್ರಣ: ವಿಜಯ ಕರ್ನಾಟಕ

    ''ಅಯೋಗ್ಯ ಸಿನಿಮಾದಲ್ಲಿ ಮಂಡ್ಯ ಭಾಗದ ಪಕ್ಕಾ ಹಳ್ಳಿಯ ಕಥೆ ಇದೆ. ಗ್ರಾಮ ಪಂಚಾಯಿತಿ ರಾಜಕೀಯ, ಪ್ರೇಮ ಕಥೆ, ಹಳ್ಳಿ ಹುಡುಗರ ತಮಾಷೆ, ತರಲೆ ಎಲ್ಲವನ್ನೂ ನಿರ್ದೇಶಕ ಮಹೇಶ್‌ ಕುಮಾರ್‌ ಹದವಾಗಿ ಬೆರೆಸಿದ್ದಾರೆ. ಮಂಡ್ಯದವರನ್ನು ಮಂಡ್ಯದಿಂದ ಅಲ್ಲ, ಇಂಡಿಯಾದಿಂದಲೇ ಹೊರಗೆ ಹಾಕಿದರೂ ಬೇರೆ ಗ್ರಹಕ್ಕಾದ್ರೂ ಹೋಗಿ ಅಲ್ಲಿ ನಮ್ಮ ಬಾವುಟ ನೆಡ್ತೀವಿ ಎನ್ನುವ ಡೈಲಾಗ್‌ನಂತೆ ಮಹೇಶ್‌ ತಮ್ಮ ಮೊದಲ ಸಿನಿಮಾದಲ್ಲಿಯೇ ಗೆದ್ದು ಗೆಲುವಿನ ಬಾವುಟ ಹಾರಿಸಿದ್ದಾರೆ. ನಟನೆಯತ್ತ ಬಂದರೆ ನೀನಾಸಂ ಸತೀಶ್ ಪ್ರತಿ ದೃಶ್ಯದಲ್ಲೂ ಮಿಂದೆದ್ದಿದ್ದಾರೆ. ಚೂಡಿದಾರ್, ಸೀರೆಯುಟ್ಟ ರಚಿತಾ ರಾಮ್‌ ಮಂಡ್ಯದ ಬೆಲ್ಲದಂತೆ ಸ್ವೀಟ್ ಆಗಿ ನಟಿಸಿದ್ದಾರೆ.'' - ಹರೀಶ್ ಬಸವರಾಜ್

    'ಅಯೋಗ್ಯ'ನ ಗ್ರಾಮಾಯಣ - ಪ್ರಜಾವಾಣಿ

    'ಅಯೋಗ್ಯ'ನ ಗ್ರಾಮಾಯಣ - ಪ್ರಜಾವಾಣಿ

    ''ನಟನೆಯತ್ತ ಬಂದರೆ ನೀನಾಸಂ ಸತೀಶ್ ಪ್ರತಿ ದೃಶ್ಯದಲ್ಲೂ ಮಿಂದೆದ್ದಿದ್ದಾರೆ. ಸಿದ್ಧ ಅಲಿಯಾಸ್‌ ಸಿದ್ದೇಗೌಡನಾಗಿ ಅಬ್ಬರಿಸಿ, ನಗಿಸಿ, ಕಾಡಿಸುತ್ತಾರೆ. ವ್ಹಾವ್ ಎನ್ನಿಸುವಂತೆ ಫೈಟ್ ಮಾಡಿದ್ದಾರೆ. ಚೂಡಿದಾರ್, ಸೀರೆಯುಟ್ಟ ರಚಿತಾ ರಾಮ್‌ ಮಂಡ್ಯದ ಬೆಲ್ಲದಂತೆ ಸ್ವೀಟ್ ಆಗಿ ನಟಿಸಿದ್ದಾರೆ. ನಟನೆಯತ್ತ ಬಂದರೆ ನೀನಾಸಂ ಸತೀಶ್ ಪ್ರತಿ ದೃಶ್ಯದಲ್ಲೂ ಮಿಂದೆದ್ದಿದ್ದಾರೆ. ಸಿದ್ಧ ಅಲಿಯಾಸ್‌ ಸಿದ್ದೇಗೌಡನಾಗಿ ಅಬ್ಬರಿಸಿ, ನಗಿಸಿ, ಕಾಡಿಸುತ್ತಾರೆ. ವ್ಹಾವ್ ಎನ್ನಿಸುವಂತೆ ಫೈಟ್ ಮಾಡಿದ್ದಾರೆ.'' - ಕೆ.ಹೆಚ್.ಓಬಳೇಶ್

    ಅಯೋಗ್ಯನ ಒಡಲಲ್ಲಿ ಹಾಸ್ಯ, ಸಂದೇಶ - ವಿಜಯವಾಣಿ

    ಅಯೋಗ್ಯನ ಒಡಲಲ್ಲಿ ಹಾಸ್ಯ, ಸಂದೇಶ - ವಿಜಯವಾಣಿ

    ''ಬಯಲು ಶೌಚ ನಿರ್ಮೂಲನೆ ಸಂದೇಶ ಹೊತ್ತು ಬಂದಿದ್ದ ಹಿಂದಿ ಚಿತ್ರ 'ಟಾಯ್ಲೆಟ್ ಏಕ್ ಪ್ರೇಮ್ ಕಥಾ' ಜನಮನ ಗೆದ್ದಿತ್ತು. ಅಂಥದ್ದೇ ಪ್ರಯತ್ನ 'ಅಯೋಗ್ಯ' ಮೂಲಕ ಕನ್ನಡದಲ್ಲೂ ಆಗಿರುವುದು ವಿಶೇಷ. ಚೊಚ್ಚಲ ಸಿನಿಮಾದಲ್ಲಿಯೇ ನಿರ್ದೇಶಕ ಮಹೇಶ್ ಕುಮಾರ್ ಹಳ್ಳಿಗಾಡಿನ ಸದ್ಯದ ಪರಿಸ್ಥಿತಿಗೆ ಕನ್ನಡಿ ಹಿಡಿದಿದ್ದಾರೆ. ಬಯಲು ಶೌಚದ ವಿಷಯವನ್ನೇ ಕಥೆಯನ್ನಾಗಿಸಿಕೊಂಡು ಹಾಸ್ಯ ದರ್ಪದಲ್ಲಿ ಚಿತ್ರವನ್ನಾಗಿಸಿದ್ದಾರೆ ರಾಷ್ಟ್ರ ಮತ್ತು ರಾಜ್ಯ ರಾಜಕೀಯಕ್ಕಿಂತ ಹಳ್ಳಿ ರಾಜಕೀಯ ಯಾವುದಕ್ಕೂ ಕಡಿಮೆ ಇಲ್ಲ ಎಂಬುದನ್ನು ಅರಿತೇ ಈ ಸಿನಿಮಾ ಕಟ್ಟಿದ್ದಾರೆ.'' - ಮಂಜು ಕೊಟಗುಣಸಿ

    ಯೋಗ್ಯರಿಗೆ ಮನೋರಂಜನಾ ಭಾಗ್ಯ - ಕನ್ನಡ ಪ್ರಭ

    ಯೋಗ್ಯರಿಗೆ ಮನೋರಂಜನಾ ಭಾಗ್ಯ - ಕನ್ನಡ ಪ್ರಭ

    ''ನಿರ್ದೇಶಕ ಹಳ್ಳಿ ಬಿಟ್ಟು ಬರಲ್ಲ, ನಾಯಕ ಹಳ್ಳಿಯಲ್ಲಿ ಉಳಿದುಕೊಳ್ಳುವುದಕ್ಕೆ ನೋಡುತ್ತಾನೆ. ಇತ್ತ ಪ್ರೇಕ್ಷಕ ಕೂಡ ಹಳ್ಳಿಯಿಂದ ಏನಾದರೂ ಹೊಸತನದ ನಿರೀಕ್ಷೆಯಲ್ಲಿ ಕೂರುತ್ತಾನೆ. ಪ್ರೇಕ್ಷಕನ ಈ ನಿರೀಕ್ಷೆಗಳನ್ನು ನಿರ್ದೇಶಕರು ಹಾಡು, ಸಂಭಾಷಣೆ, ಹಾಸ್ಯದ ಮೂಲಕ ಸರಿದೂಗಿಸುತ್ತಾರೆ. ಒಂದು ಖಡಕ್ ಕ್ಯಾರೆಕ್ಟರ್, ಮತ್ತೊಂದು ಕಿಲಾಡಿ ಪಾತ್ರ ಇವರ ಜೊತೆಗೆ ನಗಿಸುವುದಕ್ಕೆ ಇಬ್ಬರೂ, ಮುದ್ದಾಗಿ ಕಾಣುವುದಕ್ಕೆ ಒಬ್ಬ ಹುಡುಗಿ ಇವರೆಲ್ಲರ ಹಿನ್ನೆಲೆಯಾಗಿ ಬರುವ ಶುದ್ಧ ಹಳ್ಳಿ ವಾತಾವರಣ, ಕುಣಿಸುವಂತಹ ಹಾಡು, ಗುನುಗುವಂತಹ ಸಾಹಿತ್ಯ ಸೇರಿಕೊಂಡು 'ಅಯೋಗ್ಯ'ನನ್ನು ಅಪ್ಪಿಕೊಳ್ಳಿ ಎನ್ನುತ್ತದೆ.'' - ಆರ್.ಕೇಶವಮೂರ್ತಿ

    ಅಯೋಗ್ಯ ಸಿನಿಮಾ ವಿಮರ್ಶೆ : ಟೈಮ್ಸ್ ಆಫ್ ಇಂಡಿಯಾ

    ಅಯೋಗ್ಯ ಸಿನಿಮಾ ವಿಮರ್ಶೆ : ಟೈಮ್ಸ್ ಆಫ್ ಇಂಡಿಯಾ

    ''The story gets more intense in the second half, with election fever taking over the village, as well as Sidda's love story taking many twists and turns. Will Sidda get married to his dream girl and win the elections? Debutant director Mahesh manages to impress in his first outing by churning a commercial potboiler with the right mix of comedy, catchy dialogues and action to make a it a perfect weekend watch .The screenplay could have been tighter, though. Sathish Neenasam and Rachita Rama impress in their roles as Sidda and Nandini, respectively. Ravi Shankar does his best as Bacchegowda. Go and watch this film if you like village love stories, and the Mandya dialect.''

    English summary
    Actor Sathish Neenasam's 'Ayogya' kananda critics movie review.
    Saturday, August 18, 2018, 13:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X