For Quick Alerts
  ALLOW NOTIFICATIONS  
  For Daily Alerts

  'ರಾಮಾ ರಾಮಾ ರೇ' ಚಿತ್ರಕ್ಕೆ ವಿಮರ್ಶಕರ ಮಾರ್ಕ್ಸ್ ಎಷ್ಟು ?

  By Bharath Kumar
  |

  ಒಂದು ಸಿನಿಮಾ ಗೆಲ್ಲಬೇಕಾದರೆ, ಸ್ಟಾರ್ ಗಳೇ ಇರಬೇಕು ಅಂತಿಲ್ಲ. ಗಟ್ಟಿ ಕಥೆ ಇಟ್ಟುಕೊಂಡು ಹೊಸಬರು ಮಾಡಿದರೆ ಅದು ಯಶಸ್ವಿಯಾಗುತ್ತೆ ಎನ್ನುವುದಕ್ಕೆ ಹೊಸಬರ 'ರಾಮಾ ರಾಮಾ ರೇ' ಚಿತ್ರ ತಾಜಾ ಉದಾಹರಣೆಯಾಗಿದೆ. ಟ್ರೈಲರ್ ಮೂಲಕ ಸಂಚಲನ ಮೂಡಿಸಿದ್ದ 'ರಾಮಾ ರಾಮಾ ರೇ', ತೆರೆಗೆ ಬಂದಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿಕೊಂಡಿದೆ.

  ನಿನ್ನೆಯಷ್ಟೆ (ಅಕ್ಟೋಬರ್ 21) ಬಿಡುಗಡೆ ಆಗಿರುವ 'ರಾಮಾ ರಾಮಾ ರೇ' ಚಿತ್ರದಲ್ಲಿ ಸಾವು-ಬದುಕಿನ ಹೋರಾಟ, ಆಸೆ-ದುರಾಸೆ ನಡುವಿನ ಸಂಘರ್ಷವನ್ನ ಅತ್ಯಂತ ಸರಳವಾಗಿ ಮನಸ್ಸಿಗೆ ಮುಟ್ಟುವಂತೆ ತೋರಿಸಲಾಗಿದೆ. 'ಜಯನಗರ 4th ಬ್ಲಾಕ್' ಎಂಬ ಕಿರುಚಿತ್ರದ ಮೂಲಕ ಭರವಸೆ ಮೂಡಿಸಿದ್ದ ಸತ್ಯ ಪ್ರಕಾಶ್, ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ನಟರಾಜ್.ಎಸ್.ಭಟ್, ಕೆ.ಜಯರಾಮ್, ಧರ್ಮಣ್ಣ ಕಡೂರ, ಬಿಂಬಶ್ರೀ ನೀನಾಸಂ ಸೇರಿದಂತೆ ಪ್ರಮುಖರು ಅಭಿನಯಿಸಿದ್ದಾರೆ.['ರಾಮಾ ರಾಮಾ ರೇ' ವಿಮರ್ಶೆ: ಕ್ಲಾಸ್ ಪ್ರೇಕ್ಷಕರಿಗೆ ಹೇಳಿ ಮಾಡಿಸಿದ ಸಿನಿಮಾ]

  ಹಾಗಾದ್ರೆ, ಹೊಸಬರ ಈ ಪ್ರಯೋಗಕ್ಕೆ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ರಾಮಾ ರಾಮಾ ರೇ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ ಓದಿ.....

  ಪ್ರಶಸ್ತಿ, ಚಪ್ಪಾಳೆ ಎರಡರ ಆಚೆ ನಿಲ್ಲುವ ಕತೆ-ವಿಜಯ ಕರ್ನಾಟಕ

  ಪ್ರಶಸ್ತಿ, ಚಪ್ಪಾಳೆ ಎರಡರ ಆಚೆ ನಿಲ್ಲುವ ಕತೆ-ವಿಜಯ ಕರ್ನಾಟಕ

  'ರಾಮಾ ರಾಮಾ ರೇ' ಸಿನಿಮಾ ಸೂಕ್ಷ್ಮತೆಗಳ ಸುತ್ತ ಸರಳವಾಗಿ ಹೆಣೆದಿರುವ ಚಿತ್ರಕತೆ, ಫಾರಿನ್ ಲೊಕೇಶನ್‌, ಐಶರಾಮಿ ಸ್ಟೂಡಿಯೋ, ಅದ್ಧೂರಿ ತಾರಾಗಣ ಇದಾವುದೂ ಇಲ್ಲದೆ ಪ್ರೇಕ್ಷಕನ ಕುತೂಹಲ ಮತ್ತು ಅವಲೋಕನೆಗೆ ಈ ಸಿನಿಮಾ ಎಡೆಮಾಡಿಕೊಟ್ಟಿದೆ. ನಿರ್ದೇಶಕರಿಗೆ ಕತೆ ಹೇಳುವ ಜಾಣ್ಮೆ ಗೊತ್ತಿದೆ. ಪ್ರೇಕ್ಷಕ ಕತೆಯನ್ನು ಜೀವಿಸುವಷ್ಟರ ಮಟ್ಟಿಗೆ ಸಿನಿಮಾ ಮನಸ್ಸನ್ನು ತಟ್ಟುತ್ತದೆ. ಈ ಸಿನಿಮಾವನ್ನು ತುಂಬ ವಿಶೇಷ ಎಂದು ಹೇಳಲಾಗದಿದ್ದರೂ ಇಂತಹ ಕತೆಯನ್ನಿಟ್ಟುಕೊಂಡು ಅದನ್ನು ದೃಶ್ಯರೂಪಕ್ಕಿಳಿಸಿರುವುದೇ ವಿಶೇಷ. ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಯೋಗಾತ್ಮಕ ಸಿನಿಮಾಗಳು ಹೆಚ್ಚೆಚ್ಚು ಬರುತ್ತಿವೆ. ಆ ಸಾಲಿಗೆ ರಾಮಾ ರಾಮಾ ರೇ ಕೂಡ ಸೇರುತ್ತದೆ. ಇದು ನೋಡುಗರನ್ನು ನಗಿಸುತ್ತದೆ, ಕಾಡುತ್ತದೆ, ಅಳಿಸುತ್ತದೆ...ಸಿನಿಮಾದ ಶೇ. 95 ಭಾಗ ರಸ್ತೆಯಲ್ಲೇ ನಡೆಯುವುದರಿಂದ ರೋಡ್‌ ಸಿನಿಮಾ ಎಂತಲೂ ಕರೆಯಬಹುದು. ಹಾಡುಗಳ ಸಾಹಿತ್ಯ ಸಿನಿಮಾದ ಥಾಟ್ ಗೆ ಕೊಂಚ ಮಿಸ್‌ ಹೊಡೆಯುತ್ತಿದೆಯೇನೊ ಎಂಬಂತೆ ಅನಿಸುತ್ತದೆ. ಬಹುತೇಕ ಹೊಸಬರೇ ತುಂಬಿರುವ ಚಿತ್ರದಲ್ಲಿ ಕತೆ, ತಾಂತ್ರಿಕತೆ ಎಲ್ಲವನ್ನೂ ಸಮರ್ಥವಾಗಿ ನಿರ್ವಹಿಸಿರುವುದು ತಂಡದ ಸಿನಿಮಾ ಪ್ರೀತಿಯನ್ನು ತೋರಿಸುತ್ತದೆ. ಚಿತ್ರದ ಮೊದಲರ್ಧ ಸ್ವಲ್ಪ ಸ್ಲೋ ಎನಿಸುತ್ತದೆ ಎನ್ನುವುದು ಬಿಟ್ಟರೆ ಇಲ್ಲಿ ಅಂಥ ಮೈನಸ್‌ ಪಾಯಿಂಟ್‌ಗಳು ಇಲ್ಲ ಅಂತ ಹೇಳಬಹುದು - ರೇಟಿಂಗ್: 3.5/5-ಹರೀಶ್ ಬಸವರಾಜು

  ಕಠೋರತೆಯನ್ನು ಕುಗ್ಗಿಸುವ ಪಯಣ 'ರಾಮಾ ರಾಮಾ ರೇ' - ಕನ್ನಡ ಪ್ರಭ

  ಕಠೋರತೆಯನ್ನು ಕುಗ್ಗಿಸುವ ಪಯಣ 'ರಾಮಾ ರಾಮಾ ರೇ' - ಕನ್ನಡ ಪ್ರಭ

  'ಪೊಲೀಸರನ್ನು ಕೊಂದಿರುವುದಕ್ಕೆ ಗಲ್ಲುಶಿಕ್ಷೆಗೆ ಒಳಗಾಗಿರುವ ಸ್ಯಾಂಡಲ್ ರಾಜ (ನಟರಾಜ್) ರಾತ್ರೋರಾತ್ರಿ ಜೈಲಿನಿಂದ ಪರಾರಿಯಾಗುತ್ತಾನೆ. ನಿವೃತ್ತಗೊಂಡಿರುವ ಗಲ್ಲು ನಿರ್ವಾಹಕ ರಾಮಣ್ಣ ಮಾರ್ಗಮಧ್ಯದಲ್ಲಿ ಆಕಸ್ಮಿಕವಾಗಿ ಸ್ಯಾಂಡಲ್ ರಾಜ ಕೂಡ ಇವರ ಜೊತೆಯಾಗುತ್ತಾನೆ. ಇತ್ತ ಗ್ರಾಮವೊಂದರಿಂದ ಓಡಿಬಂದ ಅಂತರ್ಜಾತೀಯ ಜೋಡಿ ಧರ್ಮ(ಧರ್ಮಣ್ಣ ಕಡೂರ್) ಮತ್ತು ಸುಬ್ಬಿ (ಬಿಂಬಶ್ರೀ ನೀನಾಸಂ) ಕೂಡ ಅದೇ ವಾಹನದಲ್ಲಿ ಸೇರಿಕೊಳ್ಳುತ್ತಾರೆ. ಈ ಪಯಣದಲ್ಲಿ ಇವರ ಒಡನಾಟ, ಕಾದಾಟ, ದುರಾಸೆ, ಕರ್ತವ್ಯ, ಮಾನವೀಯತೆ ಇವುಗಳ ಅನಾವರಣ ಹೇಗಾಗುತ್ತದೆ ಎಂಬುದೇ ಕಥೆ!' ಬಹುತೇಕ ಹೊಸಬರ ತಂಡ ಕಟ್ಟಿಕೊಂಡು ತಾಂತ್ರಿಕವಾಗಿಯೂ ಸಿನೆಮಾವನ್ನು ಉತ್ತಮವಾಗಿ ಕಟ್ಟಿಕೊಟ್ಟಿರುವುದು ಈ ಸಿನೆಮಾದ ಹೆಗ್ಗಳಿಕೆ. ಲವಿತ್ ಅವರ ಛಾಯಾಗ್ರಹಣ, ವಾಸುಕಿ ವೈಭವ್ ಅವರ ಸಂಗೀತ ಉತ್ತಮ. ಧರ್ಮಣ್ಣ ಕಡೂರ್ ನಟನೆಯಲ್ಲಿ ಉಳಿದವರಿಗಿಂತಲೂ ಮಿಂಚಿದರು, ಕೃಶವಾದ ಖೈದಿಯ ಪಾತ್ರದಲ್ಲಿ ನಟರಾಜ್, ಗಲ್ಲಿಗೇರಿಸುವವನ ಪಾತ್ರದಲ್ಲಿ ಜಯರಾಮ್ ಅವರದ್ದು ಕೂಡ ಗಮನಾರ್ಹ ನಟನೆ. ಉಳಿದ ಪಾತ್ರವರ್ಗ ಕೂಡ ಅಚ್ಚುಕಟ್ಟಾಗಿ ನಟಿಸಿದೆ. ತಮ್ಮ ಚೊಚ್ಚಲ ನಿರ್ದೇಶನದಲ್ಲೇ, ಮಾನವೀಯ ಅಂತಃಕರಣವನ್ನು ಕಲಕುವ, ಕಠೋರತೆಯನ್ನು ಕುಗ್ಗಿಸುವ ಕಥೆಯನ್ನು, ರೋಡ್ ಸಿನೆಮಾ ಪ್ರಕಾರದಲ್ಲಿ ಆಪ್ತವಾಗಿಯೂ, ತಾಂತ್ರಿಕವಾಗಿಯೂ ಉತ್ತಮವಾಗಿ ಕಟ್ಟಿಕೊಟ್ಟಿರುವ ನಿರ್ದೇಶಕ ಡಿ ಸತ್ಯಪ್ರಕಾಶ್ ಅವರ ಈ ಪ್ರಯತ್ನ ವಿಭಿನ್ನ ಮತ್ತು ಗಮನಾರ್ಹ. ಸಿನಿರಸಿಕರು ನೋಡಿ, ಸಂಭ್ರಮಿಸಿ, ಚಿಂತನೆಗೂ ಒಡ್ಡಿಕೊಳ್ಳಬಹುದಾದ ಸಿನೆಮಾ ರಾಮಾ ರಾಮಾ ರೇ.

  ಹೊಸಬರ ಪ್ರಯೋಗಶೀಲ ಎದೆಗಾರಿಕೆ-ವಿಜಯವಾಣಿ

  ಹೊಸಬರ ಪ್ರಯೋಗಶೀಲ ಎದೆಗಾರಿಕೆ-ವಿಜಯವಾಣಿ

  ಇಡೀ ಜೀವನವೇ ಒಂದು ಜರ್ನಿ ಎಂಬ ಮಾತಿನ ಸಿನಿಮಾರೂಪವೇ ‘ರಾಮಾ ರಾಮಾ ರೇ' ಚಿತ್ರ. ಬದುಕಿನ ಪಯಣದಲ್ಲಿ ಕಳ್ಳರು, ಪ್ರೇಮಿಗಳು, ಪೊಲೀಸರು, ಚಾಲಾಕಿಗಳು ಎದುರಾಗುವಂತೆ ಈ ಚಿತ್ರದಲ್ಲಿ ಹಲವು ಪಾತ್ರಗಳು ಎದುರಾಗುತ್ತವೆ. ಎಲ್ಲವೂ ಭಿನ್ನ-ವಿಭಿನ್ನ. ಹೇಳಬೇಕಿರುವುದನ್ನು ಫಟಾಫಟ್ ಅಂತ ಹೇಳಿಮುಗಿಸುವ ಸನ್ನಿವೇಶಗಳು ಇಡೀ ಚಿತ್ರಕ್ಕೆ ಮೆರುಗು ತುಂಬಿವೆ. ಜೀವಭಯ-ಜೀವದಾನ, ವೈರಾಗ್ಯ-ವ್ಯಾಮೋಹ, ಹುಟ್ಟು-ಸಾವು, ನಂಬಿಕೆ-ಮೋಸ ಎಲ್ಲವನ್ನೂ ಪ್ರತಿನಿಧಿಸುವ ಮನುಷ್ಯರೊಂದಿಗೆ ಚಿತ್ರದುದ್ದಕ್ಕೂ ಕಾಣಿಸಿಕೊಳ್ಳುವ ಒಂದು ಹಳೇ ಜೀಪ್​ನಲ್ಲಿ ಎಲ್ಲ ಪಾತ್ರಗಳು ಮಾಡುವ ಪಯಣ ಚೆನ್ನಾಗಿದೆ. ಚೊಚ್ಚಲ ನಿರ್ದೇಶನದ ಚಿತ್ರದಲ್ಲಿಯೇ ಕಮರ್ಷಿಯಲ್ ಸೂತ್ರಗಳಿಗೆ ಗಂಟುಬೀಳದೆ ಇಂತಹ ಹೊಸ ಪ್ರಯೋಗ ಮಾಡಿರುವ ನಿರ್ದೇಶಕರ ಎದೆಗಾರಿಕೆಯನ್ನು ಮೆಚ್ಚಲೇಬೇಕು. ನಿಜಕ್ಕೂ ಗಲ್ಲುಶಿಕ್ಷೆಗೆ ಗುರಿಯಾದವನಂತೆ ನಟಿಸಿದ್ದಾರೆ ನಟರಾಜ್. ಚಿನಕುರುಳಿ ಮಾತಿನಿಂದ ಧರ್ಮಣ್ಣ ನಕ್ಕು ನಲಿಸುತ್ತಾರೆ ಮುಗ್ಧಪ್ರೀತಿಯ ಪ್ರತೀಕವಾಗಿರುವ ಬಿಂಬಶ್ರೀ ಅಭಿನಯಕ್ಕೂ ಫುಲ್​ವಾರ್ಕ್ಸ್. ಜಯರಾಮ್ ಅವರ ನಟನೆ ಗಮನ ಸೆಳೆಯುವಂತಿದೆ. ವಾಸುಕಿ ವೈಭವ್ ಅವರ ಸಂಗೀತ, ಲವಿತ್ ಅವರ ಛಾಯಗ್ರಹಣ ಚಿತ್ರಕ್ಕೆ ಪೂರಕವಾಗಿದೆ. ಕೆಲವೆಡೆ ನಿರೂಪಣೆ ಸ್ಲೋ ಎನಿಸುತ್ತದೆ. ಆದರೂ ಗೊಂದಲಕ್ಕೆ ಅವಕಾಶ ನೀಡದಂತೆ ಹೆಣೆದಿರುವ ಚಿತ್ರಕಥೆ ಇಲ್ಲಿನ ಪ್ಲಸ್ ಪಾಯಿಂಟ್ - ಮದನ ಕುಮಾರ್

  ಇಲ್ಲಿ ಕತೆಯೇ ಸ್ಟಾರ್ಸ್, ಒಳ್ಳೆ ಮನಸ್ಸಿದೆ ನೋಡಿ ಸಾರ್-ಉದಯವಾಣಿ

  ಇಲ್ಲಿ ಕತೆಯೇ ಸ್ಟಾರ್ಸ್, ಒಳ್ಳೆ ಮನಸ್ಸಿದೆ ನೋಡಿ ಸಾರ್-ಉದಯವಾಣಿ

  ನಿರ್ದೇಶಕನಿಗೆ ಕಥೆ ಮೇಲೆ ಹಿಡಿತವಿದೆ. ಕಥೆ ಹೇಳುತ್ತಲೆ ಅದನ್ನ ತೆರೆ ಮೇಲೆ ತೋರಿಸುವ ಜಾಣ್ಮೆಯಿರಬೇಕು. ಸ್ಟಾರ್ ವ್ಯಾಲ್ಯೂ ಬಗ್ಗೆ ತಲೆಕೆಡಿಸಿಕೊಳ್ಳದೆ, ಕಥೆ ವ್ಯಾಲ್ಯೂ ಗೊತ್ತಿರಬೇಕು. ಎಲ್ಲದಕ್ಕಿಂತೂ ಹೆಚ್ಚಾಗಿ ಪ್ರೇಕ್ಷಕನ ನಾಡಿಮಿಡಿತ ತಿಳಿದಿರಬೇಕು. ಈ ಎಲ್ಲವನ್ನ ನಿರ್ದೇಶಕ ಸತ್ಯ ಪ್ರಕಾಶ್ ಅಚ್ಚುಕಟ್ಟಾಗಿ ನಿರ್ವಹಿಸಿದ್ದರಿಂದಲೇ 'ರಾಮಾ ರಾಮಾ ರೇ' ನೋಡುಗರಿಗೊಂದು ಹೊಸ ಫೀಲ್ ಕೊಡುತ್ತೆ. ಸ್ಟಾರ್ ಇಲ್ಲ, ಕಮರ್ಷಿಯಲ್ ಸಿನಿಮಾನೂ ಅಲ್ಲಾ. ಮೊದಲಾರ್ಧ ನಿದಾನವಾಗಿದೆ. ಧ್ವಿತೀಯಾರ್ದ ನೋಡುಗರಿಗೆ ಬಾವುಕತೆಗೆ ದೂಡಿ ಹಿಡಿದಿಡುವ ತಾಕತ್ತು ಪ್ರದರ್ಶಿಸುತ್ತದೆ. ಒಟ್ಟಾರೆ, ಇಡೀ ಸಿನಿಮಾ ಒಂದು ಹೊಸ ಪ್ರಯೋಗವಂತು ಹೌದು. ಇಡೀ ಚಿತ್ರದಲ್ಲಿ ಇಷ್ಟವಾಗುವ ಅಂಶವೆಂದರೆ, ಲೊಕೇಷನ್, ಒಣಗಿದ ಬಯಲಲ್ಲಿ ನಡೆಯುವ ಕಥೆ, ಸಿಗುವ ದಾರಿ, ಸಾಗುವ ಜೀವು, ಕಾಣುವ ಪಾತ್ರಗಳು, ಕಾಡುವ ಭಾವುಕತೆ ಎಲ್ಲವೂ ಪ್ಲಸ್ ಪಾಯಿಂಟ್. ನಟರಾಜ್ ಖೈದಿ ಪಾತ್ರದಲ್ಲಿ ಇಷ್ಟವಾಗುತ್ತಾರೆ. ಜಯರಾಮ್ ಪಾತ್ರದ ತೂಕ ಹೆಚ್ಚಿಸಿದ್ದಾರೆ. ಧರ್ಮ ನಗಿಸುವಲ್ಲಿ ಹಿಂದೆ ಬಿದ್ದಿಲ್ಲ. ಬಿಂಬಿಶ್ರೀ, ಎಂ ಕೆ ಮಠ, ರಾದಾ ರಾಮಚಂದ್ರ ತಮ್ಮ ಪಾತ್ರವನ್ನ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ವಾಸುಕಿ ವೈಭವ್ ಅವರ ಸಂಗೀತ ಪೂರವಾಗಿದೆ. ಲವಿತ್ ಕ್ಯಾಮೆರಾದಲ್ಲಿ ಭಣಗುಟ್ಟುವ ಜೀವಂತಿಕೆ ಇದೆ - ವಿಜಯ ಭರಮಸಾಗರ

  RAMA RAMA RE MOVIE REVIEW - TIMES OF INDIA

  RAMA RAMA RE MOVIE REVIEW - TIMES OF INDIA

  'RAMA RAMA RE' This film deals with life's journey and the encounters with both good and bad, and how man finds himself in situations of dichotomy with the the two. What strikes most about the film is its subtlety. The film manages to put across some really meaningful lessons in the most simple narrative. the filmmaker has chosen to give a film that proves that Sandalwood can also make its own brand of country western films, without compromising on the local nativity. nataraj, jatyaram, dharmanna, bimbashree all are shine. This film adds to the list of the new-age films and filmmakers list that we have seen in 2016. The narrative is definitely the king here, complemented beautifully with a strong cast and crew.- Sunayana Suresh, Rating : 4/5

  English summary
  Director Satya Prakash of 'Jayanagar 4th block' Short Film Fame Directed 'Rama Rama Re' Movie has received Positive Response from the Critics. Here is the collection of 'Rama Rama Re' reviews by Top News Papers of Karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X